Breakfast Tips: ಬೆಳಗಿನ ಉಪಹಾರ ಸೇವನೆಯಲ್ಲಿ ಈ 6 ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಬೆಳಗಿನ ಉಪಹಾರವು ದಿನದ ಅಗತ್ಯವಾದ ಊಟವಾಗಿದೆ. ಆದರೆ ನಮ್ಮಲ್ಲಿ ಬಹಳಷ್ಟು ಜನರು ಸರಿಯಾದ ಉಪಹಾರವನ್ನು ಸರಿಯಾದ ಸಮಯದಲ್ಲಿ ಸೇವಿಸಲು ಅಷ್ಟೇನು ಗಮನಕೊಡುವುದಿಲ್ಲ. ಬೆಳಗಿನ ಉಪಹಾರದ ಸಮಯದಲ್ಲಿ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ದೀರ್ಘಾವಧಿಯಲ್ಲಿ ಅಡ್ಡ ಪರಿಣಾಮವನ್ನು ಬೀರಬಹುದು. ಆದ್ದರಿಂದ ಉಪಹಾರದ ಸಮಯದಲ್ಲಿ ಮಾಡುವ ಈ 6 ತಪ್ಪುಗಳನ್ನು ತಪ್ಪಿಸಬೇಕು.

Breakfast Tips: ಬೆಳಗಿನ ಉಪಹಾರ ಸೇವನೆಯಲ್ಲಿ ಈ 6 ತಪ್ಪುಗಳನ್ನು ಎಂದಿಗೂ ಮಾಡಬೇಡಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 19, 2023 | 10:07 AM

ಬೆಳಗಿನ ಉಪಹಾರವು ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಪೌಷ್ಟಿಕ ತಜ್ಞರು ಬೆಳಗಿನ ಉಪಹಾರವನ್ನು ತಪ್ಪಿಸಬೇಡಿ ಎಂದು ಸಲಹೆ ನೀಡುತ್ತಾರೆ. ಆದರೆ ನಮ್ಮಲ್ಲಿ ಹೆಚ್ಚಿನವರು ಬೆಳಗಿನ ಉಪಹಾರದಲ್ಲಿ ತಪ್ಪು ಆಹಾರ ಸೇವನೆಯನ್ನು ಮಾಡುತ್ತಾರೆ. ಹಾಲು ಕಾರ್ನ್ಫ್ಲೆಕ್ಸ್ ಅಥವಾ ಬೆಣ್ಣೆ ಮತ್ತು ಬ್ರೆಡ್ ತಿಂದು ಕೆಲಸಕ್ಕೆ ಹೋಗುವುದನ್ನು ಹೆಚ್ಚಿನವರು ಅಭ್ಯಾಸ ಮಾಡಿಕೊಂಡಿದ್ದಾರೆ, ಆದರೆ ಅಂತಹ ಆಹಾರದಿಂದ ತಮ್ಮ ದೇಹಕ್ಕೆ ಯಾವುದೇ ಪ್ರಯೋಜನವಿಲ್ಲ. ಈ ರೀತಿಯ ಅನೇಕ ತಪ್ಪುಗಳನ್ನು ಬೆಳಗಿನ ಉಪಹಾರವನ್ನು ಸೇವಿಸುವಾಗ ಮಾಡುತ್ತಿರುತ್ತೇವೆ. ಅಂತಹ ತಪ್ಪುಗಳನ್ನು ತಪ್ಪಿಸಿ, ಸರಿಯಾದ ಉಪಹಾರ ಕ್ರಮವನ್ನು ಪಾಲಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

ನೀವು ನಿಲ್ಲಿಸಬೇಕಾದ 6 ಬ್ರೇಕ್ಫಾಸ್ಟ್ ತಪ್ಪುಗಳು:

ಬ್ರೆಡ್ ಮತ್ತು ಬೆಣ್ಣೆ ಒಂದೇ ತ್ವರಿತ ಉಪಹಾರಕ್ಕೆ ಪರಿಹಾರವಲ್ಲ:

