Chanakya Niti: ಹಣಕಾಸಿನ ಸಮಸ್ಯೆ ಆಗಬಾರದು ಎಂದಿದ್ದರೆ ಈ 5 ಅಂಶಗಳನ್ನು ಎಂದಿಗೂ ಮರೆಯಬೇಡಿ- ಚಾಣಕ್ಯ ನೀತಿ
ಚಾಣಕ್ಯ ನೀತಿ ತಿಳಿದಿರುವುದರಿಂದ ಕೆಲವು ಸಮಸ್ಯೆಗಳನ್ನಾದರೂ ತಪ್ಪಿಸಿಕೊಳ್ಳಬಹುದು. ನಾವು ಮೋಸ ಹೋಗದಂತೆ, ಸೋತು ಹೋಗದಂತೆ ತಡೆಯಲು ಚಾಣಕ್ಯ ಕೆಲವು ನೀತಿಗಳನ್ನು ತಿಳಿಸಿಕೊಟ್ಟಿದ್ದಾನೆ. ಅದರಂತೆ ನಡೆದುಕೊಂಡರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.
ಹಣವು ವ್ಯಕ್ತಿಯ ಎಲ್ಲಾ ದುಃಖಗಳನ್ನು ತೊಡೆದುಹಾಕುತ್ತದೆ ಎಂದು ಹೇಳಲಾಗುತ್ತದೆ. ಆಚಾರ್ಯ ಚಾಣಕ್ಯ, ತನ್ನ ಚಾಣಕ್ಯ ನೀತಿಯಲ್ಲಿ ಹಣವು ತುಂಬಾ ಉಪಯುಕ್ತವಾಗಿದೆ ಎಂದು ಬಣ್ಣಿಸಿದ್ದಾರೆ. ಹಾಗೆಯೇ ಅದನ್ನು ಕಾಪಾಡಿಕೊಳ್ಳಲು ಕೆಲವು ಮಾರ್ಗಗಳಿವೆ. ನೀವು ಕುಟುಂಬದಲ್ಲಿ ಆರ್ಥಿಕ ಮುಗ್ಗಟ್ಟು ಕಾಣಲು ಬಯಸದಿದ್ದರೆ, ಆಚಾರ್ಯರ ಹಣಕ್ಕೆ ಸಂಬಂಧಿಸಿದ ಈ ನೀತಿಯನ್ನು ನೆನಪಿನಲ್ಲಿ ಇಡಬೇಕು.
ಕಷ್ಟದ ಸಮಯದಲ್ಲಿ ಚಾಣಕ್ಯ ನೀತಿಯು ನಮಗೆ ಸಹಕಾರಿ ಆಗಬಹುದು. ಚಾಣಕ್ಯ ನೀತಿ ಹಲವು ಬಾರಿ ನಮ್ಮ ಜೀವನಕ್ಕೆ ನೀತಿಪಾಠ ಹೇಳಿ, ದಾರಿ ತೋರಬಹುದು. ನೀತಿ ತಿಳಿದಿರುವುದರಿಂದ ಕೆಲವು ಸಮಸ್ಯೆಗಳನ್ನಾದರೂ ತಪ್ಪಿಸಿಕೊಳ್ಳಬಹುದು. ನಾವು ಮೋಸ ಹೋಗದಂತೆ, ಸೋತು ಹೋಗದಂತೆ ತಡೆಯಲು ಚಾಣಕ್ಯ ಕೆಲವು ನೀತಿಗಳನ್ನು ತಿಳಿಸಿಕೊಟ್ಟಿದ್ದಾನೆ. ಅದರಂತೆ ನಡೆದುಕೊಂಡರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.
- ಹಣವು ಒಬ್ಬ ವ್ಯಕ್ತಿಗೆ ಗೌರವವನ್ನು ನೀಡುತ್ತದೆ, ಎಲ್ಲಾ ವಿಪತ್ತುಗಳನ್ನು ಎದುರಿಸಲು ಅವನನ್ನು ಶಕ್ತಗೊಳಿಸುತ್ತದೆ. ಆದ್ದರಿಂದ ಹಣವನ್ನು ಅನಗತ್ಯವಾಗಿ ಖರ್ಚು ಮಾಡಬಾರದು ಎಂದು ಆಚಾರ್ಯ ಚಾಣಕ್ಯರು ನಂಬಿದ್ದರು. ಕೆಟ್ಟ ಸಮಯದಲ್ಲಿ ನಿಮಗೆ ಉಪಯುಕ್ತವಾಗುವಂತೆ ಅದನ್ನು ಉಳಿಸಬೇಕು. ಕೆಟ್ಟ ಸಮಯದಲ್ಲಿ ಸಾಕಷ್ಟು ಹಣ ಇದ್ದರೆ, ಆ ಕಷ್ಟದ ಸಮಯ ಬೇಗ ಕಳೆದುಹೋಗುತ್ತದೆ.
