Breakfast: ಬೆಳಗಿನ ತಿಂಡಿಯನ್ನು ಸ್ಕಿಪ್ ಮಾಡ್ತಿದ್ದೀರಾ? ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತೆ?
ಇಡೀ ದಿನ ನೀವು ಉಪವಾಸವಿದ್ದರೂ ತೊಂದರೆಯಿಲ್ಲ ಬೆಳಗ್ಗೆ ಮಾತ್ರ ಸರಿಯಾಗಿ ತಿನ್ನಬೇಕು ಎಂದು ವೈದ್ಯರು ಹೇಳುತ್ತಾರೆ.
ಇಡೀ ದಿನ ನೀವು ಉಪವಾಸವಿದ್ದರೂ ತೊಂದರೆಯಿಲ್ಲ ಬೆಳಗ್ಗೆ ಮಾತ್ರ ಸರಿಯಾಗಿ ತಿನ್ನಬೇಕು ಎಂದು ವೈದ್ಯರು ಹೇಳುತ್ತಾರೆ. ಸಾಕಷ್ಟು ಮಂದಿ ತೆಳ್ಳಗಾಗುವ ಭರದಲ್ಲಿ ಬೆಳಗ್ಗೆ ತಿಂಡಿಯನ್ನೇ ತಿನ್ನುವುದಿಲ್ಲ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.
ನೀವು ತುಂಬಾ ಸಮಯದವರೆಗೆ ಏನನ್ನೂ ತಿನ್ನದಿದ್ದರೆ ನೀವು ಕೋಪಗೊಳ್ಳುತ್ತೀರಿ, ಯಾವುದೇ ಕೆಲಸವನ್ನು ಮಾಡಲು ಮನಸ್ಸಿರುವುದಿಲ್ಲ, ಎಲ್ಲದಕ್ಕೂ ಕಿರಿಕಿರಿ ಅನುಭವಿಸುತ್ತೀರಿ, ಮಲಬದ್ಧತೆ ಸಮಸ್ಯೆ, ಕೂದಲು ಉದುರುವಿಕೆ ಸೇರಿದಂತೆ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಯುವತಿಯರು ಇಂಟರ್‌ಮಿಟೆಂಟ್ ಫಾಸ್ಟಿಂಗ್ (IF) ನಂತಹ ಆಹಾರಕ್ರಮವನ್ನು ಪ್ರಯತ್ನಿಸಿದಾಗ, ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಧಕ್ಕೆಯುಂಟು ಮಾಡಬಹುದು.
ಊಟದ ನಡುವಿನ ದೀರ್ಘ ಅಂತರವು ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿಲ್ಲ ಎಂದು ಸಂಶೋಧನೆಯು ಕಂಡುಹಿಡಿದಿದೆ.
ಸರಿಯಾದ ಸಮಯಕ್ಕೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟವನ್ನು ಮಾಡಿದರೆ ದೀರ್ಘಕಾಲ ತಿನ್ನದ ವ್ಯಕ್ತಿಯ್ಷ್ಟೇ ತೂಕವನ್ನು ನೀವು ಕಳೆದುಕೊಳ್ಳುತ್ತೀರಿ.
ಬೆಳಗಿನ ಉಪಾಹಾರವು ಹಸಿವನ್ನು ಕಡಿಮೆ ಮಾಡುತ್ತದೆ, ಮಾನಸಿಕ ನೆಮ್ಮದಿಯನ್ನು ನೀಡುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ. ಹಿಮೋಗ್ಲೋಬಿನ್ ಅಥವಾ ಕ್ಯಾಲ್ಸಿಯಂನಂತಹ ಮೈಕ್ರೊನ್ಯೂಟ್ರಿಯೆಂಟ್ನ್ನು ಸಹ ಸಣ್ಣ ಪ್ರಮಾಣದಲ್ಲಿ ಸೇವಿಸಿದಾಗ ದೇಹವು ಉತ್ತಮವಾಗಿ ಹೀರಲ್ಪಡುತ್ತದೆ. ಆದರೆ ಊಟದ ನಡುವೆ ಹೆಚ್ಚಿನ ಅಂತರವಿದ್ದರೆ, ನೀವು ಹಿಮೋಗ್ಲೋಬಿನ್ ಮತ್ತು ಕ್ಯಾಲ್ಸಿಯಂನ್ನು ದೇಹವು ಕಡಿಮೆ ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆ.
ಬೆಳಗಿನ ಉಪಾಹಾರವನ್ನು ತ್ಯಜಿಸುವುದರಿಂದ ತ್ವರಿತ ತೂಕ ನಷ್ಟಕ್ಕೆ ಕಾರಣವಾಗುವುದಿಲ್ಲ ಬದಲಿಗೆ, ಇದು ಹಸಿವು, ಆಮ್ಲೀಯತೆ, ಉಬ್ಬುವುದು, ಆತಂಕ, ತಲೆನೋವು ಉಂಟು ಮಾಡುತ್ತದೆ. ಇದು ಸೂಕ್ಷ್ಮ ಪೋಷಕಾಂಶಗಳ ಕೊರತೆ ಮತ್ತು ಕಡಿಮೆ ಹಿಮೋಗ್ಲೋಬಿನ್, ಬಿ 12 ಮತ್ತು ವಿಟಮಿನ್ ಡಿಗೆ ಕಾರಣವಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