ಋತುಮತಿಯಾಗುವುದು ಹೆಣ್ಣುಮಕ್ಕಳಿಗೆ ದೇವರು ಕೊಟ್ಟಿರುವ ವರ. ಯಾವಾಗ ಋತುಮತಿಯಾಗುತ್ತಾರೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆಹಾರ, ವಾತಾವರಣ, ಜೀವನ ಕ್ರಮ ಇದೆಲ್ಲದರ ಪರಿಣಾಮ ನಿರೀಕ್ಷೆಗಿಂತ ಮುನ್ನವೇ ಹೆಣ್ಣುಮಕ್ಕಳು ಋತುಮತಿಯರಾಗುತ್ತಿದ್ದಾರೆ. ಋತುಮತಿಯಾದ ಬಳಿಕ ಹೆಣ್ಣುಮಕ್ಕಳು ಏನೇನು ಸವಾಲುಗಳನ್ನು ಎದುರಿಸುತ್ತಾರೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಎಂತಃ ಪ್ರಶ್ನೆಗಳು ಕಾಡಬಹುದು
ತನ್ನ ದೈಹಿಕ ಬದಲಾವಣೆ ಬಗ್ಗೆ ಆಕೆಗೆ ಹಲವಾರು ಸಂದೇಹಗಳಿರಬಹುದು. ‘ಹೊಟ್ಟೆಯಲ್ಲೆಲ್ಲೋ ಗಾಯ ಆಗಿ ರಕ್ತ ಬರುತ್ತಾ? ಪೀರಿಯೆಡ್ಸ್ ಆದಾಗ ತುಂಬ ನೋವಾಗುತ್ತಾ?ಹುಡುಗರಿಗೂ ಹೀಗಾಗುತ್ತಾ?’, ಅದು ಯಾವಾಗ ನಿಲ್ಲುತ್ತದೆ? ಸ್ನೇಹಿತರೊಂದಿಗೆ ಈ ಕುರಿತು ಚರ್ಚಿಸಬಹುದೇ? ನಾನು ಮುಟ್ಟಾಗುವಾಗ ಎಲ್ಲಾ ಆಹಾರವನ್ನು ತಿನ್ನಬಹುದೇ? ಹೀಗೆ ಹಲವಾರು ಪ್ರಶ್ನೆಗಳು ಬರಬಹುದು. ಎಲ್ಲವನ್ನೂ ತಾಳ್ಮೆಯಿಂದ ಹೇಳಿ.
ವಿಪರೀತ ಹೊಟ್ಟೆನೋವು: ಕೆಲವು ಹೆಣ್ಣು ಮಕ್ಕಳಿಗೆ ಮುಟ್ಟಿನ ಸಂದರ್ಭದಲ್ಲಿ ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ, ಲೋ ಬಿಪಿ ಸಮಸ್ಯೆ, ತಲೆ ನೋವು, ಸುಸ್ತು ಇವೆಲ್ಲವೂ ಆಕೆಯನ್ನು ಕಾಡುತ್ತದೆ.
ಮಾನಸಿಕ ಸಮಸ್ಯೆ
ಅಟ್ರ್ಯಾಕ್ಷನ್: ಈ ಸಂದರ್ಭದಲ್ಲಿ ಬದಲಾಗುತ್ತಿರುವ ಹಾರ್ಮೋನ್ಗಳು ಮನಸ್ಸಿನಲ್ಲೂ ಕೆಲವು ಬದಲಾವಣೆಗಳನ್ನು ತರುತ್ತದೆ. ಪುರುಷರೊಂದಿಗೆ ಆಕರ್ಷಣೆ ಹೆಚ್ಚಾಗುತ್ತದೆ. 15-18 ವರ್ಷ ವಯಸ್ಸಿನವರೆಗೆ ಇಂತಹ ಆಕರ್ಷಣೆಗಳು ಹೆಚ್ಚಾಗಿ ಇರಲಿದ್ದು, ಪೋಷಕರು ಈ ಕುರಿತು ತಿಳಿ ಹೇಳುವ ಅಗತ್ಯವಿದೆ, ಏಕೆಂದರೆ ಈ ವಯಸ್ಸಿನಲ್ಲಿ ತಾವು ಮಾಡುತ್ತಿರುವುದು ತಪ್ಪೋ ಸರಿಯೋ ಎಂಬುದು ಮಕ್ಕಳಿಗೆ ಗೊತ್ತಿರುವುದಿಲ್ಲ, ಏಕಾಏಕಿ ತೆಗೆದುಕೊಂಡ ನಿರ್ಧಾರವು ಜೀವನಪರ್ಯಂತ ಪರಿತಪಿಸುವಂತೆ ಮಾಡಬಲ್ಲದು.
ಮುಟ್ಟಾಗುವುದಕ್ಕಿಂತ ಮುನ್ನವೇ ಕೆಲವು ಲಕ್ಷಣಗಳು ಗೋಚರಿಸಲಿವೆ
ಹುಡುಗಿಯೊಬ್ಬಳು ಪ್ರೌಢವಸ್ಥೆಗೆ ತಲುಪುವ ಪ್ರಕ್ರಿಯೆ ಎರಡು ವರ್ಷದವರೆಗೆ ಸಾಗುತ್ತದೆ. 8 ವರ್ಷದ ವಯಸ್ಸಿನಲ್ಲಿಯೇ ಕೆಲ ಮಕ್ಕಳು ಈ ಹಂತಕ್ಕೆ ಬರುತ್ತಾರೆ. ಈ ಅವಧಿಯಲ್ಲಿ ಮಕ್ಕಳ ಸ್ತನಗಾತ್ರದಲ್ಲಿ ಬೆಳವಣಿಗೆಯಾಗುತ್ತದೆ. ಹುಡುಗಿಯೊಬ್ಬಳು ಪ್ರೌಢವಸ್ಥೆಗೆ ತಲುಪುವ ಪ್ರಕ್ರಿಯೆ ಎರಡು ವರ್ಷದವರೆಗೆ ಸಾಗುತ್ತದೆ. 8 ವರ್ಷದ ವಯಸ್ಸಿನಲ್ಲಿಯೇ ಕೆಲ ಮಕ್ಕಳು ಈ ಹಂತಕ್ಕೆ ತೆರೆದುಕೊಳ್ಳುತ್ತಾರೆ.
