AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Emotional Stress: ನಿಮ್ಮ ಒತ್ತಡವು ಹೊಟ್ಟೆ, ಬೆನ್ನು, ಕಣ್ಣಿನ ಸಮಸ್ಯೆಗಳನ್ನು ಉಂಟು ಮಾಡಬಹುದು, ಎಚ್ಚರ

ನಿಮ್ಮ ಭಾವನೆಗಳು ಅಥವಾ ನಿಮ್ಮ ಮಾನಸಿಕ ಸ್ಥಿತಿ ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ನೀವು ಆಲೋಚಿಸುತ್ತಿರಬೇಕಲ್ಲವೇ?. ಹೌದು ನಿಮ್ಮ ಒತ್ತಡ(Stress) ಮತ್ತು ನಿಮ್ಮ ಆರೋಗ್ಯ ಎರಡಕ್ಕೂ ಸಂಬಂಧವಿದೆ.

Emotional Stress: ನಿಮ್ಮ ಒತ್ತಡವು ಹೊಟ್ಟೆ, ಬೆನ್ನು, ಕಣ್ಣಿನ ಸಮಸ್ಯೆಗಳನ್ನು ಉಂಟು ಮಾಡಬಹುದು, ಎಚ್ಚರ
ಒತ್ತಡImage Credit source: Talkspace
ನಯನಾ ರಾಜೀವ್
|

Updated on: Apr 21, 2023 | 2:25 PM

Share

ನಿಮ್ಮ ಭಾವನೆಗಳು ಅಥವಾ ನಿಮ್ಮ ಮಾನಸಿಕ ಸ್ಥಿತಿ ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ನೀವು ಆಲೋಚಿಸುತ್ತಿರಬೇಕಲ್ಲವೇ?. ಹೌದು ನಿಮ್ಮ ಒತ್ತಡ(Stress) ಮತ್ತು ನಿಮ್ಮ ಆರೋಗ್ಯ ಎರಡಕ್ಕೂ ಸಂಬಂಧವಿದೆ. ಪ್ರಪಂಚದಾದ್ಯಂತ 100 ದಶಲಕ್ಷಕ್ಕೂ ಹೆಚ್ಚು ಜನರು ಭಾವನಾತ್ಮಕ ಒತ್ತಡಕ್ಕೆ ಬಲಿಯಾಗಿದ್ದಾರೆ. ಒತ್ತಡವು ಯಾವುದೇ ವ್ಯಕ್ತಿಯಲ್ಲಿ ಕೋಪ, ಒಂಟಿತನ ಮತ್ತು ಆತಂಕದ ಸಮಸ್ಯೆಯನ್ನು ಹೆಚ್ಚಿಸುವುದಲ್ಲದೆ, ಇದು ಅನೇಕ ದೈಹಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇವುಗಳಲ್ಲಿ ಸಾಮಾನ್ಯವಾದವು ದೇಹದ ನೋವು. ಇದು ತಲೆಯಲ್ಲಿ ಮಾತ್ರವಲ್ಲ, ಸೊಂಟ, ಕೈ ಮತ್ತು ಪಾದಗಳಲ್ಲಿಯೂ ಇರಬಹುದು. ಭಾವನಾತ್ಮಕ ಒತ್ತಡವು ಸ್ನಾಯು ನೋವನ್ನು ಹೇಗೆ ಉಂಟುಮಾಡುತ್ತದೆ ಎಂಬುದರ ಕುರಿತೂ ಇಲ್ಲಿ ಮಾಹಿತಿ ನೀಡಲಾಗಿದೆ.

ಭಾವನಾತ್ಮಕ ಒತ್ತಡದ ಬಗ್ಗೆ ತಜ್ಞರು ಏನು ಹೇಳುತ್ತಾರೆ ಮಾನಸಿಕ ಆರೋಗ್ಯ ಸಮಸ್ಯೆಗಳು ವಿವಿಧ ರೀತಿಯದ್ದಾಗಿರಬಹುದು. ಆದರೆ ಇವೆಲ್ಲವೂ ನಿಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ.

