AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ಪೂರ ಆರತಿ ಬೆಳಗಲು ಮಾತ್ರ ಅಲ್ಲ; ದೈಹಿಕ ಮತ್ತು ಮಾನಸಿಕ ಸಮಸ್ಯೆಯ ನಿವಾರಣೆಯಲ್ಲಿ ಇದರ ಪಾತ್ರ ಏನು ತಿಳಿಯಿರಿ

ವಾಸ್ತವವಾಗಿ ಕರ್ಪೂರವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದರಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ದೇಹ ಮತ್ತು ಮನಸ್ಸು ಎರಡನ್ನೂ ಸದೃಢವಾಗಿಡಲು ಸಹಕಾರಿಯಾಗಿದೆ.

ಕರ್ಪೂರ ಆರತಿ ಬೆಳಗಲು ಮಾತ್ರ ಅಲ್ಲ; ದೈಹಿಕ ಮತ್ತು ಮಾನಸಿಕ ಸಮಸ್ಯೆಯ ನಿವಾರಣೆಯಲ್ಲಿ ಇದರ ಪಾತ್ರ ಏನು ತಿಳಿಯಿರಿ
ಕರ್ಪೂರ
Follow us
TV9 Web
| Updated By: preethi shettigar

Updated on: Dec 11, 2021 | 7:05 AM

ಪೂಜೆಯ ಸಮಯದಲ್ಲಿ ಕರ್ಪೂರವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಕರ್ಪೂರವು ಮನೆಯ ವಾಸ್ತು ದೋಷಗಳನ್ನು ಮತ್ತು ನಕಾರಾತ್ಮಕತೆಯನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಕರ್ಪೂರವನ್ನು(camphor) ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಆದರೆ ನಿಮ್ಮ ಎಲ್ಲಾ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸುವ ಇಂತಹ ಹಲವು ಗುಣಗಳನ್ನು ಕರ್ಪೂರ ಹೊಂದಿದೆ ಎಂಬುವುದು ನಿಮಗೆ ತಿಳಿದಿದೆಯೇ? ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ವಾಸ್ತವವಾಗಿ ಕರ್ಪೂರವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದರಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ದೇಹ ಮತ್ತು ಮನಸ್ಸು ಎರಡನ್ನೂ ಸದೃಢವಾಗಿಡಲು ಸಹಕಾರಿಯಾಗಿದೆ. ಇಲ್ಲಿಯವರೆಗೆ ನೀವು ಪೂಜಾ ಕಾರ್ಯಕ್ಕೆ ಅಥವಾ ಆರತಿ ಬೆಳಗಲು ಕರ್ಪೂರ ಬಳಸುತ್ತಿರಬಹದು. ಆದರೆ ಕರ್ಪೂರ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿಮ್ಮಿಂದ ದೂರ ಮಾಡುತ್ತದೆ.

ಒತ್ತಡವನ್ನು ನಿವಾರಿಸುತ್ತದೆ ಕರ್ಪೂರದ ಪರಿಮಳ ಮನಸ್ಸಿಗೆ ಮುದ ನೀಡುತ್ತದೆ. ನೀವು ಹೆಚ್ಚು ಒತ್ತಡವನ್ನು ಹೊಂದಿದ್ದರೆ, ಕರ್ಪೂರವನ್ನು ಒಂದು ಪಾತ್ರೆಯಲ್ಲಿ ಹಾಕಿ ನಿಮ್ಮ ಕೋಣೆಯಲ್ಲಿ ಇರಿಸಿ. ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ರಾತ್ರಿ ಚೆನ್ನಾಗಿ ನಿದ್ದೆ ಬರುವಂತೆ ಮಾಡುತ್ತದೆ.

ತಲೆನೋವು ನಿವಾರಿಸುತ್ತದೆ ತಲೆನೋವಿನ ಸಂದರ್ಭದಲ್ಲಿ ಕರ್ಪೂರ, ಶುಂಠಿ ಮತ್ತು ಬಿಳಿಚಂದನವನ್ನು ಸಮಪ್ರಮಾಣದಲ್ಲಿ ಅರೆದು ಹಣೆಗೆ ಲೇಪಿಸಬೇಕು. ಸ್ವಲ್ಪ ಸಮಯದವರೆಗೆ ಅದನ್ನು ಹಾಗೆ ಬಿಟ್ಟು ಮಲಗಿ. ಇದರಿಂದ ನೀವು ಸಾಕಷ್ಟು ವಿಶ್ರಾಂತಿ ಪಡೆಯುತ್ತೀರಿ.

