ಆರೋಗ್ಯಕರವಲ್ಲದ ಉಪಾಹಾರ ಸೇವನೆ ನಿಲ್ಲಿಸಿ, ಯಾವೆಲ್ಲ ಆಹಾರ ದೇಹಕ್ಕೆ ಒಳ್ಳೆಯದಲ್ಲ?
ದಿನದ ಮೊದಲ ತಿಂಡಿ ಆರೋಗ್ಯಕರ ಊಟಕ್ಕೆ ಸಮ ಎಂದು ಪ್ರಶಂಸಿಸಲಾಗುತ್ತದೆ. ಇದೆಲ್ಲದರ ಜೊತೆಗೆ ಇದು ಶಕ್ತಿಯ ಮೂಲವಾಗಿದೆ, ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ವ್ಯಾಯಾಮದ ನಂತರದ ಚೇತರಿಕೆಗೆ ಸಹಾಯ ಮಾಡುತ್ತದೆ. ಆದರೆ ಉಪಾಹಾರ ಪೌಷ್ಟಿಕಾಂಶದಿಂದ ಕೂಡಿರಬೇಕು. ಹಾಗಾಗಿ ನಿಮ್ಮ ದಿನದ ಆರೋಗ್ಯಕರ ಆರಂಭಕ್ಕಾಗಿ ನೀವು ಕೆಲವು ಕೆಟ್ಟ ಉಪಾಹಾರಗಳನ್ನು ತಪ್ಪಿಸಬಹುದು. ಹೇಗೆ? ಕೆಟ್ಟ ಆಹಾರ ಯಾವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಬೆಳಗಿನ ಉಪಾಹಾರ ಸರಿಯಾಗಿ ಇದ್ದಲ್ಲಿ ದಿನ ಪೂರ್ತಿ ಉಲ್ಲಾಸದಿಂದ ಕೂಡಿರುತ್ತದೆ ಎಂಬ ಮಾತು ಸುಳ್ಳಲ್ಲ. ಸಾಮಾನ್ಯವಾಗಿ ದಿನದ ಮೊದಲ ತಿಂಡಿ ಆರೋಗ್ಯಕರ ಊಟಕ್ಕೆ ಸಮ ಎಂದು ಪ್ರಶಂಸಿಸಲಾಗುತ್ತದೆ. ಇದೆಲ್ಲದರ ಜೊತೆಗೆ ಇದು ಶಕ್ತಿಯ ಮೂಲವಾಗಿದೆ, ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ವ್ಯಾಯಾಮದ ನಂತರದ ಚೇತರಿಕೆಗೆ ಸಹಾಯ ಮಾಡುತ್ತದೆ. ಆದರೆ ಉಪಾಹಾರ ಪೌಷ್ಟಿಕಾಂಶದಿಂದ ಕೂಡಿರಬೇಕು. ಹಾಗಾಗಿ ನಿಮ್ಮ ದಿನದ ಆರೋಗ್ಯಕರ ಆರಂಭಕ್ಕಾಗಿ ನೀವು ಕೆಲವು ಕೆಟ್ಟ ಉಪಾಹಾರಗಳನ್ನು ತಪ್ಪಿಸಬಹುದು. ಹೇಗೆ? ಕೆಟ್ಟ ಆಹಾರ ಯಾವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟಗಳಲ್ಲಿ ಒಂದಾಗಿದೆ. ಇದು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರಬೇಕು, ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ದಿನವಿಡೀ ನಿಮ್ಮನ್ನು ಉಲ್ಲಾಸದಾಯಕವಾಗಿರುವಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ನೀವು ಯಾವುದೇ ರೀತಿಯಲ್ಲಿಯೂ ಉಪಾಹಾರದ ಆಯ್ಕೆ ಮಾಡುವಾಗ ತಪ್ಪುಗಳನ್ನು ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಆಹಾರ ತಜ್ಞ ಕೋಮಲ್ ಮಲಿಕ್ ಹೇಳುತ್ತಾರೆ.
