Chanakya Niti: ಈ 4 ವಿಷಯಗಳೊಂದಿಗೆ ಗೆಳೆತನ ಇರಿಸಿಕೊಳ್ಳಿ; ಜೀವನದ ಕೊನೆಯವರೆಗೂ ಬೆಂಬಲ ಸಿಗುತ್ತದೆ- ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ನೀತಿಶಾಸ್ತ್ರ ಎಂಬ ಪುಸ್ತಕದಲ್ಲಿ 4 ಸ್ನೇಹಿತರ ಬಗ್ಗೆ ಹೇಳಿದ್ದಾರೆ. ಈ 4 ಜನರೊಂದಿಗೆ ನೀವು ಪ್ರಾಮಾಣಿಕವಾಗಿ ಸ್ನೇಹವನ್ನು ಉಳಿಸಿಕೊಂಡರೆ, ಅವರು ಎಂದಿಗೂ ನಿಮಗೆ ಮೋಸ ಮಾಡುವುದಿಲ್ಲ ಎಂದು ಆಚಾರ್ಯ ತಿಳಿಸಿದ್ದಾರೆ.

Chanakya Niti: ಈ 4 ವಿಷಯಗಳೊಂದಿಗೆ ಗೆಳೆತನ ಇರಿಸಿಕೊಳ್ಳಿ; ಜೀವನದ ಕೊನೆಯವರೆಗೂ ಬೆಂಬಲ ಸಿಗುತ್ತದೆ- ಚಾಣಕ್ಯ ನೀತಿ
ಚಾಣಕ್ಯ ನೀತಿ
Follow us
TV9 Web
| Updated By: ganapathi bhat

Updated on: Mar 11, 2022 | 6:45 AM

ಆಚಾರ್ಯ ಚಾಣಕ್ಯ ನೀತಿಶಾಸ್ತ್ರ ಎಂಬ ಪುಸ್ತಕದಲ್ಲಿ 4 ಸ್ನೇಹಿತರ ಬಗ್ಗೆ ಹೇಳಿದ್ದಾರೆ. ಈ 4 ಜನರೊಂದಿಗೆ ನೀವು ಪ್ರಾಮಾಣಿಕವಾಗಿ ಸ್ನೇಹವನ್ನು ಉಳಿಸಿಕೊಂಡರೆ, ಅವರು ಎಂದಿಗೂ ನಿಮಗೆ ಮೋಸ ಮಾಡುವುದಿಲ್ಲ ಎಂದು ಆಚಾರ್ಯ ತಿಳಿಸಿದ್ದಾರೆ. ಚಾಣಕ್ಯ ಹೇಳುವಂತೆ ನಾಲ್ಕು ಗೆಳೆಯರನ್ನು ನಂಬಿ ನಾವು ನಡೆದರೆ ಜೀವನದಲ್ಲಿ ಒಳಿತಾಗುವುದರಲ್ಲಿ ಸಂದೇಹವಿಲ್ಲ. ಆಚಾರ್ಯ ಚಾಣಕ್ಯ (Chanakya) ಮನುಷ್ಯರ ಜೀವನಕ್ಕೆ ಸಹಕಾರಿ ಆಗುವಂತಹ, ಬದುಕಿನ ಏಳಿಗೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ಸಲಹೆಗಳನ್ನು (Chanakya Niti) ನೀಡಿದ್ದಾರೆ. ಅಂತಹ ಕೆಲವು ವಿಷಯಗಳನ್ನು ನೀತಿಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಅನುಸರಿಸುವ ಮೂಲಕ ನಾವು ಜೀವನದಲ್ಲಿ ಗೆಲುವು ಸಾಧಿಸಬಹುದಾಗಿದೆ. ಕಷ್ಟದ ಸಮಯದಲ್ಲಿ ಚಾಣಕ್ಯ ನೀತಿಯು ನಮಗೆ ಸಹಕಾರಿ ಆಗಬಹುದು.

ಚಾಣಕ್ಯ ನೀತಿ ಹಲವು ಬಾರಿ ನಮ್ಮ ಜೀವನಕ್ಕೆ ನೀತಿಪಾಠ ಹೇಳಿ, ದಾರಿ ತೋರಬಹುದು. ನೀತಿ ತಿಳಿದಿರುವುದರಿಂದ ಕೆಲವು ಸಮಸ್ಯೆಗಳನ್ನಾದರೂ ತಪ್ಪಿಸಿಕೊಳ್ಳಬಹುದು. ನಾವು ಮೋಸ ಹೋಗದಂತೆ, ಸೋತು ಹೋಗದಂತೆ ತಡೆಯಲು ಚಾಣಕ್ಯ ಕೆಲವು ನೀತಿಗಳನ್ನು ತಿಳಿಸಿಕೊಟ್ಟಿದ್ದಾನೆ. ಅದರಂತೆ ನಡೆದುಕೊಂಡರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

  • ಚಾಣಕ್ಯ ಹೇಳಿದ ಆ ಮೊದಲ ಗೆಳೆಯ ವಿದ್ಯೆ. ನೀವು ಮನೆಯಿಂದ ಹೊರಬಂದಾಗ, ನಿಮ್ಮ ಜ್ಞಾನವು ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ನಿಮಗೆ ಅದು ತಿಳಿಸುತ್ತದೆ. ಇದರಿಂದ ಸಮಾಜದಲ್ಲಿ ಗೌರವ ಸಿಗುತ್ತದೆ. ಆದ್ದರಿಂದ, ನಿಮ್ಮಿಂದ ಸಾಧ್ಯವಾದಷ್ಟು ಜ್ಞಾನವನ್ನು ಗಳಿಸಿ, ಖಂಡಿತವಾಗಿಯೂ ಅಧ್ಯಯನ ಮಾಡಿ. ಇದು ನಿಮ್ಮ ಜೀವನದ ಒಳ್ಳೆಯ ಗೆಳೆಯನಾಗಬಲ್ಲದು.
  • ಮನುಷ್ಯನ ಎರಡನೇ ನಿಜವಾದ ಸ್ನೇಹಿತ ಅವನ ಹೆಂಡತಿ. ಒಳ್ಳೆಯ ಹೆಂಡತಿ ತನ್ನ ಪತಿಯನ್ನು ಪ್ರತಿ ಸುಖ ದುಃಖದಲ್ಲೂ ಬೆಂಬಲಿಸುತ್ತಾಳೆ. ಅವಳು ತನ್ನ ತೊಂದರೆಗಳನ್ನು ನಿವಾರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾಳೆ. ಕುಟುಂಬದ ಸಂತೋಷ ಮತ್ತು ಸಮೃದ್ಧಿಗಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಾಳೆ. ಅವಳು ತನ್ನ ಗಂಡನನ್ನು ಸಾಯುವವರೆಗೂ ಯಾವುದೇ ಪರಿಸ್ಥಿತಿಯಲ್ಲಿ ಒಂಟಿಯಾಗಿ ಬಿಡುವುದಿಲ್ಲ.
  • ಮೂರನೆಯ ನಿಜವಾದ ಸ್ನೇಹಿತ ಔಷಧ. ಔಷಧವು ರೋಗಿಯನ್ನು ಮತ್ತೆ ಆರೋಗ್ಯವಂತರನ್ನಾಗಿ ಮಾಡುತ್ತದೆ. ಅನಾರೋಗ್ಯಕ್ಕೆ ಯಾರೂ ಸಹಾಯ ಮಾಡಲು ಸಾಧ್ಯವಾಗದಿದ್ದಾಗ, ಔಷಧ ಮಾತ್ರ ನಿಮ್ಮೊಂದಿಗೆ ಇದ್ದು ಸಹಾಯ ಮಾಡುತ್ತದೆ.
  • ನಾಲ್ಕನೇ ನಿಜವಾದ ಸ್ನೇಹಿತ ವ್ಯಕ್ತಿಯ ಧರ್ಮ. ಧರ್ಮದಿಂದ ಜೀವನ ನಡೆಸುವುದರಿಂದ, ಅಧರ್ಮ ಮಾಡದೇ ಇರುವುದರಿಂದ, ಸತ್ಕರ್ಮ ಮಾಡುವುದರಿಂದ ಪುಣ್ಯ ಸಿಗುತ್ತದೆ. ಸಾವಿನ ಸಮಯದಲ್ಲಿ ಎಲ್ಲಾ ಭೌತಿಕ ವಸ್ತುಗಳು ನಿಮ್ಮನ್ನು ತೊರೆದಾಗ, ನಿಮ್ಮ ದೇಹವು ಸಹ ನಿಮ್ಮೊಂದಿಗೆ ಇರುವುದಿಲ್ಲ. ಆಗ ನಿಮ್ಮ ಪುಣ್ಯ ಕಾರ್ಯಗಳು ಇನ್ನೂ ನಿಮ್ಮೊಂದಿಗೆ ಉಳಿಯುತ್ತವೆ. ಸಮಾಜದಲ್ಲಿಯೂ ಅಂತಹ ಕಾರ್ಯಗಳಿಂದ ವ್ಯಕ್ತಿಗೆ ಗೌರವ ದೊರೆಯುತ್ತದೆ ಮತ್ತು ಮರಣಾನಂತರವೂ ಅವರನ್ನು ಸ್ಮರಿಸಲಾಗುತ್ತದೆ. ಆದುದರಿಂದ ಧರ್ಮದ ಕಾರ್ಯಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಿ ಆದಷ್ಟು ಜನಹಿತಕ್ಕಾಗಿ ದುಡಿಯಿರಿ.

ಇದನ್ನೂ ಓದಿ: Chanakya Niti: ಕಷ್ಟದ ಸಮಯದಲ್ಲಿ ಈ 4 ವಿಷಯಗಳು ನಿಮ್ಮ ಸಹಾಯಕ್ಕೆ ಬಂದೇ ಬರುತ್ತವೆ- ಚಾಣಕ್ಯ ನೀತಿ

ಇದನ್ನೂ ಓದಿ: Chanakya Niti: ಹಣಕಾಸಿನ ಸಮಸ್ಯೆ ಆಗಬಾರದು ಎಂದಿದ್ದರೆ ಈ 5 ಅಂಶಗಳನ್ನು ಎಂದಿಗೂ ಮರೆಯಬೇಡಿ- ಚಾಣಕ್ಯ ನೀತಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