ಎಲ್ಲರೂ ಕೂಡ ಈ ಬಾಳೆಗೊನೆಯನ್ನು ನೋಡಿರಬಹುದು, ಈ ಗೊನೆಯ ತುದಿಯಲ್ಲಿರುವ ಬಾಳೆ ಹೂವಿನ ಉಪಯೋಗದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಈ ಬಾಳೆ ಹೂವು ನೋಡಲು ಎಷ್ಟು ಸುಂದರವೋ, ಇದರಿಂದ ತಯಾರಿಸಿದ ಖಾದ್ಯವು ಅಷ್ಟೇ ರುಚಿಕರವಾಗಿರುತ್ತದೆ. ಇದರಿಂದ ವಿವಿಧ ರುಚಿಕರವಾದ ಆಹಾರವನ್ನು ತಯಾರಿಸಲಾಗುತ್ತದೆ. ಮಳೆಗಾಲದಲ್ಲಿ ಬಿಸಿ ಬಿಸಿ ಬಾಳೆಹೂವಿನ ಪಕೋಡ ಟೀ ಕಾಫಿ ಜೊತೆಗೆ ಸವಿದರೆ ಮನಸ್ಸಿಗೂ ಮಾತ್ರವಲ್ಲದೇ ಆರೋಗ್ಯಕ್ಕೂ ಒಳ್ಳೆಯದು.
ಬಾಳೆ ಹೂವಿನ ಪಕೋಡ ಮಾಡಲು ಬೇಕಾಗುವ ಸಾಮಗ್ರಿಗಳು
* ಮೈದಾ ಹಿಟ್ಟು
* ಅಕ್ಕಿ ಹಿಟ್ಟು
* ಖಾರದ ಪುಡಿ
* ಶುಂಠಿ ಬೆಳ್ಳುಳ್ಳಿ ಪೇಸ್ಟ್
* ಗರಂ ಮಸಾಲಾ ಪುಡಿ
* ನೀರು
* ರುಚಿಗೆ ತಕ್ಕಷ್ಟು ಉಪ್ಪು
ಮತ್ತಷ್ಟು ಓದಿ: Jackfruits Seeds Holige : ಹಲಸಿನ ಬೀಜದ ಹೋಳಿಗೆ ಮಾಡುವುದು ಹೇಗೆ? ಇಲ್ಲಿದೆ ರೆಸಿಪಿ
ಬಾಳೆ ಹೂವಿನ ಪಕೋಡ ಮಾಡುವ ವಿಧಾನ
* ಮೊದಲಿಗೆ ಈ ಬಾಳೆ ಹೂವನ್ನು ಬಿಡಿಸುವಾಗ ಅದರಲ್ಲಿರುವ ಉದ್ದದ ಕಡ್ಡಿಯನ್ನು ತಗೆಯಬೇಕು.
* ಆ ಬಳಿಕ ಮೈದಾ ಹಿಟ್ಟು, ಸ್ವಲ್ಪ ಅಕ್ಕಿ ಹಿಟ್ಟು, ಖಾರದ ಪುಡಿ,ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲಾ ಪುಡಿ, ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಪಕೋಡ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಬೇಕು.
* ಇದಕ್ಕೆ ಈಗಾಗಲೇ ಕಡ್ಡಿ ತೆಗೆದ ಬಾಳೆ ಹೂವನ್ನು ಸೇರಿಸಿಕೊಳ್ಳಬೇಕು.
* ಸ್ಟವ್ ಮೇಲೆ ಬಾಣಲೆಯನ್ನಿಟ್ಟು ಎಣ್ಣೆಯನ್ನು ಹಾಕಿ. ಅದು ಚೆನ್ನಾಗಿ ಕಾದ ನಂತರ ಈಗಾಗಲೇ ಸಿದ್ಧವಾಗಿಸಿಕೊಂಡ ಈ ಮಸಾಲೆಯನ್ನು ಕರಿಯಬೇಕು.
* ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಎಣ್ಣೆಯಿಂದ ತೆಗೆದರೆ ಬಾಳೆ ಹೂವಿನ ರುಚಿಯಾದ ಕುರುಕಲು ಪಕೋಡ ಸವಿಯಲು ಸಿದ್ಧ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:00 pm, Mon, 15 July 24