ಭಾವನಾತ್ಮಕ ಒತ್ತಡದಿಂದಾಗಿ, ಯಾವುದೇ ವ್ಯಕ್ತಿಯು ಬೆನ್ನು ನೋವು, ಅತಿಯಾದ ಆಯಾಸ, ಸ್ನಾಯು ಸೆಳೆತ, ತಲೆನೋವು, ಕಣ್ಣಿನ ಸಮಸ್ಯೆಗಳಿಂದ ಪ್ರಭಾವಿತರಾಗಬಹುದು. ದೇಹದ ವಿವಿಧ ಭಾಗಗಳಲ್ಲಿ ಈ ನೋವು ಕಾಣಿಸಿಕೊಳ್ಳಲು ಕಾರಣ ಏನು ಎಂದು ಸಾಮಾನ್ಯವಾಗಿ ಜನರಿಗೆ ಅರ್ಥವಾಗುವುದಿಲ್ಲ. ಆದರೆ ಅವರು ಮನೋವೈದ್ಯರನ್ನು ಸಂಪರ್ಕಿಸಿದಾಗ, ಇದಕ್ಕೆಲ್ಲಾ ಕಾರಣ ಒತ್ತಡ ಎಂದು ಅವರು ಹೇಳುತ್ತಾರೆ. ಭಾವನಾತ್ಮಕ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ

ತಲೆ ಮತ್ತು ಹುಬ್ಬುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು ಕಚೇರಿ, ಮನೆ ಮತ್ತು ವೈಯಕ್ತಿಕ ಕೆಲಸದ ಹೊರೆಯಿಂದಾಗಿ ವ್ಯಕ್ತಿಯು ಅಸಮಾಧಾನಗೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ, ಯಾರಾದರೂ ಒಳಗಾದಾಗ ತಲೆನೋವು ಹೆಚ್ಚಾಗಬಹುದು, ತಲೆನೋವು ಎಷ್ಟು ತೀವ್ರವಾಗಿರುತ್ತದೆ ಎಂದರೆ ಯಾರೋ ಮೆದುಳಿಗೆ ಸೂಜಿ ಚುಚ್ಚುತ್ತಿರುವಂತೆ ಭಾಸವಾಗುತ್ತದೆ. ತಲೆನೋವು ಹೆಚ್ಚಾದಾಗ ಹುಬ್ಬುಗಳ ಬಳಿ ಇರುವ ಪ್ರದೇಶದಲ್ಲಿ ನೋವುಂಟಾಗುತ್ತದೆ.

ಮತ್ತಷ್ಟು ಓದಿ: ಆಯಾಸದ ನಂತರ ದೇಹದ ಶಕ್ತಿಯನ್ನು ಮರಳಿ ಪಡೆಯಲು ಈ ಸಿಂಪಲ್​​ ಟಿಪ್ಸ್​​​ ಫಾಲೋ ಮಾಡಿ

