ದೇಹದ ಇತರೆ ಭಾಗಗಳಿಗೆ ಹೋಲಿಕೆ ಮಾಡಿದರೆ ಉಗುರಿನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಸುಲಭ. ಆದರೆ ನಿಮ್ಮ ಕೆಲವು ತಪ್ಪುಗಳು ಉಗುರಿನ ಆರೋಗ್ಯವನ್ನು ಹಾಳು ಮಾಡಬಹುದು.
ಆ ಆರು ತಪ್ಪುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ
ಉಗುರು ಕಚ್ಚುವುದು: ಉಗುರುಗಳು ಮನುಷ್ಯನ ಕೈಯಲ್ಲಿರುವ ಬೆರಳುಗಳಿಗೆ ರಕ್ಷಣಾ ಕವಚದಂತಿರುತ್ತದೆ. ಪುಟ್ಟ ಮಕ್ಕಳಿಗೆ ಉಗುರನ್ನು ಕಚ್ಚುವ ಅಭ್ಯಾಸವಿರುತ್ತದೆ. ಕೆಲವು ಮಂದಿ ದೊಡ್ಡವರಾದ ಮೇಲೂ ಈ ಅಭ್ಯಾಸ ಮುಂದುವರೆಸಿಕೊಂಡು ಬಂದಿರುತ್ತಾರೆ.
ಅಧ್ಯಯನಗಳು ಹೇಳುವ ಹಾಗೆ ಶೇಕಡ 40ರಷ್ಟು ಮಂದಿ ಉಗುರು ಕಚ್ಚುವ ಅಭ್ಯಾಸ ವನ್ನು ಹೊಂದಿರುತ್ತಾರೆ. ಎಲ್ಲರೂ ಸಾಮಾನ್ಯ ಅಭ್ಯಾಸ ವೆಂದು ಅಂದುಕೊಳ್ಳೋ ಈ ವರ್ತನೆಯಿಂದ ಆರೋಗ್ಯಕ್ಕೆ ಹೆಚ್ಚಿನ ಹಾನಿಯುಂಟಾಗುತ್ತದೆ.
ಉಗುರಿನಿಂದಲೇ ನೈಲ್ ಪಾಲಿಶ್ ತೆಗೆಯುವುದು: ನಿಮ್ಮ ಉಗುರಿಗೆ ಹಚ್ಚಿರುವ ನೈಲ್ ಪಾಲಿಶ್ ತೆಗೆಯಲು ರಿಮೂವರ್ ಇದ್ದರೂ ಕೂಡ ಉಗುರಿನಿಂದಲೇ ನೈಲ್ ಪಾಲಿಶ್ ತೆಗೆಯುವ ಅಭ್ಯಾಸವು ಉಗುರುಗಳಿಗೆ ಹಾನಿಯುಂಟು ಮಾಡುತ್ತದೆ.
ಉಗುರಿನ ಪಕ್ಕದಲ್ಲಿರುವ ಚರ್ಮವನ್ನು ಕತ್ತರಿಸುವುದು: ಕೆಲವೊಮ್ಮೆ ಉಗುರಿನ ಪಕ್ಕದಲ್ಲಿರುವ ಚರ್ಮವು ಜಿಡ್ಡುಗಟ್ಟಿದಂತೆ ಸ್ವಲ್ಪ ಗಟ್ಟಿಯಾಗಿರುತ್ತದೆ. ಆ ಚರ್ಮವನ್ನು ಕತ್ತರಿಸುವುದರಿಂದ ಉಗುರಿಗೆ ಹಾನಿಯುಂಟಾಗುತ್ತದೆ.
ಗುಣಮಟ್ಟದ ನೈಲ್ ಪಾಲಿಶ್ ಬಳಕೆ ಮಾಡದಿರುವುದು: ಗುಣಮಟ್ಟದ ನೈಲ್ ಪಾಲಿಶ್ ಬಳಕೆ ಮಾಡದಿದ್ದರೆ ನಿಮ್ಮ ಉಗುರುಗಳ ಆರೋಗ್ಯ ಹಾಳಾಗುತ್ತದೆ.
ಕೆಮಿಕಲ್ ಬಳಕೆ: ಕ್ಲೀನಿಂಗ್ ಸ್ಪ್ರೇಗಳು, ಟಾಯ್ಲೆಟ್ ಕ್ಲೀನರ್‌ಗಳು ಅಥವಾ ಡಿಶ್ ವಾಶ್‌ಗಳಂತಹ ರಾಸಾಯನಿಕಗಳೊಂದಿಗೆ ನೀವು ಕೆಲಸ ಮಾಡುವಾಗ, ಉಗುರು ಹಾನಿಯಾಗದಂತೆ ಉಳಿಸಲು ಯಾವಾಗಲೂ ಲ್ಯಾಟೆಕ್ಸ್ ಕೈಗವಸುಗಳನ್ನು ಬಳಸಿ. ರಾಸಾಯನಿಕ ಸ್ಪ್ರೇಗಳು ಅವುಗಳನ್ನು ತೆಳುವಾದ ಮತ್ತು ಹಾನಿಗೊಳಗಾಗುವಂತೆ ಮಾಡುತ್ತದೆ.
ಜಂಕ್ ಫುಡ್ಗಳನ್ನು ತಿನ್ನುವುದು: ನೀವು ಅನಾರೋಗ್ಯಕರ ಆಹಾರವನ್ನು ಸೇವಿಸಿದರೆ ಮತ್ತು ಸೋಡಾಗಳನ್ನು ಸೇವಿಸಿದರೆ ಅಥವಾ ಸಿಗರೇಟ್ ಸೇದಿದರೆ, ನಿಮ್ಮ ಉಗುರುಗಳು ಬಣ್ಣ ಬದಲಾಗಿ ಉಗುರುಗಳನ್ನು ಮತ್ತಷ್ಟು ಸೆನ್ಸಿಟೀವ್ ಆಗುತ್ತದೆ. ಉಗುರುಗಳ ಆರೋಗ್ಯ ಕಾಪಾಡಲು ಸಮತೋಲಿತ ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸಬೇಕಾಗುತ್ತದೆ. ಮದ್ಯ ಮತ್ತು ಧೂಮಪಾನದಿಂದ ದೂರವಿರಿ.