ಕೆಲಸದ ಒತ್ತಡದಿಂದಾಗಿ ಅನೇಕರು ಬೆಳಗ್ಗೆ ತ್ವರಿತ ಉಪಹಾರದ ಆಯ್ಕೆಯನ್ನು ಮಾಡುತ್ತಾರೆ. ಹಾಗಾಗಿ ಹೆಚ್ಚಿನ ಜನರು ಬ್ರೆಡ್ಜಾಮ್ ಅಥವಾ ಬ್ರೆಡ್ ಮತ್ತು ಬೆಣ್ಣೆಯನ್ನು ಸೇವಿಸುತ್ತಾರೆ. ಆದರೆ ತ್ವರಿತ ಉಪಹಾರಕ್ಕೆ ಇದು ಸೂಕ್ತವಲ್ಲ. ಬ್ರೆಡ್ ಮತ್ತು ಬೆಣ್ಣೆ ತ್ವರಿತ ಉಪಹಾರದ ಜನಪ್ರಿಯ ಆಯ್ಕೆಯಾಗಿದ್ದರೂ, ಇದು ಕಾರ್ಬೋಹೈಡ್ರೇಟ್ ಮತ್ತು ಸ್ಯಾಚುರೇಟೆಡ್ ಕೊಬ್ಬು ದೇಹದಲ್ಲಿ ಉತ್ಪತ್ತಿಯಾಗಲು ಕಾರಣವಾಗಬಹುದು. ಇದರ ಪರಿಣಾಮವಾಗಿ ತೂಕ ಹೆಚ್ಚಾಗುವುದು, ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟ, ಕೊಲೆಸ್ಟ್ರಾಲ್ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರ ಬದಲು ಬ್ರೆಡ್ ಟೋಸ್ಟ್ ಜೊತೆ ತುಪ್ಪ ಅಥವಾ ಉಪ್ಪು ರಹಿತ ಬೆಣ್ಣೆಯನ್ನು ಮಿತವಾಗಿ ಸೇರಿಸಿ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಕಾರ್ನ್ಫ್ಲೇಕ್ಸ್ ಮತ್ತು ಮ್ಯೂಸ್ಲಿ ಆರೋಗ್ಯಕರ ಆಹಾರವಲ್ಲ:

ಅನೇಕರು ಕಾರ್ನ್ಫ್ಲೇಕ್ಸ್, ಮ್ಯೂಸ್ಲಿ ಮುಂತಾದವು ಆರೋಗ್ಯಕರ ಉಪಹಾರ ಆಯ್ಕೆ ಎಂದು ನಂಬುತ್ತಾರೆ. ಕೆಲವರು ಅವುಗಳನ್ನು ಹಾಲಿನೊಂದಿಗೆ ಬೆರೆಸಿ ಸರಳವಾಗಿ ತಿನ್ನುತ್ತಾರೆ. ಇನ್ನೂ ಕೆಲವರು ಹಣ್ಣುಗಳು ಮತ್ತು ಒಣಹಣ್ಣು ಮತ್ತು ಬೀಜಗಳನ್ನು ಸೇರಿಸಿ ತಿನ್ನುತ್ತಾರೆ. ಆದರೂ ಇದು ನಿಮಗೆ ತೂಕ ಕಳೆದುಕೊಳ್ಳಲು ಸಹಾಯ ಮಾಡುವುದಿಲ್ಲ. ಇವುಗಳು ಸಾಮಾನ್ಯವಾಗಿ ಪ್ಯಾಕೆಜ್ಡ್ ಆಹಾರವಾಗಿರುವುದರಿಂದ ಇವುಗಳಲ್ಲಿ ಕೃತಕ ಸಿಹಿಕಾರಕಗಳು ಮತ್ತು ಇತರ ಅಂಶಗಳು ಇರುತ್ತವೆ. ಇದರ ಬದಲಾಗಿ ನೀವೇ ಮನೆಯಲ್ಲಿ ಆರೋಗ್ಯಕರ ಗ್ರಾನೋಲಾವನ್ನು ತಯಾಸಿ ತಿನ್ನಬಹುದು.

ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯಲು ಶಿಫಾರಸು ಮಾಡುವುದಿಲ್ಲ:

