2024 ರ ಕೊನೆಯ ತಿಂಗಳಿಗೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಡಿಸೆಂಬರ್ ತಿಂಗಳು ವಿಶ್ವ ಏಡ್ಸ್ ದಿನ, ಭಾರತೀಯ ನೌಕಾಪಡೆ ದಿನ, ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನಾ ದಿನ, ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಒಳಗೊಂಡಿದೆ. ಡಿಸೆಂಬರ್ ನಲ್ಲಿ ಬರುವ ಪ್ರತಿಯೊಂದು ಆಚರಣೆಗಳು ಒಂದೊಂದು ಉದ್ದೇಶಗಳನ್ನು ಹೊಂದಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತದೆ. ಹೀಗಾಗಿ ಈ ವರ್ಷದ ಕೊನೆಯ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ದಿನಗಳ ಪಟ್ಟಿ ಈ ಕೆಳಗಿದೆ.
* ಡಿಸೆಂಬರ್ 01- ವಿಶ್ವ ಏಡ್ಸ್ ದಿನ
* ಡಿಸೆಂಬರ್ 02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ
* ಡಿಸೆಂಬರ್ 02 – ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನೆ ದಿನ
* ಡಿಸೆಂಬರ್ 02 – ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ
* ಡಿಸೆಂಬರ್ 03- ವಿಶ್ವ ಅಂಗವಿಕಲರ ದಿನ
* ಡಿಸೆಂಬರ್ 04- ಭಾರತೀಯ ನೌಕಾಪಡೆ ದಿನ
* ಡಿಸೆಂಬರ್ 05 – ವಿಶ್ವ ಮಣ್ಣಿನ ದಿನ
* ಡಿಸೆಂಬರ್ 05 – ಅಂತಾರಾಷ್ಟ್ರೀಯ ಸ್ವಯಂ ದಿನ
* ಡಿಸೆಂಬರ್ 06 – ಡಾ.ಬಿ ಆರ್ ಅಂಬೇಡ್ಕರ್ ಪುಣ್ಯತಿಥಿ
* ಡಿಸೆಂಬರ್ 06 – ಮೈಕ್ರೋವೇವ್ ಓವನ್ ದಿನ
* ಡಿಸೆಂಬರ್ 07 – ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ
* ಡಿಸೆಂಬರ್ 07 – ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನ
* ಡಿಸೆಂಬರ್ 09 – ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ
* ಡಿಸೆಂಬರ್ 10 – ಮಾನವ ಹಕ್ಕುಗಳ ದಿನ
* ಡಿಸೆಂಬರ್ 11 – ಅಂತಾರಾಷ್ಟ್ರೀಯ ಪರ್ವತ ದಿನ
* ಡಿಸೆಂಬರ್ 12- ಯುನಿವರ್ಸಲ್ ಹೆಲ್ತ್ ಕವರೇಜ್ ದಿನ
* ಡಿಸೆಂಬರ್ 14- ಅಂತಾರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ
* ಡಿಸೆಂಬರ್ 15 – ಅಂತಾರಾಷ್ಟ್ರೀಯ ಚಹಾ ದಿನ
* ಡಿಸೆಂಬರ್ 16 – ವಿಜಯ್ ದಿವಸ್
* ಡಿಸೆಂಬರ್ 18 – ಭಾರತದ ಅಲ್ಪಸಂಖ್ಯಾತರ ಹಕ್ಕುಗಳ ದಿನ
* ಡಿಸೆಂಬರ್ 18 – ಅಂತಾರಾಷ್ಟ್ರೀಯ ವಲಸಿಗರ ದಿನ
* ಡಿಸೆಂಬರ್ 19 – ಗೋವಾ ವಿಮೋಚನ ದಿನ
* ಡಿಸೆಂಬರ್ 20 – ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ
* ಡಿಸೆಂಬರ್ 22 – ರಾಷ್ಟ್ರೀಯ ಗಣಿತ ದಿನ
* ಡಿಸೆಂಬರ್ 23 – ರಾಷ್ಟ್ರೀಯ ರೈತರ ದಿನ
* ಡಿಸೆಂಬರ್ 24 – ರಾಷ್ಟ್ರೀಯ ಗ್ರಾಹಕರ ದಿನ
* ಡಿಸೆಂಬರ್ 25- ಕ್ರಿಸ್‌ಮಸ್
* ಡಿಸೆಂಬರ್ 25- ಉತ್ತಮ ಆಡಳಿತ ದಿನ (ಭಾರತ)
* ಡಿಸೆಂಬರ್ 26 – ಬಾಕ್ಸಿಂಗ್ ದಿನ
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