AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಈ 6 ಅವಾಸ್ತವಿಕ ನಿರೀಕ್ಷೆಗಳು ನಿಮ್ಮ ಸಂಬಂಧವನ್ನು ರೂಪಿಸುವ ಮೊದಲೇ ಹಾಳು ಮಾಡಬಹುದು

ನೀವು ಪ್ರೀತಿ(Love)ಯಲ್ಲಿ ಬಿದ್ದಾಗ ಅವರು ಕೂಡ ನಿಮ್ಮನ್ನು ಇನ್ನೇನು ಒಪ್ಪಿಕೊಳ್ಳಬಹುದು ಎಂದಿದ್ದಾಗ ನೀವು ಬಯಸುವ ಕೆಲವು ನಿರೀಕ್ಷೆಗಳು ನಿಮ್ಮ ಸಂಬಂಧ(Relationship) ರೂಪುಗೊಳ್ಳುವ ಮೊದಲೇ ಹಾಳುಮಾಡಬಹುದು.

Relationship: ಈ 6 ಅವಾಸ್ತವಿಕ ನಿರೀಕ್ಷೆಗಳು ನಿಮ್ಮ ಸಂಬಂಧವನ್ನು ರೂಪಿಸುವ ಮೊದಲೇ ಹಾಳು ಮಾಡಬಹುದು
Relationship
TV9 Web
| Updated By: ನಯನಾ ರಾಜೀವ್|

Updated on:Nov 29, 2022 | 3:10 PM

Share

ನೀವು ಪ್ರೀತಿ(Love)ಯಲ್ಲಿ ಬಿದ್ದಾಗ ಅವರು ಕೂಡ ನಿಮ್ಮನ್ನು ಇನ್ನೇನು ಒಪ್ಪಿಕೊಳ್ಳಬಹುದು ಎಂದಿದ್ದಾಗ ನೀವು ಬಯಸುವ ಕೆಲವು ನಿರೀಕ್ಷೆಗಳು ನಿಮ್ಮ ಸಂಬಂಧ(Relationship) ರೂಪುಗೊಳ್ಳುವ ಮೊದಲೇ ಹಾಳುಮಾಡಬಹುದು. ನಿರೀಕ್ಷೆಗಳನ್ನು ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಅದು ವಾಸ್ತವಿಕವಾಗಿರಬೇಕು. ಅಂದರೆ, ಸಾಧಿಸಬಹುದಾದ ಏನಾದರೂ. ಆದರೆ ನೀವು ಪ್ರತಿಯೊಂದು ವಿಷಯದಲ್ಲೂ ನಿಮ್ಮ ಸಂಗಾತಿಯಿಂದ ನಿರೀಕ್ಷೆಗಳನ್ನು ಇಟ್ಟುಕೊಂಡರೆ, ಯಾವುದೇ ಕಾರಣವಿಲ್ಲದೆ ನೀವು ಇನ್ನೊಬ್ಬ ವ್ಯಕ್ತಿಯಲ್ಲಿ ನ್ಯೂನತೆಗಳನ್ನು ಕಾಣಲು ಪ್ರಾರಂಭಿಸುತ್ತೀರಿ. ಈ ನ್ಯೂನತೆಗಳು ಒಂದು ದಿನ ಸಂಬಂಧಗಳ ವಿಘಟನೆಗೆ ಕಾರಣವಾಗಬಹುದು.

1. ಸಂಗಾತಿ ಯಾವಾಗಲೂ ನಿಮ್ಮ ಪರವಾಗಿಯೇ ಇರಬೇಕು ನಿಮ್ಮ ಸಂಗಾತಿಯು ಯಾವಾಗಲೂ ನಿಮ್ಮ ಪರವಾಗಿ ನಿಲ್ಲಬೇಕೆಂದು ನೀವು ನಿರೀಕ್ಷಿಸಿದರೆ ನೀವು ತಪ್ಪು ಮಾಡುತ್ತಿದ್ದೀರಿ ಎಂದರ್ಥ. ನೀವು ಸರಿಯಾಗಿ ಮಾತನಾಡುತ್ತಿದ್ದರೂ ಅದು ನಿಮ್ಮ ಸಂಗಾತಿಗೆ ತಪ್ಪು ಎನಿಸಿರಬಹುದು. ನಿಮಗೆ ಸರಿಯಾದ ದಾರಿ ತೋರಿಸುವವರೇ ಒಳ್ಳೆಯ ಸಂಗಾತಿ. ಅಲ್ಲದೆ, ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ತಿಳಿಸುತ್ತಾರೆ, ನಿಮ್ಮ ತಪ್ಪಿನಲ್ಲಿ ನಿಮ್ಮನ್ನು ಬೆಂಬಲಿಸಬೇಡಿ, ಬದಲಿಗೆ ನೀವು ಎಲ್ಲಿ ತಪ್ಪಾಗಿದ್ದೀರಿ ಎಂದು ಹೇಳುವುದೇ ಉತ್ತಮ.

