ಯಾವ ರಾಶಿಯವರು ಯಾವ ರೀತಿಯ ಗುಣಗಳನ್ನು ಹೊಂದಿರುತ್ತಾರೆ? ಇಲ್ಲಿದೆ ಮಾಹಿತಿ

ನೀವು ಯಾರನ್ನಾದರೂ ಅರ್ಥಮಾಡಿಕೊಳ್ಳಲು ಬಯಸಿದರೆ ಅವರ ರಾಶಿಯನ್ನು ತಿಳಿದುಕೊಳ್ಳಿ. ಇದರಿಂದ ಅವರ ಬಗ್ಗೆ ನೀವು ಇನ್ನಷ್ಟು ಗಾಢವಾಗಿ ತಿಳಿದುಕೊಂಡು ಬಂಧವನ್ನು ಗಟ್ಟಿಯಾಗಿಸಿಕೊಳ್ಳಬಹುದು. ಇನ್ನೊಂದು ಪ್ರಮುಖ ಸಂಗತಿಯೆಂದರೆ ಎದುರಿಗೆ ಇರುವವರ ದೈಹಿಕ ಲಕ್ಷಣಗಳೂ ಕೂಡ ಅವರು ಯಾವ ರಾಶಿ ಚಕ್ರವನ್ನು ಹೊಂದಿದ್ದಾರೆ ಎನ್ನುವುದನ್ನು ತಿಳಿಸುತ್ತದೆ.

ಯಾವ ರಾಶಿಯವರು ಯಾವ ರೀತಿಯ ಗುಣಗಳನ್ನು ಹೊಂದಿರುತ್ತಾರೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ

ಪ್ರತಿಯೊಬ್ಬರದ್ದೂ ವಿಭಿನ್ನ ವ್ಯಕ್ತಿತ್ವ, ಬೇರೆ ಬೇರೆ ನಡೆನುಡಿ ಇರುತ್ತದೆ. ಹೀಗಿದ್ದಾಗ ನಾವು ಬೇರೆಯವರನ್ನು ಅರ್ಥಮಾಡಿಕೊಳ್ಳಲು ಕೊಂಚ ಸಮಯ ಬೇಕೇ ಬೇಕು. ಆದರೆ ಮನುಷ್ಯನ ವ್ಯಕ್ತಿತ್ವ ಅಥವಾ ಆತನ ಗುಣಗಳು ಆತನ ರಾಶಿಯನ್ನು ಅವಲಂಬಿಸಿರುತ್ತವೆ. ಪ್ರತಿಯೊಬ್ಬರ ರಾಶಿಯೂ ಅವರ ಗುಣಗಳನ್ನು ತಿಳಿಸುತ್ತದೆ. ಹೀಗಾಗಿ ನೀವು ಯಾರನ್ನಾದರೂ ಅರ್ಥಮಾಡಿಕೊಳ್ಳಲು ಬಯಸಿದರೆ ಅವರ ರಾಶಿಯನ್ನು ತಿಳಿದುಕೊಳ್ಳಿ. ಇದರಿಂದ ಅವರ ಬಗ್ಗೆ ನೀವು ಇನ್ನಷ್ಟು ಗಾಢವಾಗಿ ತಿಳಿದುಕೊಂಡು ಬಂಧವನ್ನು ಗಟ್ಟಿಯಾಗಿಸಿಕೊಳ್ಳಬಹುದು. ಇನ್ನೊಂದು ಪ್ರಮುಖ ಸಂಗತಿಯೆಂದರೆ ಎದುರಿಗೆ ಇರುವವರ ದೈಹಿಕ ಲಕ್ಷಣಗಳೂ ಕೂಡ ಅವರು ಯಾವ ರಾಶಿ ಚಕ್ರವನ್ನು ಹೊಂದಿದ್ದಾರೆ ಎನ್ನುವುದನ್ನು ತಿಳಿಸುತ್ತದೆ.

