ಅಪರಿಚಿತ ಹುಡುಗಿಯನ್ನು ಕಂಡಾಗ ಹುಡುಗನ ತಲೆಯಲ್ಲಿ ಏನೆಲ್ಲಾ ಆಲೋಚನೆಗಳು ಓಡುತ್ತೆ ಗೊತ್ತಾ? ಈ ವಿಷಯಗಳಂತೆ

ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಗುಣ ಸ್ವಭಾವ ಹಾಗೂ ಯೋಚನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅದರಲ್ಲಿಯೂ ಗಂಡು ತನ್ನ ಪರಿಚಯಸ್ಥರೊಂದಿಗೆ ಇದ್ದಾಗ ಇರುವ ಯೋಚನೆಗೂ, ಅಪರಿಚಿತರೊಂದಿಗೆ ಇದ್ದಾಗ ಆತನ ಭಾವನೆ, ಗುಣ, ವ್ಯಕ್ತಿತ್ವ ಬೇರೆಯೇ ಆಗಿರುತ್ತದೆ. ಅದರಲ್ಲಿಯೂ ಅಪರಿಚಿತ ಹೆಣ್ಣು ಅಥವಾ ಹುಡುಗಿಯೂ ಎದುರಿಗೆ ಬಂದರೆ ಹುಡುಗನ ತಲೆಯಲ್ಲಿ ನಾನಾ ರೀತಿಯ ಆಲೋಚನೆಗಳು ಓಡುತ್ತವೆಯಂತೆ. ಹಾಗಾದ್ರೆ ಹುಡುಗನ ತಲೆಯಲ್ಲಿ ಓಡುವ ಆ ಯೋಚನೆಗಳೇನು ಎನ್ನುವುದರ ಕುತೂಹಲಕಾರಿ ಸಂಗತಿ ಇಲ್ಲಿದೆ.

ಅಪರಿಚಿತ ಹುಡುಗಿಯನ್ನು ಕಂಡಾಗ ಹುಡುಗನ ತಲೆಯಲ್ಲಿ ಏನೆಲ್ಲಾ ಆಲೋಚನೆಗಳು ಓಡುತ್ತೆ ಗೊತ್ತಾ? ಈ ವಿಷಯಗಳಂತೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 26, 2024 | 3:15 PM

ಯಾವುದೇ ಗಂಡಿರಲಿ, ಸುಂದರವಾದ ಯುವತಿಯನ್ನು ಕಂಡಾಗ ಆಕರ್ಷಿತನಾಗುವುದು ಸಹಜ. ಆ ಕ್ಷಣ ಎದುರಿಗಿರುವ ಯುವತಿಯ ಮೇಲೆ ಒಂದೊಳ್ಳೆ ಭಾವನೆಯೂ ಮೂಡಬಹುದು. ಆದರೆ ಆ ಹುಡುಗಿಯೂ ಅಪರಿಚಿತ ವ್ಯಕ್ತಿಯಾಗಿದ್ದರೆ ಆ ವ್ಯಕ್ತಿಯ ತಲೆಯಲ್ಲಿ ಹಲವಾರು ಆಲೋಚನೆಗಳು ಬರುತ್ತವೆಯಂತೆ. ಆ ಯೋಚನೆಯಂತೆ ಆ ಯುವತಿಯ ಮುಂದೆ ನಡೆದುಕೊಳ್ಳಲು ಪ್ರಾರಂಭಿಸುತ್ತಾನಂತೆ.