ನೀವು ತಪ್ಪಿಸಬೇಕಾದ ಉಪಾಹಾರಗಳ ಪಟ್ಟಿ ಇಲ್ಲಿದೆ;
ನೀವು ತಪ್ಪಿಸಲು ಪರಿಗಣಿಸಬಹುದಾದ ಅಥವಾ ಮಿತವಾಗಿ ಸೇವಿಸಬಹುದಾದ ಕೆಲವು ಅನಾರೋಗ್ಯಕರ ಆಹಾರಗಳು ಇಲ್ಲಿವೆ.
1. ಸಕ್ಕರೆ ಸೇರಿಸಿದ ಆಹಾರಗಳು; ಸಕ್ಕರೆ ಸೇರಿಸಿದ ಆಹಾರಗಳನ್ನು ಸೇವನೆ ಮಾಡುವುದರ ಮೂಲಕ ದಿನವನ್ನು ಪ್ರಾರಂಭಿಸುವುದು ತ್ವರಿತವಾಗಿ ಶಕ್ತಿ ವರ್ಧಕ ಎನಿಸಿದರೂ ಕೂಡ, ಮುಂದೆ ನಿಮ್ಮ ದೇಹದ ಶಕ್ತಿಯ ಕುಂಠಿತ ಅಥವಾ ಕುಸಿತಕ್ಕೆ ಕಾರಣವಾಗಬಹುದು. ಸ್ಥಿರವಾದ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಅನಗತ್ಯ ಸಿಹಿ ತಿನ್ನುವ ಬಯಕೆಯನ್ನು ತಪ್ಪಿಸಲು ಸಂಪೂರ್ಣವಾಗಿ ಸಕ್ಕರೆ ಇಲ್ಲದ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ.
2. ಪ್ಯಾಕ್ ಆಗಿರುವ ಪರಿಮಳಯುಕ್ತ ಮೊಸರಿನ ಕಪ್ಗಳು ; ಪರಿಮಳಯುಕ್ತವಾದ ಮೊಸರಿನ ಕಪ್ ಗಳು ಹೆಚ್ಚಾಗಿ ಕೃತಕ ಸಕ್ಕರೆಗಳ ಸೇರ್ಪಡೆ ಮಾಡಿ ಪ್ಯಾಕ್ ಮಾಡಲಾಗುತ್ತದೆ ಹಾಗಾಗಿ ಇದರ ಬದಲಿಯಾಗಿ ಮನೆಯಲ್ಲಿಯೇ ಹೆಪ್ಪು ಗಟ್ಟಿಸಿದ ಮೊಸರನ್ನು ಬಳಸಿ, ಇದಕ್ಕೆ ಸಿಹಿ ಅಂಶ ಬೇಕಾದಲ್ಲಿ ತಾಜಾ ಹಣ್ಣುಗಳು ಅಥವಾ ಜೇನುತುಪ್ಪವನ್ನು ಸೇರಿಸಿ. ಈ ರೀತಿಯಾಗಿ, ರುಚಿಕರವಾದ ಉಪಾಹಾರವನ್ನು ಆನಂದಿಸುವಾಗ ನೀವು ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು.
3. ಬಿಳಿ ಬ್ರೆಡ್; ಬಿಳಿ ಬ್ರೆಡ್ ಗಳನ್ನು ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಇದು ಧಾನ್ಯಗಳಲ್ಲಿ ಕಂಡು ಬರುವಂತಹ ಫೈಬರ್ ಮತ್ತು ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ನಿಮ್ಮ ದೇಹಕ್ಕೆ ಸುಸ್ಥಿರ ಶಕ್ತಿ ಮತ್ತು ಅಗತ್ಯ ಪೋಷಕಾಂಶಗಳನ್ನು ಒದಗಿಸಲು ಧಾನ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿದ ಬ್ರೆಡ್ ಗಳನ್ನು ಸೇವಿಸಿ.