ಅದು ಹೇಗೇ ಎನ್ನುತ್ತೀರಾ? ಇಲ್ಲಿದೆ ನೋಡಿ

ಮೇಷ ರಾಶಿ ಮೇಷರಾಶಿಯವನ್ನು ಹೊಂದಿರುವ ವ್ಯಕ್ತಿಗಳ ಹುಬ್ಬು ಸುಂದರವಾಗಿರುತ್ತದೆ. ಅಂದವಾದ ಹುಬ್ಬುಗಳನ್ನು ಹೊಂದಿರುವ ಇವರು ಇತರರನ್ನು ಸುಲಭವಾಗಿ ಆಕರ್ಷಿಸುತ್ತಾರೆ. ಮೇಷ ರಾಶಿಯವರು ಸಾಮಾನ್ಯವಾಗಿ ತಮ್ಮ ಹುಬ್ಬುಗಳ ಮೂಲಕವೇ ಸಂವಹನ ನಡೆಸುತ್ತಾರೆ. ಅಂದರೆ ಇವರು ತಮ್ಮ ಮುಗ್ಧತೆ ಮತ್ತು ಸಿಟ್ಟು ಎರಡನ್ನೂ ಹುಬ್ಬಿನಲ್ಲೇ ವ್ಯಕ್ತಪಡಿಸುತ್ತಾರೆ.

ವೃಷಭ ರಾಶಿ ವೃಷಭ ರಾಶಿ ಚಕ್ರವನ್ನು ಹೊಂದಿರುವವರು ಆಕರ್ಷಕ ತುಟಿಯನ್ನು ಹೊಂದಿರುತ್ತಾರೆ. ಸೂಕ್ಷ್ಮಮನಸ್ಥಿತಿಯ ವ್ಯಕ್ತಿತ್ವ ಹೊಂದಿರುವ ಇವರು ತಮ್ಮ ನೋವನ್ನೂ ತುಟಿಯಂಚಿನಲ್ಲಿ ಅಡಗಿಸಿ ನಗುತ್ತಾರೆ. ಅಂದವಾದ ತುಟಿಯ ಅಂಚಿನಲ್ಲಿ ನಗುವ ಇವರು ಎದುರಿಗೆ ಇರುವವರನ್ನು ತಮ್ಮಡೆಗೆ ಸೆಳೆದುಕೊಳ್ಳುವ ಗುಣಹೊಂದಿರುತ್ತಾರೆ.

ಮಿಥುನ ರಾಶಿ ಮಿಥುನ ರಾಶಿಯವರು ಹೊಳಪಿನ ಮೈಬಣ್ಣ ಹೊಂದಿರುತ್ತಾರೆ. ಮಗುವಿನ ಮನಸ್ಥಿತಿ ಹೊಂದಿರುವ ಈ ರಾಶಿ ಚಕ್ರದ ಜನರು ತಮ್ಮ ಕಾಂತಿಯ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಆಕರ್ಷಕ ಮೈಬಣ್ಣದ ಇವರು ಕೆಂಗುಲಾಬಿ ಬಣ್ಣದ ಕೆನ್ನೆಯನ್ನು ಹೊಂದಿರುತ್ತಾರೆ.

ಕರ್ಕಾಟಕ ರಾಶಿ ಕರ್ಕಾಟಕ ರಾಶಿ ಚಕ್ರದ ಜನರು ಹೊಟ್ಟೆಯ ಭಾಗದಲ್ಲಿ ಉತ್ತಮ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಇತರರ ಬಗೆಗೆ ಕಾಳಜಿವಹಿಸುವ ಅವರು ಬೇರೆಯವರನ್ನು ನೋವನ್ನು ತಮ್ಮೊಳಗೆ ಅರ್ಥಮಾಡಿಕೊಳ್ಳುವವರಾಗಿರುತ್ತಾರೆ.

