Ginger Powder: ಶುಂಠಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ
ಜೀರ್ಣಕ್ರಿಯೆಗೆ ಸಹಾಯಕವಾಗಿರುವ ಶುಂಠಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಿರುವಾಗ ಒಣಗಿಸಿದ ಶುಂಠಿ ಪುಡಿಯನ್ನು ಬಳಸುವುದು ಹೇಗೆ? ಎಂಬುದನ್ನು ತಿಳಿಯಿರಿ.
ಶುಂಠಿ ಎಲ್ಲರ ಅಡುಗೆ ಮನೆಯಲ್ಲಿಯೂ ಸಾಮಾನ್ಯವಾಗಿ ಇರುವ ಪದಾರ್ಥ. ನಮ್ಮ ಸುತ್ತಮುತ್ತಲು ಬೆಳೆಯುವ ಅದೆಷ್ಟೋ ಆಹಾರ ಪದಾರ್ಥಗಳಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಶುಂಠಿಯನ್ನು ಆಹಾರ ಪದಾರ್ಥಗಳಲ್ಲಿ ಮಾತ್ರವಲ್ಲದೇ ಬೆಳಿಗ್ಗೆಯ ಚಹ ಮಾಡಿಯೂ ಕೆಲವರು ಸವಿಯುತ್ತಾರೆ. ಸಾಮಾನ್ಯವಾದ ತಲೆನೋವು, ನೆಗಡಿ ಮತ್ತು ಜ್ವರಕ್ಕೆ ಶುಂಠಿ ಚಹ ಅಥವಾ ಕಷಾಯ ಉತ್ತಮ ಮಾರ್ಗ.
ಶುಂಠಿಯಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಇನ್ಫ್ಲೋಮೋಟರಿ ಗುಣಗಳಿರುತ್ತದೆ. ಜತೆಗೆ ಸತವು ಅಂಶ ಕೂಡ ಕಂಡು ಬರುತ್ತದೆ. ಸಾಮಾನ್ಯವಾಗಿ ಶುಂಠಿಯನ್ನು ಒಣಗಿಸಿ ಪುಡಿ ಮಾಡಿಯೂ ಸಹ ಶೇಖರಿಸಿಡಬಹುದು.
ಆರೋಗ್ಯ ಸುಧಾರಣೆಗೆ ಸಂಬಂಧಿಸಿದಂತೆ ಆಯುರ್ವೇದದಲ್ಲಿಯೂ ಶುಂಠಿಗೆ ಪ್ರಮುಖ ಸ್ಥಾನವಿದೆ. ಜೀರ್ಣಕ್ರಿಯೆಗೆ ಸಹಾಯಕವಾಗಿರುವ ಶುಂಠಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಿರುವಾಗ ಒಣಗಿಸಿದ ಶುಂಠಿ ಪುಡಿಯನ್ನು ಬಳಸುವುದು ಹೇಗೆ? ಎಂಬುದನ್ನು ತಿಳಿಯಿರಿ.
ಶುಂಠಿ ಪುಡಿಯನ್ನು ನೀರಿಗೆ ಸೇರಿಸಿ ಕುಡಿಯುವುದರ ಜತೆಗೆ ಲವಂಗ ಹಾಗೂ ಉಪ್ಪನ್ನು ಮಿಶ್ರಣ ಮಾಡುವುದರಿಂದ ಒಳ್ಳೆಯ ರುಚಿ ಸಿಗುತ್ತದೆ. ದಿನಕ್ಕೆ ಒಂದು ಬಾರಿಯಾದರೂ ಈ ಮಿಶ್ರಣವನ್ನು ಸೇವಿಸುವ ಮೂಲಕ ಹೊಟ್ಟೆಯನ್ನು ಶುದ್ಧವಾಗಿಟ್ಟುಕೊಳ್ಳಬಹುದಾಗಿದೆ.
ಮನೆಯಲ್ಲಿ ಶುಂಠಿ ಪುಡಿಯನ್ನು ತಯಾರಿಸುವುದು ಹೇಗೆ? ಔಷಧೀಯ ಗುಣಗಳಿಂದಾಗಿ ಹೆಚ್ಚಿನ ಮನೆಯಲ್ಲಿ ಶುಂಠಿಯನ್ನು ಬೆಳೆಯುತ್ತಾರೆ. ಹೀಗಿರುವಾಗ ಶುಂಠಿ ಪುಡಿ ಮಾಡಿಯೂ ಶೇಖರಿಸಿ ಇಟ್ಟುಕೊಳ್ಳಬಹುದಾಗಿದೆ. ಹೇಗೆ ಎಂಬುದು ಈ ಕೆಳಗಿನಂತಿದೆ:
ತಾಜಾ ಶುಂಠಿಯನ್ನು ಸ್ವಚ್ಛವಾಗಿ ತೊಳೆದು ಇಟ್ಟುಕೊಳ್ಳಿ
ತೆಳುವಾದ ಹೋಳುಗಳನ್ನಾಗಿ ಕತ್ತರಿಸಿ 2 ರಿಂದ 4 ದಿನಗಳವರೆಗೆ ಹಾಗೆಯೇ ಇಡಿ
4 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ
ಶುಂಠಿ ಚೆನ್ನಾಗಿ ಒಣಗಿದ ಬಳಿಕ ಮಿಕ್ಸಿಯಲ್ಲಿ ಗ್ರೈಂಡರ್ ಮಾಡಿ
ಬೆಚ್ಚಗಿನ ಕರಡಿಗೆಯಲ್ಲಿ ಶೇಖರಿಸಿ ಇಟ್ಟುಕೊಂಡು ಯಾವಾಗ ಬೇಕೋ ಆವಾಗ ಉಪಯೋಗಿಸಿಕೊಳ್ಳಬಹುದು
ಯಾವಾಗಲೂ ಮುಖ್ಯವಾಗಿ ನೆನಪಿಡುವ ವಿಷಯವೆಂದರೆ, ಅತಿಯಾಗಿ ಸೇವಿಸಿದರೆ ಅಮೃತವೂ ವಿಷ ಎಂಬಂತೆ ಯಾವುದೇ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಅತಿಯಾಗಿ ಸೇವಿಸಿದರೆ ಅನಾರೋಗ್ಯವನ್ನು ಉಂಟು ಮಾಡುತ್ತದೆ. ಹಾಗಾಗಿ ಹಿತ ಮಿತವಾಗಿ ಸೇವಿಸಿ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ.
ಇದನ್ನೂ ಓದಿ:
Health Benefits: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆಲ್ಲಿಕಾಯಿ, ಶುಂಠಿ ಜ್ಯೂಸ್ ಕುಡಿಯಿರಿ
(Health Benefits of ginger powder check in kannada)