ಭಾರತೀಯ ಪ್ರವಾಸಿಗರನ್ನು ಸೆಳೆಯಲು ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾದ ಹೊಸ ಟ್ರಿಪ್ ಪ್ಯಾಕೇಜ್, ಇಲ್ಲಿದೆ ಸಂಪೂರ್ಣ ಮಾಹಿತಿ

ಇಂಟರ್ನ್ಯಾಷನಲ್ ಟ್ರೇಡ್ ಅಡ್ಮಿನಿಸ್ಟ್ರೇಷನ್ ವರದಿಯ ಪ್ರಕಾರ, ವಿದೇಶಗಳಿಗೆ ಟ್ರಿಪ್ ಕೈಗೊಳ್ಳಲು ಅತಿ ಹಣ ಹೆಚ್ಚು ಖರ್ಚು ಮಾಡುವವರಲ್ಲಿ ಭಾರತೀಯ ಪ್ರವಾಸಿಗರು ಮುಂದಿದ್ದಾರೆ. ಹೀಗಾಗಿ ಈ ಭಾರತೀಯರು ಭೇಟಿ ನೀಡುವ ದೇಶಗಳ ಆರ್ಥಿಕತೆಯನ್ನು ಗಣನೀಯವಾಗಿ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾವು ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಪ್ಯಾಕೇಜ್ ಸೇರಿದಂತೆ ಅಭಿಯಾನವನ್ನು ಆರಂಭಿಸಿದೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತೀಯ ಪ್ರವಾಸಿಗರನ್ನು ಸೆಳೆಯಲು ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾದ ಹೊಸ ಟ್ರಿಪ್ ಪ್ಯಾಕೇಜ್, ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Nov 25, 2024 | 5:00 PM

ದೇಶ ಸುತ್ತಿನೋಡು ಕೋಶ ಓದಿ ನೋಡು ಎಂಬ ನಾಣ್ಣುಡಿಯೇ ಇದೆ. ಈ ಮಾತಿನಂತೆ ವಿದೇಶಿಗರು ಆಗಾಗ ಭಾರತದತ್ತ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಭಾರತೀಯರು ಕೂಡ ವಿದೇಶಿ ಪ್ರವಾಸದತ್ತ ಹೆಚ್ಚು ಒಲವು ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಹೀಗಾಗಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾವು ವಿದೇಶಕ್ಕೆ ಪ್ರಯಾಣಿಸುವ ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಹೊಸ ಯೋಜನೆಯನ್ನು ಹಾಕಿಕೊಂಡಿದೆ.

ಶ್ರೀಲಂಕಾ ಏರ್‌ಲೈನ್ಸ್ ಭಾರತೀಯ ಪ್ರವಾಸಿಗರಿಗಾಗಿ ‘ರಾಮಾಯಣ ಟ್ರಯಲ್’ ಎಂಬ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಇತ್ತೀಚೆಗಷ್ಟೇ ರಾಮಾಯಣದ ಒಂದು ವಿಡಿಯೋ ಆ್ಯಡ್​ನ್ನು ಶ್ರೀಲಂಕನ್ ಏರ್​ಲೈನ್ಸ್ ಬಿಡುಗಡೆ ಮಾಡಿತ್ತು. ರಾಮಾಯಣಕ್ಕೂ ಹಾಗೂ ಶ್ರೀಲಂಕಾಗೂ ಇರುವ ನಂಟನ್ನು ಬಿಂಬಿಸುವುದರ ಜೊತೆಗೆ ರಾಮಾಯಣದೊಂದಿಗೆ ಗುರುತಿಸಿಕೊಂಡ ಪೌರಾಣಿಕ ಸ್ಥಳಗಳ ಬಗ್ಗೆ ಮಾಹಿತಿಯೂ ಈ ವಿಡಿಯೋದಲ್ಲಿತ್ತು. ಆದರೆ ಇದೀಗ ಶ್ರೀಲಂಕಾ ಏರ್‌ಲೈನ್ಸ್ ಪರಿಚಯಿಸಿದ ‘ರಾಮಾಯಣ ಟ್ರಯಲ್’ ಈ ವಿಶೇಷ ಪ್ಯಾಕೇಜ್ ನಲ್ಲಿ ಹಿಂದೂ ಮಹಾಕಾವ್ಯ ರಾಮಾಯಣಕ್ಕೆ ಸಂಬಂಧಿಸಿದ 50 ಪ್ರಮುಖ ಸ್ಥಳಗಳಿಗೆ ಭೇಟಿ ನೀಡಬಹುದು. ಈ ಪ್ಯಾಕೇಜ್ ಕೇವಲ ಪಾರಂಪರಿಕ ತಾಣಗಳನ್ನು ವೀಕ್ಷಿಸಲು ಮಾತ್ರವಲ್ಲದೇ ಇತಿಹಾಸವನ್ನು ತಿಳಿಯಲು ಸಹಾಯಕವಾಗಲಿದೆ.

ಇತ್ತ ಆಸ್ಟ್ರೇಲಿಯಾವು ತನ್ನ ‘ಹೌಜಾಟ್ ಫಾರ್ ಎ ಹಾಲಿಡೇ?’ ಅಭಿಯಾನದ ಮೂಲಕ ಭಾರತೀಯ ಪ್ರವಾಸಿಗರನ್ನು ಕೇಂದ್ರೀಕರಿಸಿದೆ. ಬಾರ್ಡರ್- ಗವಸ್ಕಾರ್ ಟ್ರೋಫಿಯ ಈ ಕ್ರಿಕೆಟ್ ಸರಣಿಯ ಸಂದರ್ಭದಲ್ಲಿಯೇ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಆಸ್ಟ್ರೇಲಿಯನ್ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ರನ್ನು ಒಳಗೊಂಡ ಈ ಅಭಿಯಾನವು ಆಸ್ಟ್ರೇಲಿಯಾಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಬೆಂಗಳೂರಿಗರು ಗೋವಾಗೆ ಟ್ರಿಪ್ ಹೋಗಲು ಹಿಂದೇಟು ಹಾಕುತ್ತಿರುವುದು ಏಕೆ? ಇದೇ ನೋಡಿ ಕಾರಣ

ಅದಲ್ಲದೇ ಇಂಟರ್ನ್ಯಾಷನಲ್ ಟ್ರೇಡ್ ಅಡ್ಮಿನಿಸ್ಟ್ರೇಷನ್ ವರದಿಯ ಪ್ರಕಾರ, ವಿದೇಶ ಪ್ರವಾಸಕ್ಕೆ ಅತಿ ಹೆಚ್ಚು ಹಣವನ್ನು ಖರ್ಚು ಮಾಡುವವರಲ್ಲಿ ಭಾರತೀಯ ಪ್ರವಾಸಿಗರು ಮುಂದಿದ್ದಾರೆ. ಹೀಗಾಗಿ ಭಾರತೀಯರು ಭೇಟಿ ನೀಡುವ ದೇಶಗಳ ಆರ್ಥಿಕತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಹೀಗೆ ಆದರೆ, ಮುಂಬರುವ ವರ್ಷಗಳಲ್ಲಿ ಭಾರತೀಯ ಪ್ರವಾಸಿಗರು ಚೀನಾದ ಪ್ರವಾಸಿಗರನ್ನು ಮೀರಿಸುವ ನಿರೀಕ್ಷೆಯಿದೆ. ಅದರೊಂದಿಗೆ ಜಾಗತಿಕ ಪ್ರವಾಸೋದ್ಯಮಕ್ಕೆ ಭಾರತೀಯರ ಕೊಡುಗೆ ಬಹಳಷ್ಟು ಇರಲಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