ಈ ಅವಧಿಯಲ್ಲಿ ಮಕ್ಕಳ ಸ್ತನಗಾತ್ರದಲ್ಲಿ ಬೆಳವಣಿಗೆಯಾಗುತ್ತದೆ. ಸಾಮಾನ್ಯವಾಗಿ 11-12ನೇ ವಯಸ್ಸಿನಲ್ಲಿ ಈ ಪ್ರಕ್ರಿಯೆ ಆರಂಭವಾಗುತ್ತದೆ. ಸ್ತನಗಾತ್ರದ ಬೆಳವಣಿಗೆ ಅವರು ಪ್ರೌಢವಸ್ಥೆಗೆ ತಲುಪುವ ಮೊದಲ ಲಕ್ಷಣ ಕೂಡ ಆಗಿದೆ.
ಸಾಮಾನ್ಯವಾಗಿ 11-12ನೇ ವಯಸ್ಸಿನಲ್ಲಿ ಈ ಪ್ರಕ್ರಿಯೆ ಆರಂಭವಾಗುತ್ತದೆ. ಸ್ತನಗಾತ್ರದ ಬೆಳವಣಿಗೆ ಅವರು ಪ್ರೌಢವಸ್ಥೆಗೆ ತಲುಪುವ ಮೊದಲ ಲಕ್ಷಣ ಕೂಡ ಆಗಿದೆ.
ಜಾಗೃತಿ ಕೊರತೆ: ಮುಟ್ಟಿನ ಸಮಯದಲ್ಲಾಗುವ ರಕ್ತಸ್ರಾವ, ಅದರ ನಂತರ ದೇಹದಲ್ಲಾಗುವ ಬದಲಾವಣೆಗಳು ಸಹಜವಾಗಿದ್ದರೂ ತಾಯಿಯಾದವಳು ಮಗಳ ಬಳಿ ಋತುಮತಿಯಾಗುವ ಮುನ್ನವೇ ಮುಂದಾಗುವ ಪರಿಣಾಮಗಳ ಬಗ್ಗೆ ತಿಳಿ ಹೇಳಿದ್ದರೆ ಅಷ್ಟು ಸಮಸ್ಯೆಯಾಗುವುದಿಲ್ಲ. ಇಲ್ಲವಾದಲ್ಲಿ ಆಕೆಗೆ ತಾಯಿಯೊಂದಿಗೆ ತನಗಾಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಇರಿಸುಮುರಿಸು ಉಂಟಾಗುತ್ತದೆ.
ಮಕ್ಕಳಲ್ಲಿ ಕೀಳರಿಮೆ ಬೆಳೆಯದಂತೆ ಎಚ್ಚರವಹಿಸಿ
ಸಾಮಾನ್ಯವಾಗಿ ಈ ಸಂಗತಿಯ ಬಗ್ಗೆ ಅವರಿಗೆ ಕೀಳರಿಮೆ ಬೆಳೆಯಬಹುದು. ಅನಗತ್ಯ ಗೊಂದಲ ಕಾಡಬಹುದು. ಹಾಗಾಗಿ ಅವರಿಗೆ ಪೀರಿಯಡ್ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಪ್ಯಾಡ್ ಬಳಸುವುದರ ಬಗ್ಗೆ ವಿವರಿಸಬೇಕು. ಯಾರಿಗೂ ಬರದ ಸಮಸ್ಯೆ ಅವಳಿಗೆ ಬಂದಿರುವುದಿಲ್ಲ. ಇದು ಅವಳೊಬ್ಬಳದೇ ಸಮಸ್ಯೆ ಅಲ್ಲ. ಪೀರಿಯಡ್ಸ್ ನಲ್ಲಿ ಎಲ್ಲರೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.
ಮುಟ್ಟು ಎನ್ನುವುದು ಮಹಿಳೆಯರಿಗೆ ಹಿಂಸೆಯ ಅನುಭವ ನೀಡುತ್ತದೆ. ನೋವು ಕಾಣಿಸಿಕೊಳ್ಳಬಹುದು, ರಕ್ತ ಬರಬಹುದು, ಎಲ್ಲಾ ಕಡೆ ತಿರುಗಾಡಬಹುದೇ, ಯಾವ ಬಗೆಯ ಬಟ್ಟೆ ಹಾಕಬೇಕು, ಯಾವ ಆಹಾರ ಸೇವಿಸಬೇಕು, ಸಮಸ್ಯೆಗಳ ಬಗ್ಗೆ ಯಾರಲ್ಲಿ ಹೇಳಬೇಕು, ಮುಂತಾದ ವಿಷಯಗಳ ಬಗ್ಗೆ ತಾಯಿ ಮೊದಲು ಮಾರ್ಗದರ್ಶನ ನೀಡಬೇಕು.