Carrot Ginger Soup Recipe: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುತ್ತೆ ಈ ಕ್ಯಾರೆಟ್ ಶುಂಠಿ ಸೂಪ್

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 27, 2024 | 5:38 PM

ಚಳಿಗಾಲದಲ್ಲಿ ತಂಪಾದ ವಾತಾವರಣವಿರುವ ಕಾರಣ ಶೀತ, ಕೆಮ್ಮು ನೆಗಡಿಯಂತಹ ಆರೋಗ್ಯ ಸಮಸ್ಯೆಗಳು ಸರ್ವೇ ಸಾಮಾನ್ಯ. ಹೀಗಾಗಿ ಈ ಋತುವಿನಲ್ಲಿ ಸೇವಿಸುವ ಆಹಾರದ ಕಡೆಗೂ ಹೆಚ್ಚು ಗಮನ ಕೊಡಬೇಕಾಗುತ್ತದೆ. ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಆರೋಗ್ಯ ಸಮಸ್ಯೆಯಿಂದ ಪಾರಾಗಲು ಕ್ಯಾರೆಟ್ ಶುಂಠಿ ಮಿಶ್ರಿತ ಆರೋಗ್ಯಕರ ಸೂಪ್ ತಯಾರಿಸಿ ಸೇವಿಸಿದರೆ ಉತ್ತಮ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ? ಎನ್ನುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Carrot Ginger Soup Recipe: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುತ್ತೆ ಈ ಕ್ಯಾರೆಟ್ ಶುಂಠಿ ಸೂಪ್
ಸಾಂದರ್ಭಿಕ ಚಿತ್ರ
Follow us on

ಮೈಕೊರೆಯುವ ಚಳಿಯಲ್ಲಿ ಏನಾದರೂ ಬಿಸಿ ಬಿಸಿ ಆಹಾರವಿದ್ದರೆ ಬೇರೇನೂ ಬೇಕಿಲ್ಲ. ಈ ಋತುವಿನಲ್ಲಿ ಬಿಸಿ ಬಿಸಿ ಆಹಾರ ತಿನ್ನಲು ಪ್ರೇರೇಪಿಸುತ್ತಿದ್ದರೆ ಬೆಚ್ಚಗಿನ ಬಿಸಿ ಬಿಸಿ ಸೂಪ್ ಗಿಂತ ಉತ್ತಮವಾದ ಆಯ್ಕೆ ಮತ್ತೊಂದಿಲ್ಲ. ಅಡುಗೆ ಮನೆಯಲ್ಲಿರುವ ಈ ಕೆಲವು ಸಾಮಗ್ರಿಗಳನ್ನು ಬಳಸಿ ಸೂಪ್ ತಯಾರಿಸಿ ಸೇವಿಸಿದರೆ ದೇಹವು ಬೆಚ್ಚರಿಗಿರುವುದರೊಂದಿಗೆ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು. ಹಾಗಾದ್ರೆ ಮನೆಯಲ್ಲೇ ಮಾಡಬಹುದಾದ ಕ್ಯಾರೆಟ್ ಶುಂಠಿ ಸೂಪ್ ರೆಸಿಪಿಯೂ ಇಲ್ಲಿದೆ.

ಕ್ಯಾರೆಟ್ ಶುಂಠಿ ಸೂಪ್ ಮಾಡಲು ಬೇಕಾಗುವ ಸಾಮಗ್ರಿಗಳು

* ಮೂರು ಕ್ಯಾರೆಟ್

* ದೊಡ್ಡ ಗಾತ್ರದ ಶುಂಠಿ

* ಒಂದು ಕಪ್ ತರಕಾರಿಗಳು

* ಎರಡು ಈರುಳ್ಳಿ

* ಅರ್ಧ ಕಪ್ ಕಿತ್ತಳೆ ರಸ

* ಸ್ವಲ್ಪ ಕರಿಮೆಣಸಿನ ಪುಡಿ

* ಎರಡು ಚಮಚ ಅಡುಗೆ ಎಣ್ಣೆ

* ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ಇವು ಗರ್ಭಾಶಯದ ರೋಗಗಳ ಆರಂಭಿಕ ಲಕ್ಷಣಗಳು

ಕ್ಯಾರೆಟ್ ಶುಂಠಿ ಸೂಪ್ ತಯಾರಿಸುವ ವಿಧಾನ

* ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾಗುತ್ತಿದ್ದಂತೆ ಕತ್ತರಿಸಿಟ್ಟ ಈರುಳ್ಳಿ ಮತ್ತು ಶುಂಠಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ.

* ಇದಕ್ಕೆ ಕ್ಯಾರೆಟ್ ಹಾಕಿಕೊಳ್ಳಿ, ಅಗತ್ಯವಿದ್ದಷ್ಟು ನೀರು ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಬೇಯಲು ಬಿಡಿ.

* ನೀರಿನಂಶ ಕಡಿಮೆಯಾಗಿ ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿಕೊಳ್ಳಿ. ನಂತರದಲ್ಲಿ ಕಿತ್ತಳೆ ರಸವನ್ನು ಸೇರಿಸಿ 2-3 ನಿಮಿಷ ಕುದಿಯಲು ಬಿಡಿ.

* ಆ ಬಳಿಕ ಈ ಪಾತ್ರೆಯನ್ನು ಉರಿಯಿಂದ ತೆಗೆದು ತಣ್ಣಗಾಗಲು ಬಿಡಿ. ಬೇಯಿಸಿಟ್ಟ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.

* ರುಬ್ಬಿದ ಮಿಶ್ರಣವನ್ನು ಮತ್ತೆ ಕುದಿಯಲು ಸ್ಟವ್ ಮೇಲೆ ಇಡಿ. ಕುದಿಯುತ್ತಿದ್ದಂತೆ ಇದಕ್ಕೆ ಕರಿಮೆಣಸಿನ ಪುಡಿ ಸೇರಿಸಿದರೆ ಕ್ಯಾರೆಟ್ ಶುಂಠಿ ಸೂಪ್ ಸವಿಯಲು ಸಿದ್ಧ.

* ಬಿಸಿ ಬಿಸಿಯಾಗಿ ಕುಡಿಯಲು ತುಂಬಾ ರುಚಿಕರವಾಗಿದ್ದು, ಇದರ ಸೇವನೆಯಿಂದ ಶೀತ ಹಾಗೂ ಕೆಮ್ಮಿನಂತಹ ಸಮಸ್ಯೆಯೂ ದೂರವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