ನಾವೆಲ್ಲರೂ ಗರಿಗರಿಯಾದ ತಿನಿಸುಗಳನ್ನು ತಿನ್ನಲು ಇಷ್ಟಪಡುತ್ತೇವೆ. ಕಟ್ಲೇಟ್, ಪಕೋಡಾ, ಕಬಾಬ್ ಈ ರೀತಿಯ ಎಣ್ಣೆಯಲ್ಲಿ ಕರಿದು ತಯಾರಿಸುವ ಆಹಾರಗಳು ಗರಿಗರಿಯಾಗಿದ್ದಾಗ, ಅದು ತಿನ್ನಲು ರುಚಿಕರವಾಗಿರುತ್ತದೆ. ಆಹಾರಗಳು ಗರಿಗರಿಯಾಗಿದ್ದಾಗ ಅದನ್ನು ತಿನ್ನಲು ಆನಂದದಾಯಕವೆನಿಸುತ್ತದೆ. ತಿನಿಸುಗಳಲ್ಲಿ ಗರಿಗರಿ ಸಂವೇದನೆಯನ್ನು ಸಾಧಿಸಲು ಹಲವು ಮಾರ್ಗಗಳಿವೆ. ಸಾಮಾನ್ಯವಾಗಿ ತಿಂಡಿಯಲ್ಲಿ ಕ್ರಿಸ್ಪಿನೆಸ್ ತರಲು ಬ್ರೆಡ್ಕ್ರಂಬ್ಸ್ನಲ್ಲಿ ತಿಂಡಿಯನ್ನು ಅದ್ದಿ ಎಣ್ಣೆಯಲ್ಲಿ ಪ್ರೈ ಮಾಡಲಾಗುತ್ತದೆ. ಇದಲ್ಲದೇ ಇನ್ನು ಕೆಲವು ಪದಾರ್ಥಗಳನ್ನು ಬಳಸುವ ಗರಿಗರಿಯಾದ ತಿಂಡಿಗಳನ್ನು ತಯಾರಿಸಬಹುದು.
ನಿಮ್ಮ ತಿಂಡಿಗಳಿಗೆ ಗರಿಗರಿಯಾದ ಲೇಪನವನ್ನು ನೀಡಲು ಸುಲಭ ಮಾರ್ಗಗಳು:
ಕಾರ್ನ್ಫ್ಲೇಕ್ಸ್: ನೀವು ಮನೆಯಲ್ಲಿ ಕಟ್ಲೆಟ್‌ಗಳನ್ನು ಮಾಡುತ್ತಿದ್ದರೆ, ಅದರ ಮೆಲೆ ವಿಶೇಷವಾದ ಲೇಪನವನ್ನು ನೀಡಲು ಬಯಸಿದರೆ ಕಾರ್ನ್ಫ್ಲೇಕ್ಸ್ಗಳನ್ನು ಬಳಸಿ. ಕಾರ್ನ್ಫ್ಲೇಕ್ಸ್ಗಳನ್ನು ಪುಡಿ ಮಾಡಿ ಕಟ್ಲೆಟ್‌ಗಳನ್ನು ಅದರಲ್ಲಿ ಅದ್ದಿ ಎಣ್ಣೆಯಲ್ಲಿ ಫ್ರೈ ಮಾಡಿ. ಇದರಿಂದ ಕಟ್ಲೆಟ್‌ಗಳು ಗರಿಗರಿಯಾಗುತ್ತದೆ.
ಓಟ್ಸ್: ಓಟ್ಸ್ ಮತ್ತೊಂದು ಸಾಮಾನ್ಯ ಉಪಹಾರ ಆಹಾರವಾಗಿದ್ದು, ಇದನ್ನು ನೀವು ಸಸ್ಯಾಹಾರಿ ಮತ್ತು ಮಾಂಸಾಹಾರಿ ತಿಂಡಿಗಳಿಗೂ ಲೇಪಿಸಬಹುದು. ಓಟ್ಸ್ನ್ನು ಪುಡಿ ಮಾಡಿ ನಂತರ ನೀವು ತಯಾರಿಸದ ತಿನಿಸನ್ನು ಅದರಲ್ಲಿ ಸಂಪೂರ್ಣವಾಗಿ ಅದ್ದಿ ಎಣ್ಣೆಯಲ್ಲಿ ಫ್ರೈ ಮಾಡಿ.