4. ಸ್ಯಾಂಡ್ ವಿಚ್ಗಳು ; ಪ್ರಲೋಭನೆ ಮಾಡುವಾಗ, ಸ್ಯಾಂಡ್ ವಿಚ್ ಗಳು ಹೆಚ್ಚುವರಿ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಖಾಲಿ ಕ್ಯಾಲೊರಿಗಳನ್ನು ನೀಡುತ್ತವೆ. ನೀವು ಪೂರ್ಣ ಪ್ರಮಾಣದ ಧಾನ್ಯಗಳನ್ನು ಬಳಸಿ ಮಾಡಿದ ಬ್ರೆಡ್ ಮತ್ತು ಮೊಟ್ಟೆಯ ಬಿಳಿ ಭಾಗದಂತಹ ತೆಳ್ಳಗಿನ ಪ್ರೋಟೀನ್ಗಳನ್ನು ಸೇವಿಸಬೇಕು ಮತ್ತು ಸ್ಯಾಂಡ್ ವಿಚ್ ಗಳನ್ನು ಪೌಷ್ಟಿಕ ತುಂಬಿದ ಉಪಾಹಾರವನ್ನಾಗಿ ಮಾಡಲು ಅದಕ್ಕೆ ತರಕಾರಿಗಳನ್ನು ಸೇರಿಸಬೇಕು.
5. ಪ್ಯಾನ್ ಕೇಕ್ ಮತ್ತು ಸಿರಪ್ ; ಪ್ಯಾನ್ ಕೇಕ್ ಗಳು ಮತ್ತು ತರ ತರದ ಸಿರಪ್ ಗಳು ಸಕ್ಕರೆಯ ಬಲೆಯಾಗಬಹುದು. ಬದಲಿಗೆ, ಬಾದಾಮಿ ಹಿಟ್ಟಿನಿಂದ ಮಾಡಿದ ಪ್ಯಾನ್ ಕೇಕ್ ಗಳನ್ನು ಆಯ್ಕೆ ಮಾಡಿಕೊಳ್ಳಿ ಅಥವಾ ತಾಜಾ ಹಣ್ಣುಗಳು ಅಥವಾ ಸಾಧಾರಣ ಪ್ರಮಾಣದ ಶುದ್ಧ ಮೇಪಲ್ ಸಿರಪ್ ನನ್ನು ಬಳಸಿ. ಈ ಬದಲಾವಣೆಯು ನಿಮ್ಮ ದೇಹಕ್ಕೆ ಪೋಷಕಾಂಶಗಳನ್ನು ಸೇರಿಸುತ್ತದೆ ಮತ್ತು ಸಂಸ್ಕರಿಸಿದ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುತ್ತದೆ.
6. ಸಂಸ್ಕರಿಸಿದ ಮಾಂಸ; ಬೇಕನ್ ಮತ್ತು ಸಾಸೇಜ್ ಅಥವಾ ಪ್ಯಾಕ್ ಮಾಡಿದ ಉಪಾಹಾರವನ್ನು ಸೇವನೆ ಮಾಡಬಾರದು, ಅವುಗಳ ಹೆಚ್ಚಿನ ಸೋಡಿಯಂ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಅಂಶವು ಹಾನಿಕಾರಕವಾಗಿದೆ. ನಿಮ್ಮ ಉಪಾಹಾರವನ್ನು ಸಮತೋಲನ ಮತ್ತು ಆರೋಗ್ಯಕರವಾಗಿಡಲು ತೆಳ್ಳಗಿನ ಪ್ರೋಟೀನ್ ಮೂಲಗಳು ಅಥವಾ ಸಸ್ಯ ಆಧಾರಿತ ಪರ್ಯಾಯಗಳನ್ನು ಆರಿಸಿಕೊಳ್ಳಿ.