ಸಿಂಹ ರಾಶಿ ಸಿಂಹ ರಾಶಿಯವರು ಅತ್ಯಾಕರ್ಷಕ ಕೇಶರಾಶಿಯನ್ನು ಹೊಂದಿರುತ್ತಾರೆ. ತಮ್ಮ ಕೂದಲಿನ ಬಗೆಗೆ ಅತಿಯಾದ ಕಾಳಜಿವಹಿಸುವ ಅವರು ಪ್ರತಿ ಬಾರಿ ಕನ್ನಡಿಯನ್ನು ನೋಡುವಾಗಲೂ ಕೂದಲಿನತ್ತಲೇ ಗಮನಹರಿಸುತ್ತಾರೆ. ಹೀಗಾಗಿ ಸಿಂಹ ರಾಶಿಯವರು ತಮ್ಮ ಉತ್ತಮ ಕೂದಲಿನಿಂದಲೇ ಇತರರನ್ನು ತಮ್ಮೆಡೆಗೆ ಸೆಳೆದುಕೊಳ್ಳುತ್ತಾರೆ.

ಕನ್ಯಾ ರಾಶಿ ಕನ್ಯಾ ರಾಶಿಚಕ್ರ ಹೊಂದಿರುವವರಿಗೆ ಚರ್ಮವೇ ಆಕರ್ಷಕವಾಗಿರುತ್ತದೆ. ಪ್ರತೀ ದಿನ ತಮ್ಮ ಅಂದವಾದ ಚರ್ಮದ ರಕ್ಷಣೆಗೆ ಹಾಗೂ ಚರ್ಮದ ಸ್ವಚ್ಛತೆಗೆ ಸಮಯ ಮೀಸಲಿಡುತ್ತಾರೆ. ಇದಕ್ಕೆ ಕೈಗನ್ನಡಿಯಂತೆ ಕನ್ಯಾ ರಾಶಿಯವರ ಚರ್ಮ ಮೃದು ಹಾಗೂ ಕಾಂತಿಯುತವಾಗಿರುತ್ತದೆ. ಮೃದು ಮನಸ್ಥಿತಿಯುಳ್ಳ ಇವರು ಬೇರೇಯವರ ಕಷ್ಟಗಳಿಗೂ ಮಿಡಿಯುವ ಗುಣ ಹೊಂದಿರುತ್ತಾರೆ.

ತುಲಾ ರಾಶಿ ತುಲಾ ರಾಶಿಚಕ್ರವನ್ನು ಹೊಂದಿರವವರ ದೇಹದ ಆಕರ್ಷಣೀಯ ಭಾಗವೆಂದರೆ ದೇಹದ ಹಿಂಬಾಗ. ನೀಳವಾದ ಬೆನ್ನನ್ನು ಹೊಂದಿರುವ ಇವರು ಸೌಮ್ಯ ಸ್ವಭಾವದವರಾಗಿರುತ್ತಾರೆ. ಎಲ್ಲರನ್ನೂ ಸುಲಭವಾಗಿ ನಂಬುವ ಇವರು ಸ್ನೇಹಜೀವಿಯಾಗಿರುತ್ತಾರೆ.

ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರು ಎರೋಜೇನಸ್ ಭಾಗದೆಡೆಗೆ ಹೆಚ್ಚು ಗಮನ ನೀಡುತ್ತಾರೆ. ಇವರು ತಮ್ಮಲ್ಲಿರ ಶಕ್ತಿಯ ಬಗ್ಗೆ ತಿಳಿದುಕೊಂಡಿರುತ್ತಾರೆ. ತಾವು ಯಾವ ಕೆಲಸವನ್ನು ಬೇಕಾದರೂ ಮಾಡುತ್ತೇವೆ ಎನ್ನುವ ಭರವಸೆಯ ಮತ್ತು ಧನಾತ್ಮಕ ಚಿಂತನೆಯನ್ನು ಹೊಂದಿರುತ್ತಾರೆ.

