ಕೊಡಗು ಎಂದ ಕೂಡಲೇ ಮೊದಲು ನೆನಪಾಗುವುದೇ ಆಚಾರ, ವಿಚಾರ ಸಂಸ್ಕೃತಿ, ಸಂಪ್ರದಾಯ ಹಾಗೂ ಆಹಾರ ಪದ್ಧತಿಯಲ್ಲಿ ವಿಭಿನ್ನತೆ. ಈ ಭಾಗದ ಜನರ ಆಹಾರವು ಮಾಂಸ ಹಾಗೂ ಮದ್ಯವಾಗಿದೆ. ಅದರಲ್ಲಿ ಈ ಪಂದಿ ಕರಿಯಂತೂ ಪ್ರಸಿದ್ಧ ಆಹಾರಗಳಲ್ಲಿ ಒಂದಾಗಿದೆ. ಇಲ್ಲಿನ ಕೆಲ ತಿನಿಸುಗಳು ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಹೆಸರು ವಿಭಿನ್ನವಾಗಿದ್ದರೂ ರುಚಿ ಮಾತ್ರ ಅದ್ಭುತವಾಗಿರುತ್ತದೆ. ಕೊಡವರ ವಿಶೇಷ ಅಡುಗೆಗಳಲ್ಲಿ ಪಾಪುಟ್ಟು ಕೂಡ ಒಂದಾಗಿದ್ದು, ಇದನ್ನು ಮಾಡಲು ಕೆಲವೇ ಕೆಲವು ಐಟಂಗಳಿದ್ದರೂ ಸಾಕು. ಇಲ್ಲಿನವರು ಬೆಳಗ್ಗಿನ ತಿಂಡಿಗೆ ಪಾಪುಟ್ಟು ಮಾಡಿ ಸವಿಯುತ್ತಾರೆ.
* ನುಚ್ಚಕ್ಕಿ
* ತೆಂಗಿನ ತುರಿ
* ನೀರು
* ರುಚಿಗೆ ತಕ್ಕಷ್ಟು ಉಪ್ಪು
ಇದನ್ನೂ ಓದಿ: ಆಹಾ! ರುಚಿಯಲ್ಲಿ ಅದ್ಭುತ ಉತ್ತರ ಕರ್ನಾಟಕದ ಸ್ಪೆಷಲ್ ಜೋಳದ ರೊಟ್ಟಿ ಮುಟಿಗಿ, ಇಲ್ಲಿದೆ ರೆಸಿಪಿ
* ಮೊದಲಿಗೆ ನುಚ್ಚಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
* ನಂತರದಲ್ಲಿ ಒಂದು ಪ್ಲೇಟ್ ತೆಗೆದು ಅದರ ಅರ್ಧ ಪ್ಲೇಟ್ ಅಕ್ಕಿ ಹಾಕಿ, ದುಪ್ಪಟ್ಟು ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ತೆಂಗಿನ ತುರಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
* ಆ ಬಳಿಕ ಇಡ್ಲಿ ಪಾತ್ರೆಯಲ್ಲಿ ನೀರನ್ನು ಹಾಕಿ ಇಡ್ಲಿ ಪ್ಲೇಟ್ ಇಡಬೇಕು. ಅದರ ಮೇಲೆ ನುಚ್ಚಕ್ಕಿಯ ಪ್ಲೇಟ್ ಇಟ್ಟು ಇಡ್ಲಿ ಪಾತ್ರೆಯ ಬಾಯಿಯನ್ನು ಮುಚ್ಚಿ ಹಬೆಯಲ್ಲಿ ಬೇಯಿಸಿಕೊಳ್ಳಬೇಕು.
* 15-20 ನಿಮಿಷಗಳ ಕಾಲ ಹಾಗೆಯೇ ಬಿಟ್ಟರೆ ರುಚಿಕರವಾದ ಪಾಪುಟ್ಟು ಸಿದ್ಧವಾಗುತ್ತದೆ. ಈ ಪಾಪುಟ್ಟನ್ನು ನಾಲ್ಕು ಭಾಗ ಮಾಡಿ ಚಟ್ನಿ ಅಥವಾ ಸಾಂಬಾರು ಜೊತೆಗೆ ಸವಿಯಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