Success Story: ಹಳೇ ಶೂಸ್ ಮಾರಿ ಕೋಟಿ-ಕೋಟಿ ಗಳಿಸಿದ 23 ವರ್ಷದ ಯುವಕ!
ವೇದಾಂತ ಲಂಬಾ ಅವರ ಕಂಪನಿಯು ಈಗ ಸ್ನೀಕರ್ಸ್, ಟಿ-ಶರ್ಟ್‌ಗಳು ಮತ್ತು ಹೂಡೀಸ್ ಸೇರಿದಂತೆ 3000 ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಮುಂಬೈ ಮೂಲದ ಈ ಸ್ಟಾರ್ಟಪ್‌ನ ಮಾಸಿಕ ಆದಾಯ 5 ಕೋಟಿ ರೂ. ದಾಟಿದೆ.
‘ಮನಸ್ಸಿದ್ದರೆ ಮಾರ್ಗ’ ಎಂಬ ಮಾತು ಸುಳ್ಳಲ್ಲ. ವೇದಾಂತ ಲಂಬಾ (Vedanta Lamba) ಎಂಬ ಯುವಕನೊಬ್ಬ ಓದಲು ಇಷ್ಟವಿಲ್ಲದೆ ಅರ್ಧದಲ್ಲೇ ಕಾಲೇಜು ಬಿಟ್ಟಿದ್ದರು. ಆ ಬಳಿಕ 2017ರಲ್ಲಿ ಲೈಫ್ಸ್ಟೈಲ್ನ ಯೂಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭಿಸಿದರು. ಸುಮ್ಮನೆ ಟೈಂಪಾಸ್ಗೆಂದು ಯೂಟ್ಯೂಬ್ ಚಾನೆಲ್ ಮಾಡಿದ್ದ ಅವರು ನಂತರ ಆನ್ಲೈನಲ್ಲೇ ಸ್ನೀಕರ್ಸ್ ಮರುಮಾರಾಟ ಮಾಡುವ ಕೆಲಸ ಶುರು ಮಾಡಿದರು. 23 ವರ್ಷದ ಈ ಯುವಕ 100 ಕೋಟಿ ರೂ. ಮೌಲ್ಯದ ಸ್ನೀಕರ್ಸ್ ಮಾರಿ 24 ಕೋಟಿ ರೂ. ಹಣ ಸಂಪಾದನೆ ಮಾಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.
ಮೇನ್‌ಸ್ಟ್ರೀಟ್ ಮಾರ್ಕೆಟ್‌ಪ್ಲೇಸ್ (Mainstreet Marketplace) ಎಂಬ ಆನ್‌ಲೈನ್ ಸ್ನೀಕರ್ ಶಾಪ್ ಆರಂಭಿಸಿದ ವೇದಾಂತ ಇದೀಗ ಕೋಟ್ಯಧಿಪತಿಯಾಗಿದ್ದಾರೆ. ಕೇವಲ 23 ವರ್ಷದಲ್ಲೇ ಯಶಸ್ವಿ ಉದ್ಯಮಿಯಾಗಿರುವ ವೇದಾಂತ ಅವರಿಗೆ ರಣಬೀರ್ ಕಪೂರ್, ಕರಣ್ ಜೋಹರ್ ಸೇರಿದಂತೆ ಅನೇಕ ಸೆಲೆಬ್ರಿಟಿ ಗ್ರಾಹಕರಿದ್ದಾರೆ.
ವೇದಾಂತ ಲಂಬಾ ಅವರ ಕಂಪನಿಯು ಈಗ ಸ್ನೀಕರ್ಸ್, ಟಿ-ಶರ್ಟ್‌ಗಳು ಮತ್ತು ಹೂಡೀಸ್ ಸೇರಿದಂತೆ 3000 ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಮುಂಬೈ ಮೂಲದ ಈ ಸ್ಟಾರ್ಟಪ್‌ನ ಮಾಸಿಕ ಆದಾಯ 5 ಕೋಟಿ ರೂ. ದಾಟಿದೆ. ರಣಬೀರ್ ಕಪೂರ್, ರಣವೀರ್ ಸಿಂಗ್ ಮತ್ತು ಕರಣ್ ಜೋಹರ್ ಅವರಂತಹ ಸೆಲೆಬ್ರಿಟಿಗಳು ತಮ್ಮ ಗ್ರಾಹಕರಾಗಿದ್ದರು ಎಂದು ವೇದಾಂತ ಲಂಬಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಈ ಕಂಪನಿಯು ಮುಂಬೈ, ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಇಲ್ಲಿಯವರೆಗೆ 50,000 ಸ್ನೀಕರ್‌ಗಳನ್ನು ಮಾರಾಟ ಮಾಡಿದೆ. ಈ ಕಂಪನಿಯು ಮುಂಬೈನಲ್ಲಿ ಎರಡು ಅಂಗಡಿಗಳನ್ನು ಹೊಂದಿದೆ. ಹಾಗೇ, ದೆಹಲಿಯಲ್ಲೂ ಒಂದು ಮಳಿಗೆಯನ್ನು ಹೊಂದಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:55 pm, Fri, 1 September 23