ದಿನವಿಡೀ ಬಿಡುವಿಲ್ಲದ ಕೆಲಸದ ಕಾರಣದಿಂದಾಗಿ ಹೆಚ್ಚಿನ ಜನರು ಸುಸ್ತಾಗಿ ಆಯಾಸವನ್ನು ಅನುಭವಿಸುವುದು ಸಾಮಾನ್ಯ. ಇದು ಮಾತ್ರವಲ್ಲದೆ ಪೌಷ್ಟಿಕಾಂಶದ ಕೊರತೆ ಮತ್ತು ನಿರ್ಜಲೀಕರಣದ ಕಾರಣದಿಂದಾಗಿಯೂ ದೇಹವು ದಣಿದು, ಅದು ಕೆಲಸ ಮಾಡುವ ಉತ್ಸಾಹವನ್ನು ಕಸಿದುಕೊಳ್ಳುತ್ತದೆ. ನೀರಿನೊಂದಿಗೆ ದೇಹದಲ್ಲಿ ಅಗತ್ಯವಾದ ಖನಿಜ ಮತ್ತು ಜೀವಸತ್ವಗಳ ಕೊರತೆಯಿಂದಾಗಿ ನಮ್ಮ ದೇಹದ ಶಕ್ತಿಯ ಮಟ್ಟವು ತಕ್ಷಣವೇ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಮೆದುಳು ಸಹ ಸಾಕಷ್ಟು ಶಕ್ತಿಯನ್ನು ಪಡೆಯುವುದಿಲ್ಲ, ಇದರಿಂದಾಗಿ ಮಾನಸಿಕ ಆಯಾಸವು ಸಹ ಉಂಟಾಗುತ್ತದೆ. ಹಾಗಿದ್ದರೆ ಈ ಆಯಾಸವನ್ನು ಹೋಗಲಾಡಿಸಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಈ ಕೆಲವೊಂದು ನೈಸರ್ಗಿಕ ಪಾನೀಯಗಳ ಸೇವನೆಯಿಂದ ಆಯಾಸವನ್ನು ಹೋಗಲಾಡಿಸಿ, ದಿನವಿಡೀ ಉಲ್ಲಾಸದಿಂದಿರಿ.
ಕಬ್ಬಿನ ರಸ:
ಕಬ್ಬಿಣ ರಸವು ಪ್ರೋಟೀನ್, ಕಬ್ಬಿಣಾಂಶ, ಪೊಟ್ಯಾಸಿಯಂ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಇದು ಆಯಾಸವನ್ನು ಹೋಗಲಾಡಿಸುವುದರ ಜೊತೆಗೆ ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸುತ್ತದೆ. ಅಲ್ಲದೆ ಇದು ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸುತ್ತದೆ.
ಗ್ರೀನ್ ಟೀ:
ಗ್ರೀನ್ ಟೀ ಬೊಜ್ಜು ಕಡಿಮೆ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಇದು ತ್ವರಿತ ಶಕ್ತಿಯನ್ನು ನೀಡಲು ಕೂಡ ಸಹಾಯ ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ಗಳು ಮತ್ತು ಕೆಫೀನ್ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ನೀವು ತಾಜಾತನದ ಭಾವನೆ ಯನ್ನು ಅನುಭವಿಸಬಹುದು.
ಎಳನೀರು:
ಈ ನೈಸರ್ಗಿಕ ಆರೋಗ್ಯಕರ ಪಾನೀಯವು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಎಳನೀರು ನಮ್ಮ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದು ತ್ವರಿತ ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಜಲಸಂಚಯನವನ್ನು ಒದಗಿಸುವುದರ ಜೊತೆಗೆ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ವಿಟಮಿನ್ ಗಳು ಮತ್ತು ಖನಿಜಾಂಶಗಳ ಕೊರೆತಯಿಂದ ಉಂಟಾಗುವ ಆಲಸ್ಯವನ್ನು ಹೋಗಲಾಡಿಸಲು ಎಳನೀರು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ನಿಮ್ಮ ಈ ಆಹಾರಕ್ರಮಗಳು ಕೂಡ ಕಂಕುಳಲ್ಲಿನ ಕೆಟ್ಟ ವಾಸನೆಗೆ ಕಾರಣವಾಗಬಹುದು!
ನಿಂಬೆ ಪಾನಕ:
ವಿಟಮಿನ್ ಸಿ ಜೀವಸತ್ವಗಳಲ್ಲಿ ಸಮೃದ್ಧವಾಗಿರುವ ನಿಂಬೆ ಪಾನಕವು ತ್ವರಿತ ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಹೆಚ್ಚಿನವರು ತೂಕ ಕಡಿಮೆ ಮಾಡಿಕೊಳ್ಳುವ ಪ್ರಯಾಣದಲ್ಲಿ ಪ್ರತಿದಿನ ಬೆಳಗ್ಗೆ ನಿಂಬೆ ಪಾನಕವನ್ನು ಸೇವಿಸುತ್ತಾರೆ. ಅಲ್ಲದೆ ಇದರ ಸೇವೆಯು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಪಾನೀಯಕ್ಕೆ ಸ್ವಲ್ಪ ಸಕ್ಕರೆ ಮತ್ತು ಉಪ್ಪನ್ನು ಬೆರೆಸಿ ಕುಡಿಯಿರಿ, ಇದು ದೇಹದಲ್ಲಿ ಕಳೆದುಹೋದ ಖನಿಜಗಳನ್ನು ತುಂಬಲು ಸಹಕಾರಿಯಾಗಿದೆ.
ಮನೆಯಲ್ಲಿಯೇ ತಯಾರಿಸಿದ ಹರ್ಬಲ್ ಟೀ:
ಮನೆಯಲ್ಲಿಯೇ ತಯಾರಿಸಿದ ಗಿಡಮೂಲಿಕೆ ಚಹಾವು ನಿಮ್ಮ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಶುಂಠಿ, ಏಲಕ್ಕಿ, ಅರಶಿನ ಮುಂತಾದ ಗಿಡಮೂಲಿಕೆಗಳನ್ನು ಬೆರೆಸಿರುವುದರಿಂದ ಇವು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: