ಮನೆಯಲ್ಲಿ (house) ಗೆದ್ದಲು, ಇರುವೆ ಗೂಡು (termites) ಕಟ್ಟುತ್ತಿದೆಯಾ? ಮರದ ವಸ್ತುಗಳನ್ನು ನಾಶಮಾಡುತ್ತಿದೆಯಾ? ಅದರಲ್ಲೂ ಪ್ರಧಾನವಾಗಿ, ಬೇಸಿಗೆಯಲ್ಲಿ ವಿಶೇಷವಾಗಿ ಅವುಗಳ ಕಿರುಕುಳಕ್ಕೆ ಒಳಗಾಗುತ್ತಿದ್ದೀರಾ. ಈ ಸಮಸ್ಯೆಗಳನ್ನು ತೊಡೆದುಹಾಕಲು ಅನೇಕ ರೀತಿಯ ಸ್ಪ್ರೇಗಳು ಮತ್ತು ವೀಧಾನ ತಂತ್ರಗಳನ್ನು ಬಳಸಲಾಗುತ್ತದೆ. ಆದರೆ ಈಗ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲದೇ ಗೃಹೋಪಯೋಗಿ ವಸ್ತುಗಳನ್ನೇ ಬಳಸಿ (home remedies) ಗೆದ್ದಲು, ಇರುವೆ ಗೂಡಿನ ಕಪಿಮುಷ್ಠಿಯಿಂದ ಹೊರಬರುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಸಿಟ್ರಸ್ ಹಣ್ಣುಗಳು: ನಿಂಬೆ ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳ ವಾಸನೆಯು ಇರುವೆಗಳು ಮತ್ತು ಗೆದ್ದಲುಗಳನ್ನು ಹಿಮ್ಮೆಟ್ಟಿಸುತ್ತದೆ. ಈ ಹಣ್ಣಿನ ರಸವನ್ನು ಹಿಟ್ಟು ಮತ್ತು ನೀರಿನಲ್ಲಿ ಬೆರೆಸಿ ಗೆದ್ದಲು ಗೂಡು, ಇರುವೆ ಗೂಡಿನ ಮೇಲೆ ಸಿಂಪಡಿಸಬೇಕು.
ಎಣ್ಣೆ: ಪುದೀನಾ, ಲ್ಯಾವೆಂಡರ್, ಟೀ ಟ್ರೇ ಎಣ್ಣೆಯಂತಹ ಕೆಲವು ತೈಲಗಳು ನೈಸರ್ಗಿಕ ಕೀಟ ನಿವಾರಕಗಳಾಗಿ ಕಾರ್ಯನಿರ್ವಹಿಸುತ್ತವೆ. ಡಿಫ್ಯೂಸರ್ ಅಥವಾ ಸ್ಪ್ರೇ ಬಾಟಲಿಯಲ್ಲಿ ನೀರಿನೊಂದಿಗೆ ಕೆಲವು ಹನಿಗಳನ್ನು ಮಿಶ್ರಣ ಮಾಡಿ ಮತ್ತು ಬಾಗಿಲು, ಕಿಟಕಿಗಳು ಮತ್ತು ಇತರ ಪ್ರದೇಶಗಳ ಸುತ್ತಲೂ ಸಿಂಪಡಿಸಿ. ಅದು ಗೆದ್ದಲುಗಳನ್ನು ಹೋಗಲಾಡಿಸುತ್ತದೆ.
ವಿನೆಗರ್: ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ನೈಸರ್ಗಿಕ ಸ್ಪ್ರೇ ಆಗಿ ಬಳಸಬಹುದು. ವಿನೆಗರ್ನ ಬಲವಾದ ವಾಸನೆಯು ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ.
ಬೆಳ್ಳುಳ್ಳಿ: ಬೆಳ್ಳುಳ್ಳಿಯ ವಾಸನೆಯು ಗೆದ್ದಲು, ಸೊಳ್ಳೆಗಳು, ಇರುವೆಗಳು ಮತ್ತು ಜಿರಳೆಗಳಂತಹ ಅನೇಕ ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ. ಅದಕ್ಕಾಗಿ ಸ್ವಲ್ಪ ಬೆಳ್ಳುಳ್ಳಿ ಮತ್ತು ಲವಂಗವನ್ನು ನುಜ್ಜುಗುಜ್ಜು ಮಾಡಿ ಮತ್ತು ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಗೆದ್ದಲು ಮತ್ತು ಇತರ ಕೀಟಗಳ ಮೇಲೆ ಸಿಂಪಡಿಸಿ.
ದಾಲ್ಚಿನ್ನಿ: ದಾಲ್ಚಿನ್ನಿ ಪುಡಿಯನ್ನು ಕೀಟಗಳು ಅಡಗಿಕೊಳ್ಳುವ ಸ್ಥಳಗಳ ಸುತ್ತಲೂ ಸಿಂಪಡಿಸಬಹುದು. ದಾಲ್ಚಿನ್ನಿಯ ಬಲವಾದ ವಾಸನೆಯು ಇರುವೆಗಳು ಮತ್ತು ಇತರ ಕೀಟಗಳ ಹಾವಳಿಯನ್ನು ತಡೆಯುತ್ತದೆ.
Published On - 12:32 pm, Fri, 28 April 23