ಒಂದು ಹೆಣ್ಣು ಮಗುವಿನ ಜನ್ಮ ನೀಡಿದ ನಂತರ ಆಕೆಯಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ. ಆದ್ದರಿಂದ ಆಕೆಗೆ ಪ್ರಸವದ ನಂತರ (Postpartum) ನೆರವಾಗುವ ಪ್ರಮುಖ ಐದು ಯೋಗಾಭ್ಯಾಸಗಳು ಇಲ್ಲಿವೆ. ಇದು ನಿಮ್ಮನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಡಗೊಳಿಸುತ್ತದೆ. ಪ್ರಸವದ ನಂತರ ನಿಮ್ಮ ಹೊಸ ತಾಯ್ತನದ ಅನುಭವದ ಜೊತೆಗೆ ನಿಮ್ಮನ್ನು ಇನ್ನಷ್ಟು ಆರೋಗ್ಯಗೊಳಿಸಲು ಈ ಕೆಳಗಿನ 5 ಅಂಶಗಳನ್ನು ರೂಡಿಸಿಕೊಳ್ಳಿ.
ನಡಿಗೆ: ನಡಿಗೆ ಸರಳ, ಉಲ್ಲಾಸಕರ ಮತ್ತು ಪರಿಣಾಮಕಾರಿ ಮಾರ್ಗವಾಗಿದ್ದು, ದೇಹಕ್ಕೆ ಶಕ್ತಿಯನ್ನು ಹೆಚ್ಚಿಸಲು ಮತ್ತು ರಕ್ತ-ಆಮ್ಲಜನಕ ಮಟ್ಟವನ್ನು ಸುಧಾರಿಸಲು ಇದು ಸಹಾಯಕವಾಗಿದೆ. ಇದರಿಂದ ಹೊಸ ಅಮ್ಮಂದಿರನ್ನು ಪೂರ್ವಭಾವಿಯಾಗಿ, ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಾಧ್ಯವಿದೆ.
ಪೆಲ್ವಿಕ್ ಫ್ಲೋರ್ ವ್ಯಾಯಾಮಗಳು(Pelvic Floor Exercises):
ಪ್ರಸವದ ನಂತರ ದೈಹಿಕವಾಗಿ ಸಾಕಷ್ಟು ಬದಲಾವಣೆಯನ್ನು ಹೊಂದಿರುವುದ್ದರಿಂದ ಪೆಲ್ವಿಕ್ ಫ್ಲೋರ್ ವ್ಯಾಯಾಮ ಮಾಡುವುದು ತುಂಬಾ ಸಹಾಯವಾಗಿದೆ. ತಮ್ಮ ಮೊದಲಿನ ಅಂದರೆ ಗರ್ಭಧಾರಣೆಗೂ ಮೊದಲ ರೀತಿಯ ಫಿಟ್ನೆಸ್ ಮಟ್ಟಕ್ಕೆ ಮರಳಲು ಇದು ತುಂಬಾ ಸಹಾಯಕವಾಗಿದೆ.
ಪ್ರಸವಪೂರ್ವ ಯೋಗ(Walking):
ಹೆರಿಗೆಯ ನಂತರದ ಆರೋಗ್ಯವನ್ನು ಅವಲಂಬಿಸಿ ಹೊಸ ತಾಯಂದಿರು ಹೆರಿಗೆಯಿಂದ ಕೆಲವೇ ದಿನಗಳು ಅಥವಾ ವಾರಗಳಲ್ಲಿ ಈ ಯೋಗವನ್ನು ಪ್ರಾರಂಭಿಸಬಹುದು. ಪ್ರಸವಪೂರ್ವ ಯೋಗವು ಮಾರ್ಪಡಿಸಿದ, ಕಡಿಮೆ-ತೀವ್ರತೆಯ ಯೋಗಾಭ್ಯಾಸವಾಗಿದ್ದು ಅದು ಶಾಂತತೆಯನ್ನು ಹೆಚ್ಚಿಸುತ್ತದೆ, ಕಿರಿಕಿರಿ ಮತ್ತು ಕೋಪವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡ, ಸ್ನಾಯುಗಳಲ್ಲಿ ಒತ್ತಡ,ಖಿನ್ನತೆ ಮತ್ತು ಆತಂಕವನ್ನು ಅನುಭವಿಸುತ್ತಿರುವ ಅಮ್ಮಂದಿರಿಗೆ ಸಹ ಪ್ರಯೋಜನವನ್ನು ನೀಡುತ್ತದೆ.
ಪ್ರಾಣಾಯಾಮ(Pranayam):
ತಾಯಂದಿರಿಗೆ ಪ್ರಸವಾನಂತರದ ಅವಧಿಯು ತೀವ್ರವಾದ ಮನಸ್ಥಿತಿ, ನಿದ್ರಾಹೀನತೆ, ಆತಂಕ ಮತ್ತು ಇತರ ಮಾನಸಿಕ ಸಮಸ್ಯೆಗಳಿಂದ ತುಂಬಿರುತ್ತದೆ. ಯೋಗದಿಂದ ವಿವಿಧ ಉಸಿರಾಟದ ವ್ಯಾಯಾಮಗಳು ತಾಯಂದಿರಿಗೆ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಪ್ರತಿಯಾಗಿ ಮಗುವಿಗೆ ಅಗತ್ಯವಿರುವ ಶಾಂತತೆ ಮತ್ತು ಪ್ರಶಾಂತತೆಯ ಭಾವನೆಯನ್ನು ನೀಡುತ್ತದೆ.
ಇದನ್ನು ಓದಿ: ಹೆರಿಗೆಯ ನಂತರ ಮಹಿಳೆಯರಿಗೆ ಹೊಟ್ಟೆ ಏಕೆ ಬರುತ್ತೆ? ಕಡಿಮೆ ಮಾಡುವ ವಿಧಾನಗಳ ತಿಳಿಯಿರಿ
ಆಸನಗಳು(Asanas):
ಯೋಗ ಆಸನಗಳು ಬೆನ್ನಿನ ಮೂಳೆಗೆ ಬಲವನ್ನು ನೀಡಲು, ಪ್ರಸವಾನಂತರದ ಅವಧಿಯಲ್ಲಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಯೋಗದ ಕೆಲವು ಸಾಮಾನ್ಯ ಭಂಗಿಗಳನ್ನು ರೂಢಸಿಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:54 pm, Tue, 29 November 22