ಧನು ರಾಶಿ ಧನುರಾಶಿ ಚಕ್ರವನ್ನು ಹೊಂದಿರುವವರು ಅಂದವಾದ ಬೆನ್ನಿನ ಭಾಗವನ್ನು ಹೊಂದಿರುತ್ತಾರೆ. ಧನುರಾಶಿಯವರಿಗೆ ಬೆನ್ನಿನ ಭಾಗದಲ್ಲಿ ಹೆಚ್ಚು ಬಲವಿದ್ದು ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ರಾಶಿಯವರು ಬ್ಯಾಕ್ಲೆಸ್​ ಡ್ರೆಸ್​ಗಳನ್ನು ಧರಿಸಲು ಹೆಚ್ಚು ಇಷ್ಟಪಡುತ್ತಾರೆ.

ಮಕರ ರಾಶಿ ಮಕರ ರಾಶಿ ಚಕ್ರದವರಿಗೆ ಆಕರ್ಷಣೀಯ ಅಂಗವೆಂದರೆ ಅವರು ಕಾಲುಗಳು. ಯಾವಾಗಲೂ ಅಂದವಾದ, ಮೃದುವಾದ ಕಾಲುಗಳನ್ನು ಹೊಂದಿರಲು ಬಯಸುವ ಅವರು ಕಾಲಿನ ಸೌಂದರ್ಯಕ್ಕೆ ಅತೀ ಹೆಚ್ಚು ಕೇರ್​ ತೆಗೆದುಕೊಳ್ಳುತ್ತಾರೆ.

ಕುಂಭ ರಾಶಿ ಕುಂಭ ರಾಶಿ ಚಕ್ರವನ್ನು ಹೊಂದಿರುವ ಜನರು ಸುಂದರವಾದ ಪಾದಗಳನ್ನು ಮತ್ತು ಹಿಮ್ಮಡಿಗಳನ್ನು ಹೊಂದಿರುತ್ತಾರೆ. ಇವರ ಆಕರ್ಷಕ ಪಾದಗಳು ಭೂಮಿಯ ಮೇಲೇ ಇಡಿಯಾದ ಪಾದವನ್ನು ಇರಿಸಿ ನಡೆಯಲು ಸಹಾಯಮಾಡುತ್ತದೆ. ಹೆಚ್ಚು ಸ್ವಾತಂತ್ರ್ಯ ಬಯಸುವ ಗುಣವನ್ನು ಹೊಂದಿರುವ ಇವರು ಧನಾತ್ಮಕ ವಿಚಾರಗಳನ್ನು ಯೋಚಿಸುತ್ತಾರೆ.

ಮೀನ ರಾಶಿ ಮೀನ ರಾಶಿಯವರು ಶಕ್ತಿ ಎಂದರೆ ಅವರ ಕಣ್ಣುಗಳು. ಸದಾ ಹೊಸತರೆಡೆಗೆ ತುಡಿಯುವ ಮನಸ್ಥಿತಿಯುಳ್ಳ ಇವರು ಕಣ್ಣಗಳ ಮೂಲಕ ಹೊಸ ವಿಚಾರಗಳನ್ನು ಅರಿತುಕೊಳ್ಳಲು ಬಯಸುತ್ತಾರೆ. ಇತರರ ಕಣ್ಣೀರಿಗೆ ಮರುಗುವ ಗುಣವನ್ನು ಮೀನರಾಶಿಯವರು ಹೊಂದಿರುತ್ತಾರೆ. ಮೀನ ರಾಶಿಯವರು ಇತರರ ನೋವನ್ನು ಅರಿಯುವ ಶಾಂತ ಗುಣದವರಾಗಿರುತ್ತಾರೆ.

Published On - 11:21 am, Wed, 8 December 21

Click on your DTH Provider to Add TV9 Kannada