ಸಿಹಿ ತಿಂಡಿಗಳನ್ನು ಕಂಡಾಕ್ಷಣ ಬಾಯಲ್ಲಿ ನೀರೂರುವುದು ಸಾಮಾನ್ಯ. ಆದ್ದರಿಂದ ನಿಮ್ಮ ಸಿಹಿ ತಿಂಡಿಗಳ ಆಸೆಯನ್ನು ಪೂರೈಸಲು ಮನೆಯಲ್ಲಿಯೇ ಆರೋಗ್ಯಕರ ಸಿಹಿ ತಿಂಡಿಗಳನ್ನು ತಯಾರಿಸಿ.
ಈ ಆಲೂ ಹಲ್ವಾ ರೆಸಿಪಿ ಕೇವಲ 15-20 ನಿಮಿಷಗಳಲ್ಲಿ ತಯಾರಿಸಬಹುದು. ಸಕ್ಕರೆಯ ಅಂಶಗಳು ನಿಮ್ಮ ದೇಹಕ್ಕೆ ತೊಂದರೆಯನ್ನುಂಟು ಮಾಡಿದರೆ, ಸಕ್ಕರೆಯ ಬದಲಾಗಿ ಬೆಲ್ಲವನ್ನು ಸೇರಿಸಬಹುದು. ಜೊತೆಗೆ ಈ ಹಲ್ವಾವನ್ನು ಕುರುಕಲು ಮಾಡಲು ನಿಮ್ಮ ಆಯ್ಕೆಯ ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ ಮುಂತಾದ ಬೀಜಗಳನ್ನು ಸೇರಿಸಿ. ಇದು ರುಚಿಯ ಜೊತೆಗೆ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.
ಬೇಕಾಗುವ ಸಾಮಾಗ್ರಿಗಳು:
2 ಆಲೂಗಡ್ಡೆ
4 ಚಮಚ ಸಕ್ಕರೆ ಅಥವಾ ಬೆಲ್ಲ
1 ಚಮಚ ಒಣದ್ರಾಕ್ಷಿ
1 ಚಮಚ ಬಾದಾಮಿ
1 ಚಮಚ ತುಪ್ಪ
1/4 ಕಪ್ ಹಾಲು
1 ಚಮಚ ಗೋಡಂಬಿ
1/4 ಚಮಚ ಪುಡಿಮಾಡಿದ ಏಲಕ್ಕಿ
ಮಾಡುವ ವಿಧಾನ:
ಹಂತ 1
ಮೊದಲು 2 ಆಲೂಗಡ್ಡೆಯನ್ನು ಬೇಯಿಸಿ. ನಂತರ ಬೆಂದ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ನಿಧಾನವಾಗಿ ಮ್ಯಾಶ್ ಮಾಡಿ.
ಹಂತ 2
ಮಧ್ಯಮ ಉರಿಯಲ್ಲಿ ಪ್ಯಾನ್ ಗೆ ತುಪ್ಪ ಹಾಕಿ ಬಿಸಿಯಾಗಲು ಬಿಡಿ. ನಂತರ ಅದರಲ್ಲಿ ಹಿಸುಕಿದ ಆಲೂಗಡ್ಡೆ ಸೇರಿಸಿ ಮತ್ತು ಅವುಗಳನ್ನು 2-3 ನಿಮಿಷ ಬೇಯಲು ಬಿಡಿ.
ಹಂತ 3
ಈಗ ಅದಕ್ಕೆ ಹಾಲು ಮತ್ತು ಸಕ್ಕರೆ ಸೇರಿಸಿ ಹಾಗೂ ಎಲ್ಲವನ್ನೂ ಒಟ್ಟಿಗೆ ನಿಧಾನವಾಗಿ ಮಿಶ್ರಣ ಮಾಡಿ. ಇನ್ನೊಂದು 5 ನಿಮಿಷ ಬೇಯಿಸಲು ಬಿಡಿ.
ಹಂತ 4
ಕೊನೆಯದಾಗಿ ಏಲಕ್ಕಿ ಪುಡಿ ಮತ್ತು ಡ್ರೈ ಫ್ರೂಟ್ಸ್ ಹಾಕಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ 3-4 ನಿಮಿಷ ಬೇಯಲು ಬಿಡಿ.
ಹಂತ 5
ನಿಮ್ಮ ಆಲೂ ಹಲ್ವಾ ಬಡಿಸಲು ಸಿದ್ಧವಾಗಿದೆ. ಈ ಪಾಕವಿಧಾನವನ್ನು ಪ್ರಯತ್ನಿಸಿ.
ಯಾವುದೇ ಕಲಬೆರಕೆ ಇಲ್ಲದೆ ರುಚಿಯಾದ ಹಾಗೂ ಆರೋಗ್ಯಕರವಾದ ಆಲೂ ಹಲ್ವಾವನ್ನು ಕೇವಲ 15-20 ನಿಮಿಷಗಳಲ್ಲಿ ತಯಾರಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:24 pm, Sun, 6 November 22