ಗ್ರೀನ್ ಟೀ ಆರೋಗ್ಯ ಮತ್ತು ಫಿಟ್ನೆಸ್ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಮನ್ನಣೆಯನ್ನು ಗಳಿಸಿದೆ. ಅದರಲ್ಲಿನ ಹೇರಳ ಉತ್ಕರ್ಷಣ ನಿರೋಧಕಗಳ ಕಾರಣದಿಂದಾಗಿ ಅದು ಚಯಾಪಚಯ, ಜೀರ್ಣಕ್ರಿಯೆ, ತೂಕ ನಷ್ಟ ಮತ್ತು ದೇಹದಲ್ಲಿನ ಗ್ಲೂಕೋಸ್ ಮಟ್ಟದ ನಿಯಂತ್ರಣದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿದೆ. ಇಷ್ಟಿದ್ದರೂ ಸರಿಯಾದ ಸಮಯದಲ್ಲಿ ಈ ಹಸಿರು ಚಹಾವನ್ನು ಸೇವನೆ ಮಾಡುವುದು ಮುಖ್ಯವಾಗಿದೆ. ಅನೇಕ ಜನರು ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವಿಸುತ್ತಾರೆ. ಮತ್ತು ಈ ರೀತಿ ಮಾಡುವುದರಿಂದ ತೂಕ ನಷ್ಟ ಪ್ರಕ್ರಿಯೆ ವೇಗಗೊಳ್ಳುತ್ತದೆ ಎಂದು ಅವರು ಭಾವಿಸುತ್ತಾರೆ. ದುರಾದೃಷ್ಟವಶಾತ್ ಈ ಅಭ್ಯಾಸವು ನಕಾರಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. ಹಸಿರು ಚಹಾವು ಟ್ಯಾನಿನ್ ಗಳನ್ನು ಹೊಂದಿರುತ್ತವೆ. ಇದು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ದೇಹದೊಳಗೆ ಆಮ್ಲೀಯತೆ ಉತ್ಪತ್ತಿಯಾಗಲು ಕಾರಣವಾಗಬಹುದು. ಇದು ಹೊಟ್ಟೆ ಉಬ್ಬುವುದು, ಅಜೀರ್ಣ, ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಗ್ರೀನ್ ಟೀ ಯ ಸರಿಯಾದ ಪ್ರಯೋಜನವನ್ನು ಪಡೆಯಲು ಉಪಹಾರದ ನಂತರ ಅದನ್ನು ಸೇವಿಸುವುದು ಉತ್ತಮ.

ಇದನ್ನೂ ಓದಿ: Weight Loss Breakfast: ತೂಕ ನಷ್ಟಕ್ಕೆ ಸಹಕಾರಿ ಈ ರುಚಿಕರ ಜೋಳದ ಉಪ್ಪಿಟ್ಟು

ಮಿಲ್ಕ್ ಶೇಕ್ ಅಥವಾ ಸ್ಮೂಥಿಗಳಿಗೆ ಹಣ್ಣುಗಳನ್ನು ಕೆಲವು ಸೇರಿಸುವುದರಿಂದ ಅಡ್ಡ ಪರಿಣಾಮ ಉಂಟಾಗಬಹುದು:

ಹಣ್ಣಿನ ಸೇವನೆಯೊಂದಿಗೆ ದಿನವನ್ನು ಪ್ರಾರಂಭಿಸುವುದು ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಹೀಗಿದ್ದರೂ ನೀವು ಹಣ್ಣುಗಳನ್ನು ಯಾವುದರೊಂದಿಗೆ ತಿನ್ನುತ್ತೀರಿ ಎನ್ನುವುದು ಬಹಳ ಮುಖ್ಯ. ಮಾವಿನ ಹಣ್ಣುಗಳು, ಬಾಳೆಹಣ್ಣು ಮತ್ತು ಇತರ ಸಿಟ್ರಿಸ್ ಹಣ್ಣುಗಳನ್ನು ಹಾಲು ಮತ್ತು ಮೊಸರಿನೊಂದಿಗೆ ಸೇರಿಸಿ ತಿನ್ನುವುದರಿಂದ ಅದು ನಿಮ್ಮ ಚಯಾಪಚಯ ಕ್ರಿಯೆಯನ್ನು ಅಡ್ಡಿಪಡಿಸಬಹುದು. ಡೈರಿ ಉತ್ಪನ್ನಗಳು ಪ್ರೋಟಿನ್ ಮತ್ತು ಕೊಬ್ಬುಗಳಿಂದ ಸಮೃದ್ಧವಾಗಿರುತ್ತವೆ. ಇದು ನಿಧಾನವಾಗಿ ಜೀರ್ಣವಾಗುತ್ತವೆ. ಮತ್ತು ಇದರೊಂದಿಗೆ ಹಣ್ಣುಗಳನ್ನು ಸೇರಿಸುವುದರಿಂದ ಇದು ಹಣ್ಣುಗಳ ಜೀರ್ಣಕ್ರಿಯೆಯನ್ನೂ ವಿಳಂಬಗೊಳಿಸುತ್ತದೆ. ಮತ್ತು ಜೀರ್ಣಾಂಗದಲ್ಲಿ ಹುದುಗುವಿಕೆಗೆ ಕಾರಣವಾಗಬಹುದು. ಇದು ಕಾಲನಂತರದಲ್ಲಿ ಕರಳಿನ ಅನಾರೋಗ್ಯಕ್ಕೂ ಕಾರಣವಾಗಬಹುದು. ನೀವು ಬಾಳೆ ಹಣ್ಣಿನ ಸ್ಮೂಥಿ ಅಥವಾ ಮಿಲ್ಕ್ಶೇಕ್ ನ್ನು ಸೇವಿಸಲು ಬಯಸಿದರೆ, ವ್ಯಾಯಾಮದ ನಂತರ ಅದನ್ನು ಸೇವಿಸುವುದು ಉತ್ತಮ. ಏಕೆಂದರೆ ಆ ಸಮಯದಲ್ಲಿ ಈ ಎರಡು ಅಂಶಗಳಲ್ಲಿರುವ ಕಾಬ್ರೋಹೈಡ್ರೇಟ್ ಗಳು ಸ್ನಾಯುಗಳ ದುರಸ್ತಿಗೆ ಸಹಾಯ ಮಾಡುತ್ತದೆ ಮತ್ತು ಕಳೆದುಹೋದ ಶಕ್ತಿಯನ್ನು ಮರುಪೂರಣಗೊಳಿಸುತ್ತದೆ.

