Tips For Seniors: ಕಡೆಗಣಿಸಬೇಡಿ! ಹಿರಿಯರಾದವರು ವಯಸ್ಸಾಯ್ತು ಅಂತಲೇ ಈ ಅನುಭವಾಮೃತ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಹಿರಿಯ ಜೀವಗಳ ಸುರಕ್ಷತೆಗಾಗಿ ಉತ್ತಮ ಸಲಹೆಗಳು: ಹಿರಿಯರಾದವರು ವಯಸ್ಸಾಯ್ತು ಅಂತಲೇ ಈ ಅನುಭವಾಮೃತ ಮಾತುಗಳನ್ನು ಓದಿ, ಜೀವನದಲ್ಲಿ ಅಳವಡಿಸಿಕೊಳ್ಳೀ
ಜೀವನದ ಕಟ್ಟಕಡೆಯ ಘಳಿಗೆಯವರೆಗೂ ಯಾವುದನ್ನೂ ಕಡೆಗಣಿಸಬೇಡಿ! ನಿರ್ಲಕ್ಷ್ಯಿಸಬೇಡಿ! ಉದಾಸೀನ ಮಾಡಲೇಬೇಡಿ. ಹಿರಿಯರಾದವರು (Elderly People) ಅಯ್ಯೋ ವಯಸ್ಸಾಯ್ತು ಬಿಡು, ಮನೆ ಹೋಗು ಅನ್ನುತ್ತದೆ- ಕಾಡು ಬಾ ಅನ್ನುತ್ತದೆ ಎಂಬಂತಹ ವೇದಾಂತಗಳು ಬೇಡವೇ ಬೇಡ. ಹಿರಿಯ ಜೀವಿಗಳು ವಯಸ್ಸಾಯ್ತು ಎಂದೇ ಈ ಅನುಭವಾಮೃತದ ಮಾತುಗಳನ್ನು (Safety Tips) ಓದಿ. ಕಡೆಗಣಿಸಬೇಡಿ!
ಮಲಗುವ ಕೋಣೆ ಮತ್ತು ಸ್ನಾನದ ಕೋಣೆಯಲ್ಲಿ ಹೀಗೆ ಮಾಡಿ:
- * ಸ್ನಾನ ಮಾಡುವಾಗ ಸುಮ್ಮನೆ ಬಾಗಿಲು ಹಾಕಿಕೊಳ್ಳಿ, ಚಿಲಕ ಹಾಕಬೇಡಿ. ಸ್ಟೂಲು ಅಥವಾ ಚೇರ್ ಮೇಲೆ ಕೂತ್ಕೊಂಡು ಸ್ನಾನ ಮಾಡಬೇಕು. ನಿಂತುಕೊಂಡು ಸ್ನಾನ ಮಾಡಬಾರದು
- * ಕಮೋಡ್ ಮೇಲೆ ಕುಳಿತುಕೊಂಡಾಗ ಏಳುವುದಕ್ಕೂ, ಕುಳಿತುಕೊಳ್ಳುವುದಕ್ಕೂ ಒಂದು ರಾಡನ್ನು (ಊರುಗೋಲು) ಹಾಕಿಸಿಕೊಳ್ಳುವುದು
- * ಹೆಂಗಸರಾಗಲಿ, ಗಂಡಸರಾಗಲಿ ಪ್ಯಾಂಟನ್ನು ಹಾಕಿಕೊಳ್ಳುವಾಗ ಚೇರ್ ಮೇಲೆ ಅಥವಾ ಬೆಡ್ ಮೇಲೆ ಕುಳಿತುಕೊಂಡು ಹಾಕಿಕೊಳ್ಳಬೇಕು. ನಿಂತು ಕೊಂಡು ಹಾಕಿಕೊಳ್ಳಬಾರದು
- * ಒದ್ದೆ ಅಂದರೆ ನೀರು ಇರುವ ಜಾಗದಲ್ಲಿ ಓಡಾಡಬಾರದು
- * ಕಡೆಗಣಿಸಬೇಡಿ! ಹಿರಿಯ ಜೀವಿಗಳು ಮಲಗುವ ಕೋಣೆಯಲ್ಲಿ ಹೀಗೆ ಮಾಡಿ: ನಿದ್ದೆ ಮಾಡಿ ಹಾಸಿಗೆಯಿಂದ ಏಳುವಾಗ, ಮುಖ್ಯವಾಗಿ ರಾತ್ರಿಯ ಹೊತ್ತು, 30 ಸೆಕೆಂಡು ಎದ್ದು ಕುಳಿತು, ನಂತರ ಓಡಾಡಬೇಕು. ನಿಮ್ಮ ಬೆಡ್ ರೂಮಿನಲ್ಲಿ ಒಂದು ಕಾಲಿಂಗ್ ಬೆಲ್ ಇದ್ದರೆ ಒಳ್ಳೆಯದು, ಎಮರ್ಜೆನ್ಸಿ ಆದರೆ ತುರ್ತು ಕರೆಗಾಗಿ.
