Relationship: ಪುರುಷ ಹಾಗೂ ಮಹಿಳೆಯರ ಸ್ನೇಹ ಸಂಬಂಧಗಳೇ ವಿಭಿನ್ನ

ಲಿಂಗದ ಆಧಾರದ ಮೇಲೆ ಗೆಳೆತನವು ಸಾಕಷ್ಟು ವಿಭಿನ್ನತೆಯನ್ನು ಹೊಂದಿದೆ ಎಂದು ಆಕ್ಸ್‌ಫರ್ಡ್ ಮನಶ್ಶಾಸ್ತ್ರಜ್ಞ ರಾಬಿನ್ ಡನ್ಬಾರ್   ಹೇಳುತ್ತಾರೆ.

Relationship: ಪುರುಷ ಹಾಗೂ ಮಹಿಳೆಯರ ಸ್ನೇಹ ಸಂಬಂಧಗಳೇ ವಿಭಿನ್ನ
male-female friendshipImage Credit source: Google
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 23, 2022 | 7:30 PM

ನೀವು ನಿಮ್ಮ ಸ್ನೇಹಿತರೊಂದಿಗಿನ ಸ್ನೇಹ ಸಂಬಂಧ (Relationship) ಎಷ್ಟು ಆಳವಾಗಿದೆ ಎಂಬುದು ನಿಮಗೆ ಮಾತ್ರ ತಿಳಿದಿದೆ. ಯಾಕೆಂದರೆ ಅವರೊಂದಿಗಿನ ಸ್ನೇಹ ಸಂಬಂಧ ನಂಬಿಕೆ, ಪರಸ್ಪರ ಸಹಕಾರ, ಹೀಗೆ ಸಾಕಷ್ಟು ವಿಷಯಗಳಲ್ಲಿ ನಿಮ್ಮಿಬ್ಬರ ಸ್ನೇಹವು ಆಳವಾಗಿ ಬೆಳೆದಿರುತ್ತದೆ. ಆದರೆ ಲಿಂಗದ ಆಧಾರದ ಮೇಲೆ ಗೆಳೆತನವು ಸಾಕಷ್ಟು ವಿಭಿನ್ನತೆಯನ್ನು ಹೊಂದಿದೆ ಎಂದು ಆಕ್ಸ್‌ಫರ್ಡ್ ಮನಶ್ಶಾಸ್ತ್ರಜ್ಞ ರಾಬಿನ್ ಡನ್ಬಾರ್   ಹೇಳುತ್ತಾರೆ.

ಯಾವುದೇ ಒಂದು ಸಂಬಂಧದಲ್ಲಿ ಮಹಿಳೆಯರು ಹಾಗೂ ಪುರುಷರ ಮನಸ್ಥಿತಿಯೇ ಬೇರೆ ಬೇರೆಯಾಗಿರುತ್ತದೆ. ಮಹಿಳೆಯರು ಸಾಮಾನ್ಯವಾಗಿ ಹೆಚ್ಚು ಭಾವನಾತ್ಮಕ ಅಥವಾ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಲು ಸಿದ್ಧರಾಗಿದ್ದರೆ ಆ ಕುರಿತು ತಮ್ಮ ಸ್ನೇಹಿತರಿಂದಲೂ ತಿಳಿದುಕೊಳ್ಳಲು ಬಯಸುತ್ತಾರೆ. ಯಾವುದೇ ಒಂದು ಸಂಬಂಧದಲ್ಲಿ ಹೆಚ್ಚಿನ ಮಟ್ಟದಲ್ಲಿ ಭಾವನಾತ್ಮಕವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಆದ್ದರಿಂದ ಸಂಬಂಧಗಳು ಬಿರುಕು ಬಿಡುಬಹುದುದೇನೊ? ಎಂಬ ಆತಂಕವು ಆಕೆಯಲ್ಲಿ ಸಹಜವಾಗಿ ಹುಟ್ಟಿಕೊಳ್ಳುತ್ತದೆ.