ಜ್ಯೂಸ್ ಗಳು ನೀವು ಅಂದುಕೊಂಡಷ್ಟು ಪೋಷಣೆಯನ್ನು ನೀಡದಿರಬಹುದು:

ಅನೇಕರು ತಮ್ಮ ಉಪಹಾರವನ್ನು ಒಂದು ಲೋಟ ತಾಜಾ ಹಣ್ಣಿನ ರಸ ಸೇವಿಸುವುದರೊಂದಿಗೆ ಮುಗಿಸಿಬಿಡುತ್ತಾರೆ. ಇದು ಆರೋಗ್ಯಕರವೆಂದು ಅವರು ಭಾವಿಸುತ್ತಾರೆ. ಆದರೆ ಜ್ಯೂಸಿಂಗ್ ಪ್ರಕ್ರಿಯೆಯಲ್ಲಿ ಹಣ್ಣಿನಲ್ಲಿನ ಹಲವಾರು ಅಗತ್ಯ ಖನಿಜಗಳು ಮತ್ತು ಫೈಬರ್ ಗಳು ಕಳೆದುಹೋಗುತ್ತವೆ. ಹಾಗಾಗಿ ಹಣ್ಣುಗಳಲ್ಲಿ ದೊರಕುವ ಸಂಪೂರ್ಣ ಪೋಷಕಾಂಶವನ್ನು ಪಡೆಯಲು ಉಪಹಾರದ ಜೊತೆಗೆ ಕನಿಷ್ಟ ಒಂದು ಸಂಪೂರ್ಣ ತಾಜಾ ಹಣ್ಣನ್ನು ಸೇವಿಸಬೇಕು.

ಕೇವಲ ಮೊಟ್ಟೆ ಮಾತ್ರ ಸಂಪೂರ್ಣ ಉಪಹಾರವಲ್ಲ:

ಅನೇಕರು ಉಪಹಾರದಲ್ಲಿ ಮೊಟ್ಟೆಗಳನ್ನು ಸೇವಿಸುತ್ತಾರೆ. ಅದು ಬೇಯಿಸಿದ ಮೊಟ್ಟೆಯಿರಲಿ ಅಥವಾ ಆಮ್ಲೆಟ್ ಆಗಿರಬಹುದು. ಆದರೆ ಕೇವಲ ಮೊಟ್ಟೆಯನ್ನು ಮಾತ್ರ ಸೇವಿಸುವುದರಿಂದ ದೇಹಕ್ಕೆ ಬೇಕಾದ ಎಲ್ಲಾ ಅಗತ್ಯ ಪೋಷಕಾಂಶಗಳು ದೊರೆಯುವುದಿಲ್ಲ. ಮೊಟ್ಟೆಗಳು ಪ್ರೋಟೀನ್, ಫೈಬರ್, ವಿಟಮಿನ್ ಗಳನ್ನು ಒಳಗೊಂಡಿದ್ದರೂ, ಕೇವಲ ಒಂದು ಅಥವಾ ಎರಡು ಮೊಟ್ಟೆಗಳು ನಿಮ್ಮ ಹಸಿವನ್ನು ನೀಗಿಸುವುದಿಲ್ಲ. ಇದು ಹೊಟ್ಟೆಯಲ್ಲಿ ಅತಿಯಾದ ಆಮ್ಲೀಯತೆ ಉತ್ಪಾದನೆಗೆ ಕಾರಣವಾಗಬಹುದು. ಆದ್ದರಿಂದ ಬರೀ ಮೊಟ್ಟೆಯನ್ನು ಸೇವಿಸದೆ ಅವುಗಳ ಜೊತೆ ಇತರ ಆರೋಗ್ಯಕರ ಆಹಾಗಳನ್ನು ಬೆಳಗಿನ ಉಪಹಾರದಲ್ಲಿ ಸೇವಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್