ಹೊರಾಂಗಣದಲ್ಲಿ ಅಂದರೆ ಮನೆಯಾಚೆಗಿನ ಚಟುವಟಿಕೆಗಳಲ್ಲಿದ್ದಾಗ ಹೀಗೆ ಮಾಡಿ:
- * ವಾಹನಗಳನ್ನು ಓಡಿಸುವಾಗ… ಕಾರ್ ಅಥವಾ ಬೈಕ್ ನಲ್ಲಿ ಒಬ್ಬರೇ ಓಡಾಬೇಡಿ. ಯಾರಾದರೂ ಜೊತೆಯಲ್ಲಿ ಇರಬೇಕು
- * ನಿಮಗೆ ಏನು (ಹಿತ) ಅನಿಸುತ್ತದೋ ಅದನ್ನೇ ಮಾಡಿ, ನಿಮಗೆ ಹೇಗೆ ಸಮಾಧಾನವಾಗುತ್ತದೆಯೊ ಹಾಗೆಯೆ ಇರಿ. ಯಾರೋ ಹೇಳಿದರು ಅಂತ ಮಾಡಬೇಡಿ
- * ಎಲ್ಲಿಗಾದರೂ (ಬ್ಯಾಂಕ್, ಶಾಪ್, ಶಾಪಿಂಗ್, ಮಾರ್ಕೆಟ್) ಹೋಗಬೇಕಾದರೆ ಗಂಡ ಅಥವಾ ಹೆಂಡತಿ, ಇಲ್ಲಾಂದರೆ ಮಕ್ಕಳು ಹೀಗೆ ಯಾರಾದರೂ ನಿಮ್ಮ ಜೊತೆ ಇರಲಿ
- * ರಸ್ತೆಯ ಬದಿಯಲ್ಲಿ ಹೊಸ ವ್ಯಕ್ತಿಗಳೊಂದಿಗೆ ವಾದ-ಪ್ರತಿವಾದ-ವಿವಾದ ಮಾಡಿಕೊಳ್ಳಬೇಡಿ
- * ರಸ್ತೆಯಲ್ಲಿ ಹೋಗುವಾಗ ಯಾರಾದರೂ ಏನಾದರೂ ಕೊಟ್ಟಲ್ಲಿ ತೆಗೆದುಕೊಳ್ಳ ಬೇಡಿ
- * ಅಪರಿಚಿತರ ಜೊತೆ ಮಾತಾಡ ಬೇಡಿ, ವ್ಯವಹರಿಸ ಬೇಡಿ
- * ನಿಮ್ಮ ಮನೆಯ ವಿಳಾಸ, ಮಕ್ಕಳ, ನಿಮ್ಮವರ, ನೆರೆಮನೆಯವರ ದೂರವಾಣಿ ಸಂಖ್ಯೆ ಬರೆದಿಟ್ಟುಕೊಳ್ಳಿ
- * ನಿಮ್ಮ ಮಕ್ಕಳ, ಮೊಮ್ಮಕ್ಕಳ ಬಗ್ಗೆ ಯಾರಿಗೂ ಹೇಳ ಬೇಡಿ. ಮಕ್ಕಳು ಕೆಲಸ ಮಾಡುವ ಕಚೇರಿಯ ವಿಳಾಸ, ದೂರವಾಣಿ ಸಂಖ್ಯೆಯನ್ನ ಯಾರೊಂದಿಗೂ ಹಂಚಿಕೊಳ್ಳಬೇಡಿ. ಬಸ್, ರೈಲಿನಲ್ಲಿ ಪ್ರಯಾಣಿಸುವಾಗ ಅನಗತ್ಯವಾಗಿ ಹೆಚ್ಚಿನ ಲಗ್ಗೇಜ್ ಒಯ್ಯಬೇಡಿ
- * ಯಾವುದೇ ಮೆಡಿಸನ್ ತೆಗೆದುಕೊಂಡರೆ ಡಾಕ್ಟರನ್ನು ಕೇಳಿ ತೆಗೆದುಕೊಳ್ಳಿ, ಸ್ವಯಂ ಔಷಧ ಮಾಡಿಕೊಂಡು ನೀವಾಗಿಯೇ ತೆಗೆದುಕೊಳ್ಳಬೇಡಿ
- * ನಿಮ್ಮ ಬಳಿ ಇರುವ ಹಣವನ್ನ ಒಂದೆ ಜೇಬಿನಲ್ಲಿ ಇಟ್ಟುಕೊಳ್ಳದೆ ಎಲ್ಲಾ ಜೇಬುಗಳಿಗೂ ಬಿಡಿ, ಬಿಡಿಯಾಗಿಟ್ಟುಕೊಳ್ಳಿ. ಆಟೋ, ಓಲಾ, ಬಸ್ ಗಳಲ್ಲಿ ಪ್ರಯಾಣಿಸುವಾಗ ಹೋಗ ಬೇಕಾದ ಸ್ಥಳ, ಅಂದಾಜು ಚಾರ್ಜ್ ಇಟ್ಟುಕೊಳ್ಳಿ