7. ಮಫಿನ್ಗಳು ಮತ್ತು ಪೇಸ್ಟ್ರಿಗಳು ; ಅನುಕೂಲಕರವಾಗಿದ್ದರೂ, ಅಂಗಡಿಯಿಂದ ಖರೀದಿಸಿದ ಮಫಿನ್ಗಳು ಮತ್ತು ಪೇಸ್ಟ್ರಿಗಳಲ್ಲಿ ಹೆಚ್ಚಾಗಿ ಸಂಸ್ಕರಿಸಿದ ಸಕ್ಕರೆಗಳು ಮತ್ತು ಅನಾರೋಗ್ಯಕರ ಕೊಬ್ಬುಗಳು ಹೆಚ್ಚಾಗಿರುತ್ತವೆ. ಧಾನ್ಯದ ಹಿಟ್ಟನ್ನು ಬಳಸಿಕೊಂಡು ಬೇಕ್ ಮಾಡಿಕೊಳ್ಳಿ, ಮತ್ತು ಹೆಚ್ಚುವರಿ ಪೋಷಣೆಗಾಗಿ ಹಣ್ಣುಗಳು ಅಥವಾ ಬೀಜಗಳನ್ನು ಅದಕ್ಕೆ ಸೇರಿಸಿ. ಈ ರೀತಿಯಾಗಿ, ನಿಮ್ಮ ಆರೋಗ್ಯದಲ್ಲಿ ರಾಜಿ ಮಾಡಿಕೊಳ್ಳದೆಯೇ ನೀವು ರುಚಿಕರವಾದ ಉಪಹಾರವನ್ನು ಸವಿಯಬಹುದು.
ಇದನ್ನೂ ಓದಿ: ಬೆಳಗಿನ ಉಪಹಾರ ಸೇವನೆಯಲ್ಲಿ ಈ 6 ತಪ್ಪುಗಳನ್ನು ಎಂದಿಗೂ ಮಾಡಬೇಡಿ
8. ಕೃತಕ ಹಣ್ಣಿನ ರಸಗಳು ; ಕೃತಕ ಹಣ್ಣಿನ ರಸಗಳು ಆರೋಗ್ಯಕರ ಆಯ್ಕೆಯಂತೆ ತೋರಬಹುದು, ಆದರೆ ಅವುಗಳು ಹೆಚ್ಚಾಗಿ ಫೈಬರ್ ಹೊಂದಿರುವುದಿಲ್ಲ ಆದರೆ ಹೆಚ್ಚುವರಿ ಸಕ್ಕರೆಗಳನ್ನು ಹೊಂದಿರುತ್ತವೆ. ಕೃತಕ ಸೇರ್ಪಡೆಗಳಿಲ್ಲದೆ ಅತ್ಯಧಿಕ ಪೋಷಕಾಂಶಗಳನ್ನು ಪಡೆಯಲು ತಾಜಾ ಹಣ್ಣುಗಳನ್ನು ಬಳಸಿಕೊಂಡು ಜ್ಯೂಸ್ ತಯಾರಿಸಿಕೊಳ್ಳಬಹುದು.
ಆರೋಗ್ಯಕರ ಉಪಾಹಾರಕ್ಕಾಗಿ, ಸಕ್ಕರೆ ಅಥವಾ ಕೊಬ್ಬು ಸೇರಿಸಿಕೊಳ್ಳದೆಯೇ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಲು ತಜ್ಞರು ಯಾವಾಗಲೂ ಸಲಹೆ ನೀಡುತ್ತಾರೆ. ನೀವು ಆಮ್ಲೆಟ್, ಓಟ್ಸ್, ಚಿಲ್ಲಾ, ಚಿಯಾ ಸೀಡ್ ಪುಡ್ಡಿಂಗ್, ಪೋಹಾ, ಉಪ್ಮಾ ಇತ್ಯಾದಿಗಳನ್ನು ಕೂಡ ದಿನದ ಉಪಹಾರವಾಗಿ ಆನಂದಿಸಬಹುದು.