Success Tips: ಜೀವನದಲ್ಲಿ ಯಶಸ್ವಿಯಾಗುವುದು ಹೇಗೆ? ಇಲ್ಲಿವೆ ಸುಲಭದ ಪಂಚಸೂತ್ರಗಳು

ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗುವುದು ಹೇಗೆ? ಯಾವೆಲ್ಲಾ ವಿಧಾನಗಳಿಂದ ನಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಾಗಿ ಯಶಸ್ವಿಯಾಗಬಹುದು? ಇಲ್ಲಿವೆ ಪಂಚಸೂತ್ರಗಳು.

Success Tips: ಜೀವನದಲ್ಲಿ ಯಶಸ್ವಿಯಾಗುವುದು ಹೇಗೆ? ಇಲ್ಲಿವೆ ಸುಲಭದ ಪಂಚಸೂತ್ರಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Dec 06, 2021 | 6:00 AM

ಮನುಷ್ಯ ಯಶಸ್ವಿಯಾಗುವುದು ಕಠಿಣ. ಒಂದುವೇಳೆ ಯಶಸ್ವಿಯಾದರೂ ಅದೇ ಸ್ಥಾನದಲ್ಲಿ ಉಳಿಯುವುದು ಮತ್ತಷ್ಟು ಕಠಿಣ. ಅದು ಜೀವನ ಪರ್ಯಂತ ಮುಗಿಯದ ಹೋರಾಟ. ಆದರೆ ನಾವು ಸುತ್ತಮುತ್ತ ಗಮನಿಸಿದಾಗ ಎಷ್ಟೊಂದು ಜನರು ಯಶಸ್ಸಿನಲ್ಲಿಯೇ ಮುಂದುವರೆಯುತ್ತಾರೆ ಮತ್ತು ಕೊನೆಯವರೆಗೂ ತಮಗೆ ಲಭಿಸಿದ ಕೀರ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ಹಾಗಾದರೆ ಮನುಷ್ಯ ಯಶಸ್ವಿಯಾಗಲು ಏನು ಮಾಡಬೇಕು ಎಂಬ ಪ್ರಶ್ನೆ ಮೂಡುತ್ತಿವೆಯೇ? ನಮಗೇ ತಿಳಿಯದೆ ಕೆಲವೊಂದು ಅಭ್ಯಾಸಗಳಲ್ಲಿ ನಮ್ಮ ಮನಸ್ಸಿನಾಳದಲ್ಲಿ ಕುಳಿತುಬಿಟ್ಟಿರುತ್ತವೆ. ಅವುಗಳನ್ನು ತೊಡೆದು ಹಾಕಬೇಕು. ಆಗ ಯಶಸ್ಸಿನೆಡೆಗೆ ಸಾಗುವ ಪಯಣ ಗೋಚರವಾಗುತ್ತದೆ. ಹಾಗಾದರೆ ಯಾವೆಲ್ಲಾ ಅಂಶಗಳನ್ನು ನಮ್ಮ ಮನಸ್ಸಿನಿಂದ ತೆಗೆಯಬೇಕು? ಇಲ್ಲಿದೆ ಸುಲಭದ ಪಂಚಸೂತ್ರಗಳು.

1. ತಮ್ಮ ಮೇಲೆ ತಮಗೆ ಅಪನಂಬಿಕೆ: ಸಾಮಾನ್ಯವಾಗಿ ಇದು ಬಹಳಷ್ಟು ಜನರಿಗೆ ಕಾಡುತ್ತದೆ. ಯಾವುದಾದರೂ ಕೆಲಸಕ್ಕೆ ನಾನು ಅಸಮರ್ಥನಿರಬಹುದು. ನನಗಿದು ಸಾಧ್ಯವಾಗುವುದಿಲ್ಲ.. ಹೀಗೆ ಅವರು ತಮ್ಮ ಮೇಲೆಯೇ ಅಪನಂಬಿಕೆ ಹೊಂದಿರುತ್ತಾರೆ. ಒಂದು ನೆನಪಿಡಿ. ಯಶಸ್ವಿ ವ್ಯಕ್ತಿ ಹಾಗೂ ಸಾಮಾನ್ಯ ಜನರ ನಡುವಿರುವ ವ್ಯತ್ಯಾಸವೆಂದರೆ ಇದೇ. ಯಶಸ್ವಿಯಾದವನು ತನಗಿದು ಸಾಧ್ಯ ಎಂದು ಮುನ್ನುಗ್ಗಿರುತ್ತಾನೆ. ಉಳಿದವರು, ಅಪನಂಬಿಕೆಯಿಂದ ಹಿಂದೆ ಉಳಿದಿರುತ್ತಾರೆ. ಆದ್ದರಿಂದ ಮೊದಲು ನಿಮ್ಮನ್ನು ನೀವು ನಂಬಿ.