ಮಖಾನಾ: ಮಖಾನ ಅಥವಾ ತಾವರೆ ಬೀಜಗಳು ಅಂಟುಮುಕ್ತವಾದ ಸೂಪರ್ ಫುಡ್ ಆಗಿದ್ದು, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಾಮಾನ್ಯವಾಗಿ ಲಘು ತಿಂಡಿಯಾಗಿ ಇದನ್ನು ತಿನ್ನಲಾಗುತ್ತದೆ. ಜೊತೆಗೆ ತಿಂಡಿಯನ್ನು ಗರಿಗರಿಯಾಗಲು ಮಖಾನವನ್ನು ಬಳಸಬಹುದು. ನೀವು ಮೊದಲು ಅವುಗಳನ್ನು ಒರಟಾಗಿ ಪುಡಿ ಮಾಡಿಕೊಳ್ಳಬೇಕು. ನೀವು ತಯಾರಿಸಿದ ತಿಂಡಿಗಳನ್ನು ಮೊಟ್ಟೆಯಲ್ಲಿ ಅದ್ದಿ ನಂತರ ಅವುಗಳನ್ನು ಪುಡಿ ಮಾಡಿದ ಮಖಾನದಲ್ಲಿ ಅದ್ದಿ ಎಣ್ಣೆಯಲ್ಲಿ ಫ್ರೈ ಮಾಡಿ. ಇದರಿಂದ ತಿನಿಸು ಗರಿಗರಿಯಾಗುತ್ತದೆ.
ಶ್ಯಾವಿಗೆ: ಸಾಮಾನ್ಯವಾಗಿ ಶ್ಯಾವಿಗೆಯಲ್ಲಿ ಉಪ್ಪಿಟ್ಟು, ಖೀರ್ ಇತ್ಯಾದಿಗಳನ್ನು ಮಾಡುತ್ತೇವೆ. ಜೊತೆಗೆ ತಿನಿಸುಗಳಿಗೆ ಗರಿಗರಿಯಾದ ಲೇಪನವನ್ನು ನೀಡಲು ಶ್ಯಾವಿಗೆಯನ್ನು ಬಳಸಬಹುದು. ಶ್ಯಾವಿಗೆಯನ್ನು ಸ್ವಲ್ಪ ಹುರಿದು ಅದನ್ನು ಪುಡಿ ಮಾಡಿ ಇಟ್ಟುಕೊಳ್ಳಿ. ನಂತರ ತಿಂಡಿಯನ್ನು ಆ ಲೇಪನದಲ್ಲಿ ಅದ್ದಿ ಎಣ್ಣೆಯಲ್ಲಿ ಫ್ರೈ ಮಾಡಿದರೆ, ಗರಿಗರಿಯಾದ ತಿನಿಸನ್ನು ತಯಾರಿಸಬಹುದು.
ಇದನ್ನೂ ಓದಿ: Cooking Tips: ಗರಿಗರಿಯಾದ ಬಾಳೆಕಾಯಿ ಚಿಪ್ಸ್ ತಯಾರಿಸಲು ಈ ಸಲಹೆ ಪಾಲಿಸಿ
ನೂಡಲ್ಸ್: ನೂಡಲ್ಸ್ ನಿಮ್ಮ ತಿಂಡಿಗಳಿಗೆ ಗರಿಗರಿಯಾದ ಹೊದಿಕೆಯನ್ನು ನೀಡಲು ಉತ್ತಮ ಆಯ್ಕೆಯಾಗಿದೆ. ನೂಡಲ್ಸ್ಗಳನ್ನು ಕುದಿಸಿ, ಅವುಗಳನ್ನು ಒಣಗಿಸಿ ಮತ್ತು ಪನೀರ್, ಚಿಕನ್ ಅಥವಾ ಇತರ ತಿಂಡಿಗಳ ಮೆಲೆ ನೂಡಲ್ಸ್ನ್ನು ಲೇಪನ ಮಾಡಿ ತಿಂಡಿಗಳನ್ನು ತಯಾರಿಸಿಕೊಳ್ಳಿ.
ಬ್ರೆಡ್ ಕಂಬ್ಸ್: ತಿಂಡಿಗಳನ್ನು ಗರಿಗರಿಯಾಗಿಸಲು ಇದು ಒಂದು ಶ್ರೇಷ್ಠ ಆಯ್ಕೆಯಾಗಿದೆ. ಅನೇಕ ಪಾಕವಿಧಾನಗಳಲ್ಲಿ ಈ ಬ್ರೆಡ್‌ಕ್ರಂಬ್ಸ್ ಬಳಸಲಾಗುತ್ತದೆ. ಇದು ತಿನಿಸುಗಳ ರುಚಿಯನ್ನು ಕೂಡಾ ಹೆಚ್ಚಿಸುತ್ತದೆ. ಎಣ್ಣೆಯಲ್ಲಿ ಕರಿಯುವ ಮೊದಲು ತಿಂಡಿಗಳನ್ನು ಬ್ರೆಡ್ಕ್ರಂಬ್ಸ್ನಲ್ಲಿ ಡಿಪ್ ಮಾಡಿ ನಂತರ ಫ್ರೈ ಮಾಡಿಕೊಳ್ಳಿ.
Published On - 6:14 pm, Sat, 15 April 23