National Superhero Day 2023: ಇಂದು ರಾಷ್ಟ್ರೀಯ ಸೂಪರ್​ ಹೀರೋ ಡೇ, ನಿಮಗೆ ಒಳಿತು ಮಾಡಿದವರನ್ನು ಸ್ಮರಿಸಲು ಒಳ್ಳೆ ದಿನ

ಪ್ರತಿವರ್ಷ ಏಪ್ರಿಲ್​ 28 ರಂದು "ಸೂಪರ್​ ಹೀರೋ" ದಿನ ಎಂದು ಆಚರಿಸಲಾಗುತ್ತದೆ. ಅಷ್ಟಕ್ಕೂ ಈ ಸೂಪರ್​ ಹೀರೋ ದಿನ ಯಾಕೆ ಆಚರಿಸಲಾಗುತ್ತದೆ ಮತ್ತು ಯಾವಾಗ ಆರಂಭವಾಯಿತು ಇಲ್ಲಿದೆ ಓದಿ

National Superhero Day 2023: ಇಂದು ರಾಷ್ಟ್ರೀಯ ಸೂಪರ್​ ಹೀರೋ ಡೇ, ನಿಮಗೆ ಒಳಿತು ಮಾಡಿದವರನ್ನು ಸ್ಮರಿಸಲು ಒಳ್ಳೆ ದಿನ
ಸೂಪರ್ ಹೀರೋ ಡೇ
Follow us
ವಿವೇಕ ಬಿರಾದಾರ
|

Updated on:Apr 28, 2023 | 8:20 AM

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಬ್ಬರಾದರು ಸೂಪರ್​​ ಹೀರೊ ಇದ್ದೇ ಇರುತ್ತಾರೆ. ಅದು ಜನ್ಮ ನೀಡಿದ ತಂದೆಯಾಗಿರಬಹುದು ಅಥವಾ ನಮ್ಮ ವ್ಯಕ್ತಿತ್ವದ ಮೇಲೆ ಅಥವಾ ಜೀವನದಲ್ಲಿ ಬಹಳ ಪ್ರಭಾವ ಬೀರಿದ ವ್ಯಕ್ತಿಯಾಗಿರಬಹುದು. ಇಂತಹ ಸೂಪರ್​ ಹೀರೋಗಳನ್ನು ಸ್ಮರಿಸಲು ಮತ್ತು ಗೌರವಿಸಲು ಇಂದು (ಏ.28) ಸೂಕ್ತ ದಿನವಾಗಿದೆ. ಹೌದು ಪ್ರತಿವರ್ಷ ಏಪ್ರಿಲ್​ 28 ರಂದು ” ರಾಷ್ಟ್ರೀಯ ಸೂಪರ್​ ಹೀರೋ ಡೇ” (National Superhero Day) ದಿನ ಎಂದು ಆಚರಿಸಲಾಗುತ್ತದೆ. ಅಷ್ಟಕ್ಕೂ ಈ ಸೂಪರ್​ ಹೀರೋ ದಿನ ಯಾಕೆ ಆಚರಿಸಲಾಗುತ್ತದೆ ಮತ್ತು ಯಾವಾಗ ಆರಂಭವಾಯಿತು ಇಲ್ಲಿದೆ ಓದಿ

ಏನಿದು ಸೂಪರ್​ ಹೀರೋ ಡೇ

ಸ್ಪೈಡರ್ ಮ್ಯಾನ್, ಐರನ್ ಮ್ಯಾನ್, ಕ್ಯಾಪ್ಟನ್ ಅಮೇರಿಕಾ, ಥಾರ್, ಡಾಕ್ಟರ್ ಸ್ಟ್ರೇಂಜ್, ಹಲ್ಕ್, ಡೇರ್‌ಡೆವಿಲ್, ವೊಲ್ವೆರಿನ್, ಬ್ಲ್ಯಾಕ್ ಪ್ಯಾಂಥರ್ ಮತ್ತು ಕ್ಯಾಪ್ಟನ್ ಮಾರ್ವೆಲ್ ಈ ಹೆಸರುಗಳು ಯುವ ಜನತೆಯನ್ನು ಸಾಕಷ್ಟು ಆಕರ್ಷಿಸುತ್ತಿವೆ. ಇವು ಹಾಲಿವುಡ್​ ಚಲನಚಿತ್ರಗಳು. ಈ ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದು ಮಾರ್ವೆಲ್​ ಎಂಬ ನಿರ್ಮಾಣ ಸಂಸ್ಥೆ. ಈ ಸಂಸ್ಥೆ ನಿರ್ಮಾಣ ಮಾಡಿದ ಚಿತ್ರಗಳಲ್ಲಿನ ಪಾತ್ರಗಳು, ಸದಾ ಒಳ್ಳೆಯದನ್ನು ಮಾಡುತ್ತಿರುತ್ತವೆ. ಇವರ ರೀತಿ ತೆರೆಯ ಹೊರಗೆ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದ ನಿಜವಾದ ಹೀರೋಗಳನ್ನು ಸ್ಮರಿಸಲು ಈ ಸೂಪರ್​ ಹೀರೋ ದಿನವನ್ನು ಆರಂಭಿಸಲಾಯಿತು.

