Updated on: Oct 08, 2022 | 8:00 AM
20 ರಿಂದ 30 ರ ವಯಸ್ಸು ನಮ್ಮ ಜೀವನದ ಒಂದು ಮುಖ್ಯ ಭಾಗ. ಈ ವಯಸ್ಸಲ್ಲಿ ಎಲ್ಲವನ್ನೂ ಮಾಡುವ ಸಾಮರ್ಥ್ಯ, ಉತ್ಸಾಹ ಎಲ್ಲವೂ ದೇಹದಲ್ಲಿರುತ್ತದೆ. ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿಗಾಗಿ ನಾವು ಕೆಲವು ಕಾರ್ಯಗಳನ್ನು ಮಾಡಬೇಕು. ಇಲ್ಲಿ ನಾವು 30 ವರ್ಷ ದಾಟುವ ಮೊದಲು ಮಾಡಬೇಕಾದ ಕೆಲ ಚಟುವಟಿಕೆಗಳ ಬಗ್ಗೆ ತಿಳಿಸಿದ್ದೇವೆ ಮುಂದೆ ನೋಡಿ.
ಸಾಹಸಮಯ ಕ್ರೀಡೆ: ಪ್ರಯಾಣವನ್ನು ಹೆಚ್ಚಿನವರು ಇಷ್ಟಪಡುತ್ತಾರೆ, ಆದರೆ ಕೆಲವೇ ಕೆಲವರು ಸಾಹಸ ಕ್ರೀಡೆಯನ್ನು ಅನುಭವಿಸಲು ಇಷ್ಟಪಡುತ್ತಾರೆ. 20 ರಿಂದ 30 ವರ್ಷ ವಯಸ್ಸಿನಲ್ಲಿ, ನಮ್ಮ ದೇಹದಲ್ಲಿ ಹೆಚ್ಚಿನ ಶಕ್ತಿ ಇರುತ್ತದೆ. ಪ್ರಯಾಣ ಮಾಡುವಾಗ ನೀವು ಟ್ರೆಕ್ಕಿಂಗ್, ಪ್ಯಾರಾಗ್ಲೈಡಿಂಗ್, ಬಂಗೀ ಜಂಪಿಂಗ್ ಮತ್ತು ಇತರ ಕ್ರೀಡೆಗಳನ್ನು ಮಾಡಬಹುದು.
ಹೊಸ ಭಾಷೆ ಕಲಿಯಿರಿ: ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ನಮ್ಮ ಜೀವನದ ಪ್ರಮುಖ ಭಾಗವಾಗಿವೆ. ಆದರೆ ನಾವೆಲ್ಲರೂ ಬೇರೆ ಭಾಷೆಯನ್ನು ಕಲಿಯಬೇಕು. ಈ ರೀತಿ ಬೇರೆ ಭಾಷೆ ಕಲಿಯುವುದರಿಂದ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬಹುದು. ಜೊತೆಗೆ ವ್ಯವಹರಿಸಲುಬಹುದಾಗಿದೆ.
ಭಯವನ್ನು ಎದುರಿಸಿ: 30 ವರ್ಷ ದಾಟುವ ಮೊದಲು ನೀವು ವಿಶಿಷ್ಟವಾದದ್ದನ್ನು ಮಾಡಲು ಬಯಸಿದರೆ, ನೀವು ಭಯಪಡುವ ಕೆಲಸವನ್ನು ಸಹ ಮಾಡಬೇಕು. ನಮ್ಮಲ್ಲಿ ಹೆಚ್ಚಿನವರಿಗೆ ಫೋಬಿಯಾ ಅಂದರೆ ಯಾವುದೋ ಭಯ ಇರುತ್ತದೆ. ನೀವು ಎತ್ತರದಿಂದ ಜಿಗಿಯಲು ಹೆದರುತ್ತಿದ್ದರೆ, ಖಂಡಿತವಾಗಿಯೂ ಒಮ್ಮೆ ಎತ್ತರದಿಂದ ಜಿಗಿಯಿರಿ. ನಿಮ್ಮ ಭಯದ ವಿರುದ್ಧ ಹೋರಾಡಲು ನಿಮಗೆ ಮಾತ್ರ ಸಾಧ್ಯ.
ಸೋಲೋ ಟ್ರಿಪ್: ಭಾರತದಲ್ಲಿರುವ ಹೆಚ್ಚಿನ ಯುವಕರು ತಮ್ಮ ಮನೆ ಮತ್ತು ಊರು ಬಿಟ್ಟು ಹೊರಗೆ ಒಬ್ಬಂಟಿಯಾಗಿ ಹೋಗಲ್ಲ. ಹೇಗೋ ನೀವು ಅವರಲ್ಲಿ ಒಬ್ಬರಲ್ಲದಿದ್ದರೇ, ಜೀವನವನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಭವಿಸಲು ಪ್ರತಿಯೊಬ್ಬರೂ ಏಕಾಂಗಿಯಾಗಿ ಪ್ರಯಾಣಿಸಬೇಕು. ಈ ವಿಧಾನವು ನಿಮ್ಮೊಳಗಿನ ಭಯವನ್ನು ಹೊರಹಾಕುತ್ತದೆ. ಜೊತೆಗೆ ನಿಮ್ಮನ್ನು ನೀವು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.