ಕರ್ನಾಟಕ ಪ್ರವಾಸಕ್ಕೆ ಬಂತು ಐಷಾರಾಮಿ ಕ್ಯಾರವಾನ್!

ರಾಜ್ಯದ ಬೇರೆ ಬೇರೆ ಸ್ಥಳಗಳಗಳಿಗೆ ಪ್ರವಾಸ ಮಾಡುವ ಜನರಿಗೆ, ಅನುಕೂಲವಾಗಲೆಂದು ರಾಜ್ಯ ಸರ್ಕಾರ ಬಂಪರ್ ಗಿಫ್ಟ್​ ಕೊಡಲು ಮುಂದಾಗಿದೆ.

ಕರ್ನಾಟಕ ಪ್ರವಾಸಕ್ಕೆ ಬಂತು ಐಷಾರಾಮಿ ಕ್ಯಾರವಾನ್!
ಕ್ಯಾರವಾನ್
Updated By: ವಿವೇಕ ಬಿರಾದಾರ

Updated on: Oct 08, 2022 | 8:43 PM

ಬೆಂಗಳೂರು: ರಾಜ್ಯದ ಬೇರೆ ಬೇರೆ ಸ್ಥಳಗಳಗಳಿಗೆ ಪ್ರವಾಸ ಮಾಡುವ ಜನರಿಗೆ, ಅನುಕೂಲವಾಗಲೆಂದು ರಾಜ್ಯ ಸರ್ಕಾರ (Karnataka Government) ಬಂಪರ್ ಗಿಫ್ಟ್​ ಕೊಡಲು ಮುಂದಾಗಿದೆ. ವರದಿಗಳ ಪ್ರಕಾರ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರಿಗೆ ಕಾರವಾನ್ (caravan) ಸೌಲಭ್ಯವನ್ನು ನೀಡುತ್ತಿದೆ. ಇದರಿಂದ ಪ್ರವಾಸಿಗರ ಪ್ರವಾಸ ಸುಗಮವಾಗಲಿದೆ. ಪ್ರಯಾಣದ ವೇಳೆ ತಾಜಾ ಆಹಾರ ಸಿಗುವುದು ದುರ್ಲಬವಾಗುತ್ತದೆ. ಮತ್ತು ಬೇರೆ ಬೇರೆ ಊರುಗಳಿಗೆ ಪ್ರವಾಸ ಕೈಗೊಳ್ಳುವುದರಿಂದ ಇಳಕೊಳ್ಳಲು ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಪ್ರವಾಸಿಗರಿಗೆ ಈ ತೊಂದರೆಯನ್ನು ತಪ್ಪಿಸಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಕ್ಯಾರವಾನ್​ ಸೌಲಭ್ಯವನ್ನು ಒದಗಿಸಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಐಷಾರಾಮಿ ಕಾರವಾರಕ್ಕೆ ಚಾಲನೆ ನೀಡಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಸದ್ಯಕ್ಕೆ ಪ್ರವಾಸೋದ್ಯಮ ಇಲಾಖೆಯು ಖಾಸಗಿ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಈ ಸೇವೆಯನ್ನು ಒದಗಿಸಲಿದೆ ಎಂದು ವರದಿಗಳು ತಿಳಿಸಿವೆ.

ಸದ್ಯಕ್ಕೆ ಖಾಸಗಿ ಸಂಸ್ಥೆಯೊಂದು ಎರಡು ಕ್ಯಾರವಾನ್​ಗಳನ್ನು ವಿನ್ಯಾಸಗೊಳಿಸಿದೆ. ಒಂದು ಬಸ್ ಮಾದರಿಯ ಕ್ಯಾರವಾನ್​ ಆಗಿದ್ದು, ಇದು 2 ಹಾಸಿಗೆಗಳು, ಅಡುಗೆಮನೆ, ಶೌಚಾಲಯ ಸೌಲಭ್ಯಗಳು, 1 ಟೇಬಲ್, 4 ಕುರ್ಚಿಗಳು ಮತ್ತು ಹೆಚ್ಚಿನವುಗಳನ್ನು ಹೊಂದಿರುತ್ತದೆ. ಈ ಕ್ಯಾರವಾನ್​ 5 ಮಂದಿ ಇದ್ದ ಕುಟುಂಬಕ್ಕೆ ಹೇಳಿ ಮಾಡಿಸಿದಂತಿದೆ.

ಚಿಕ್ಕ ಮೋಟಾರು ಕಾರ್. ಇದರಲ್ಲಿ ಅಡುಗೆಮನೆ, ಸಣ್ಣ ಮಲಗುವ ಕೋಣೆ ಮತ್ತು ಶೌಚಾಲಯ ಇರುತ್ತದೆ, ಇದರಲ್ಲಿ 3 ಜನರು ಪ್ರಯಾಣಿಸಬಹುದು. ಗಂಡ, ಹೆಂಡತಿ ಮತ್ತು ಮಗುವಿನೊಂದಿಗೆ ಸಣ್ಣ ಕುಟುಂಬ ಪ್ರಯಾಣಕ್ಕೆ ಈ ಕ್ಯಾರವಾನ್ ಸೂಕ್ತವಾಗಿದೆ.

ಈ ಕ್ಯಾರವಾನ್​ಗಳ ಬಾಡಿಗೆಯನ್ನು ಇನ್ನೂ ಘೋಷಿಸಲಾಗಿಲ್ಲ. ಮೂಲಗಳ ಪ್ರಕಾರ, ಕೆಲವೇ ದಿನಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಅಪ್ಲಿಕೇಶನ್ ಮತ್ತು ವೆಬ್‌ಸೈಟ್​ಅನ್ನು ಅಭಿವೃದ್ಧಿಪಡಿಸಿದ ನಂತರ ಬೆಲೆಯನ್ನು ನಿಗದಿಪಡಿಸಲಾಗುತ್ತದೆ.

Published On - 8:43 pm, Sat, 8 October 22