DIY Dry Ginger Powder: ದೈನಂದಿನ ಅಡುಗೆಯಲ್ಲಿ ಬಳಕೆ ಮಾಡಲು ಶುಂಠಿ ಪುಡಿಯನ್ನು ತಯಾರಿಸುವ ಸುಲಭ ಹಂತಗಳು

ಮಾರುಕಟ್ಟೆಯಿಂದ ತರುವ ಶುಂಠಿ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಅವುಗಳು ಬೇಗ ಹಾಳಾಗಿ ಹೋಗುತ್ತದೆ. ಹಾಗಾಗಿ ಅವುಗಳನ್ನು ಪುಡಿ ಮಾಡಿ ಇಟ್ಟುಕೊಳ್ಳುವ ಮೂಲಕ ಎಲ್ಲಾ ರೀತಿಯ ಅಡುಗೆಗಳಿಗೂ ಅವುಗಳನ್ನು ಬಳಸಿಕೊಳ್ಳಬಹುದು. ಮತ್ತು ಇದು ಶುಂಠಿಯ ಶೇಖರಣಾ ಜೀವನವನ್ನು ಹೆಚ್ಚಿಸಲು ಇರುವ ಉತ್ತಮ ಮಾರ್ಗವಾಗಿದೆ.

DIY Dry Ginger Powder: ದೈನಂದಿನ ಅಡುಗೆಯಲ್ಲಿ ಬಳಕೆ ಮಾಡಲು ಶುಂಠಿ ಪುಡಿಯನ್ನು ತಯಾರಿಸುವ ಸುಲಭ ಹಂತಗಳು
ಸಾಮದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 21, 2023 | 7:41 AM

ಶುಂಠಿಯನ್ನು ಸಾಮಾನ್ಯವಾಗಿ ಎಲ್ಲಾ ರೀತಿಯ ಅಡುಗೆಗಳಲ್ಲೂ ಬಳಸಲಾಗುತ್ತದೆ. ಇದು ಭಾರತೀಯ ಅಡುಗೆ ಮನೆಗಳಲ್ಲಿ ನಿಯಮಿತವಾಗಿ ಬಳಸಲ್ಪಡುವ ಒಂದು ಮಸಾಲೆಯಾಗಿದೆ. ಇದು ರುಚಿಕರವಾದ ಪರಿಮಳವನ್ನು ಹೊಂದಿದ್ದು, ಅದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇವುಗಳು ಆಹಾರಕ್ಕೆ ಉತ್ತಮವಾದ ರುಚಿಯನ್ನು ನೀಡುವುದು ಮಾತ್ರವಲ್ಲದೆ ಈ ವಿನಮ್ರ ಮಸಾಲೆಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅನೇಕ ವರ್ಷಗಳಿಂದಲೂ ಈ ಶುಂಠಿಯನ್ನು ಜೀರ್ಣಕ್ರಿಯೆಗೆ ಸಹಾಯ ಮಾಡಲು, ವಾಕರಿಕೆ ಕಡಿಮೆ ಮಾಡಲು ಮತ್ತು ಸಾಮಾನ್ಯ ಶೀತ ಮತ್ತು ಜ್ವರವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಈ ಶೂಂಠಿಯು ಇತರ ತಾಜಾ ಮಸಾಲೆಗಳಂತೆ, ಶುಂಠಿಯು ಸಹ ಸೀಮಿತ ಶೇಖರಣಾ ಜೀವನವನ್ನು ಹೊಂದಿದೆ. ನಿಮ್ಮ ಅಡುಗೆ ಮನೆಯಲ್ಲಿ ಹೆಚ್ಚಿನ ಪ್ರಮಾಣದ ಶುಂಠಿ ಇದ್ದರೆ, ಅದು ಹಾಳಾಗಿ ಹೋಗುತ್ತದೆ ಎನ್ನುವ ಚಿಂತೆ ನಿಮಗಿದ್ದರೆ, ಆ ಶುಂಠಿಯನ್ನು ಪುಡಿ ಮಾಡಿ ಇಟ್ಟುಕೊಳ್ಳುವ ಮುಲಕ ಅದರ ಶೇಖರಣಾ ಜೀವನವನ್ನು ಹೆಚ್ಚಿಸಬಹುದು. ಒಣ ಶುಂಠಿ ಪುಡಿಯನ್ನು ಅಡುಗೆಯಲ್ಲಿ ಮಸಾಲೆಯಾಗಿ ಬಳಸಬಹುದು. ಮನೆಯಲ್ಲಿ ಶುಂಠಿ ಪುಡಿಯನ್ನು ಮಾಡಲು ಈ ಕೆಲವು ಹಂತಗಳನ್ನು ಪಾಲಿಸಿ.

ಮನೆಯಲ್ಲಿ ಶುಂಠಿ ಪುಡಿಯನ್ನು ತಯಾರಿಸುವ ಸುಲಭ ವಿಧಾನ:

ಹಂತ 1- ತಾಜಾ ಶುಂಠಿಯನ್ನು ಆರಿಸಿಕೊಳ್ಳಿ: ಮೊದಲ ಹಂತವೆಂದರೆ ಶುಂಠಿ ಪುಡಿ ಮಾಡಲು ನೀವು ಶುದ್ಧ ತಾಜಾ ಶುಂಠಿಯನ್ನು ಹೊಂದಿರಬೇಕು. ಇದು ತಾಜಾವಾಗಿದೆಯೇ ಎಂದು ಪರಿಶೀಲಿಸಲು, ಶುಂಠಿಯ ಒಂದು ಸಣ್ಣ ತುಂಡನ್ನು ಮುರಿದು ಅದರ ನಡುವೆ ಯಾವುದೇ ದಾರದ ನಾರು ಇಲ್ಲದೆ ಅದು ಸುಲಭವಾಗಿ ತುಂಡಾದರೆ ಅದು ತಾಜಾವಾಗಿರುತ್ತದೆ. ಕಡಿಮೆ ನಾರುಗಳನ್ನು ಹೊಂದಿರುವ ಶುಂಠಿಯನ್ನು ಪುಡಿ ಮಾಡಲು ಬಳಸುವುದು ಉತ್ತಮ ಏಕೆಂದರೆ ಹೆಚ್ಚು ನಾರಿದ್ದರೆ ಅದನ್ನು ಪುಡಿ ಮಾಡಲು ಕಷ್ಟವಾಗುತ್ತದೆ.