2. ಭಾವನಾತ್ಮಕ ನಿರ್ಧಾರಗಳು: ಯಶಸ್ವಿಯಾಗಲು ನಮ್ಮ ನಿರ್ಧಾರಗಳು ಹೆಚ್ಚು ತಾರ್ಕಿಕವಾಗಿರಬೇಕು. ಅಂದರೆ ಕೇವಲ ಭಾವನೆಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳುವುದಕ್ಕಿಂತ, ಅಳೆದು ತೂಗಿ ನಿರ್ಧಾರ ಕೈಗೊಳ್ಳಬೇಕು. ದೂರದೃಷ್ಟಿ ಇಲ್ಲದೆ ಕೇವಲ ಭಾವನಾತ್ಮಕವಾಗಿ ನೀವು ನಿರ್ಧಾಋ ತೆಗೆದುಕೊಂಡರೆ, ಆ ಭಾವನೆ ಕಡಿಮೆಯಾದ ನಂತರ ನಿಮ್ಮ ನಿರ್ಧಾರ ಸಪ್ಪೆಯಾಗುತ್ತದೆ. ಅಲ್ಲದೇ ನೀವು ನಿಮ್ಮ ನಿರ್ಧಾರದ ಕುರಿತು ನಂತರ ಪರಿತಪಿಸುವಂತಾಗುತ್ತದೆ. ಆದ್ದರಿಂದ ಹೆಚ್ಚು ಪ್ರಾಕ್ಟಿಕಲ್ ಆಗಿ ನಿರ್ಧಾರ ಕೈಗೊಳ್ಳಿ.

Emotions Lifestyle

3. ತಪ್ಪುಗಳ ಪುನರಾವರ್ತನೆ: ಯಶಸ್ವಿ ವ್ಯಕ್ತಿಯಾಗಲು ಮುಖ್ಯ ಗುಣವೆಂದರೆ ಅನುಭವದಿಂದ ಮಪಾಠ ಕಲಿಯುವುದು. ಅಲ್ಲದೇ ಒಮ್ಮೆ ಆದ ತಪ್ಪುಗಳನ್ನು ಮತ್ತೊಮ್ಮೆ ಪುನರಾವರ್ತಿಸದಿರುವುದು. ಸಾಮಾನ್ಯವಾಗಿ ಒಂದು ಮಾತಿದೆ- ನೀವು ಹೊಸ ತಪ್ಪನ್ನು ಮಾಡಿ. ಆದರೆ ಹಳೆಯ ತಪ್ಪನ್ನು ಪುನರಾವರ್ತಿಸಬೇಡಿ. ಜೀವನದಲ್ಲಿ ಯಶಸ್ವಿಯಾಗಲು ಇದು ಬಹಳ ಮುಖ್ಯ. ಧೈರ್ಯದಿಂದ ಹೊಸ ಹೆಜ್ಜೆಯನ್ನಿಟ್ಟು, ಸವಾಲುಗಳನ್ನು ಸ್ವೀಕರಿಸಿ. ತಪ್ಪುಗಳಾಗುತ್ತವೆ. ತಿದ್ದಿಕೊಳ್ಳಿ, ಮುನ್ನುಗ್ಗಿ. ಆದರೆ ತಪ್ಪುಗಳನ್ನು ಪುನರಾವರ್ತಿಸಬೇಡಿ.

