ಸೌಂದರ್ಯಕಾಳಜಿ ಹೆಚ್ಚಿರುವ ಹೆಣ್ಣು ಮಕ್ಕಳು ಮೇಕಪ್ ಇಲ್ಲದೇ ಹೊರಗಡೆ ಹೋಗುವುದೇ ಕಡಿಮೆ. ದುಬಾರಿ ಬೆಲೆಯ ಸೌಂದರ್ಯ ವರ್ಧಕಗಳನ್ನು ಬಳಕೆಯ ಜೊತೆಗೆ, ಭಾರತೀಯ ಬ್ರ್ಯಾಂಡ್ ಯನ್ನೇ ಇಷ್ಟ ಪಡುವವರು ಇದ್ದಾರೆ. ಹೌದು, 1952 ರಲ್ಲಿ, ಟಾಟಾ ಗ್ರೂಪ್ ಲ್ಯಾಕ್ಮೆ ಕಾಸ್ಮೆಟಿಕ್ಸನ್ನು ಪ್ರಾರಂಭಿಸಿತ್ತು. ಆದರೆ ಇಂದು ಭಾರತೀಯ ಮಾರುಕಟ್ಟೆಯಲ್ಲಿ. ಪ್ರಮುಖ ಬ್ರ್ಯಾಂಡ್ ಆಗಿದೆ. ಕೆಲವರಿಗಂತೂ ಲ್ಯಾಕ್ಮೆ ಪ್ರಾಡಕ್ಟ್ ಬಿಟ್ಟು ಬೇರೆ ಯಾವುದೇ ಉತ್ಪನ್ನಗಳು ಅಷ್ಟಾಗಿ ಇಷ್ಟವಾಗುವುದಿಲ್ಲ. ಆದರೆ ಭಾರತೀಯ ಉತ್ಪನ್ನದ ಆರಂಭವಾದುದ್ದರ ಹಿಂದೆ ರೋಚಕ ಕಥೆಯಿದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.
ಭಾರತದಲ್ಲಿ 1952 ಕ್ಕಿಂತಲೂ ಮೊದಲು ವಿದೇಶಿ ಮೇಕಪ್ ಬ್ರ್ಯಾಂಡ್ ಗಳೇ ಹೆಚ್ಚಿದ್ದವು. ಆದರೆ ಲ್ಯಾಕ್ಮೆ ಪ್ರಾಡಕ್ಟ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಸಿದ್ಧತೆ ಪಡೆಯಲು ಕಾರಣವೇ ಜೆಆರ್‌ಡಿ ಟಾಟಾರವರಂತೆ. 1950ರಲ್ಲಿ ಜೆಆರ್‌ಡಿ ಟಾಟಾರವರಿಗೆ ಕರೆಮಾಡಿದ್ದ ನೆಹರುರವರು, ಭಾರತೀಯ ಮಹಿಳೆಯರು ಹೆಚ್ಚು ವಿದೇಶದಿಂದ ಆಮದು ಮಾಡಿಕೊಳ್ಳುವ ಸೌಂದರ್ಯವರ್ಧಕಗಳನ್ನು ಖರೀದಿಸುತ್ತಿರುವ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರಂತೆ. ಅದಲ್ಲದೇ, ಟಾಟಾರವರಿಗೆ ಭಾರತದಲ್ಲಿ ಬ್ಯೂಟಿ ಪ್ರಾಡಕ್ಟ್ ಗಳನ್ನು ತಯಾರಿಸುವ ಕಂಪನಿಯನ್ನು ಸ್ಥಾಪಿಸುವಂತೆ ಕೇಳಿಕೊಂಡಿದ್ದರಂತೆ.
ಭಾರತದಲ್ಲಿ ಮೇಕಪ್ ಬ್ರ್ಯಾಂಡ್ ಆರಂಭವಾದರೆ ವಿದೇಶಿ ವಿನಿಮಯವು ತಪ್ಪಿಸಬಹುದು ಎನ್ನುವುದು ಅಂದಿನ ಪ್ರಧಾನಿ ನೆಹರುರವರ ಯೋಚನೆಯಾಗಿತ್ತಂತೆ. ನೆಹರುರವರ ಮಾತಿಗೆ ಒಪ್ಪಿದರೆ ಟಾಟಾರವರು ಕಂಪೆನಿಯನ್ನು ಸ್ಥಾಪಿಸಲು ಮುಂದಾದರು. ತೆಂಗಿನೆಣ್ಣೆ ಉತ್ಪಾದನೆಯಲ್ಲಿ ತೊಡಗಿರುವ ತಮ್ಮ ಕಂಪನಿಯನ್ನು ಬ್ಯೂಟಿ ಪ್ರಾಡಕ್ಟ್ ಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು.
