Event Calendar January 2025: ಜನವರಿ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳಿವು

ಜನವರಿ ವರ್ಷದ ಮೊದಲ ತಿಂಗಳಲ್ಲಿ ಒಂದಾಗಿದ್ದು, ಹೊಸ ಭರವಸೆಯೊಂದಿಗೆ ಹೊಸ ದಿನವನ್ನು ಆರಂಭಿಸಲು ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 2025 ರ ಮೊದಲ ತಿಂಗಳಲ್ಲಿ ಬರುವ ಪ್ರತಿಯೊಂದು ದಿನಾಚರಣೆಯೂ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ. ಹಾಗಾದರೆ ಜನವರಿಯಲ್ಲಿ ಯಾವೆಲ್ಲಾ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದಿನಾಚರಣೆಗಳಿವೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Event Calendar January 2025: ಜನವರಿ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳಿವು
ಜನವರಿ 2025 ಕ್ಯಾಲಂಡರ್
Edited By:

Updated on: Dec 30, 2024 | 11:33 AM

2025 ಕ್ಕೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ಹೊಸ ವರ್ಷವನ್ನು ಭರ ಮಾಡಿಕೊಳ್ಳಲು ಈಗಾಗಲೇ ಸಿದ್ಧತೆಯನ್ನು ನಡೆಸಿಕೊಂಡಿದ್ದಾರೆ. ಹೊಸ ವರ್ಷವು ಹೊಸತನ ಮತ್ತು ಹೊಸ ಆರಂಭದೊಂದಿಗೆ ಒಂದಷ್ಟು ವಿಶೇಷ ದಿನಗಳನ್ನು ಹೊಂದಿದೆ. ಜನವರಿಯೂ ರಾಷ್ಟ್ರೀಯ , ಅಂತಾರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಮಾನ, ಆರೋಗ್ಯ ಸೇರಿದಂತೆ ವಿಶೇಷ ದಿನಗಳನ್ನು ಹೊಂದಿದೆ. ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಆಚರಿಸಲಾಗುವ ರಾಷ್ಟ್ರೀಯ ಹಾಗೂ ಅಂತಾ ರಾಷ್ಟ್ರೀಯ ದಿನಗಳ ಪಟ್ಟಿ ಈ ಕೆಳಗಿದೆ.

* ಜನವರಿ 01 – ಜಾಗತಿಕ ಕುಟುಂಬ ದಿನ

* ಜನವರಿ 01- ವಿಶ್ವ ಶಾಂತಿ ದಿನ

* ಜನವರಿ 01 – ಆರ್ಮಿ ಮೆಡಿಕಲ್ ಕಾರ್ಪ್ಸ್ ಸ್ಥಾಪನೆ ದಿನ

* ಜನವರಿ 03 – ಅಂತಾರಾಷ್ಟ್ರೀಯ ಮನಸ್ಸು-ದೇಹ ಸ್ವಾಸ್ಥ್ಯ ದಿನ

* ಜನವರಿ 04 – ವಿಶ್ವ ಬ್ರೈಲ್ ದಿನ

* ಜನವರಿ 05 – ರಾಷ್ಟ್ರೀಯ ಪಕ್ಷಿ ದಿನ

* ಜನವರಿ 06 – ವಿಶ್ವ ಯುದ್ಧ ಅನಾಥರ ದಿನ

* ಜನವರಿ 09 – ಅನಿವಾಸಿ ಭಾರತೀಯರ ದಿನ

* ಜನವರಿ 10 – ವಿಶ್ವ ಹಿಂದಿ ದಿನ

* ಜನವರಿ 11- ರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ಜಾಗೃತಿ ದಿನ

* ಜನವರಿ 11- ಲಾಲ್ ಬಹುದ್ದೂರ್ ಶಾಸ್ತ್ರೀ ಪುಣ್ಯ ತಿಥಿ

* ಜನವರಿ 11 – ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

* ಜನವರಿ 12 – ರಾಷ್ಟ್ರೀಯ ಯುವ ದಿನ

* ಜನವರಿ 15 – ಭಾರತೀಯ ಸೇನಾ ದಿನ

* ಜನವರಿ 16 – ರಾಷ್ಟ್ರೀಯ ನವೋದ್ಯಮ ದಿನ (ಸ್ಟಾರ್ಟ್ ಅಪ್ ಡೇ)

* ಜನವರಿ 18- ರಾಷ್ಟ್ರೀಯ ರೋಗನಿರೋಧಕ ದಿನ

* ಜನವರಿ 20 – ಪೆಂಗ್ವಿನ್ ಜಾಗೃತಿ ದಿನ:

* ಜನವರಿ 23 – ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ

* ಜನವರಿ 24 – ಅಂತಾರಾಷ್ಟ್ರೀಯ ಶಿಕ್ಷಣ ದಿನ

* ಜನವರಿ 24 – ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

* ಜನವರಿ 25 – ರಾಷ್ಟ್ರೀಯ ಮತದಾರರ ದಿನ

* ಜನವರಿ 25 – ರಾಷ್ಟ್ರೀಯ ಪ್ರವಾಸೋದ್ಯಮ ದಿನ

* ಜನವರಿ 26 – ಗಣರಾಜ್ಯೋತ್ಸವ ದಿನ

* ಜನವರಿ 26 – ಅಂತಾರಾಷ್ಟ್ರೀಯ ಕಸ್ಟಮ್ಸ್ ದಿನ

* ಜನವರಿ 26 – ವಿಶ್ವ ಕುಷ್ಠರೋಗ ದಿನ

* ಜನವರಿ 27- ಅಂತಾರಾಷ್ಟ್ರೀಯ ಹತ್ಯಾಕಾಂಡ ದಿನ

* ಜನವರಿ 28 – ಲಾಲ್ ಲಜಪತ್ ರಾಯ್ ಜನ್ಮ ದಿನ

* ಜನವರಿ 30 – ಹುತಾತ್ಮರ ದಿನ

* ಜನವರಿ 31 – ಅಂತಾರಾಷ್ಟ್ರೀಯ ಜೀಬ್ರಾ ದಿನ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