ಕನಸಿನ ಹುಡುಗಿಯನ್ನು ಒಲಿಸಬೇಕು ಅಂದ್ರೆ ಹುಡುಗರು ಹೀಗೆ ಮಾಡಲೇಬೇಕು
ಹುಡುಗರು ತಿಳಿದುಕೊಂಡಷ್ಟು ಸುಲಭಕ್ಕೆ ಹುಡುಗಿಯರು ಪ್ರೀತಿ, ಪ್ರೇಮದಲ್ಲಿ ಬೀಳಲ್ಲ. ಹುಡುಗ ಎಷ್ಟೇ ಸರ್ಕಸ್ ಮಾಡಿದ್ರೂ ಹುಡುಗಿ ಮನಸ್ಸು ತಕ್ಷಣಕ್ಕೆ ಪ್ರೀತಿ ಎಂಬ ಮಾಯ ಪ್ರಪಂಚದಲ್ಲಿ ಜಾರಲ್ಲ.
ತಾಯಿ ಗರ್ಭದಿಂದ ಭೂಮಿಗೆ ಕಾಲಿಡುವ ಮೊದಲೇ ದೇವರು ಒಂದು ಹುಡುಗಿಗೆ ಒಂದು ಹುಡುಗ ಅಂತ ನಿಶ್ಚಯ ಮಾಡಿರುತ್ತಾನಂತೆ. ಆ ಜೋಡಿ ಎಷ್ಟೇ ದೂರ ಇದ್ದರು ದೇವರ ಇಚ್ಛೆಯಂತೆ ಇಬ್ಬರು ಒಂದಾಗುತ್ತಾರೆ. ದಾಂಪತ್ಯ ಜೀವನಕ್ಕೂ ಕಾಲಿಡುತ್ತಾರೆ ಅಂತ ಸಾಮಾನ್ಯವಾಗಿ ಎಲ್ಲರು ಮಾತನಾಡಿಕೊಳ್ತಾರೆ. ಇದಕ್ಕೆ ಋಣಾನುಬಂಧ ಅಂತ ಹೇಳ್ತಿವಿ. ಈ ಎಲ್ಲದರ ನಡುವೆ ವಯಸ್ಸಿಗೆ ಬಂದ ಹುಡುಗ ಸಹಜವಾಗಿ ತನ್ನ ಹುಡುಗಿ ಬಗ್ಗೆ ಕನಸು ಕಾಣ್ತಾನೆ. ತನ್ನ ಹುಡುಗಿ ಹೀಗಿರಬೇಕು, ಹಾಗಿರಬೇಕು ಅಂತ ಅಂದುಕೊಳ್ತಾನೆ. ಅಂತಹ ಹುಡುಗಿ ತನ್ನ ಕಣ್ಣ ಮುಂದೆ ಬಂದಾಗ ಆ ಹುಡುಗಿ ನನ್ನವಳಾಗಬೇಕು ಅಂತ ಬಯಸುತ್ತಾನೆ.
ಆದರೆ ಹುಡುಗರು ತಿಳಿದುಕೊಂಡಷ್ಟು ಸುಲಭಕ್ಕೆ ಹುಡುಗಿಯರು ಪ್ರೀತಿ, ಪ್ರೇಮದಲ್ಲಿ ಬೀಳಲ್ಲ. ಹುಡುಗ ಎಷ್ಟೇ ಸರ್ಕಸ್ ಮಾಡಿದ್ರೂ ಹುಡುಗಿ ಮನಸ್ಸು ತಕ್ಷಣಕ್ಕೆ ಪ್ರೀತಿ ಎಂಬ ಮಾಯ ಪ್ರಪಂಚದಲ್ಲಿ ಜಾರಲ್ಲ. ಹಾಗಾದರೆ ಹುಡುಗಿ ಮನವೊಲಿಸಲು ಹುಡುಗರು ಏನ್ ಮಾಡಬೇಕು? ಹುಡುಗಿಯರಿಗೆ ಇಷ್ಟವಾಗುವ ಸಂಗತಿಗಳೇನು? ಡ್ರೀಮ್ ಗರ್ಲ್ ತಮ್ಮ ಪಾಲಾಗಬೇಕಾದರೆ ಹುಡುಗರು ಏನ್ ಮಾಡಬೇಕು? ಅಂತ ನಾವು ನಿಮಗೆ ಹೇಳ್ತಿವಿ. ಈ ಗುಣಗಳು ನಿಮ್ಮಲಿದ್ದರೆ ನಿಮ್ಮ ಕನಸಿನ ಹುಡುಗಿ ಸುಲಭವಾಗಿ ನಿಮ್ಮ ಪಾಲಾಗುತ್ತಾರೆ .