ಸೂಪರ್​ ಹೀರೋ ಡೇಗೂ ಮತ್ತು ಮಾರ್ವೆಲ್​​ ಸಂಸ್ಥೆಗು ಏನು ಸಂಬಂಧ

ಇನ್ನು ಈ ಸೂಪರ್​ ಹೀರೋ ಡೇ ಥೀಮ್​​ ಅನ್ನು ಕೂಡ ಪ್ರಾರಂಭಿಸಿದವರು ಮಾರ್ವೆಲ್​ ಎಂಬ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು. ಹೌದು ಏಪ್ರಿಲ್ 28, 1995 ರಂದು, ಮಾರ್ವೆಲ್ ಉದ್ಯೋಗಿಗಳು ಸೂಪರ್​ ಹೀರೋ ಡೇಯನ್ನು ಆರಂಭಿಸಿದರು.

ಸೂಪರ್​ ಹೀರೋ ಡೇ ಉದ್ದೇಶ

ದುಷ್ಟಶಕ್ತಿಯನ್ನು ಸಂಹರಿಸಿ, ಜನರನ್ನು ರಕ್ಷಿಸುವ, ಸಮಾಜಕ್ಕಾಗಿ ಸದಾ ಸೇವೆ, ತ್ಯಾಗ ಮತ್ತು ನಮ್ಮ ಜೀವನದ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳಾಗಲಿ ಅಥವಾ ದೇವರಾಗಲಿ ಅವರನ್ನು ಸ್ಮರಿಸಲು ಮತ್ತು ಗೌರವಿಸಲು ಮಾರ್ವೆಲ್​ ಚಿತ್ರ ಸಂಸ್ಥೆಯ ಉದ್ಯೋಗಿಗಳು ಈ ದಿನವನ್ನು ಆರಂಭಿಸಿದರು.

ರಾಷ್ಟ್ರೀಯ ಸೂಪರ್‌ ಹೀರೋ ದಿನ ಯಾವಾಗ?

ಪ್ರತಿವರ್ಷ ಏಪ್ರಿಲ್ 28 ರಂದು, ಸೂಪರ್‌ಹೀರೋ ದಿನವಾಗಿ ಆಚರಿಸಲಾಗುತ್ತದೆ. ಈ ದಿನ ನಮ್ಮ ಸೂಪರ್​ ಹೀರೋಗಳನ್ನು ಸ್ಮರಿಸಬೇಕು.

ರಾಷ್ಟ್ರೀಯ ಸೂಪರ್‌ಹೀರೋ ದಿನದ ಇತಿಹಾಸ

1995 ರಲ್ಲಿ ಮಾರ್ವೆಲ್ ಸಂಸ್ಥೆಯಿಂದ ಸೂಪರ್‌ಹೀರೋ ದಿನ ಆರಂಭವಾಯಿತು. ಏಪ್ರಿಲ್ 28, 1995 ರಂದು ಪ್ರಾರಂಭವಾದಾಗಿನಿಂದ, ಮಾರ್ವೆಲ್​ ಚಿತ್ರ ಸಂಸ್ಥೆಯ ಉದ್ಯೋಗಿಗಳು ಮತ್ತು ಇನ್ನು ಅನೇಕ ಜನರು ಈ ತಮ್ಮ ನೆಚ್ಚಿನ ನಾಯಕರನ್ನು ಸ್ಮರಿಸಲು ಈ ದಿನ ಮೀಸಲಿಡುತ್ತಾರೆ. ನಿಮ್ಮ ಸೂಪರ್​ ಹೀರೋಗಳು ಕಾಲ್ಪನಿಕವಾಗಿರಲಿ ಅಥವಾ ನೈಜವಾಗಿರಲಿ, ಇಂದು ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿ.

Published On - 7:59 am, Fri, 28 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