ಸ್ನೇಹಿತರಾಗಿರಲಿ, ಪ್ರೇಯಸಿ, ಪ್ರಿಯಕರನೇ ಆಗಿರಲಿ ಸಂಬಂಧದಲ್ಲಿ ಒಬ್ಬರಿಗೊಬ್ಬರು ಗೌರವಕೊಡುವುದಿಲ್ಲವೆಂದಾದರೆ ಆ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ. ಒಬ್ಬರನ್ನೊಬ್ಬರು ಗೌರವಿಸುವುದು ಮತ್ತು ಸಂಬಂಧದಲ್ಲಿ ಪ್ರೀತಿಯನ್ನು ಕಾಪಾಡಿಕೊಳ್ಳುವುದು ಎರಡು ವಿಭಿನ್ನ ವಿಷಯಗಳು.
ಮದುವೆಯಾಗಿ ಸ್ವಲ್ಪ ಸಮಯದ ಬಳಿಕ ಪರಸ್ಪರ ಬೇಸರ ಹಾಗೂ ಒತ್ತಡವನ್ನು ಎದುರಿಸಲು ಆರಂಭಿಸುತ್ತಾರೆ, ಇದಕ್ಕೆ ಗೌರವದ ಕೊರತೆಯೇ ಕಾರಣ. ಗೌರವ ಮತ್ತು ಒಟ್ಟಿಗೆ ಸಮಯ ಕಳೆಯುವ ಇಚ್ಛೆ ಯಾವುದೇ ಆರೋಗ್ಯಕರ ಸಂಬಂಧದ ಆಧಾರವಾಗಿರುತ್ತದೆ.
ನಾನು ಹೇಳಿದ್ದೇ ಸತ್ಯ ಎಂಬುದನ್ನು ಬಿಡಿ
ಎಲ್ಲರೂ ಅವರವರ ದೃಷ್ಟಿಯಲ್ಲಿ ತಾವು ಹೇಳುವುದೇ ಸರಿ ಎನ್ನುವ ಮನೋಭಾವವನ್ನು ಹೊಂದಿರುತ್ತಾರೆ. ಹಾಗೆಯೇ ಸಂಬಂಧದಲ್ಲಿ ನಾನು ಹೇಳಿದ್ದೇ ಸತ್ಯ ಅದೇ ನಡೆಯಬೇಕು ಎನ್ನುವ ಮನೋಭಾವನೆಯಿಂದ ಹೊರಬನ್ನಿ.
ಅರ್ಥಪೂರ್ಣ ಸಂಭಾಷಣೆಗಳು
ನೀವು ಯಾವುದೋ ಜೋಕ್ ಹೇಳಿಕೊಂಡು ಹರಟೆ ಹೊಡೆಯುವುದಕ್ಕಿಂತ ಅರ್ಥಪೂರ್ಣ ಸಂಭಾಷಣೆಗಳನ್ನು ನಡೆಸಿ.
ಇಬ್ಬರ ಅಭಿರುಚಿಯ ಬಗ್ಗೆ ಮಾತನಾಡಿ
ಇಬ್ಬರ ಅಭಿರುಚಿ ಏನಿದೆ ಎಂಬುದರ ಕುರಿತು ಮಾತನಾಡಿ, ಅದರಲ್ಲಿ ಯಾವುದು ಕಾಮನ್ ಇದೆ ಎಂಬುದನ್ನು ತಿಳಿದುಕೊಳ್ಳಿ. ಅವರು ಆನಂದಿಸುವ ಚಟುವಟಿಕೆಗಳ ಬಗ್ಗೆ ಸ್ವಲ್ಪ ಗಮನವಹಿಸಿ.
ವಾರಾಂತ್ಯ ತಿರುಗಾಡಿ
ವಾರಾಂತ್ಯ ಎಲ್ಲಾದರೂ ಪ್ರವಾಸವನ್ನು ಆಯೋಜಿಸಿ, ಇಬ್ಬರೂ ಒಟ್ಟಿಗೆ ಖುಷಿಖುಷಿಯಾಗಿರುವಂತೆ ನೋಡಿಕೊಳ್ಳಿ.
ಭಾವನಾತ್ಮಕವಾಗಿ ಹರ್ಟ್ ಆಗುವಂತಹ ಮಾತುಗಳನ್ನು ಆಡಬೇಡಿ
ಭಾವನೆಗಳಿಗೆ ಧಕ್ಕೆ ತರುವಂತಹ ಮಾತುಗಳನ್ನು ಆಡಬೇಡಿ, ಆದಷ್ಟು ಅವರಿಗೆ ಇಷ್ಟವಾಗುವ ಹಾಗೆ ನಡೆದುಕೊಳ್ಳಿ, ಅವರಿಗೆ ಇಷ್ಟ ಆಗದ ವಿಷಯಗಳನ್ನು ಪ್ರಸ್ತಾಪಿಸುವುದೇ ಬೇಡ. ಹಾಗೂ ನಿಮ್ಮ ಧ್ವನಿಯಲ್ಲಿ ಸ್ವಲ್ಪ ವಿಧೇಯತೆಯೂ ಇರಲಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