AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maha Shivratri 2022: ಮಹಾಶಿವರಾತ್ರಿಯ ಪಾರಣ ಪೂಜಾ ಸಮಯ ಮತ್ತು ಪೂಜಾ ವಿಧಾನ

ಮಹಾಶಿವರಾತ್ರಿಯಂದು ಮಹಾದೇವ ಶಿವನು ದೇವಿ ಪಾರ್ವತಿಯನ್ನು ವಿವಾಹವಾದರು ಎಂದು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ. ಈ ದಿನ ಜಾಗರಣೆ ಇದ್ದು ಶಿವ-ಪಾರ್ವತಿಯನ್ನು ಪೂಜಿಸುವುದರಿಂದ ಬದುಕಿನ ಎಲ್ಲಾ ಕಷ್ಟಗಳು ದೂರಾಗುವುದು. ಈ ದಿನದಂದು ಪತಿ-ಪತ್ನಿ ಇಬ್ಬರೂ ಜಾಗರಣೆ ಇದ್ದು ಶಿವನನ್ನು ಪೂಜಿಸಬೇಕು, ಅವನ ಮಂತ್ರಗಳನ್ನು ಪಠಿಸಬೇಕು.

Maha Shivratri 2022: ಮಹಾಶಿವರಾತ್ರಿಯ ಪಾರಣ ಪೂಜಾ ಸಮಯ ಮತ್ತು ಪೂಜಾ ವಿಧಾನ
ಮಹಾದೇವ ಶಿವ
TV9 Web
| Updated By: ಆಯೇಷಾ ಬಾನು|

Updated on: Mar 01, 2022 | 5:29 PM

Share

ಇಂದು ದೇಶದಾದ್ಯಂತ ಮಹಾಶಿವರಾತ್ರಿಯ(Maha Shivratri) ಸಂಭ್ರಮ ಜೋರಾಗಿದೆ. ಮಾರ್ಚ್ 01ರ ಈ ದಿನ ಶಿವ(Lord Shiva) ದೇವಾಲಯಗಳಲ್ಲಿ ಭಕ್ತರು ಶಿವನ ದರ್ಶನ ಮಾಡಿ ಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಈ ದಿನದಂದು ಶಿವನ ಮೂರ್ತಿ ಹಾಗೂ ಶಿವನ ಲಿಂಗವನ್ನು ಪೂಜಿಸಲಾಗುತ್ತದೆ. ಶಿವಲಿಂಗ ಶಿವನ ಸಂಕೇತವಾಗಿದೆ. ಶಿವ ಎಂದರೆ ಕಲ್ಯಾಣ ಮತ್ತು ಲಿಂಗ ಎಂದರೆ ಸೃಷ್ಟಿ. ಪೌರಾಣಿಕ ಗ್ರಂಥಗಳ ಪ್ರಕಾರ, ಭಗವಾನ್ ಶಿವನು ಭೂಮಿಯ ಮೇಲೆ ಜೀವನವನ್ನು ಪ್ರಚಾರ ಮಾಡಲು ಪ್ರಯತ್ನಿಸಿದನು. ಅದಕ್ಕಾಗಿಯೇ ಶಿವನನ್ನು ಆದಿದೇವ ಎಂದೂ ಕರೆಯಲಾಗುತ್ತದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾಶಿವರಾತ್ರಿಯ ಈ ಪವಿತ್ರ ಹಬ್ಬವನ್ನು ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ. ಜೊತೆಗೆ ಭಗವಾನ್ ಭೋಲೆನಾಥನನ್ನು ಮಹಾಶಿವರಾತ್ರಿಯ ದಿನದಂದು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಈ ದಿನದಂದು ಮಹಾದೇವನ ಆರಾಧನೆ ಮಾಡುತ್ತಾ ಉಪವಾಸವನ್ನು ಮಾಡುವುದರಿಂದ ಅದೃಷ್ಟ ಮತ್ತು ಸಮೃದ್ಧಿಯನ್ನು ಲಭಿಸುತ್ತದೆ ಎಂದು ನಂಬಲಾಗುತ್ತದೆ. ಹಿಂದೂಗಳಿಗೆ ಮಹಾಶಿವರಾತ್ರಿ ಬಹಳ ಮಹತ್ವವಾದ ಆಚರಣೆಯಾಗಿದೆ. ಈ ದಿನ ಜಾಗರಣೆ ಇದ್ದು ಶಿವನನ್ನು ಪೂಜಿಸಲಾಗುವುದು. ಯಾರು ಶಿವರಾತ್ರಿಯಂದು ಉಪವಾಸವಿದ್ದು ಶಿವನ ಪೂಜೆ ಮಾಡುತ್ತಾರೋ ಅವರು ಶಿವನ ಕೃಪೆಗೆ ಪಾತ್ರರಾಗುತ್ತಾರೆ ಎಂಬುವುದು ಅವನ ಭಕ್ತರ ಅಚಲ ನಂಬಿಕೆಯಾಗಿದೆ.

ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಮಾಸದ ಕೃಷ್ಣ ಚತುರ್ದಶಿ ದಿನವನ್ನು ಮಾಸ ಶಿವರಾತ್ರಿ ಎಂದು ಆಚರಿಸಲಾಗುವುದು. ವರ್ಷದಲ್ಲಿ ಒಟ್ಟು 12 ಶಿವರಾತ್ರಿಗಳನ್ನು ಆಚರಿಸಲಾಗುವುದು. ಅವುಗಳಲ್ಲಿ ಮಹಾಶಿವರಾತ್ರಿ ತುಂಬಾ ದೊಡ್ಡ ಆಚರಣೆಯಾಗಿದೆ. ಸಾಮಾನ್ಯವಾಗಿ ಶಿವರಾತ್ರಿ ಫೆಬ್ರವರಿ – ಮಾರ್ಚ್ ತಿಂಗಳಿನಲ್ಲಿ ಬರುವುದು. ಈ ವರ್ಷ ಮಾರ್ಚ್ನಲ್ಲಿ ಬಂದಿದೆ. ಈ ದಿನ ಶಿವನನ್ನು ಶುಭ ಮುಹೂರ್ತದಲ್ಲಿ ಪೂಜಿಸುವುದರಿಂದ ಹೆಚ್ಚಿನ ಫಲ ದೊರೆಯುವುದು.

ಮಹಾಶಿವರಾತ್ರಿ ಪೂಜಾ ಸಮಯ -ರಾತ್ರಿ ಮೊದಲ ಪ್ರಹರ ಪೂಜಾ ಸಮಯ : ಸಂಜೆ 06:21 ರಿಂದ 09:27 ರವರೆಗೆ. -ರಾತ್ರಿ ಎರಡನೇ ಪ್ರಹರ ಪೂಜಾ ಸಮಯ: ರಾತ್ರಿ 09:27 ರಿಂದ 12:33 ರವರೆಗೆ. -ರಾತ್ರಿ ಮೂರನೇ ಪ್ರಹರ ಪೂಜಾ ಸಮಯ : ರಾತ್ರಿ 12:33 ರಿಂದ ಬೆಳಗ್ಗೆ 03:39 ರವರೆಗೆ. -ರಾತ್ರಿ ನಾಲ್ಕನೇ ಪ್ರಹರ ಪೂಜಾ ಸಮಯ : ಮುಂಜಾನೆ 03:39 ರಿಂದ 06:45 ರವರೆಗೆ. -ಮಹಾಶಿವರಾತ್ರಿ ಪಾರಣ ಸಮಯ: ಮಾರ್ಚ್ 2 ಬುಧವಾರ ಬೆಳಗ್ಗೆ 06:45.

ಮಹಾಶಿವರಾತ್ರಿ ಮಹತ್ವ ಮಹಾಶಿವರಾತ್ರಿಯಂದು ಮಹಾದೇವ ಶಿವನು ದೇವಿ ಪಾರ್ವತಿಯನ್ನು ವಿವಾಹವಾದರು ಎಂದು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ. ಈ ದಿನ ಜಾಗರಣೆ ಇದ್ದು ಶಿವ-ಪಾರ್ವತಿಯನ್ನು ಪೂಜಿಸುವುದರಿಂದ ಬದುಕಿನ ಎಲ್ಲಾ ಕಷ್ಟಗಳು ದೂರಾಗುವುದು. ಈ ದಿನದಂದು ಪತಿ-ಪತ್ನಿ ಇಬ್ಬರೂ ಜಾಗರಣೆ ಇದ್ದು ಶಿವನನ್ನು ಪೂಜಿಸಬೇಕು, ಅವನ ಮಂತ್ರಗಳನ್ನು ಪಠಿಸಬೇಕು. ಆಗ ಶಿವನು ನಮ್ಮ ಬೇಡಿಕೆಗಳನ್ನು ಪೂರೈಸುತ್ತಾನೆ. ಜೀವನದಲ್ಲಿ ನೆಮ್ಮದಿ ಇರುವುದು, ಸಂತಾನ ಭಾಗ್ಯ ಉಂಟಾಗುವುದು.

ಮಹಾಶಿವರಾತ್ರಿ ಪೂಜಾವಿಧಿಗಳೇನು? ಈ ದಿನ ಭಕ್ತರು ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಬೇಕು. ನಂತರ ಮಡಿ ಬಟ್ಟೆ ಧರಿಸಬೇಕು. ನಂತರ ಪಕ್ಕದ ಶಿವನ ದೇವಾಲಯಕ್ಕೆ ಹೋಗಬೇಕು. ಅದಾದ ಬಳಿಕ ಸಂಕಲ್ಪ ಕೈಗೊಳ್ಳಬೇಕು (ನೀವು ಏನು ಮನಸ್ಸಿನಲ್ಲಿ ಬೇಡಿಕೊಳ್ಳುತ್ತೀರೋ ಅದುವೇ ಸಂಕಲ್ಪ). ಶಿವನಿಗೆ ಬಿಲ್ವೆ ಪತ್ರೆ ಹಾಗೂ ಹೂಗಳನ್ನು ಅರ್ಪಿಸಿ. ನಂತರ ಶಿವನಿಗೆ ಆರತಿ ಮಾಡಿ. ಪಾರಣ ಮುಹೂರ್ತದಲ್ಲಿ ಪಾರಣ ಮಾಡಿ.

ಇದನ್ನೂ ಓದಿ: Shivaratri: ಈಶ್ವರನ ಹತ್ತೊಂಬತ್ತು ಅವತಾರಗಳು -ಇದು ಲೋಕ ಕಲ್ಯಾಣಕ್ಕಾಗಿ ಪರಮೇಶ್ವರನ ಅವತಾರಗಳು, ಅವು ಯಾವುವು?

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