ಮನೆಯಲ್ಲೇ ಚಿಕನ್ ರೋಲ್ನ ಸುಲಭವಾಗಿ ಮಾಡಬಹುದು; ವಿಧಾನ ಇಲ್ಲಿದೆ
Chicken Roll Ingredients: ನೀವು ಮನೆಯಲ್ಲಿ ಸುಲಭವಾಗಿ ಚಿಕನ್ ರೋಲ್ನ ಮಾಡಬಹುದು. ಚಿಕನ್ ರೋಲ್ ಮಾಡುವ ವಿಧಾನ ಮತ್ತು ಬೇಕಾಗುವ ಸಾಮಾಗ್ರಿಗಳನ್ನು ಇಲ್ಲಿ ತಿಳಿಸಲಾಗಿದೆ.
ಚಿಕನ್ ರೋಲ್ ಅಂದರೆ ಬಾಯಲ್ಲಿ ನೀರು ಬರುತ್ತೆ. ಎಲ್ಲಾ ವಯಸ್ಸಿನವರಿಗೂ ಈ ಫುಡ್ ಅಚ್ಚುಮೆಚ್ಚು. ನಾರ್ತ್ ಇಂಡಿಯನ್ ಫುಡ್ ಆಗಿರುವ ಚಿಕನ್ ರೋಲ್ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಸಂಜೆ ನಾಲ್ಕೈದು ಗಂಟೆ ಹೊತ್ತಿಗೆ ಹಸಿವಾದಾಗ ಈ ರೋಲ್ ತಿನ್ನಬೇಕು ಅನಿಸುತ್ತೆ. ಹೋಟೆಲ್ಗಳಲ್ಲಿ ಒಂದು ರೋಲ್ಗೆ 50 ರೂ. ಯಿಂದ 100 ರೂ. ಇದೆ. ಬೇರೆ ಬೇರೆ ಕಡೆ ರೋಲ್ಗೆ ಸ್ವಲ್ಪ ಜಾಸ್ತಿಯೇ ಇರುತ್ತೆ. ಅದೇನೆಯಿರಲಿ, ನೀವು ಮನೆಯಲ್ಲಿ ಸುಲಭವಾಗಿ ಚಿಕನ್ ರೋಲ್ನ ಮಾಡಬಹುದು. ಚಿಕನ್ ರೋಲ್ ಮಾಡುವ ವಿಧಾನ ಮತ್ತು ಬೇಕಾಗುವ ಸಾಮಾಗ್ರಿಗಳನ್ನು ಇಲ್ಲಿ ತಿಳಿಸಲಾಗಿದೆ.
ಚಿಕನ್ ರೋಲ್ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ (ಎರಡು ಚಿಕನ್ ರೋಲ್ಗೆ ಬೇಕಾಗುವ ಸಾಮಾಗ್ರಿಗಳು): ಮೂಳೆ ರಹಿತ 200 ಗ್ರಾಂ ಕೋಳಿ ಮಾಂಸದ ಸಣ್ಣ ಸಣ್ಣ ತುಂಡುಗಳು, ಸಣ್ಣದಾಗಿ ಕತ್ತರಿಸಿದ 1 ಟೊಮ್ಯಾಟೋ, ½ ಚಮಚ ಖಾರದ ಪುಡಿ, ಎರಡು ಚಮಚ ಎಣ್ಣೆ, ಕತ್ತರಿಸಿದ ಸೌತೆಕಾಯಿ, ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ, ಉದ್ದವಾಗಿ ಕತ್ತರಿಸಿಕೊಂಡ ಹಸಿಮೆಣಸಿನಕಾಯಿ, ಎರಡು ಚಿಟಗಿ ಗರಂ ಮಸಾಲ, ಒಂದು ನಿಂಬೆಹಣ್ಣು, ಒಂದು ಚಮಚ ಟೊಮ್ಯಾಟೋ ಸಾಸ್, ಒಂದು ಚಮಚ ಗ್ರೀನ್ ಚಿಲ್ಲಿ ಸಾಸ್.
ಅರ್ಧ ಚಮಚ ಕೊತ್ತಂಬರಿ ಪುಡಿ, ಒಂದು ಚಿಟಗಿ ಅರಿಶಿನ ಪುಡಿ, ಎರಡು ಚಿಟಗಿ ಕಾಳು ಮೆಣಸಿನ ಪುಡಿ, ಅರ್ಧ ಚಮಚ ಶುಂಠಿ ಪೇಸ್ಟ್, ಅರ್ಧ ಚಮಚ ಜೀರಿಗೆ ಪುಡಿ, ಅರ್ಧ ಚಮಚ ಬೆಳ್ಳುಳ್ಳಿ ಪೆಸ್ಟ್, ಒಂದು ಚಮಚ ಯೋಗಾರ್ಟ್.
ಹಿಟ್ಟು ಸಿದ್ದಪಡಿಸಲು ಸ್ವಲ್ಪ ಉಪ್ಪು, ½ ಚಮಚ ಅಡುಗೆ ಎಣ್ಣೆ. ಒಂದು ಕಪ್ ಮೈದಾ ಹಿಟ್ಟು, ಅರ್ಧ ಕಪ್ ನೀರು
ಹಂತ-1 ಒಂದು ಬೌಲ್ ತೆಗೆದುಕೊಳ್ಳಿ. ಅದಕ್ಕೆ ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಯೋಗಾರ್ಟ್, ಅರಿಶಿಣ ಪುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಚೆನ್ನಾಗಿ ತೊಳೆದ ಚಿಕನ್ ಸಣ್ಣ ತುಂಡುಗಳನ್ನ ಹಾಕಿ. ಒಂದು ಗಂಟೆಗಳ ಕಾಲ ಹಾಗೇ ಇಡಿ.