ಮೊದಲ ಭೇಟಿ ಫಸ್ಟ್ ಇಂಪ್ರೆಶನ್ ಈಸ್ ಬೆಸ್ಟ್ ಇಂಪ್ರೆಶನ್ ಅನ್ನುವಂತೆ ಹುಡುಗರು ತನ್ನ ಕನಸಿನ ರಾಣಿಯನ್ನು ಮೊದಲು ಭೇಟಿ ಮಾಡುವಾಗ ಆಕೆಗೆ ಇಂಪ್ರೆಸ್ ಆಗುವ ಡ್ರೆಸ್ನ ಹಾಕಬೇಕು. ಡ್ರೆಸ್ಗೆ ತಕ್ಕಂತೆ ಕೈಗೆ ವಾಚ್, ಕಾಲಿಗೆ ಶೂ ಅಥವಾ ಸ್ಲಿಪ್ಪರ್ನ ಹಾಕಬೇಕು. ಹೆರ್ ಸ್ಟೈಲ್ ಕೂಡ ಚೆನ್ನಾಗಿರಬೇಕು. ಅವಳಿಗೆ ಹುಡುಗನನ್ನು ನೋಡುತ್ತಿದ್ದಂತೆ ವಾವ್ ಅನಿಸಬೇಕು. ತುಂಬಾ ಚೆನ್ನಾಗಿದ್ದನಲ್ಲ ಅಂತ ಮನಸಿನಲ್ಲೆ ಗೊಣಗಬೇಕು. ಮೊದಲು ಭೇಟಿ ಮಾಡುವಾಗ ಎಷ್ಟೇ ಭಯವಿದ್ದರೂ ಆ ಭಯ ಮುಖದಲ್ಲಿ ಕಾಣಿಸಬಾರದು. ಜೊತೆಗೆ ಮೊದಲ ಭೇಟಿ ಶಾರ್ಟ್ ಆ್ಯಂಡ್ ಸ್ವೀಟ್ ಆಗಿರಬೇಕು. ತುಂಬಾ ಹೊತ್ತು ಸಮಯ ಕಳೆಯಬಾರರು. ಹುಡುಗಿಗೆ ಮತ್ತೆ ಮತ್ತೆ ಭೇಟಿ ಮಾಡಬೇಕು ಅಂತ ಅನಿಸಬೇಕು. ಹೆಚ್ಚೆಂದರೆ ಮೊದಲ ದಿನ ಒಂದು ಗಂಟೆ ಒಳಗೆ ಭೇಟಿ ಮಾಡಿ ಹುಡುಗ ಬರಬೇಕು.
ಗಿಫ್ಟ್ ಇದ್ದಾಗಿದ್ದರೆ ಇನ್ನಷ್ಟು ಚೆಂದ ಸಾಮಾನ್ಯವಾಗಿ ಹುಡುಗಿಯರಿಗೆ ಏನಿಷ್ಟ ಅಂದರೆ ಎಲ್ಲರಿಗೂ ಗೊತ್ತಿದೆ ಟೆಡ್ಡಿ ಬೇರ್ ಅಂತ. ಟೆಡ್ಡಿ ಬೇರ್ನ ತನ್ನ ಕನಸಿನ ರಾಣಿಗೆ ನೀಡಿದರೆ ಆಕೆಯ ಮನಸ್ಸು ಸುಲಭವಾಗಿ ಕದಿಯಬಹುದು. ಎಲ್ಲ ಹುಡುಗಿಯರಿಗೂ ಟೆಡ್ಡಿ ಬೇರ್ ಇಷ್ಟವಾಗುತ್ತೆ ಅಂತ ಅಲ್ಲ. ತಮ್ಮ ತಮ್ಮ ಡ್ರೀಮ್ ಗರ್ಲ್ಗೆ ಏನಿಷ್ಟ ಅಂತ ಮೊದಲೇ ಸುಳಿವು ಸಿಕ್ಕರೆ ಆ ಉಡುಗೊರೆಯನ್ನೇ ನೀಡಿ. ಗಿಫ್ಟ್ ಕೊಡಕ್ಕೆ ಆಗಲಿಲ್ಲ ಅಂದಾಗ, ಚಾಕಲೇಟ್ ಆದ್ರೂ ಕೊಡಿ. ಚಾಕಲೇಟ್ ಅಂದ್ರೆ ಹುಡುಗಿಯರಿಗೆ ಪಂಚಪ್ರಾಣ. ಊಟನಾದ್ರು ಬಿಟ್ಟಾರು ಚಾಕಲೇಟ್ ಇಲ್ಲದೆ ಇರಲ್ಲ. ಹೀಗಾಗಿ ಹುಡುಗಿಯರನ್ನ ತನ್ನತ್ತ ಸೆಳೆಯಬೇಕಾದರೆ ಚಾಕಲೇಟ್ ಕೊಡುವುದು ವೆರಿ ಬೆಸ್ಟ್ ಆಪ್ಶನ್.
