Solar Eclipse 2022: ಅ. 25ರಂದು ಈ ವರ್ಷದ ಕೊನೆಯ ಸೂರ್ಯ ಗ್ರಹಣ; ಭಾರತದಲ್ಲೂ ಗೋಚರವಾಗುತ್ತಾ?

Surya Grahan 2022: ಈ ಸೂರ್ಯ ಗ್ರಹಣವು ಅಕ್ಟೋಬರ್ 25ರಂದು ಸಂಜೆ 4.29ಕ್ಕೆ ಪ್ರಾರಂಭವಾಗಿ, ಸಂಜೆ 5.42ಕ್ಕೆ ಕೊನೆಗೊಳ್ಳುತ್ತದೆ. ಭಾರತವಲ್ಲದಲ್ಲಿಯೂ ಇದನ್ನು ಕಾಣಬಹುದು.

Solar Eclipse 2022: ಅ. 25ರಂದು ಈ ವರ್ಷದ ಕೊನೆಯ ಸೂರ್ಯ ಗ್ರಹಣ; ಭಾರತದಲ್ಲೂ ಗೋಚರವಾಗುತ್ತಾ?
ಸೂರ್ಯ ಗ್ರಹಣ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 08, 2022 | 12:41 PM

ಸೂರ್ಯ ಗ್ರಹಣ 2022: ಈ ವರ್ಷದ ಕೊನೆಯ ಭಾಗಶಃ ಸೂರ್ಯಗ್ರಹಣವು (Solar Eclipse) ಅಕ್ಟೋಬರ್ 25ರಂದು ಗೋಚರವಾಗಲಿದೆ. ದೀಪಾವಳಿಯಂದೇ ಈ ಸೂರ್ಯಗ್ರಹಣ (Surya Grahan) ಉಂಟಾಗಲಿದ್ದು, ಯುರೋಪ್, ಪಶ್ಚಿಮ ಸೈಬೀರಿಯಾ, ಮಧ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಈಶಾನ್ಯ ಭಾಗದಲ್ಲಿ ಗೋಚರಿಸುತ್ತದೆ. ಈ ಸೂರ್ಯಗ್ರಹಣವು ಭಾರತದ ಬಹುತೇಕ ಪ್ರದೇಶಗಳಲ್ಲಿ ಗೋಚರಿಸಲಿದೆ ಎಂದು ಹೇಳಲಾಗುತ್ತಿದೆ.

ಈ ಸೂರ್ಯ ಗ್ರಹಣವು ಅಕ್ಟೋಬರ್ 25ರಂದು ಸಂಜೆ 4.29ಕ್ಕೆ ಪ್ರಾರಂಭವಾಗಿ, ಸಂಜೆ 5.42ಕ್ಕೆ ಕೊನೆಗೊಳ್ಳುತ್ತದೆ. ಭಾರತವಲ್ಲದೆ, ಯುರೋಪ್, ಆಫ್ರಿಕಾ ಖಂಡದ ಈಶಾನ್ಯ ಭಾಗ, ಏಷ್ಯಾದ ನೈಋತ್ಯ ಭಾಗ ಮತ್ತು ಅಟ್ಲಾಂಟಿಕ್‌ನಲ್ಲಿಯೂ ಇದನ್ನು ಕಾಣಬಹುದು.

ಸೂತಕದ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಗ್ರಹಣ ಮುಗಿದ ನಂತರ ಸೂತಕ ಕೊನೆಗೊಳ್ಳುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂತಕದ ಅವಧಿಯಲ್ಲಿ ಯಾವುದೇ ಮಂಗಳಕರ ಅಥವಾ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ವಿಶೇಷವಾಗಿ ಗರ್ಭಿಣಿಯರು ಈ ಸಮಯದಲ್ಲಿ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಇದು ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Solar Eclipse 2022: ಏ. 30ರಂದು ಈ ವರ್ಷದ ಮೊದಲ ಸೂರ್ಯಗ್ರಹಣ; ಈ ಸ್ಥಳಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರ

ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯ ದೇವರು ತುಲಾ ರಾಶಿಯಲ್ಲಿರುತ್ತಾನೆ. ಈ ಕಾರಣದಿಂದಾಗಿ, ತುಲಾ ರಾಶಿಯ ಜನರ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ತುಲಾ ರಾಶಿಯವರಿಗೆ ಸೂರ್ಯಗ್ರಹಣದ ಸಮಯವು ಅನುಕೂಲಕರವಾಗಿರುವುದಿಲ್ಲ. ಸೂರ್ಯಗ್ರಹಣವು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಚಂದ್ರನ ನೆರಳಿನ ಮಧ್ಯಭಾಗವು ಭೂಮಿಯನ್ನು ತಪ್ಪಿಸಿಕೊಂಡಾಗ ಭೂಮಿಯ ಧ್ರುವ ಪ್ರದೇಶಗಳಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ.

timeanddate.com ವೆಬ್‌ಸೈಟ್ ಪ್ರಕಾರ, ಈ ಭಾಗಶಃ ಸೂರ್ಯಗ್ರಹಣವು ನವದೆಹಲಿಯಲ್ಲಿ ಗೋಚರಿಸುತ್ತದೆ. ಭಾಗಶಃ ಸೂರ್ಯಗ್ರಹಣವನ್ನು ಆಂಶಿಕ್ ಸೂರ್ಯ ಗ್ರಹಣ ಎಂದೂ ಕರೆಯುತ್ತಾರೆ. ಸಂಪೂರ್ಣ ಗ್ರಹಣವಾದಾಗ ಸೂರ್ಯನ ಡಿಸ್ಕ್ ಸಂಪೂರ್ಣವಾಗಿ ಚಂದ್ರನಿಂದ ಅಸ್ಪಷ್ಟವಾಗಿರುತ್ತದೆ. ಆದರೆ, ಭಾಗಶಃ ಮತ್ತು ವಾರ್ಷಿಕ ಗ್ರಹಣಗಳಲ್ಲಿ ಸೂರ್ಯನ ಒಂದು ಭಾಗವನ್ನು ಮಾತ್ರ ಅಸ್ಪಷ್ಟಗೊಳಿಸಲಾಗುತ್ತದೆ.

ಇದನ್ನೂ ಓದಿ: Solar Eclipse 2022: ಸೂರ್ಯಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು?

ಸೂರ್ಯ ಗ್ರಹಣದಲ್ಲಿ ಏನು ಮಾಡಬೇಕು? ಏನು ಮಾಡಬಾರದು?: ಭಾರತದಲ್ಲಿ ಜನರು ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಅಲ್ಲದೆ, ಗ್ರಹಣದ ದುಷ್ಪರಿಣಾಮಗಳನ್ನು ತಡೆಗಟ್ಟಲು ದರ್ಭೆ ಹುಲ್ಲು ಅಥವಾ ತುಳಸಿ ಎಲೆಗಳನ್ನು ತಿನ್ನಲು ಮತ್ತು ನೀರಿನಲ್ಲಿ ಹಾಕಲಾಗುತ್ತದೆ. ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಬದಲಾಯಿಸಿಕೊಳ್ಳಬೇಕೆಂದು ಹಲವರು ನಂಬುತ್ತಾರೆ. ಸೂರ್ಯ ದೇವರಿಗೆ ಸಮರ್ಪಿತವಾದ ಮಂತ್ರಗಳನ್ನು ಪಠಿಸುವುದು ದೇಶದ ಅನೇಕ ಮನೆಗಳಲ್ಲಿ ಅನುಸರಿಸುವ ಮತ್ತೊಂದು ಅಭ್ಯಾಸವಾಗಿದೆ.

ವಿಶೇಷವಾಗಿ, ಗರ್ಭಿಣಿಯರು ಮನೆಯೊಳಗೆ ಇರಲು ಮತ್ತು ಸಂತಾನ ಗೋಪಾಲ ಮಂತ್ರವನ್ನು ಪಠಿಸಲು ಹಿರಿಯರು ಸೂಚಿಸುತ್ತಾರೆ. ಗ್ರಹಣದ ಸಮಯದಲ್ಲಿ ಅನೇಕರು ನೀರನ್ನು ಕೂಡ ಕುಡಿಯುವುದಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Sat, 8 October 22

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್