Personality Test: ಮೊಬೈಲ್ ಫೋನನ್ನು ಸೈಲೆಂಟ್ ಮೋಡ್‌ನಲ್ಲಿ ಇಡುವವರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ?
ನೀವು ಮೊಬೈಲ್ ಹೇಗೆ ಹಿಡಿದಿಟ್ಟುಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ನೀವು ಮೊಬೈಲ್ ಫೋನನ್ನು ಸೈಲೆಂಟ್ ಆಗಿ ಇಡುವವರೇ ಎಂಬುದರ ಆಧಾರದ ಮೇಲೂ ನಿಮ್ಮ ನಿಗೂಢ ಗುಣ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷಿಸಬಹುದು. ನಿಮಗೂ ಮೊಬೈಲ್ ಫೋನನ್ನು ಸೈಲೆಂಟ್ ಮೋಡ್‌ನಲ್ಲಿರುವ ಅಭ್ಯಾಸವಿದ್ದರೆ, ನಿಮ್ಮ ವ್ಯಕ್ತಿತ್ವ ಯಾವ ರೀತಿಯದ್ದು ಎಂಬುದನ್ನು ತಿಳಿಯಿರಿ.

ವ್ಯಕ್ತಿತ್ವ ಪರೀಕ್ಷೆಯ (Personality Test) ಹಲವು ವಿಧಾನಗಳಿವೆ. ಆಪ್ಟಿಕಲ್ ಇಲ್ಯೂಷನ್ ಚಿತ್ರ, ಮೂಗಿನ ಆಕಾರ, ಕಾಲ್ಬೆರಳಿನ ಆಕಾರ, ನಡಿಗೆ ಸೇರಿದಂತೆ ಹಲವು ವಿಧಾನಗಳ ಮೂಲಕ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತೆ ಎಂಬುದನ್ನು ತಿಳಿಯಬಹುದು. ಅಷ್ಟೇ ಯಾಕೆ ಮೊಬೈಲ್ ಹಿಡಿದುಕೊಳ್ಳುವ ರೀತಿಯಿಂದಲೂ ನಮ್ಮ ಗುಣ ಸ್ವಭಾವವನ್ನು ತಿಳಿಯಬಹುದು. ಅದೇ ರೀತಿ ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿಡುವ ಅಭ್ಯಾಸದಿಂದ ಕೂಡಾ ನಾವು ನಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಬಹುದಂತೆ. ನಿಮಗೂ ಸಹ ಯಾವಾಗ್ಲೂ ಮೊಬೈಲ್ ಫೋನ್ ಸೈಲೆಂಟ್ ಮೋಡ್‌ನಲ್ಲಿಡುವ ಅಭ್ಯಾಸ ಇದ್ಯಾ? ಹಾಗಿದ್ರೆ ನಿಮ್ಮ ವ್ಯಕ್ತಿತ್ವ ಯಾವ ರೀತಿ ಇರುತ್ತೆ ಎಂಬುದನ್ನು ಒಮ್ಮೆ ಪರೀಕ್ಷಿಸಿ.
ಮೊಬೈಲ್ ಫೋನನ್ನು ಸೈಲೆಂಟ್ ಮೋಡ್‌ನಲ್ಲಿಡುವವರ ವ್ಯಕ್ತಿತ್ವ ಹೇಗಿರುತ್ತೆ?
ಕೆಲವರು ಯಾವಾಗ್ಲೂ ನೋಡಿದ್ರೂ ತಮ್ಮ ಫೋನನ್ನು ಸೈಲೆಂಟ್ ಮೋಡ್‌ನಲ್ಲಿಯೇ ಇಟ್ಟಿರುತ್ತಾರೆ. ನೀವು ಸಹ ಈ ಗುಂಪಿಗೆ ಸೇರಿದವರಾ? ಹಾಗಿದ್ರೆ ನಿಮ್ಮ ವ್ಯಕ್ತಿತ್ವ ಯಾವ ರೀತಿ ಇರುತ್ತೆ ಎಂಬುದನ್ನು ತಿಳಿಯಿರಿ.
