Updated on: Dec 10, 2021 | 3:17 PM
ಹಣ್ಣು ಅಥವಾ ತರಕಾರಿಗಳಿಂದ ತಯಾರಿಸಿದ ಜ್ಯೂಸ್ ನಮ್ಮ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಏಕೆಂದರೆ ಈ ಮೂಲಕ ದೇಹವು ಸಾಕಷ್ಟು ಪೋಷಕಾಂಶಗಳನ್ನು ಪಡೆಯುತ್ತದೆ. ಆದರೆ ಜ್ಯೂಸ್ ಕುಡಿಯಲು ಸರಿಯಾದ ಸಮಯವಿದೆ. ಹಾಗೆಯೇ ಅದನ್ನು ಕುಡಿಯುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಿಂದ ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು.
ಜ್ಯೂಸ್ ಕುಡಿಯಲು ಸರಿಯಾದ ಸಮಯ ಬೆಳಿಗ್ಗೆ ಎಂದು ಪರಿಗಣಿಸಲಾಗುತ್ತದೆ. ರಾತ್ರಿಯಲ್ಲಿ 7 ರಿಂದ 8 ಗಂಟೆಗಳ ನಿದ್ದೆ ಮಾಡಿದ ನಂತರ, ನಮ್ಮ ದೇಹಕ್ಕೆ ಶಕ್ತಿಯುತವಾದ ಆಹಾರ ಬೇಕಾಗುತ್ತದೆ. ಆಗ ಮಾತ್ರ ಇಡೀ ದಿನ ಶಕ್ತಿಯನ್ನು ಸಂಗ್ರಹಿಸಲು ಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ ಜ್ಯೂಸ್ ದೇಹಕ್ಕೆ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಆ ಮೂಲಕ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳು ಸಿಗುತ್ತವೆ.
ನೀವು ವರ್ಕ್ ಔಟ್ ಮಾಡುತ್ತಿದ್ದರೆ ವರ್ಕ್ ಔಟ್ ಆದ ಅರ್ಧ ಗಂಟೆಯ ನಂತರ ಯಾವಾಗಲೂ ಜ್ಯೂಸ್ ಕುಡಿಯಿರಿ. ಇದರಿಂದ ನಿಮ್ಮ ದೇಹ ಪೋಷಕಾಂಶಗಳನ್ನು ಪಡೆಯುತ್ತದೆ. ಜತೆಗೆ ನೈಸರ್ಗಿಕ ಸಕ್ಕರೆಯನ್ನು ಸಹ ಪಡೆಯುತ್ತೀರಿ. ಜ್ಯೂಸ್ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.
ಸ್ವಲ್ಪ ಜ್ಯೂಸ್ ಕುಡಿದು ನಂತರ ಸ್ವಲ್ಪ ಸಮಯ ಬಿಟ್ಟು ಅದನ್ನು ಕುಡಿಯುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಇದು ಸಂಪೂರ್ಣವಾಗಿ ತಪ್ಪು. ಆರೋಗ್ಯ ತಜ್ಞರ ಪ್ರಕಾರ, ಜ್ಯೂಸ್ ತೆಗೆದ ನಂತರ, ನೀವು ಅದನ್ನು 20 ನಿಮಿಷಗಳಲ್ಲಿ ಕುಡಿಯಬೇಕು. ಆಗ ಮಾತ್ರ ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು. ಇದನ್ನು ದೀರ್ಘಕಾಲ ಇಟ್ಟುಕೊಳ್ಳುವುದರಿಂದ ಅದರ ಪೋಷಕಾಂಶಗಳು ಖಾಲಿಯಾಗುತ್ತವೆ.
ಪ್ಯಾಕ್ ಮಾಡಲಾದ ಜ್ಯೂಸ್‌ಗಳನ್ನು ಸೇವಿಸಬೇಡಿ. ಏಕೆಂದರೆ ಹಣ್ಣುಗಳ ಬದಲಿಗೆ, ಸಕ್ಕರೆ ಮತ್ತು ಹಣ್ಣಿನ ರುಚಿಗಳನ್ನು ಹೆಚ್ಚಿಸಲು ಕೆಲವು ವಸ್ತುಗಳನ್ನು ಸೇರಿಸಲಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಹೀಗಾಗಿ ತಾಜಾ ಹಣ್ಣುಗಳಿಂದ ಮನೆಯಲ್ಲೇ ತಯಾರಿಸಿದ ಜ್ಯೂಸ್ ಸೇವಿಸಿ.