Sacred worship things: ಪೂಜೆಗೆ ಉಪಯೋಗಿಸುವ, ಪೂಜಿಸುವ ಈ ಐದು ವಸ್ತುಗಳೂ ಅತ್ಯಂತ ಪವಿತ್ರವಾದವು!
ಶವಕರ್ಪಟಮ್ - ಎಂದರೆ ಶವದ ಬಟ್ಟೆ. ಎಂದರೆ ರೇಷ್ಮೆ ವಸ್ತ್ರ. ರೇಷ್ಮೆ ಹುಳುಗಳನ್ನು ಬೇಯಿಸಿ, ಸಾಯಿಸಿ ಅದರ ನೂಲಿನಿಂದ ಸಿದ್ದಪಡಿಸಲಾದ ವಸ್ತು... ಇದೂ ಸಹ ಪೂಜಿಸುವ ವಸ್ತುಗಳು ಪೈಕಿ ಅತ್ಯಂತ ಪವಿತ್ರವಾದವು!
ಲೋಕದಲ್ಲಿ ಅಪವಿತ್ರವೆಂಬುದು, ಅಶುದ್ಧವೆಂಬುದು ನಮ್ಮ ಮನಸ್ಸು ಮಾತ್ರ. ಮನಸ್ಸನ್ನು ಶುದ್ಧವಾಗಿಸಿದಲ್ಲಿ ಸಕಲವೂ ಪವಿತ್ರವಾಗಿಯೇ ಇರುವುದು. ಮನಸ್ಸು ಅಶುದ್ಧವಾದರೆ ಎಲ್ಲವೂ ಅಪವಿತ್ರ. 1- ಎಂಜಲು, 2- ಶಿವನ ನಿರ್ಮಾಲ್ಯ, 3- ವಾಂತಿ, 4- ಹೆಣದ ಬಟ್ಟೆ, 5- ಕಾಗೆಯ ಮಲದಿಂದ ಹುಟ್ಟಿದ್ದು- ಈ ಐದು ಅತ್ಯಂತ ಪವಿತ್ರವಾದವುಗಳು! ಉದಾಹರಣೆಗೆ ಹೇಳುವುದಾದರೆ ಶವಕರ್ಪಟಮ್ – ಎಂದರೆ ಶವದ ಬಟ್ಟೆ. ಅಂದರೆ ಅದು ರೇಷ್ಮೆ ವಸ್ತ್ರ. ರೇಷ್ಮೆ ಹುಳುಗಳನ್ನು ಬೇಯಿಸಿ, ಸಾಯಿಸಿ ಅದರ ನೂಲಿನಿಂದ ಸಿದ್ದಪಡಿಸಲಾದ ವಸ್ತು. ಇಲ್ಲೊಂದು ವಿಷ್ಣುಸ್ಮೃತಿಯ ಚಮತ್ಕಾರಿಕ ಸುಭಾಷಿತ ಇದೆ, ನೋಡಿ. ಉಚ್ಚಿಷ್ಟಂ ಶಿವನಿರ್ಮಾಲ್ಯಂ ವಮನಂ ಶವಕರ್ಪಟಮ್, ಕಾಕವಿಷ್ಠಾಸಮುತ್ಪನ್ನಂ ಪಂಚೈತೇತಿಪವಿತ್ರಕಾಃ
ಉಳಿದ ವಸ್ತುಗಳ ಗೂಡಾರ್ಥ ತಿಳಿಯುವುದಾದರೆ ಅದು ಹೀಗಿದೆ:
- ಉಚ್ಚಿಷ್ಟಮ್- ಎಂದರೆ ಎಂಜಲು. ಹಾಲು ಕರುವಿನ ಎಂಜಲು. ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುವ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನ ಎಂಜಲಾದ ಹಾಲು ದೇವರಿಗೆ ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು.
- ಶಿವನಿರ್ಮಾಲ್ಯಮ್ – ಶಿವನ ಜಟೆಯಿಂದ ಹೊರಗೆ ಬಂದ ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು. ಗಂಗಾನದಿಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟನು. ನಂತರ ಆ ಜಟೆಯಿಂದ ಗಂಗಾನದಿಯನ್ನು ಹೊರಕ್ಕೆ ಹಾಕಿದ. ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು. ಆದರೂ ಈ ಗಂಗೆಯು ಪವಿತ್ರ.
- ವಮನಮ್ – ಎಂದರೆ ವಾಂತಿ. ಜೇನುತುಪ್ಪ. ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಿಂದ ತಂದು ಬಾಯಿಂದ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ. ಅದೇ ಜೇನು ತುಪ್ಪ. ಇದು ಜೇನುಹುಳುಗಳ ವಾಂತಿ. ಆದರೆ ಜೇನು ತುಪ್ಪ ಪ್ರಶಸ್ತವಾದದ್ದು.
- ಶವಕರ್ಪಟಮ್ – ಎಂದರೆ ಶವದ ಬಟ್ಟೆ. ಎಂದರೆ ರೇಷ್ಮೆ ವಸ್ತ್ರ. ರೇಷ್ಮೆ ಹುಳುಗಳನ್ನು ಬೇಯಿಸಿ, ಸಾಯಿಸಿ ಅದರ ನೂಲಿನಿಂದ ಸಿದ್ದಪಡಿಸಲಾದ ವಸ್ತು.
- ಕಾಕವಿಷ್ಠಾಸಮುತ್ಪನ್ನಮ್ – ಕಾಗೆಯ ಮಲದಿಂದ ಹುಟ್ಟಿದ್ದು ಅರಳಿ ಮರ. ಕಾಗೆಯು ಅರಳಿ ಮರದ ಬೀಜವನ್ನು ತಿಂದು ಅದು ಕಾಗೆಯ ಮಲದ ಮೂಲಕ ಹೊರಗಡೆಗೆ ಎಲ್ಲೋ ಬಿದ್ದಾಗ ಅದರಿಂದ ಅರಳಿ ಮರವು ಹುಟ್ಟುತ್ತದೆ. ಅಶ್ವತ್ಥ ವೃಕ್ಷವು ತ್ರಿಮೂರ್ತಿ ಸ್ವರೂಪದ್ದಾಗಿರುತ್ತದೆ. ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ| ಅಗ್ರತ: ಶಿವರೂಪಾಯ ವೃಕ್ಷರಾಜಾಯ ತೇ ನಮ:|| ಹೀಗೆ ಅಶ್ವತ್ಥ ವೃಕ್ಷವನ್ನು ಪೂಜಿಸುತ್ತೇವೆ. (ವಾಟ್ಸ್ಅಪ್ ಸುಭಾಷಿತ)