ಹಂತ 2- ತೊಳೆಯುವುದು ಮತ್ತು ಒಣಗಿಸುವುದು: ಯಾವುದೇ ಕಚ್ಚಾ ಆಹಾರ ಪದಾರ್ಥಗಳನ್ನು ಕೊಳೆ ಮತ್ತು ಸೂಕ್ಷ್ಮಾಣು ಮುಕ್ತವಾಗಿಡಲು ತೊಳೆಯುವುದು ಮುಖ್ಯ. ಹಾಗೆಯೇ ಶುಂಠಿಯನ್ನು ಯಾವುದೇ ಕೊಳೆ ಇರದಂತೆ ಕೂಡಾ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ ನಂತರ ಶುದ್ಧ ಬಟ್ಟೆಯಿಂದ ಅದನ್ನು ಸ್ವಚ್ಛಗೊಳಿಸಿ.

ಹಂತ 3- ಸಿಪ್ಪೆ ಸುಳಿಯುವುದು ಮತ್ತು ಕತ್ತರಿಸುವುದು: ಶುಂಠಿಯು ಚೆನ್ನಾಗಿ ಸ್ವಚ್ಛಗೊಳಿಸಿದ ಮೇಲೆ ಅದರ ಸಿಪ್ಪೆಯನ್ನು ಸುಳಿಯುವುದು ತುಂಬಾ ಮುಖ್ಯವಾಗಿರುತ್ತದೆ. ಹರಿವಾದ ಚಾಕುವಿನ ಸಹಾಯದಿಂದ ಶುಂಠಿಯ ಸಿಪ್ಪೆಯನ್ನು ತೆಗೆದುಹಾಕಿ ನಂತರ ಶುಂಠಿಯನ್ನು ತೆಳುವಾದ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ಕತ್ತರಿಸಿದ ಮೇಲೆ ಒಣಗಲು ಬಿಡಿ, ಇದರಿಂದ ಶುಂಠಿಯಲ್ಲಿನ ನೀರಿನಾಂಶ ಆವಿಯಾಗುತ್ತದೆ.

ಇದನ್ನೂ ಓದಿ: Ginger Powder: ಶುಂಠಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ

ಹಂತ 4 ನಿರ್ಜಲೀಕರಣ: ಶುಂಠಿಯನ್ನು ಒಣಗಿಸುವುದು ಕಠಿಣವಲ್ಲ. ಶುಂಠಿಯ ಚೂರುಗಳನ್ನು ಪ್ಲೇಟ್ ಅಥವಾ ಟ್ರೇನಲ್ಲಿ ಇರಿಸಿ 9 ರಿಂದ 10 ದಿನಗಳವರೆಗೆ ಬಿಸಿಲಿನಲ್ಲಿ ಒಣಗಲು ಬಿಡಿ. ಶುಂಠಿಯ ಎರಡು ಬದಿಗಳನ್ನು ಸರಿಯಾಗಿ ಒಣಗಿಸಿ. ಆಗ ಅದು ಸಂಪೂರ್ಣವಾಗಿ ಒಣಗುತ್ತದೆ.

ಹಂತ 5 ಪುಡಿ ತಯಾರಿಸುವುದು: ಒಣ ಶುಂಠಿಯ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಯಾವುದೇ ರೀತಿಯ ಹೋಳುಗಳು ಉಳಿದಿರದಂತೆ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಮತ್ತು ಅದರ ಮೃದು ವಿನ್ಯಾಸಕ್ಕಾಗಿ ನೀವು ಪುಡಿಯನ್ನು ಜರಡಿ ಮಾಡಬಹುದು.

ಶುಂಠಿ ಪುಡಿಯನ್ನು ಹೇಗೆ ಸಂಗ್ರಹಿಸಿಡುವುದು: ನೀವು ಅದನ್ನು ಗಾಳಿಯಾಡದ ಧಾರಕದಲ್ಲಿ ಸಂಗ್ರಹಿಸಬಹುದು. ಮತ್ತು ಶುಂಠಿ ಪುಡಿಯನ್ನು ಹಾಕಿಡುವ ಕಂಟೇನರ್ ನಲ್ಲಿ ಯಾವುದೇ ರೀತಿಯ ತೇವಾಂಶ ಇರದೆ ಶುಷ್ಕ ಮತ್ತು ಸ್ವಚ್ಛವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನೀವು ಸಂಗ್ರಹಿಸಿಟ್ಟ ಪುಡಿಯ ಕಂಟೇನರ್ ನ್ನು ಶುಷ್ಕ ಸ್ಥಳದಲ್ಲಿ ಇರಿಸಬಹುದು ಅಥವಾ ರೆಫ್ರಿಜರೆಟರ್ ನಲ್ಲೂ ಇಡಬಹುದು. ಈ ರೀತಿ ಮಾಡುವುದರಿಂದ ಶುಂಠಿ ಪುಡಿ ಹಾಳಾಗದೆ ತಿಂಗಳುಗಳವರೆಗೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