ಮನೆಯಲ್ಲಿ ವೃದ್ಧರು ಹೋಂ ಅಲೋನ್ ಆದಾಗ ಈ ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸಿ:
- * ಮನೆಯಲ್ಲಿ ಒಬ್ಬರೇ ಇರಬೇಕಾದರೆ ಗುರುತು ಪರಿಚಯ ಇಲ್ಲದವರನ್ನು ಮನೆಯೊಳಗೆ ಸೇರಿಸಬೇಡಿ
- * ಮನೆಯ ಮೈನ್ ಡೋರ್ ಕೀಲಿ ಕೈ ಗಂಡನ ಹತ್ತಿರ ಒಂದು ಹೆಂಡತಿಯ ಹತ್ತಿರ ಒಂದು ಇರಬೇಕು
- * ಎಲ್ಲರ ಜೊತೆಯಲ್ಲೂ ನಯ ವಿನಯದಿಂದ ಮಾತಾಡಿ, ನಡೆದುಕೊಳ್ಳಿ
- * ಯಾವಾಗಲೂ ನಿಮ್ಮ ಜೀವನದ ಹಿಂದಿನ-ಮುಂದಿನ ವಿಷಯಗಳ ಬಗ್ಗೆ ಯೋಚನೆ ಮಾಡಬೇಡಿ. ಪ್ರಸ್ತುತ ಈಗ ನಡೆಯುವ ಆಗೊಹೋಗುಗಳ ಬಗ್ಗೆ ಯೋಚಿಸಿ ಸಾಕು
- * ಈ ವಯಸ್ಸಿನಲ್ಲಿ ನೆಮ್ಮದಿಯ, ಆರೋಗ್ಯಕರ ಜೀವನ ಕಾಪಾಡಿಕೊಳ್ಳುವುದು, ಖುಷಿಯಾಗಿರುವುದು ಆದ್ಯತೆಯಾಗಬೇಕು. ಒಳ್ಳೆಯ ಸಂಬಂಧಗಳು, ಒಳ್ಳೆಯ ಸ್ನೇಹಿತರು ಇದು ಮುಖ್ಯವಾದದ್ದು
- * ನಿಮ್ಮ ಬ್ಯಾಂಕ್ ವಿವರಗಳನ್ನ ಯಾರಿಗೂ ತಿಳಿಸಲೆಬೇಡಿ
- * ನಿಮ್ಮ ಮೊಬೈಲ್ ಸಂಖ್ಯೆ, ಈ-ಮೈಲ್ ಪಾಸ್ ವರ್ಡ್, ಓಟಿಪಿ ಗಳನ್ನ ಯಾರಿಗೂ ಹೇಳಬೇಡಿ
- * ಸದಾ ನಿಮ್ಮೊಂದಿಗೆ ಸಣ್ಣ ಪುಸ್ತಕ, ಪೆನ್, ಬಿಳಿಯ ಹಾಳೆಯನ್ನು ಒಂದು ಸೈಡ್ ಬ್ಯಾಗ್ ನಲ್ಲಿಟ್ಟುಕೊಳ್ಳಿ
- * ಅಂತಿಮವಾಗಿ, ಯಾವುದೇ ಕಾರಣಕ್ಕೂ ಅಪ್ಪಿ ತಪ್ಪಿ ಯಾವುದೆ ಪತ್ರ ವ್ಯವಹಾರಗಳನ್ನ ನಿಮ್ಮವರು/ ಬೇಕಾದವರು/ ಮಕ್ಕಳು ಇಲ್ಲದಾಗ ಸಹಿ ಹಾಕುವುದು, ಕೊಡುವುದು, ಹರಿಯುವುದು ಮಾಡಬೇಡಿ
- * ಸ್ವಾವಲಂಬಿಗಳಾಗಿರಿ, ಚೈತನ್ಯದಿಂದ-ಚಟುವಟಿಕೆಯಿಂದ- ಲವಲವಿಕೆಯಿಂದ ಇರಿ
Published On - 5:57 pm, Fri, 7 October 22