ಅಂತರ್ಮುಖಿ: ಮನೋವಿಜ್ಞಾನದ ಪ್ರಕಾರ ನೀವು ನಿಮ್ಮ ಫೋನನ್ನು ಯಾವಾಗಲೂ ಸೈಲೆಂಟ್ ಮೋಡ್‌ನಲ್ಲಿ ಇಟ್ಟರೆ, ನೀವು ಅಂತರ್ಮುಖಿಯೆಂದು ಅರ್ಥ. ನೀವು ಯಾರೊಂದಿಗೂ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ.
ಕೆಲಸಕ್ಕೆ ಪ್ರಾಮುಖ್ಯತೆ: ಮೊಬೈಲ್ ಫೋನನ್ನು ಸೈಲೆಂಟ್ ಮೋಡ್‌ನಲ್ಲಿ ಇಡುವವರು ಯಾವಾಗಲೂ ತಮ್ಮ ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರಂತೆ. ಮತ್ತು ಇವರು ಕೆಲಸದ ಸಮಯದಲ್ಲಿ ಫೋನನ್ನು ಬಳಸುವುದಿಲ್ಲ. ಜೊತೆಗೆ ಇವರು ಸಮಯ ಪ್ರಜ್ಞೆಯ ಜೊತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುವವರಾಗಿರುತ್ತಾರೆ.
ಭಾವನಾತ್ಮಕವಾಗಿ ಬಲಿಷ್ಠರಾಗಿರುತ್ತಾರೆ: ನೀವು ನಿಮ್ಮ ಫೋನನ್ನು ಸೈಲೆಂಟ್ ಮೋಡ್‌ನಲ್ಲಿ ಇಟ್ಟರೆ, ನೀವು ಭಾವನಾತ್ಮಕವಾಗಿ ತುಂಬಾ ಬಲಿಷ್ಠರು ಎಂದರ್ಥ. ನೀವು ಡಿಜಿಟಲ್ ಪ್ರಪಂಚಕ್ಕಿಂತ ನಿಜ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೀರಿ ಮತ್ತು ನೀವು ಮೊಬೈಲ್‌ನಲ್ಲಿ ಹೆಚ್ಚು ಹೊತ್ತು ಸಮಯ ಕಳೆಯಲು ಇಷ್ಟಪಡುವುದಿಲ್ಲ.
ಇದನ್ನೂ ಓದಿ: ಈ ಚಿತ್ರದಲ್ಲಿ ನೀವು ಆಯ್ಕೆ ಮಾಡುವ ಕಣ್ಣು ಬಹಿರಂಗಪಡಿಸುತ್ತೆ ನಿಮ್ಮ ಸೀಕ್ರೆಟ್ ವ್ಯಕ್ತಿತ್ವ
ಒಂಟಿಯಾರಿಗಲು ಇಷ್ಟ: ಮೊಬೈಲ್ ಫೋನ್ ಸೈಲೆಂಟ್ ಮೋಡ್‌ನಲ್ಲಿ ಇಡುವವರು ಯಾವಾಗಲೂ ಒಂಟಿಯಾಗಿರಲು ಇಷ್ಟಪಡುತ್ತಾರೆ. ಅವರು ತಮ್ಮದೇ ಜಗತ್ತಿನಲ್ಲಿ ಮುಳುಗಿ ಹೋಗಿರುತ್ತಾರೆ.
ಇದರ ಹೊರತಾಗಿ ಮೊಬೈಲ್ ನೋಟಿಫಿಕೇಶನ್ ಶಬ್ದ ಮಾನಸಿಕ ಒತ್ತಡ ಮತ್ತು ಕಿರಿಕಿರಿಯ ಭಾವನೆಯನ್ನು ಉಂಟು ಮಾಡುತ್ತದೆ ಎಂದು ಮಾನಸಿಕ ನೆಮ್ಮದಿಗಾಗಿ ಮೊಬೈಲ್ ಫೋನನ್ನು ಸೈಲೆಂಟ್ ಮೋಡ್‌ನಲ್ಲಿ ಇಡುತ್ತಾರಂತೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








