Diet Tips: ಡಯೆಟ್​ ಸಮಯದಲ್ಲಿ ಹಸಿವನ್ನು ನಿವಾರಿಸಿಕೊಳ್ಳಲು ಈ ಆಹಾರವನ್ನು ಸೇವಿಸಿ

ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಮಾಡುವ ಡಯೆಟ್​ನಿಂದ ದೇಹಕ್ಕೆ ಆಹಾರ ಸಾಕಾಗದಿರಬಹುದು. ಅಗ ಕರಿದ ಪದಾರ್ಥಗಳೆಡೆಗೆ ಕೈಚಾಚುವ ಬದಲು ದೇಹಕ್ಕೆ ಬೇಕಾದ ಪೌಷ್ಟಿಕ ಆಹಾರ ತಿನ್ನುವ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ. ಅದು ನಿಮ್ಮ ಡಯಟ್​ ಆಹಾರಕ್ಕೆ ಪೂರಕವಾಗಿರಲಿ.

Diet Tips: ಡಯೆಟ್​ ಸಮಯದಲ್ಲಿ ಹಸಿವನ್ನು ನಿವಾರಿಸಿಕೊಳ್ಳಲು ಈ ಆಹಾರವನ್ನು ಸೇವಿಸಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 09, 2021 | 1:01 PM

ದೇಹದ ತೂಕವನ್ನು ಇಳಿಸಲು ಅಥವಾ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಮಾಡುವ ಡಯೆಟ್​ನಿಂದ ದೇಹಕ್ಕೆ ಆಹಾರ ಸಾಕಾಗದಿರಬಹುದು. ಅಗ ಕರಿದ ಪದಾರ್ಥಗಳೆಡೆಗೆ ಕೈಚಾಚುವ ಬದಲು ದೇಹಕ್ಕೆ ಬೇಕಾದ ಪೌಷ್ಟಿಕ ಆಹಾರ ತಿನ್ನುವ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ. ಅದು ನಿಮ್ಮ ಡಯಟ್​ ಆಹಾರಕ್ಕೆ ಪೂರಕವಾಗಿರಲಿ. ದೇಹವನ್ನು ಸದೃಢವಾಗಿರಸಿಕೊಳ್ಳಲು, ಅನಗತ್ಯ ಬೊಜ್ಜು ಬರದಂತೆ ತಡೆಯಲು ಡಯೆಟ್ ಅತೀ ಅವಶ್ಯಕ. ಅದಕ್ಕಾಗಿ ಲಿಮಿಟೆಡ್​ ಆಹಾರವನ್ನು ಸೇವಿಸುವುದು ಕ್ರಮ. ಅದರೆ ಈ ಲಿಮಿಟೆಡ್​ ಆಹಾರ ಸೇವನೆಯಿಂದ ಡಯೆಟ್​ ಆರಂಭದ ದಿನಗಳಲ್ಲಿ ನಿಮಗೆ ಅತಿಯಾದ ಹಸಿವು ಕಾಡಬಹುದು. ಅಗ ಬಾಯಿಚಪ್ಪರಿಸುವ ಚಿಪ್ಸ್ ಅಥವಾ ಇನ್ನಿತರ ಎಣ್ಣೆಯುಕ್ತ ಪದಾರ್ಥಗಳೆಡೆಗೆ ತಪ್ಪಿಯೂ ಕೈಚಾಚಬೇಡಿ.

ಹಾಗಾದರೆ ಡಯೆಟ್​ ಸಮಯದಲ್ಲಿ ಅಥವಾ ತೂಕ ಹೆಚ್ಚಾಗದಂತೆ ತಿಂದು ಹಸಿವನ್ನು ನೀಗಿಸಿಕೊಳ್ಳುವುದು ಹೇಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ. ನೀವು ಈ ಆಹಾರವನ್ನು ಸೇವಿಸಿ ಡಯೆಟ್​ ಮಾಡುವ ದಿನಗಳಲ್ಲೂ ನಿಮ್ಮ ಹಸಿವನ್ನು ನೀಗಿಸಿಕೊಳ್ಳಬಹುದು.

ಊಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ ಡಯೆಟ್​ ವೇಳೆ ನೀವು ತಿನ್ನುತ್ತಿದ್ದ ಊಟದ ಪ್ರಮಾಣವನ್ನು ಕೊಂಚ ಹೆಚ್ಚಿಸಿಕೊಳ್ಳಿ. ಫೈಬರ್​​, ಪ್ರೋಟೀನ್​ಯುಕ್ತ ಆಹಾರವನ್ನು ನಿಮ್ಮ ಊಟದ ಪಟ್ಟಿಗೆ ಸೇರಿಸಿಕೊಳ್ಳಿ. ಉದಾಹರಣೆಗೆ ವಿವಿಧ ರೀತಿಯ ಹಣ್ಣು, ತರಕಾರಿ, ವಿವಿಧ ರೀತಿಯ ಧಾನ್ಯಗಳು ನಿಮ್ಮ ಊಟದಲ್ಲಿರಲಿ. ನೀರಿನ ಅಂಶವುಳ್ಳ ಆಹಾರ ಸೇವಿಸುವುದರಿಂದ ದೇಹದ ತೂಕ ಹೆಚ್ಚದೆ ನಿಮ್ಮ ಹೊಟ್ಟೆ ತುಂಬಲಿದೆ.

ತರಕಾರಿ ಸೂಪ್ ತರಕಾರಿಯ ಸೂಪ್​ನ್ನು ಸೇವಿಸುವುದರ ಮೂಲಕ ಹಸಿವನ್ನು ನಿವಾರಿಸಿಕೊಳ್ಳಬಹುದು. ಬಿಸಿಯಾದ ಅಥವಾ ತಣ್ಣಗಿನ ತರಕಾರಿ ಸೂಪ್​ನ್ನು ತಿನ್ನಿ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶದ ಜತೆಗೆ ರುಚಿಯಾದ ಆಹಾರ ಸೇವಿಸಿದಂತಾಗುತ್ತದೆ.

ತರಕಾರಿ ಸಲಾಡ್​ ಹಸಿವಿನ ವೇಳೆಯಲ್ಲಿ ಹಸಿ ತರಕಾರಿಗಳ ಸಲಾಡ್​ ಸೇವಿಸಿ. ಇದರಿಂದ ನಿಮ್ಮ ಹೊಟ್ಟೆಯೂ ತುಂಬುತ್ತದೆ, ದೇಹಕ್ಕೆ ಅವಶ್ಯಕತೆ ಇರುವ ಕ್ಯಾಲೋರಿಗಳೂ ಪೂರೈಕೆಯಾಗುತ್ತದೆ. ಮಧ್ಯಾಹ್ನ ಕಚೇರಿಗೆ ತೆರಳುವವರು ಕೂಡ ತರಕಾರಿಗಳನ್ನು ಕತ್ತರಿಸಿ ಸಲಾಡ್​ರೂಪದಲ್ಲಿ ತೆಗೆದುಕೊಂಡು ಹೋಗಬಹುದು. ಇದರಿಂದ ದಿನವಿಡೀ ಕುಳಿತು ಕೆಲಸಮಾಡುವವರಿಗೆ ಲಘು ಆಹಾರ ದೊರಕಿದಂತಾಗುತ್ತದೆ.

ಹಾಲು ಕುಡಿಯಿರಿ ಕಡಿಮೆ ಕೊಬ್ಬಿನ ಡೈರಿ ಹಾಲನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪ್ರೋಟೀನ್​ ದೊರೆಯುತ್ತದೆ. ಅಲ್ಲದೆ ಕಡಿಮೆ ಕೊಬ್ಬಿನ ಹಾಲಿನ ಸೇವನೆಯಿಂದ ಹಸಿವಿನಿಂದಲೂ ಮುಕ್ತಿ ಪಡೆಯಬಹದು. ಇದು ನಿಮ್ಮ ಡಯೆಟ್​ ಮೇಲೆ ಪರಿಣಾಮ ಬೀರುವುದಿಲ್ಲ.