ಸ್ನಾಯು ನೋವು ಮತ್ತು ಕೆಮ್ಮನ್ನು ನಿವಾರಿಸುತ್ತದೆ ಸ್ನಾಯು ನೋವನ್ನು ನಿವಾರಿಸಲು ಕರ್ಪೂರವನ್ನು ಸಹಾಯಕವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ ಸಾಸಿವೆ ಎಣ್ಣೆಯಲ್ಲಿ ಕರ್ಪೂರವನ್ನು ಹಾಕಿ ನಿತ್ಯವೂ ದೇಹಕ್ಕೆ ಮಸಾಜ್ ಮಾಡಬೇಕು. ಕೆಮ್ಮಿನ ಸಂದರ್ಭದಲ್ಲಿ ಕೂಡ ಈ ಎಣ್ಣೆಯನ್ನು ನಿಮ್ಮ ಎದೆ ಮತ್ತು ಬೆನ್ನಿಗೆ ಹಚ್ಚಿ. ಇದರಿಂದ ನಿಮಗೆ ಸಾಕಷ್ಟು ವಿಶ್ರಾಂತಿ ದೊರೆಯುತ್ತದೆ. ನೀವು ಸಾಸಿವೆ ಬದಲಿಗೆ ಎಳ್ಳಿನ ಎಣ್ಣೆಯನ್ನು ಸಹ ಬಳಸಬಹುದು. ಬಿಸಿ ನೀರಿನಲ್ಲಿ ಕರ್ಪೂರವನ್ನು ಹಾಕಿ ಹಬೆಯನ್ನು ತೆಗೆದುಕೊಳ್ಳುವುದು ಕೂಡ ಶೀತದ ಸಂದರ್ಭದಲ್ಲಿ ಉತ್ತಮ ಪರಿಹಾರವನ್ನು ನೀಡುತ್ತದೆ.

ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ ನಿಮ್ಮ ತ್ವಚೆಯಲ್ಲಿ ಸಾಕಷ್ಟು ಕಲೆಗಳಿದ್ದರೆ ತೆಂಗಿನೆಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ನಿಯಮಿತವಾಗಿ ತ್ವಚೆಗೆ ಹಚ್ಚಬೇಕು. ಇದರಿಂದ ಕಲೆ ನಿವಾರಣೆಯಾಗಿ ಚರ್ಮ ಸ್ವಚ್ಛವಾಗುತ್ತದೆ. ಆದರೆ ಚರ್ಮವು ಎಣ್ಣೆಯುಕ್ತವಾಗಿದ್ದರೆ, ತಜ್ಞರನ್ನು ಸಂಪರ್ಕಿಸಿದ ನಂತರ ಇದನ್ನು ಉಪಯೋಗಿಸಿ. ಕರ್ಪೂರವನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ಕೂಡ ನಿವಾರಣೆಯಾಗಿ ಕೂದಲು ಕಪ್ಪಾಗುತ್ತದೆ.

ಬಿರುಕು ಬಿಟ್ಟ ಹಿಮ್ಮಡಿಗಳನ್ನು ಗುಣಪಡಿಸುತ್ತದೆ ಚಳಿಗಾಲದಲ್ಲಿ ಹಿಮ್ಮಡಿಗಳ ಒಡೆದ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಈ ಪರಿಸ್ಥಿತಿಯಲ್ಲಿ ಕರ್ಪೂರ ಎಣ್ಣೆಯಲ್ಲಿ ನೀರನ್ನು ಬೆರೆಸಿ ಮತ್ತು ನಿಮ್ಮ ಪಾದಗಳನ್ನು ಸ್ವಲ್ಪ ಸಮಯದವರೆಗೆ ಅದರಲ್ಲಿ ಇರಿಸಿ. ಇದರ ನಂತರ ಪಾದಗಳನ್ನು ಒರೆಸಿ, ಕೆನೆ ಅಥವಾ ಎಣ್ಣೆಯನ್ನು ಅನ್ವಯಿಸಿ. ಇದು ಕೆಲವೇ ದಿನಗಳಲ್ಲಿ ನಿಮಗೆ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ: Health Tips: ಕ್ಯಾನ್ಸರ್​ ತಡೆಗಟ್ಟುವ ಗುಣವಿರುವ ಈ ಹಣ್ಣುಗಳನ್ನು ಸೇವಿಸಿ: ಆರೋಗ್ಯಯುತವಾಗಿರಿ

Coffee Flour Benefits: ಕಾಫಿ ಹಿಟ್ಟಿನ ಬಳಕೆ ಹೇಗೆ ಗೊತ್ತಾ? ಆರೋಗ್ಯಕರ ಗುಣಗಳ ಬಗ್ಗೆ ಗಮನಿಸಿ

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್