ಇದನ್ನೂ ಓದಿ: ಈ ಎರಡು ಜೀವಸತ್ವಗಳ ಕೊರತೆಯು ಮೈಬಣ್ಣದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ
ಭಾರತೀಯ ಪ್ರಾಡಕ್ಟ್ ಗೆ ಲ್ಯಾಕ್ಮೆ ಹೆಸರು ಬಂದದ್ದೇ ರೋಚಕ. ಆ ಸಮಯದಲ್ಲಿ ಟಾಟಾ ಗ್ರೂಪ್ ಮೇಕಪ್ ಪ್ರಾಡಕ್ಟ್‌ಗಳನ್ನು ಸಿದ್ಧಪಡಿಸುವ ಸಲುವಾಗಿ ಕೆಲವು ಪ್ರತಿನಿಧಿಗಳನ್ನು ಪ್ಯಾರಿಸ್‌ಗೆ ಕಳುಹಿಸಿತ್ತು. ಆ ವೇಳೆಯಲ್ಲಿ ಪ್ಯಾರಿಸ್ ನಲ್ಲಿ ನಡೆಯುತ್ತಿದ್ದ ನಾಟಕವನ್ನು ನೋಡಲು ಈ ಪ್ರತಿನಿಧಿಗಳು ಹೋಗಿದ್ದರು. ಇದು ಓಪೆರಾ ಆಗಿದ್ದು, ಈ ಕಥೆಯಲ್ಲಿ ಮುಖ್ಯ ಪಾತ್ರವು ಮಹಿಳೆಯದ್ದಾಗಿತ್ತು. ಆಕೆಯ ತಂದೆ ಪಾದ್ರಿಯಾಗಿದ್ದರು.
ಭಾರತೀಯ ಮಹಿಳೆಯೂ ಬ್ರಿಟಿಷ್ ಅಧಿಕಾರಿಯೊಬ್ಬರನ್ನು ಪ್ರೀತಿಸುತ್ತಾಳೆ. ಈ ಕಥಾ ನಾಯಕಿಯ ಹೆಸರು ಲ್ಯಾಕ್ಮೆ. ಇದು ಹಿಂದೂ ದೇವತೆ ಲಕ್ಷ್ಮಿಯ ಹೆಸರು. ಲಕ್ಷ್ಮಿಯನ್ನು ಶಕ್ತಿ, ಸಮೃದ್ಧಿ ಮತ್ತು ಸೌಂದರ್ಯದ ದೇವತೆ ಎನ್ನಲಾಗುತ್ತದೆ. ಫ್ರೆಂಚ್ ಭಾಷೆಯಲ್ಲಿ ಲಕ್ಷ್ಮಿ ಹೆಸರಿನ ಅನುವಾದವೇ ಲ್ಯಾಕ್ಮೆಯಾಗಿದ್ದು, ಟಾಟಾ ಕಂಪನಿಯೂ ಈ ಹೆಸರನ್ನೇ ಆಯ್ಕೆ ಮಾಡಿತ್ತು. ಈ ಹೆಸರಿನ ಪ್ರಾಡಕ್ಟ್ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ.
ಲ್ಯಾಕ್ಮೆ ನಲ್ಲಿ ಮೇಕಪ್ ಉತ್ಪನ್ನಗಳೊಂದಿಗೆ ತ್ವಚೆಯ ಆರೈಕೆಗೆ ಸಂಬಂಧ ಪಟ್ಟ ಉತ್ಪನ್ನಗಳು ಲಭ್ಯವಿದೆ. 1998 ರಲ್ಲಿ, ಟಾಟಾ ಅವರು ತಮ್ಮ ಲ್ಯಾಕ್ಮೆ ಷೇರುಗಳನ್ನು ಹಿಂದೂಸ್ತಾನ್ ಯೂನಿಲಿವರ್‌ಗೆ 200 ಕೋಟಿ ರೂಪಾಯಿಗೆ ಮಾರಾಟ ಮಾಡಿದರು. ಆದರೆ 2018 ರಲ್ಲಿ, ಲ್ಯಾಕ್ಮೆ ತನ್ನ ಇ-ಕಾಮರ್ಸ್ ವೆಬ್‌ಸೈಟ್ ಪ್ರಾರಂಭಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಗ್ರಾಹಕರು ಆನ್ಲೈನ್ ನಲ್ಲಿ ಉತ್ಪನ್ನಗಳನ್ನು ಖರೀದಿಸುವಂತಾಗಿದೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Mon, 5 August 24