2. ಸ್ವಾತಂತ್ರ್ಯ ಇರಬೇಕು ಪ್ರತಿಯೊಬ್ಬರು ತಮ್ಮದೇ ಆದ ವೈಯಕ್ತಿಕ ಜೀವನವನ್ನು ಹೊಂದಿರುತ್ತಾರೆ, ಪ್ರತಿಯೊಬ್ಬರಿಗೂ ಅವರವರ ಜಾಗ ಮತ್ತು ಅವರವರ ಸ್ವಾತಂತ್ರ್ಯ ಬೇಕು. ಪ್ರತಿ ಹಂತದಲ್ಲಿ ನಿಮ್ಮ ಸಂಗಾತಿ ನಿಮ್ಮ ಜತೆಗಿರಬೇಕು ಎಂದು ಬಯಸಬೇಕು, ಆದರೆ ನಾವು ಕೇಳಿ ಪಡೆಯಬಾರದು.

3. ಯಾವಾಗಲೂ ನಿಮ್ಮನ್ನು ಸಂತೋಷವಾಗಿಟ್ಟುಕೊಳ್ಳಬೇಕು ನಿಮ್ಮ ಜೀವನದಲ್ಲಿ ನೀವು ಸಂತೋಷವಾಗಿರದಿದ್ದರೆ, ಯಾವುದೇ ಕಾರಣವಿರಲಿ. ಆದರೆ ಇದರ ಹೊರೆಯನ್ನು ಬೇರೆಯವರ ಮೇಲೆ ಹಾಕುವಂತಿಲ್ಲ. ನಿಮ್ಮ ಸಂತೋಷವು ನಿಮ್ಮ ಸಂಗಾತಿಯ ಜವಾಬ್ದಾರಿಯಾಗಿರುವುದಿಲ್ಲ. ಹೌದು… ಅವರು ನಿಮ್ಮನ್ನು ಹುರಿದುಂಬಿಸಬಹುದು, ನಿಮ್ಮ ಮನಸ್ಥಿತಿಯನ್ನು ಬದಲಾಯಿಸಬಹುದು. ಆದರೆ ನೀವು ಒಳಗಿನಿಂದ ಸಂತೋಷವಾಗಿಲ್ಲದಿದ್ದರೆ ಅದು ಅವರ ತಪ್ಪಲ್ಲ.

4. ಬೇರೆಯವರನ್ನು ಇಷ್ಟಪಡಬಾರದು ಸಂಬಂಧದಲ್ಲಿ ಅಸೂಯೆ ಸಾಮಾನ್ಯ ಸಮಸ್ಯೆಯಾಗಿದೆ, ಒಂದು ರೀತಿಯಲ್ಲಿ, ಇದು ನಿಮ್ಮ ಸಂಗಾತಿಯ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಆದರೆ ನಿಮ್ಮ ಸಂಗಾತಿ ಬೇರೆಯವರನ್ನು ಹೊಗಳಿದರೆ ಅದರಲ್ಲಿ ತಪ್ಪೇನಿಲ್ಲ. ಅವರು ನಿಮ್ಮಂತೆಯೇ ಇತರ ಜನರನ್ನು ಇಷ್ಟಪಡಬಹುದು, ಸಹಜವಾಗಿ ಮಿತಿಯವರೆಗೆ. ಆದರೆ ಇತರರನ್ನು ಹೊಗಳುವುದರಲ್ಲಿ ತಪ್ಪೇನಿಲ್ಲ.

5. ಯಾವಾಗಲೂ ನಿಮಗೆ ಸಂದೇಶ ಕಳುಹಿಸುವುದು ಅಥವಾ ಕರೆ ಮಾಡುವುದು ಇಡೀ ದಿನ ನಿಮಗೆ ಮೆಸೇಜ್ ಮಾಡುತ್ತಿರಬೇಕು, ಕರೆ ಮಾಡುತ್ತಿರಬೇಕು ಎಂದು ಬಯಸುವುದು ಒಳ್ಳೆಯದಲ್ಲ. ಅವರ ಪರಿಸ್ಥಿತಿಯನ್ನು ಕೂಡ ನೀವು ಅರ್ಥ ಮಾಡಿಕೊಳ್ಳಬೇಕು, ಅವರಿಗೆ ಸ್ವಾತಂತ್ರ್ಯ ನೀಡಬೇಕು.

6. ಹೇಳದೆ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುವುದು ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಹೇಳದೆ ಅರ್ಥಮಾಡಿಕೊಳ್ಳಬೇಕು ಎಂದು ಬಯಸುವುದು. ಅನೇಕ ಹುಡುಗಿಯರು ತಮ್ಮ ಪಾಲುದಾರರಿಂದ ಅಂತಹ ಅವಾಸ್ತವಿಕ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ನಿಮಗೆ ಹೇಳದೆ ನಿಮ್ಮ ಮನಸ್ಸಿನಲ್ಲಿ ಏನಾಗುತ್ತಿದೆ ಎಂದು ಯಾರಿಗೂ ಅರ್ಥವಾಗುವುದಿಲ್ಲ. ಅದೇ ರೀತಿಯಲ್ಲಿ, ನೀವು ಸಹ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Tue, 29 November 22