  • ಆ ಯುವತಿಯ ಬಗ್ಗೆ ಮಾಹಿತಿ ಕಲೆ ಹಾಕುವುದು : ಯಾವುದೇ ಗಂಡಿರಲಿ, ಆತ ಅಪರಿಚಿತ ಹುಡುಗಿಯನ್ನು ನೋಡಿದಾಗ ಆಕೆಯು ರೂಪವತಿಯಾಗಿದ್ದರೆ ಆಕೆಯ ಜೊತೆಗೆ ಸ್ನೇಹ ಬೆಳೆಸಬೇಕೆಂದು ಬಯಸುತ್ತಾನೆ. ಅದಕ್ಕೂ ಮೊದಲು ಆಕೆಯ ಹೆಸರು, ಊರು ಸೇರಿದಂತೆ ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎನ್ನುವ ಆಲೋಚನೆಯೂ ಆ ವ್ಯಕ್ತಿಯ ತಲೆಯಲ್ಲಿ ಬರುತ್ತದೆ.
  • ಗುಣ ನಡತೆಯನ್ನು ತಿಳಿದುಕೊಳ್ಳಲು ಪ್ರಯತ್ನ : ಹುಡುಗ ಅಥವಾ ಪುರುಷರ ಎದುರಿಗೆ ಅಪರಿಚಿತ ಮಹಿಳೆ ಅಥವಾ ಹುಡುಗಿಯೂ ಇದ್ದರೆ, ಆಕೆಯ ನಡತೆಯ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಸ್ವಭಾವ, ಮಾತನಾಡುವ ಶೈಲಿ, ವ್ಯಕ್ತಿತ್ವ ಹೀಗೆ ಹತ್ತು ಹಲವು ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಬಹುತೇಕ ಹುಡುಗರು ಈ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ.
  • ಪರಿಚಯ ಮಾಡಿಕೊಳ್ಳುವ ಆತುರ : ಗುರುತು ಪರಿಚಯವಿಲ್ಲದ ಹುಡುಗಿಯು ಎದುರಿಗೆ ಬಂದರೆ ಮೊದಲು ಆಕೆಗೆ ತನ್ನನ್ನು ಪರಿಚಯಿಸಿಕೊಳ್ಳಬೇಕು ಎನ್ನುವ ಆಲೋಚನೆಯೂ ಮೂಡುತ್ತದೆ. ಹೀಗಾಗಿ ಏನಾದರೂ ನೆಪವನ್ನು ಇಟ್ಟುಕೊಂಡು ಆಕೆಯ ಜೊತೆಗೆ ಮಾತನಾಡುತ್ತಾ ತನ್ನ ಬಗ್ಗೆ ಹೇಳಿಕೊಳ್ಳುವ ಪ್ರಯತ್ನಗಳು ನಡೆಯುತ್ತವೆ.
  • ದೈಹಿಕ ಸೌಂದರ್ಯದೆಡೆಗೆ ಹೆಚ್ಚು ಗಮನ : ಅಪರಿಚಿತ ಹುಡುಗಿಯೂ ಎದುರಾದಾಗ ಆಕೆಯು ಧರಿಸಿದ ಬಟ್ಟೆಯ ಬಣ್ಣ, ಚಪ್ಪಲಿ, ಬಳೆ, ಬ್ಯಾಗ್, ಆಭರಣ ಈ ಎಲ್ಲವನ್ನು ಗಮನಿಸುತ್ತಾರೆ. ದೈಹಿಕವಾಗಿ ಎಷ್ಟು ಸುಂದರವಾಗಿದ್ದಾಳೆ ಎನ್ನುವುದರ ಮೇಲೆ ಆಕೆಯ ಬಳಿ ಸ್ನೇಹ ಬೆಳೆಸಿಕೊಳ್ಳಲು ಮುಂದಾಗುತ್ತಾನೆ.
  • ಮಹಿಳೆಯ ಗಮನ ಸೆಳೆಯಲು ನಾನಾ ಪ್ರಯತ್ನ : ಪ್ರತಿಯೊಬ್ಬ ಯುವಕನು ಅಪರಿಚಿತ ಹುಡುಗಿಯೂ ತನ್ನತ್ತ ನೋಡಬೇಕು ಎಂದು ಅಲೋಚಿಸುವುದು ಸಹಜ. ಹೀಗಾಗಿ ಅನಾವಶ್ಯಕ ಮಾತುಗಳು, ತನ್ನ ಸುತ್ತಮುತ್ತಲಿನಲ್ಲಿ ಇರುವವರನ್ನು ನಗಿಸುವುದು, ಹರಟೆ ಹೊಡೆಯುವ ಮೂಲಕ ಆ ಹುಡುಗಿ ತನ್ನತ್ತ ತಿರುಗಿ ನೋಡಲಿ ಎಂದುಕೊಳ್ಳುತ್ತಾನೆ. ಈ ರೀತಿಯ ನಾನಾ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ.
  • ಕೇಳದಿದ್ದರೂ ಸಹಾಯ ಮಾಡುವ ಮನೋಭಾವ : ಪರಿಚಯವಿಲ್ಲದ ವ್ಯಕ್ತಿಯ ಬಳಿ ಯಾವುದೇ ಹುಡುಗಿಯೂ ಸಹಾಯ ಕೇಳುವುದಿಲ್ಲ. ಬಾಯಿ ಬಿಟ್ಟು ಏನನ್ನೂ ಹೇಳದಿದ್ದರೂ ಆತ ಆಕೆಯ ಸಹಾಯ ಮಾಡಲು ಮುಂದಾಗುತ್ತಾನೆ. ಈ ರೀತಿಯ ಸಹಾಯ ಮಾಡುವ ಗುಣವು ಆಕೆಗೆ ಇಷ್ಟವಾಗಿ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದುತ್ತಾಳೆ ಎನ್ನುವುದು ಆ ವ್ಯಕ್ತಿಯ ಆಲೋಚನೆಯಾಗಿರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