ಆದರೆ ಪುರುಷರ ಸಂಬಂಧಗಳು ಸಾಮಾನ್ಯವಾಗಿ ಕಡಿಮೆ ಮಾತುಕತೆಗಳಿಂದ ಕೂಡಿಯುತ್ತದೆ. ಉದಾಹರಣೆಗೆ ಕ್ರೀಡೆಗಳನ್ನು ವೀಕ್ಷಿಸುವುದು ಅಥವಾ ವೀಡಿಯೊ ಆಟಗಳನ್ನು ಆಡುವುದು. ಇವರ ಸ್ನೇಹ ಬೆಳೆಯುವುದೇ ಕ್ರೀಡೆ ಮುಂತಾದವುಗಳಿಂದ ಎಂದು ಇವರು ಹೇಳುತ್ತಾರೆ. ಇದಲ್ಲದೇ ಇವರು ಭಾವನಾತ್ಮಕವಾಗಿ ಯಾವುದೇ ಸಂಬಂಧವನ್ನು ಬೆಳೆಸುವುದಿಲ್ಲ.

18 ರಿಂದ 25 ವರ್ಷಗಳ ನಡುವಿನ ಹುಡುಗ ಹಾಗೂ ಹುಡುಗಿಯರ ನಡುವಿನ ಸ್ನೇಹದಲ್ಲಿನ ವ್ಯತ್ಯಾಸವು ಸ್ಪಷ್ಟವಾಗುತ್ತದೆ. ಹುಡುಗಿಯರ ಸ್ನೇಹವು ಸಾಮಾನ್ಯವಾಗಿ ಸಂಭಾಷಣೆ ಆಧಾರಿತ ಮತ್ತು ಭಾವನಾತ್ಮಕವಾಗಿ ಸಂಬಂಧವನ್ನು ಹೊಂದಿರುತ್ತಾರೆ. ಇಲ್ಲಿ ಮಾತುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇಲ್ಲಿ ಭಾವನೆಗಳೊಂದಿದೆ ಬಂಧವನ್ನು ಕಾಣಬಹುದು. ಆದರೆ ಹುಡುಗರ ಸ್ನೇಹ ಸಂಬಂಧಗಳು ರಾತ್ರಿ ಹೊತ್ತು ಒಂದೇ ಕಡೆ ಸೇರಿಕೊಳ್ಳುವುದು, ಒಟ್ಟಿಗೆ ಕುಡಿಯುವುದು, ಕೆಲವೊಂದಿಷ್ಟು ಮೋಜಿನಿಂದ  ಕೂಡಿರುತ್ತದೆ.

ಹದಿಹರೆಯದ ಹುಡುಗಿ ತನ್ನ ತಾಯಿಯೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತಾಳೆ. ಯಾಕೆಂದರೆ ಹದಿಹರೆಯದಲ್ಲಿ ಉಂಟಾಗುವ ಕೆಲವೊಂದು ಸಮಸ್ಯೆಗಳು ತಾಯಿಗೆ ಅನುಭವ ಇರುವುದ್ದರಿಂದ ಅವರಿಬ್ಬರ ಒಡನಾಟ ಅತ್ಯಂತ ಆತ್ಮೀಯವಾಗಿರುತ್ತದೆ ಎಂದು 2019 ರಲ್ಲಿ ಪ್ರಕಟವಾದ ಅಮೇರಿಕನ್ ಜರ್ನಲ್ ಆಫ್ ಪ್ರೈಮಟಾಲಜಿಯಲ್ಲಿ ಸಂಶೋಧನೆಯು ತಿಳಿಸುತ್ತದೆ.

ಇದನ್ನು ಓದಿ: ನಿಮ್ಮ ಸಂಗಾತಿಯ ಮೇಲೆ ಅಸೂಯೆಯೇ? ಅದರಿಂದ ಹೊರ ಬರಲು ಸುಲಭ ಮಾರ್ಗಗಳು ಇಲ್ಲಿವೆ

ಸ್ನೇಹವನ್ನು ಕಾಪಾಡಿಕೊಳ್ಳವಲ್ಲಿ ಮಹಿಳೆಯರೇ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ದೇಶ ವಿದೇಶಗಳಲ್ಲಿನ ಸ್ನೇಹಿತರ ಜೊತೆಗೆ ಸಾಕಷ್ಟು ವರ್ಷಗಳು ಕಳೆದರೂ ಕೂಡ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿರುತ್ತಾರೆ ಎಂದು ರಾಬಿನ್ ಸಂಶೋಧನೆ ತೋರಿಸುತ್ತದೆ.

ಜೀವನಶೈಲಿಗೆ  ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