- ಮನೆಯಲ್ಲಿ ಹಣದ ಕೊರತೆ ಇರಬಾರದು ಎಂದು ನೀವು ಬಯಸಿದರೆ, ನಿಮ್ಮ ಆದಾಯವನ್ನು ಎಂದಿಗೂ ತಪ್ಪು ದಾರಿಯಲ್ಲಿ ಮಾಡಬೇಡಿ. ಆದಾಯಕ್ಕಾಗಿ ತಪ್ಪು ಮಾರ್ಗವನ್ನು ಅಳವಡಿಸಿಕೊಂಡು, ಹಣ ಬಂದ ಕೂಡಲೇ ಅದು ದೂರವಾಗಿ, ವ್ಯಕ್ತಿಯು ವಿನಾಶದ ಅಂಚಿಗೆ ತಲುಪುತ್ತಾನೆ. ಆದ್ದರಿಂದ ನೀವು ಯಾವುದೇ ಹಣವನ್ನು ಸಂಪಾದಿಸಿದರೂ ಅದು ಕಠಿಣ ಪರಿಶ್ರಮದ್ದು ಆಗಿರಬೇಕು.
- ಶುಭ ಕಾರ್ಯಗಳಲ್ಲಿ ಹಣವನ್ನು ಬಳಸಬೇಕು. ಅದಕ್ಕಾಗಿಯೇ ಒಬ್ಬ ವ್ಯಕ್ತಿಯು ಜೀವನದಲ್ಲಿ ದಾನಗಳನ್ನು ಮಾಡಬೇಕು. ಆದಾಗ್ಯೂ, ಯಾವಾಗಲೂ ನಿಮ್ಮ ಮಿತಿಯೊಳಗೆ ದಾನ ಮಾಡಿ. ಅಗತ್ಯಕ್ಕಿಂತ ಹೆಚ್ಚು ದಾನ ಮಾಡಿದರೂ ತೊಂದರೆಯಾಗುತ್ತದೆ.
- ಸಂಪತ್ತನ್ನು ಹೆಚ್ಚಿಸಲು ಹೂಡಿಕೆ ಅತ್ಯುತ್ತಮ ಮಾರ್ಗವಾಗಿದೆ. ಠೇವಣಿ ಇಡಬಹುದಾದ ಹಣವನ್ನು ಎಲ್ಲೋ ಇಟ್ಟುಕೊಂಡರೆ ಅಥವಾ ನಿಮ್ಮ ಬಳಿ ಇಟ್ಟರೆ ಖಂಡಿತಾ ಒಂದಷ್ಟು ದಿನದಲ್ಲಿ ಅದು ಖರ್ಚಾಗುತ್ತದೆ. ಆದ್ದರಿಂದ, ಅದನ್ನು ಹೆಚ್ಚಿಸಲು, ಆಸ್ತಿ, ಪಾಲಿಸಿ, ಚಿನ್ನ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿ.
- ಹಣವನ್ನು ಗಳಿಸುವುದನ್ನು ಎಂದಿಗೂ ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಬೇಡಿ. ಬದಲಿಗೆ ನಿಮ್ಮ ಸ್ವಂತ ಕ್ರಿಯೆಗಳ ಮೇಲೆ ಕೇಂದ್ರೀಕರಿಸಿ. ಅದರಿಂದಾಗಿ ನೀವು ಎಲ್ಲಿ ಬೇಕಾದರೂ ಸಾಕಷ್ಟು ಹಣವನ್ನು ಗಳಿಸುವಷ್ಟು ಸಾಮರ್ಥ್ಯವನ್ನು ಮಾಡಿಕೊಳ್ಳುವಿರಿ.
ಇದನ್ನೂ ಓದಿ: Chanakya Niti: ಜೀವನದಲ್ಲಿ ಮೋಸ ಹೋಗದಿರಲು ಈ 5 ಪಾಠಗಳನ್ನು ನೀವು ತಿಳಿದಿರಬೇಕು- ಚಾಣಕ್ಯ ನೀತಿ
ಇದನ್ನೂ ಓದಿ: Chanakya: ಹೊಸ ವರ್ಷದ ಹೊಸ್ತಿಲಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಆಚಾರ್ಯ ಚಾಣಕ್ಯನ ಈ ಮಾತು ಆಲಿಸಿ, ಅನುಸರಿಸಿ