ಹಣ್ಣುಗಳ ಬಳಕೆ ಪ್ರತಿದಿನ ಕಿತ್ತಳೆ ಅಥವಾ ದ್ರಾಕ್ಷಿ ಹಣ್ಣುಗಳ ಸೇವನೆ ನಿಮ್ಮ ಹಸಿವನ್ನು ದೂರವಾಗಿಸುತ್ತದೆ. ಈ ಹಣ್ಣುಗಳಲ್ಲಿರುವ ಫೈಬರ್​ ಅಂಶ ದೇಹಕ್ಕೆ ಬೇಕಾದ ಕ್ಯಾಲೋರಿಗಳನ್ನು ಒದಗಿಸುತ್ತದೆ. ಅಲ್ಲದೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ.

ಸೋಯಾಬಿನ್​ ಹಾಗೂ ಒಣಬೀಜಗಳ ಬಳಕೆಯಿರಲಿ ಸೋಯಾಬಿನ್​ ದೇಹಕ್ಕೆ ಬೇಕಾದ ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೋಟೀನ್​ ಅಂಶಗಳನ್ನು ನೀಡುತ್ತವೆ. ಅಲ್ಲದೆ ಸೋಯಾಬಿನ ಲಘು ಆಹಾರವಾಗಿರುವುದರಿಂದ ಹಸಿವನ್ನೂ ನೀಗಿಸಿ ಆರೋಗ್ಯಯುತವಾಗಿರಲು ಸಹಾಯ ಮಾಡುತ್ತದೆ. ಇದರ ಜತೆಗೆ ಶೇಂಗಾ, ಕಡಲೆ ಕಾಳುಗಳು ನಿಮ್ಮ ಆಹಾರದೊಂದಿಗಿರಲಿ. ಶೇಂಗಾ ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಹಾಗೂ ಶೇಂಗಾದಲ್ಲಿನ ಎಣ್ಣೆ ಅಂಶ ಸ್ನಾಯುಗಳನ್ನು ಬಲಪಡಿಸುತ್ತದೆ.

ನಿಧಾನವಾಗಿ ಊಟಮಾಡಿ ನೆನಪಿಡಿ, ನಿಮ್ಮ ಹೊಟ್ಟೆ ತುಂಬಿದೆ, ಆರಾಮದಾಯಕ ಸ್ಥತಿಯಲ್ಲಿದೆ ಎಂದು ಮೆದುಳಿಗೆ ತಿಳಿಯಲು 20 ನಿಮಿಷಗಳ ಸಮಯ ಬೇಕು. ಹೀಗಾಗಿ ನೀವು ಒಂದೇ ಸಮನೆ ತಿನ್ನುತ್ತಿದ್ದರೆ ಅಪಾಯವೇ ಹೆಚ್ಚು. ನಿಧಾನವಾಗಿ ತಿನ್ನುವುದರಿಂದ ಮೆದುಳಿಗೆ ಸರಿಯಾದ ರೀತಿಯಲ್ಲಿ ಸಂದೇಶ ಹೋಗುತ್ತದೆ. ನೀವು ತಿನ್ನಬೇಕಾದ ಅಹಾರದ ಪ್ರಮಾಣ ನಿಮಗೇ ತಿಳಿಯುತ್ತದೆ. ಹೀಗಾಗಿ ಆಹಾರ ಸೇವಿಸುವಾಗಲೂ ಎಚ್ಚರವಿರಲಿ.

ಇದನ್ನೂ ಓದಿ:

Women health: ಮುಟ್ಟಿನ ಸಂದರ್ಭದಲ್ಲಿ ಮೂಡ್ ಸ್ವಿಂಗ್ ಆಗುತ್ತದೆಯೇ? ಕಾರಣ ತಿಳಿಯಿರಿ

Health Tips: ಕ್ಯಾನ್ಸರ್​ ತಡೆಗಟ್ಟುವ ಗುಣವಿರುವ ಈ ಹಣ್ಣುಗಳನ್ನು ಸೇವಿಸಿ: ಆರೋಗ್ಯಯುತವಾಗಿರಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್