4. ಸಮಸ್ಯೆಗಳನ್ನು ಹುಡುಕುವುದು: ಸಮಸ್ಯೆಗಳನ್ನು ಹುಡುಕಲು ಅನೇಕ ಜನರಿದ್ದಾರೆ, ಅದರ ಕಡೆಗೆ ಹೆಚ್ಚು ಗಮನ ಕೊಡಬೇಡಿ. ನಮ್ಮ ಕೆಲಸವೇನಿದ್ದರೂ ಪರಿಹಾರಗಳನ್ನು ಕಂಡುಕೊಳ್ಳುವುದರ ಕುರಿತಾಗಿರಬೇಕು. ಸಮಸ್ಯೆಗಳನ್ನು ದೊಡ್ಡದಾಗಿಸದೇ, ಅವುಗಳಿಗೆ ಅಲ್ಲಲ್ಲೇ ಪರಿಹಾರ ಕಂಡುಕೊಳ್ಳುತ್ತಾ ಮುಂದೆ ಸಾಗಬೇಕು. ಇದು ಮನಸ್ಸನ್ನು ಧನಾತ್ಮಕವಾಗಿಡುವುದಲ್ಲದೇ, ಯಶಸ್ಸಿಗೆ ಸಹಾಯಕವಾಗುತ್ತದೆ.

5. ಕಲಿಯುವ ಅವಕಾಶಗಳನ್ನು ಬಿಟ್ಟುಕೊಡುವುದು: ಈ ತಪ್ಪನ್ನು ಮಾಡಲೇಬೇಡಿ! ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸದನ್ನು ಕಲಿಯಲು ನಮ್ಮ ಮನಸ್ಸನ್ನು ತಯಾರಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಅಲ್ಲದೇ ಅಂತಹ ಅವಕಾಶ ಎದುರಾದಾಗ ಅದನ್ನು ಮಿಸ್ ಮಾಡಲೇಬೇಡಿ. ಹೊಸ ವಿಷಯಗಳನ್ನು ಕಲಿಯಲು ಮುಕ್ತವಾಗಿರಿ ಮತ್ತು “ನಾನು ಇದನ್ನು ಹೀಗೆಯೇ ಮಾಡುತ್ತೇನೆ ಮತ್ತು ಇದೊಂದೇ ದಾರಿ” ಎಂಬ ಮನೋಭಾವವನ್ನು ತ್ಯಜಿಸಿ. ಹೊಸ ಹೊಸ ವಿಧಾನಗಳನ್ನು ಕಲಿತು ಅಪ್ಡೇಟ್ ಆಗಿ. ಈ ಮೂಲಕ ಕಾಲಕಾಲಕ್ಕೆ ಬದಲಾಗಿ.

Success Lifestyle

ಈ ಎಲ್ಲಾ ಅಂಶಗಳ ಮೂಲಕ ನಮ್ಮೆಲ್ಲಾ ಹಿಂಜರಿಕೆಗಳನ್ನು ಮೆಟ್ಟಿ ನಿಂತು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ಹಾಗಾದರೆ ಯಶಸ್ಸು ಎಂದರೆ ಏನು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದಲ್ಲವೇ? ಹೌದು. ನಾವು ಯಾವ ಕೆಲಸವನ್ನು ಮಾಡುತ್ತಿದ್ದೇವೆಯೋ, ಅದೇ ಕೆಲಸವನ್ನು ಮತ್ತಷ್ಟು ಅಚ್ಚುಕಟ್ಟಾಗಿ ಹಾಗೂ ನಮ್ಮಷ್ಟು ಚೆನ್ನಾಗಿ ಮತ್ಯಾರೂ ಆ ಕೆಲಸ ಮಾಡುವುದಿಲ್ಲ ಎಂಬಂತೆ ಕಾರ್ಯದಲ್ಲಿ ತೊಡಗುವುದೇ ಯಶಸ್ವಿ ವ್ಯಕ್ತಿಗಳ ಲಕ್ಷಣ!

ಇದನ್ನೂ ಓದಿ:

Beauty Tips: ದಪ್ಪಗಿದ್ದರೇನಂತೆ ನಿಮ್ಮ ಆಯ್ಕೆಯಲ್ಲಿ ಬದಲಾವಣೆ ಇರಲಿ? ಈ ಸಲಹೆಗಳು ನಿಮ್ಮನ್ನು ಸುಂದರವಾಗಿಸುತ್ತದೆ

ಚಳಿಗಾಲದಲ್ಲಿ ಪ್ರವಾಸ ಹೋಗಬಹುದಾದ ಈ ಸ್ಥಳಗಳು ನಿಸ್ಸಂದೇಹವಾಗಿ ಭೂಮಿ ಮೇಲಿನ ಸ್ವರ್ಗಗಳು!

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