ಅನಗತ್ಯವಾಗಿ ಆಯಾಸವಾಗಬಹುದು ಕೆಲಸದಿಂದ ಸುಸ್ತು ಹೆಚ್ಚಾಗುತ್ತದೆ. ದಿನನಿತ್ಯದ ದೈಹಿಕ ಆಯಾಸದಿಂದ ಯಾವುದೇ ತೊಂದರೆ ಇಲ್ಲ, ನೀವು ಸ್ವಲ್ಪ ಸಮಯ ವಿಶ್ರಾಂತಿ ಪಡೆದರೆ, ಎಲ್ಲವೂ ಕಡಿಮೆಯಾಗುತ್ತದೆ. ಆದರೆ ಯಾವುದೋ ಒಂದು ವಿಷಯದ ಬಗ್ಗೆ ಆಲೋಚನೆ ಮಾಡುತ್ತಾ ಒತ್ತಡವನ್ನು ಅನುಭವಿಸುವುದು ಇದೆಯಲ್ಲಾ ಆಗ ಯಾವುದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ, ಎಂಟರಿಂದ ಒಂಬತ್ತು ಗಂಟೆಗಳ ಕಾಲ ಮಲಗಿದ ನಂತರ ಕೂಡ ಸುಸ್ತು ಕಡಿಮೆಯಾಗುವುದೇ ಇಲ್ಲ. ಸಣ್ಣ ಸಣ್ಣ ವಿಚಾರಕ್ಕೂ ಕೋಪ. ಪ್ರತಿದಿನ ವ್ಯಾಯಾಮ ಮಾಡುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಹೊಟ್ಟೆ ಉಬ್ಬುವುದು ಮತ್ತು ಹೊಟ್ಟೆ ನೋವು ಸಹ ಸಂಭವಿಸಬಹುದು ಹೊಟ್ಟೆಯಲ್ಲಿ ಗ್ಯಾಸ್ ಉಂಟಾದಾಗ ಮಾತ್ರ ಹೊಟ್ಟೆ ನೋವಿನ ಸಮಸ್ಯೆ ಬರುತ್ತದೆಯೇ? ಯಾರಾದರೂ ಈ ರೀತಿ ಯೋಚಿಸಿದರೆ ಅದು ತಪ್ಪು, ಹೊಟ್ಟೆ ನೋವು ಅಥವಾ ಮುಟ್ಟಿನ ಸಮಯದಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುವುದು ಒತ್ತಡದ ಲಕ್ಷಣವಾಗಿದೆ. ಇದನ್ನು ನಿರ್ಲಕ್ಷಿಸಬೇಡಿ. ಹೊಟ್ಟೆ ನೋವಿನ ಸಮಸ್ಯೆ ಸಾಮಾನ್ಯವಾಗಿದೆ, ಆದರೆ ಆಗಾಗ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಮತ್ತೆ ಮತ್ತೆ ಹೊಟ್ಟೆ ನೋವಿನ ಸಮಸ್ಯೆ ಉಂಟಾದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು

ಬೆನ್ನು ನೋವಿನ ಸಮಸ್ಯೆ ಉದ್ಭವವಾಗಬಹುದು ಬೆನ್ನು ನೋವು ಮತ್ತು ಭಾವನಾತ್ಮಕ ಒತ್ತಡದ ನಡುವೆ ನೇರವಾದ ಸಂಬಂಧವಿದೆ ಎಂದು ಡಾ ಅಲೋಕ್ ಹೇಳುತ್ತಾರೆ. ಒತ್ತಡದ ಸಮಸ್ಯೆಯಲ್ಲಿ, ಅದರ ಪರಿಣಾಮವು ದೇಹದ ವಿವಿಧ ಭಾಗಗಳ ಮೇಲಾಗುತ್ತದೆ, ಆದರೆ ಬೆನ್ನುನೋವಿಗೆ ಒತ್ತಡದೊಂದಿಗೆ ನೇರ ಸಂಪರ್ಕವಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.

ಕಣ್ಣುಗಳಿಗೂ ಹಾನಿ ಒತ್ತಡದಿಂದಾಗಿ, ಜನರು ದೇಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇವುಗಳಲ್ಲಿ ಒಂದು ಕಣ್ಣಿನ ನೋವು, ಈ ಸಮಯದಲ್ಲಿ ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು, ಬೆಳಕಿನಲ್ಲಿಯೂ ವ್ಯತ್ಯಾಸ ಗೋಚರಿಸಲಿದೆ. ಈ ಸಮಸ್ಯೆಯ ಸಮಯದಲ್ಲಿ ಜನರು ಬಣ್ಣವನ್ನು ಗುರುತಿಸುವುದು ಕೂಡ ಕಷ್ಟವಾಗುತ್ತದೆ.

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯ ಸಂದರ್ಭದಲ್ಲಿ ಮನೋವೈದ್ಯರನ್ನು ಸಂಪರ್ಕಿಸಬೇಕು. ಆಗ ಒತ್ತಡವು ಖಿನ್ನತೆಯಂತಹ ಗಂಭೀರ ಸ್ಥಿತಿಯನ್ನು ತಲುಪುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು