AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಕ್ಯಾನ್ಸರ್​ ತಡೆಗಟ್ಟುವ ಗುಣವಿರುವ ಈ ಹಣ್ಣುಗಳನ್ನು ಸೇವಿಸಿ: ಆರೋಗ್ಯಯುತವಾಗಿರಿ

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್​ಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಆರೋಗ್ಯಯುತವಾಗಿ ಇರಬಹುದಾಗಿದೆ. ಆಹಾರದಲ್ಲಿ ತರಕಾರಿ, ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಸಂಭಾವ್ಯ ಕ್ಯಾನ್ಸರ್​ ಲಕ್ಷಣಗಳನ್ನು ತಡೆಗಟ್ಟುತ್ತವೆ.

Health Tips: ಕ್ಯಾನ್ಸರ್​ ತಡೆಗಟ್ಟುವ ಗುಣವಿರುವ ಈ ಹಣ್ಣುಗಳನ್ನು ಸೇವಿಸಿ: ಆರೋಗ್ಯಯುತವಾಗಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 08, 2021 | 4:04 PM

ಆರೋಗ್ಯ ಎಲ್ಲರಿಗೂ ಮುಖ್ಯ. ದಿನನಿತ್ಯದ ವೇಗದ ಬದುಕು, ಹರಡುತ್ತಿರುವ ಸಾಂಕ್ರಾಮಿಕ ರೋಗಗಳಿಂದ ದೇಹವನ್ನು ಸುರಕ್ಷಿತವಾಗಿರಿಸಿಕೊಂಡು ಆರೋಗ್ಯವಾಗಿಟ್ಟುಕೊಳ್ಳಲು ನಾವು ಸೇವಿಸುವ ಆಹಾರ ಅತೀ ಮುಖ್ಯವಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡದಂಹ ದೀರ್ಘಕಾಲದ ಕಾಯಿಲೆಗಳು ಒಂದು ಬಾರಿ ದೇಹವನ್ನು ಸೇರಿಕೊಂಡರೆ ಅವುಗಳನ್ನು ಕೂಡ ನಮ್ಮ ಆಹಾರದ ಕ್ರಮದಿಂದಲೇ ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು. ಅದರಂತೆಯೇ ಮಾರಣಾಂತಿಕ ಕಾಯಿಲೆ ಎನಿಸಿಕೊಂಡಿರುವ ಕ್ಯಾನ್ಸರ್​ ರೋಗವನ್ನೂ ನಮ್ಮೆಡೆಗೆ ಬರದಂತೆ ನಾವು ಸೇವಿಸುವ ಆಹಾರ ಮೂಲಕವೇ ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್​ಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಆರೋಗ್ಯಯುತವಾಗಿ ಇರಬಹುದಾಗಿದೆ. ಆಹಾರದಲ್ಲಿ ತರಕಾರಿ, ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಅವುಗಳಲ್ಲಿ ಜೈವಿಕವಾಗಿ ಸಕ್ರಿಯವಾಗಿರುವ ಅಂಶಗಳು ಸಂಭಾವ್ಯ ಕ್ಯಾನ್ಸರ್​ ಲಕ್ಷಣಗಳನ್ನು ತಡೆಗಟ್ಟುತ್ತವೆ ಎಂದು ಅಮೆರಿಕನ್ ಇನ್ಸ್ಟಿಟ್ಯೂಟ್​ ಆಫ್​ ಕ್ಯಾನ್ಸರ್​ರಿಸರ್ಚ್ ಸೆಂಟರ್​ನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರೋಟೀನ್​, ಕಾರ್ಬೋಹೈಡ್ರೇಟ್​ನಂತಹ ಪೌಷ್ಟಿಕಾಂಶವುಳ್ಳ ಹಣ್ಣು, ತರಕಾರಿಗಳ ಸೇವನೆ ಆರೋಗ್ಯಯುತ ಜೀವನಕ್ಕೆ ದಾರಿ ಮಾಡಿಕೊಟ್ಟು ಕಾಯಿಲೆಗಳಿಂದ ದೂರವಿಡಲು ಸಹಾಯಮಾಡುತ್ತದೆ.

ಕ್ಯಾನ್ಸರ್​ ತಡೆಗೆ ಈ ಹಣ್ಣುಗಳನ್ನು ಸೇವಿಸಿ

ಚೆರಿ ಹಣ್ಣು ಸಂಶೋಧನೆಯ ಪ್ರಕಾರ ಚೆರಿ ಹಣ್ಣಿನಲ್ಲಿ ಅಂಥೋಸಯಾನಿನ್​ ಅಂಶ ಯಥೇಚ್ಛವಾಗಿ ಇರುವ ಕಾರಣ ಸ್ತನ ಕ್ಯಾನ್ಸರ್​ ಬರದಂತೆ ತಡೆಗಟ್ಟುಬಹುದಾಗಿದೆ. ಅದರಲ್ಲೂ ಡಾರ್ಕ್​ ಚೆರಿ ಹಣ್ಣುಗಳು ಸ್ತನ ಕ್ಯಾನ್ಸರ್​ಗೆ ಉತ್ತಮ ಮದ್ದಾಗಿದೆ. ಹೀಗಾಗಿ ನಿಯಮಿತ ಚೆರಿ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಉಪಯುಕ್ತ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

ಬ್ಲೂಬೆರಿ ಹಣ್ಣುಗಳು ಬ್ಲೂಬೆರಿ ಹಣ್ಣುಗಳು ಯಥೇಚ್ಛವಾದ ಪೌಷ್ಟಿಕಾಂಶ ಮತ್ತು ಕ್ಯಾನ್ಸರ್​ ವಿರೋಧಿ ಅಂಶಗಳನ್ನು ಹೊಂದಿದೆ. ಹೀಗಾಗಿ ಬ್ಲೂಬೆರಿ ಹಣ್ಣುಗಳ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಬ್ಲೂಬೆರಿ ಹಣ್ಣುಗಳು ಚರ್ಮದ ರಕ್ಷಣೆಯನ್ನು ಮಾಡುತ್ತವೆ. ಹೀಗಾಗಿ ಚರ್ಮದ ಕ್ಯಾನ್ಸರ್​ಅನ್ನು ಕೂಡ ಈ ಹಣ್ಣುಗಳು ನಿಯಂತ್ರಿಸಬಲ್ಲದು.

ದ್ರಾಕ್ಷಿಹಣ್ಣುಗಳು ಒಣದ್ರಾಕ್ಷಿ ಅಥವಾ ಪ್ರೆಶ್​ ದ್ರಾಕ್ಷಿ ಹಣ್ಣುಗಳಲ್ಲಿ ಬರ್ಮೊಟಿನ್​ ಎಂಬ ಜೈವಿಕ ಸಕ್ರಿಯಅಂಶವು ಕಂಡುಬರುತ್ತದೆ ಈ ಅಂಶಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಇತ್ತೀಚೆಗೆ ಇಂಟರ್​ನ್ಯಾಷನಲ್​ ಜನರಲ್​ ಆಫ್ ಮ್ಯಾನಿಕುಲರ್​ ಸೈನ್ಸ್​ನ ಅಧ್ಯಯನ ತಿಳಿಸಿದೆ. ದ್ರಾಕ್ಷಿಹಣ್ಣುಗಳು ಗ್ಲಿಯೊಮಾ, ಸ್ತನ ಕ್ಯಾನ್ಸರ್, ಲಿವರ್​ ಕ್ಯಾನ್ಸರ್ ಹಾಗೂ ಚರ್ಮದ ಕ್ಯಾನ್ಸರ್​ಗೂ ಉತ್ತಮ ಮನೆಮದ್ದಾಗಿದೆ. ಆದರೆ ವೈದ್ಯರ ಸಲಹೆಯಿಲ್ಲದೆ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ಸಂಶೊಧಕರು.

ದಾಳಿಂಬೆ ದಾಳಿಂಬೆಯಲ್ಲಿ ದೇಹಕ್ಕೆ ಬೇಕಾದ ರೋಗನಿರೋಧಕ ಶಕ್ತಿ ಹೇರಳವಾಗಿದ್ದು, ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಉತ್ತಮ ಆಹಾರವಾಗಿದೆ. ದಾಳಿಂಬೆಯಲ್ಲಿನ ಆ್ಯಂಟಿ ಆಕ್ಸಿಡೆಂಟ್​ಗಳು ಶ್ವಾಸಕೋಶಗಳನ್ನು ಸುರಕ್ಷಿತವಾಗಿರಿಸಲು ನೆರವಾಗುತ್ತದೆ. ನಿಯಮಿತ ದಾಳಿಂಬೆ ಸೇವನೆಯು ಕ್ಯಾನ್ಸರ್ ಕಾರಕಗಳಿಂದ ಡಿಎನ್​ಎಯನ್ನು ರಕ್ಷಿಸುತ್ತವೆ. ಅಲ್ಲದೆ ದೇಹದಲ್ಲಿನ ಅತಿಯಾದ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

ಕ್ರೂಸಿಫೆರಸ್​ ತರಕಾರಿಗಳು ಸೊಪ್ಪು, ಎಲೆಕೋಸು, ಹೂಕೋಸುಗಳಂತಹ ಕ್ರೂಸಿಫೆರಸ್​ ತರಕಾರಿಗಳು ಕ್ಯಾನ್ಸರ್ ತಡೆಗೆ ಉಪಯುಕ್ತ ಆಹಾರವಾಗಿದೆ. ಹಸಿರು ತರಕಾರಿ ಮತ್ತು ಸೊಪ್ಪುಗಳಲ್ಲಿರುವ ಫೈಬರ್,ಮ್ಯಾಗ್ನಿಶಿಯಂ, ವಿಟಮಿನ್​ಸಿನಂತಹ ಅಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಡಿಎನ್​ಎಗಳಿಗೆ ಹಾನಿಯಾಗುವುದನ್ನು ತಪ್ಪಿಸುತ್ತದೆ.

ಇದನ್ನೂ ಓದಿ:

ಅಳು ಬಂದಾಗ ಮುಕ್ತವಾಗಿ ಅತ್ತು ಬಿಡಿ; ಕಣ್ಣೀರನ್ನು ತಡೆಹಿಡಿಯುವುದರಿಂದ ಕಾಯಿಲೆಗೆ ತುತ್ತಾಗುವಿರಿ ಎಚ್ಚರ

Health Tips: ಚಳಿಗಾಲದಲ್ಲಿ ಅತಿಯಾದ ಮದ್ಯಸೇವನೆ ಹೃದಯಕ್ಕೆ ಕುತ್ತು ತರಬಹುದು