ಹಂತ- 2 ಒಂದು ಪ್ಯಾನ್ಗೆ ಎಣ್ಣೆ ಹಾಕಿ. ಅದಕ್ಕೆ ಈರುಳ್ಳಿ ಹಾಕಿ. ಗೋಲ್ಡನ್ ಬಣ್ಣ ಬರುವವರೆಗೂ ಫ್ರೈ ಮಾಡಿದ ಬಳಿಕ ಅದಕ್ಕೆ ಟೊಮ್ಯಾಟೋ ಹಾಕಿ. ಇದಕ್ಕೆ ಮೊದಲ ಹಂತದಲ್ಲಿ ಸಿದ್ಧಪಡಿಸಿದ ಚಿಕನ್ ಮಿಶ್ರಣವನ್ನು ಸೇರಿಸಿ. 10 ನಿಮಿಷಗಳ ಕಾಲ ಸ್ವಲ್ಪ ನೀರಿನೊಂದಿಗೆ ಬೇಯಿಸಿ.
ಹಂತ- 3 ಚಿಕನ್ನ ಪ್ಲೆಟ್ನಿಂದ ಮುಚ್ಚಿ ಬೇಯಿಸಿ. ಮದ್ಯೆ ಚಿಕನ್ ಡ್ರೈ ಆಗುತ್ತಿದ್ದರೆ ಸ್ವಲ್ಪ ನೀರು ಹಾಕಿ. ನಂತರ ಗರಂ ಮಸಾಲ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉರಿಯನ್ನು ನಿಲ್ಲಿಸಿ.
ಹಂತ- 4 ಇನ್ನೊಂದು ಬೌಲ್ನಲ್ಲಿ ಮೈದಾ ಹಿಟ್ಟು, ಸ್ವಲ್ಪ ಉಪ್ಪು ಮತ್ತು ಎಣ್ಣೆ ಹಾಕಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ. ಹಿಟ್ಟು ಮೃದುವಾಗುವರೆಗೆ ಕೈಯಾಡಿಸಿ. ನಂತರ ಉಂಡೆಗಳನ್ನ ಮಾಡಿ. ನಂತರ ಹುಡಿ ಮೈದಾ ಹಿಟ್ಟಿನಿಂದ ಪರೋಟ ರೀತಿ ಉಜ್ಜಿ.
ಹಂತ- 5 ಪರೋಟ ರೀತಿ ಉಜ್ಜಿದ ಬಳಿಕ ತವದಲ್ಲಿ ಬೇಯಿಸಿ. ಎರಡು ಕಡೆ ಬೇಯಿಸಬೇಕು. ನಂತರ ಒಂದು ಚಮಚ ಎಣ್ಣೆ ಹಾಕಿ ಬೇಯಿಸಿ. ಗರಿ ಗರಿಯಾಗೆ ಬೆಂದ ಬಳಿಕ ಉರಿಯನ್ನು ಆರಿಸಿ.
ಹಂತ- 6 ಈಗ ಬಿಸಿಯಾದ ಪರೋಟದ ಮೇಲೆ ಬೇಯಿಸಿದ ಚಿಕನ್ ತುಂಡುಗಳನ್ನು ಸಾಲಾಗಿ ಹಾಕಿ. ತುಂಡುಗಳ ಮೇಲೆ ಸ್ವಲ್ಪ ನಿಂಬೆ ರಸವನ್ನು ಹಾಕಿ, , ಈರುಳ್ಳಿ, ಸೌತೆಕಾಯಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಟೊಮ್ಯಾಟೋ ಕೆಚಪ್ ಮತ್ತು ಚಿಲ್ಲಿ ಸಾಸ್ನ ಕೆಲವು ಹನಿಗಳನ್ನು ಸೇರಿಸಿ.
ಹಂತ- 7 ಮೇಲಿನ ಹಂತ ಮುಕ್ತಾಯಗೊಂಡ ಬಳಿಕ ಪರೋಟವನ್ನು ರೋಲ್ ಮಾಡಿ. ಅದರ ಮೇಲೆ ಟಿಶ್ಯು ಪೇಪರ್ನಿಂದ ಸುತ್ತಿ. ನಂತರ ಬಿಸಿ ಬಿಸಿಯಾದ ಚಿಕನ್ ರೋಲ್ನ ಸವಿಯಿರಿ.
ಇದನ್ನೂ ಓದಿ
Health Tips: ಕ್ಯಾನ್ಸರ್ ತಡೆಗಟ್ಟುವ ಗುಣವಿರುವ ಈ ಹಣ್ಣುಗಳನ್ನು ಸೇವಿಸಿ: ಆರೋಗ್ಯಯುತವಾಗಿರಿ
Health Tips: ಚಳಿಗಾಲದಲ್ಲಿ ನಿಮ್ಮ ಕೂದಲ ಆರೈಕೆ ಹೀಗಿರಲಿ; ಇಲ್ಲಿದೆ ಉಪಯುಕ್ತ ಮಾಹಿತಿ