ನಾವುಗಳು ಚಿಕ್ಕವರಾಗಿದ್ದಾಗ ಸ್ನಾನ (Shower) ಮಾಡಲು ಸುತಾರಾಮ್ ಬೇಡ ಎಂದು ಹಠ ಮಾಡುತ್ತಿದ್ದೇವೆ. ಆದರೆ ದೊಡ್ಡವರಾಗುತ್ತಿದ್ದಂತೆ, ಒಂದು ದಿನಾನು ಸ್ನಾನ ಬಿಟ್ಟು ಇರುವುದಿಲ್ಲವೆಂದು ಹೇಳಿರುತ್ತೇವೆ. ಇನ್ನೂ ಕೆಲವರು ಮಾಡದಿದ್ದರು ಮಾಡಿದ್ದೇವೆಂದು ಹೇಳುತ್ತಾರೆ. ನಾವು ಫ್ರೆಶ್ ಆಗಿರಲು ಪ್ರತಿದಿನ ಸ್ನಾನ ಮಾಡುತ್ತೇವೆ. ಅನೇಕ ಜನರು ದಿನಕ್ಕೆ ಎರಡು ಬಾರಿ ಸ್ನಾನ ಮಾಡಲು ಇಷ್ಟಪಡುತ್ತಾರೆ. ಹಲವರು ಬೆಳ್ಳಿಗ್ಗೆ ಸ್ನಾನ ಮಾಡಿದರೆ, ಕೆಲವುರು ರಾತ್ರಿ ಸ್ನಾನ ಮಾಡಲು ಇಷ್ಟಪಡುತ್ತಾರೆ. ಹಾಗಾದರೆ ಸರಿಯಾದ ಸಮಯಕ್ಕೆ ಸ್ನಾನ ಮಾಡದಿರುವುದು ನಿಮಗೆ ಹಾನಿಕಾರಕ ಎಂದು ತಿಳಿದಿದೆಯೇ? ಇದಲ್ಲದೇ ಕೆಲವರು ಸ್ನಾನ ಮಾಡುವಾಗ ಕೆಲ ತಪ್ಪುಗಳನ್ನು ಸಹ ಮಾಡುತ್ತಾರೆ. ಚರ್ಮಕ್ಕೆ ಹಾನಿಯಾಗುವ ರೀತಿಯಲ್ಲಿ ತಮ್ಮ ತ್ವಚೆಯನ್ನು ಉಜ್ಜುತ್ತಾರೆ. ಸ್ನಾನ ಮಾಡುವಾಗ ನಾವು ಯಾವ ಕ್ರಮವನ್ನು ಅನುಸರಿಸಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಮುಂದೆ ಓದಿ.
ಮೇಕ್ಅಪ್ನ್ನು ತೊಳೆಯಬೇಡಿ:
ಸ್ನಾನ ಮಾಡುವಾಗ ಮೇಕಪ್ ತೆಗೆಯುವ ತಪ್ಪನ್ನು ಮಾಡಬಾರದು. ಸ್ನಾನ ಮಾಡುವಾಗ ನೀರಿನಿಂದ ಮೇಕಪ್ ತೆಗೆಯಲು ಪ್ರಯತ್ನಿಸಿದರೆ ಅದು ಸಂಪೂರ್ಣವಾಗಿ ಹೋಗುವುದಿಲ್ಲ. ಆದ್ದರಿಂದ, ಸ್ನಾನ ಮಾಡುವ ಕೆಲವು ಗಂಟೆಗಳ ಮೊದಲು, ಮೇಕ್ಅಪ್ನ್ನು ಕ್ಲೆನ್ಸರ್ನೊಂದಿಗೆ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಸ್ನಾನ ಮಾಡುವಾಗ ಫೋಮಿಂಗ್ ಜೆಲ್ನ್ನು ಅತಿಯಾಗಿ ಬಳಸಬೇಡಿ. ಏಕೆಂದರೆ ಫೋಮಿಂಗ್ ಜೆಲ್ನಿಂದಾಗಿ ತ್ವಚೆಯ ಮೇಲೆ ಶೇಖರಣೆಯಾದ ಕೊಳೆಯ ಪದರವು ಸ್ವಚ್ಛವಾಗದೆ ಚರ್ಮ ಒಣಗುತ್ತದೆ. ಬಿಸಿನೀರಿನೊಂದಿಗೆ ಸ್ನಾನ ಮಾಡುವುದು ನಮ್ಮ ಎಲ್ಲಾ ಆಯಾಸವನ್ನು ತೆಗೆದುಹಾಕುತ್ತದೆ. ಆದರೆ ಇದು ಚರ್ಮದ ಹಾನಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಅತೀ ಕಡಿಮೆ ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳ್ಳೆದು.
ಯಾವ ಸಮಯದಲ್ಲಿ ಸ್ನಾನ ಮಾಡಬೇಕು:
ನೀವು ಮಲಗುವ ಮುನ್ನ ಸ್ನಾನ ಮಾಡುತ್ತಿದ್ದರೆ, ಅದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ರಾತ್ರಿ ಮಲಗುವ ಮುನ್ನ ನಿಮ್ಮ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ಆದ್ದರಿಂದ ಮಲಗುವ ಸಮಯ ಮತ್ತು ಸ್ನಾನದ ಸಮಯದ ನಡುವೆ ಕನಿಷ್ಠ ಎರಡು ಗಂಟೆಗಳ ಅಂತರವನ್ನು ಕಾಯ್ದುಕೊಳ್ಳಬೇಕು. ಅಲ್ಲದೆ, ನೀವು ವ್ಯಾಯಾಮ ಅಥವಾ ತಾಲೀಮು ಮಾಡಿದ ಸಂದರ್ಭದಲ್ಲಿ ಆದಷ್ಟು ಸ್ನಾನವನ್ನು ತಪ್ಪಿಸಬೇಕು. ತಾಲೀಮು ನಂತರ ತಕ್ಷಣವೇ ಸ್ನಾನ ಮಾಡುವುದರಿಂದ ಮೆದುಳಿಗೆ ಹೋಗುವ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನೀವು ತಲೆತಿರುಗುವಿಕೆಯ ಲಕ್ಷಣಗಳನ್ನು ಅನುಭವಿಸಬೇಕಾಗುತ್ತದೆ.
ಈ ವಿಷಯಗಳನ್ನು ನೆನಪಿನಲ್ಲಿಡಿ:
ಗ್ಲಾಮರ್ ಮ್ಯಾಗಜೀನ್ ಪ್ರಕಾರ, ಸ್ನಾನ ಮಾಡುವಾಗ ಶೇವಿಂಗ್ ಮಾಡಬಾರದು. ಸುಮಾರು 5 ರಿಂದ 7 ನಿಮಿಷಗಳ ಕಾಲ ನೆನೆಸಿದ ನಂತರ ಚರ್ಮವು ಮೃದುವಾಗುತ್ತದೆ ಮತ್ತು ಶೇವಿಂಗ್ ಮಾಡಲು ಸುಲಭವಾಗುತ್ತದೆ. ಸ್ನಾನ ಮಾಡುವಾಗ ಅವಸರದಲ್ಲಿ ಚರ್ಮದ ಮೇಲೆ ರೇಜರ್ನ್ನು ಆಡಿಸಿದರೆ ಅದು ಚರ್ಮವನ್ನು ಕತ್ತರಿಸುತ್ತದೆ.