Parenting Hacks: ಮಕ್ಕಳು ಕೋಪಗೊಂಡಾಗ ಏನು ಮಾಡಬೇಕು? ಸಿಟ್ಟನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಮಕ್ಕಳು ಕೋಪಗೊಂಡಾಗ ಸಾಮನ್ಯವಾಗಿ ಪೋಷಕರು ಕೋಪ ಮಾಡಿಕೊಳ್ಳುತ್ತಾರೆ. ಆದರೆ ಮಕ್ಕಳಿಗೆ ಬಂದ ಸಿಟ್ಟು ಕಡಿಮೆ ಮಾಡುವುದು ಹೇಗೆ? ಪೋಷಕರು ಏನು ಮಾಡಬೇಕು ಇಲ್ಲಿದೆ ಮಾಹಿತಿ.

Parenting Hacks: ಮಕ್ಕಳು ಕೋಪಗೊಂಡಾಗ ಏನು ಮಾಡಬೇಕು? ಸಿಟ್ಟನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
Parenting HacksImage Credit source: iStock
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Apr 21, 2023 | 6:30 AM

ಪೋಷಕರು ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದರ ನಡುವೆ ಗೊಂದಲ ಏರ್ಪಡುವುದು ಸಹಜ. ಈ ಗೊಂದಲ ಸ್ಪಷ್ಟ ವಾಗುವುದರಿಂದಲೇ ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಲು ಸಾಧ್ಯ. ಅದಕ್ಕೂ ಮೊದಲು ಅವರ ಜೀವನಕ್ಕೆ ಅಗತ್ಯವಾದ ಮೌಲ್ಯಗಳು ಮತ್ತು ಕೌಶಲ್ಗಳನ್ನು ಸಹ ಕಲಿಸಬೇಕಾಗುತ್ತದೆ. ಪೋಷಕರು ಯಾವಾಗಲೂ ತಮ್ಮ ಮಕ್ಕಳಿಗೆ ಉತ್ತಮವಾದದ್ದನ್ನು ನೀಡಲು ಬಯಸುತ್ತಾರೆ. ಆದರೆ ಸಮಯಾನುಸಾರ ಮಕ್ಕಳು ಕೋಪೋದ್ರಿಕ್ತರಾಗುವುದು ಪೋಷಕರಿಗೆ ಕಷ್ಟಕರವಾಗಬಹುದು.

ಕೆಲವೊಮ್ಮೆ, ಮಕ್ಕಳ ಕೋಪ ಪೋಷಕರನ್ನು ಕೋಪಗೊಳ್ಳುವಂತೆ ಮಾಡಬಹುದು, ವಿಶೇಷವಾಗಿ ಕೆಲವು ಮಕ್ಕಳಿಗೆ ಆಗಾಗ ಕೋಪ ಬರುವುದರಿಂದ ಮನಶ್ಶಾಸ್ತ್ರಜ್ಞರು, ಪೋಷಕರು ಏನು ಮಾಡಬಾರದು ಎಂಬುದರ ಬಗ್ಗೆ ಮೂರು ವಿಷಯಗಳನ್ನು ಹಂಚಿಕೊಂಡಿದ್ದು ಆ ಬಗ್ಗೆ ಇಲ್ಲಿದೆ ಮಾಹಿತಿ.

ಮಕ್ಕಳನ್ನು ಅವರ ಕೋಣೆಗೆ ಕಳುಹಿಸಬಾರದು:

ಮಕ್ಕಳು ಕೋಪಗೊಂಡಾಗ ನಾವು ಅದ್ಕಕಿಂತ ಹೆಚ್ಚು ಕೋಪ ಮಾಡಿಕೊಂಡು ಮಗುವನ್ನು ಕೋಣೆಗೆ ಹೋಗುವಂತೆ ಹೇಳಬಾರದು.ಮಕ್ಕಳು ಕೋಪ ಮಾಡಿಕೊಂಡಾಗ ಜಾಗರೂಕರಾಗಿರಬೇಕು. ಎಲ್ಲಿಯಾದರೂ ಮಕ್ಕಳ ಭಾವನೆಗಳನ್ನು ಏಕಾಂಗಿಯಾಗಿ ವ್ಯವಹರಿಸುವಂತೆ ಮಾಡಿದಲ್ಲಿ ಅವರ ಭಾವನೆಗಳು ತಮ್ಮ ಹೆತ್ತವರಿಗೆ ನಿಭಾಯಸಲು ಸಾಧ್ಯವಿಲ್ಲ ಅಂದುಕೊಳ್ಳುತ್ತಾರೆ. ಇದರಿಂದ ಅವರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಹಾಗಾಗಿ ಕೋಪ ಬಂದ ಮಕ್ಕಳನ್ನು ನೀವೇ ನಿಭಾಯಿಸಿ.

ಇದನ್ನೂ ಓದಿ: ಪ್ರತಿದಿನ ಬಿಂದಿ ಧರಿಸುವುದರ ಹಿಂದಿರುವ ವೈಜ್ಞಾನಿಕ ಕಾರಣ ನಿಮಗೆ ಗೊತ್ತಾ? ಚರ್ಮವನ್ನು ಸುಂದರವಾಗಿರಿಸಲು ಸಹಾಯ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು:

ಏನೇ ಇರಲಿ, ಮಕ್ಕಳ ಕೋಪವನ್ನು ಹೃದಯಕ್ಕೆ ತೆಗೆದುಕೊಳ್ಳಬಾರದು. ಕೆಟ್ಟದಾಗಿ ಭಾವಿಸಬಾರದು. ಬದಲಾಗಿ ಮಗುವು ಆಗಾಗ್ಗೆ ಕೋಪಗೊಳ್ಳಲು ಆಳವಾಗಿ ಬೇರೂರಿರುವ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು ಮತ್ತು ಅದನ್ನು ಒಳ್ಳೆ ರೀತಿಯಲ್ಲಿ ಪರಿಹರಿಸಬೇಕು. ಕೆಲವೊಮ್ಮೆ ಪೋಷಕರು ಸೃಷ್ಟಿಸಿಟ್ಟ ಕಟ್ಟಳೆಗಳಿಂದ ಮಕ್ಕಳಿಗೆ ನಿರಾಶೆ, ಅಸಮಾಧಾನ ಅನುಭವಿಸಬಹುದು ಆದರೆ ಅದು ಅವರ ಬೆಳವಣಿಗೆ ಮತ್ತು ತಿಳುವಳಿಕೆಯ ಒಂದು ಭಾಗವಾಗಿದೆ.

ಕೋಪ ತಡೆಗಟ್ಟುವುದು:

ಕೋಪ ಮಾಡಿಕೊಂಡರೆ ಕೇಳಿದ್ದೆಲ್ಲಾ ಸಿಗುತ್ತದೆ ಎಂಬ ಭಾವನೆ ಮಕ್ಕಳಲ್ಲಿ ಬರಬಾರದು. ಹಾಗೆಂದು ಅವರಿಗೆ ಬೇಕಾದುದನ್ನು ಒದಗಿಸದೆಯೇ ಇರಲು ಬಾರದು ಯಾವುದು ಸರಿ ಎಂದು ನಿರ್ಧರಿಸಿ ಮಕ್ಕಳಲ್ಲಿ ಕೋಪ ಕಡಿಮೆ ಮಾಡಬೇಕು. ವಯಸ್ಕರು ಕೋಪ ಮಾಡಿಕೊಂಡು ಮಕ್ಕಳಿಗೆ ಗದರುವ ಬದಲು ಅವರ ಭಾವನೆಗಳಿಗೆ ಬೆಲೆ ಕೊಟ್ಟು. ಕೋಪದಿಂದ ಆಗುವ ತೊಂದರೆ ತಿಳಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್