ಅವಳ ಹುಟ್ಟು ಹಬ್ಬ ಮಾತ್ರ ಮರೆಯಬೇಡಿ ಹುಡುಗಿಯರು ಮೊದಲು ಏನು ಎಕ್ಸ್ಪೆಕ್ಟ್ ಮಾಡ್ತಾರೆ ಅಂದ್ರೆ ಇದೇ ನೋಡಿ. ಹುಡುಗರು ತನ್ನ ಹುಟ್ಟು ಹಬ್ಬ ಮರೆತರು ಪರವಾಗಿಲ್ಲ. ಆದರೆ ತಾನು ಇಷ್ಟ ಪಡುವ ಹುಡುಗಿಯ ಡೇಟ್ ಆಫ್ ಬರ್ತ್ ಮಾತ್ರ ಮರೆಯಬೇಡಿ. ಹುಡುಗಿ ಹುಟ್ಟುಹಬ್ಬ ದಿನದಂದು ರಾತ್ರಿ 12 ಗಂಟೆಗೆ ಕಾಲ್ ಮಾಡಿ ವಿಶ್ ಮಾಡಿ. ಮೊದಲ ವಿಶ್ ನಿಮ್ಮದೇ ಆಗಿರಲಿ. ಅವಕಾಶ ಇದ್ದರೆ ಬರ್ತ್ ಡೇ ಸೆಲೆಬ್ರೇಶನ್ ಕೂಡ ಮಾಡಿ. ಒಟ್ಟಾರೆ ಆ ದಿನ ಆಕೆಗೆ ತುಂಬಾ ಸರ್ಪ್ರೈಸ್ ಆಗಿರಲಿ.
ಭಾವನೆಗಳಿಗೆ ಬೆಲೆ ಕೊಡುವುದು ಮುಖ್ಯ ಹುಡುಗಿಯರು ತನ್ನ ಭಾವನೆಗಳಿಗೆ ಬೆಲೆ ಕೊಡುವರ ಜೊತೆ ಪ್ರೀತಿ ಹಂಚುತ್ತಾರೆ. ಆಸೆ, ಆಕಾಂಕ್ಷೆಗಳಿಗೆ ಬೆಲೆ ಸಿಕ್ಕಾಗ ವಿಶ್ವಾಸ ಹೆಚ್ಚಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಆ ಹುಡುಗನ ಬಗ್ಗೆ ನಂಬಿಕೆ ಬರುತ್ತೆ. ಹೀಗಾಗಿ ಕನಸಿನ ರಾಣಿಯ ಭಾವನೆಗಳಿಗೆ ಬೆಲೆ ಕೊಡಬೇಕು. ಆಕೆ ಅತ್ತಾಗ ದುಃಖವನ್ನು ಮರೆಸಬೇಕು. ಖುಷಿ ಘಳಿಗೆಯನ್ನು ಹೆಚ್ಚಿಸಬೇಕು.
ರಿಸ್ಕ್ ತಗೊಳಲೇಬೇಕು ತನಗಾಗಿ ರಿಸ್ಕ್ ತೆಗೆದುಕೊಳ್ಳೊ ಹುಡುಗನ ಬಗ್ಗೆ ಹುಡುಗಿಗೆ ಪ್ರೀತಿ ಹೆಚ್ಚಾಗುತ್ತೆ. ಬೇರೆ ಯಾರ ಮೇಲೆ ಇಲ್ಲದೆ ಇರುವ ಭಾವನೆ ಮೂಡತ್ತೆ. ಹೀಗಾಗಿ ಕನಸಿನ ಹುಡುಗಿ ತನ್ನವಳಾಗಬೇಕು ಅಂದ್ರೆ ಎಷ್ಟೇ ಕಷ್ಟ ಆದ್ರೂ ಹುಡುಗರು ರಿಸ್ಕ್ ತಗೊಳಲೇಬೇಕು.
ಇದನ್ನೂ ಓದಿ
Health Tips: ಚಳಿಗಾಲದಲ್ಲಿ ಅತಿಯಾದ ಮದ್ಯಸೇವನೆ ಹೃದಯಕ್ಕೆ ಕುತ್ತು ತರಬಹುದು
Success Tips: ಜೀವನದಲ್ಲಿ ಯಶಸ್ವಿಯಾಗುವುದು ಹೇಗೆ? ಇಲ್ಲಿವೆ ಸುಲಭದ ಪಂಚಸೂತ್ರಗಳು
Published On - 4:03 pm, Tue, 7 December 21