Marriage: ಮದುವೆಯಾಗದ ಹುಡುಗರಿಗೊಂದು ಕಿವಿ ಮಾತು: ನಿಮ್ಮ ಹೃದಯ ಚೆನ್ನಾಗಿರಬೇಕು ಅಂದ್ರೆ ಬೇಗ ಮದುವೆಯಾಗಿ, ಅಧ್ಯಯನ ಹೇಳ್ತಿದೆ

|

Updated on: Feb 24, 2023 | 5:30 PM

ಹುಡುಗರ ಹೃದಯ ಚೆನ್ನಾಗಿರಬೇಕೆಂದರೆ ಬೇಗ ಮದುವೆಯಾಗಬೇಕಂತೆ, ಇದು ನಾವು ಹೇಳ್ತಿರೋದಲ್ಲ ಅಧ್ಯಯನ ಹೇಳ್ತಿರೋದು.

Marriage: ಮದುವೆಯಾಗದ ಹುಡುಗರಿಗೊಂದು ಕಿವಿ ಮಾತು: ನಿಮ್ಮ ಹೃದಯ ಚೆನ್ನಾಗಿರಬೇಕು ಅಂದ್ರೆ ಬೇಗ ಮದುವೆಯಾಗಿ, ಅಧ್ಯಯನ ಹೇಳ್ತಿದೆ
ಮದುವೆ
Follow us on

ಹುಡುಗರ ಹೃದಯ ಚೆನ್ನಾಗಿರಬೇಕೆಂದರೆ ಬೇಗ ಮದುವೆಯಾಗಬೇಕಂತೆ, ಇದು ನಾವು ಹೇಳ್ತಿರೋದಲ್ಲ ಅಧ್ಯಯನ ಹೇಳ್ತಿರೋದು. ಹೌದು ಬೇಗ ಮದುವೆಯಾಗುವುದರಿಂದ ಪುರುಷರ ಹೃದಯದ ಆರೋಗ್ಯ ಚೆನ್ನಾಗಿರುವುದು ಹಾಗೆಯೇ ಕೆಲವು ರೋಗಗಳಿಂದಲೂ ದೂರವಿರಬಹುದು ಎಂದು ಅಧ್ಯಯನ ಹೇಳಿದೆ. ಸಂಶೋಧಕರು 94 ಅಮೆರಿಕನ್ನರ ಬದುಕುಳಿಯುವಿಕೆಯ ಪ್ರಮಾಣವನ್ನು ಪರಿಶೀಲಿಸಿದರು. ಕಳೆದ 10 ವರ್ಷಗಳಲ್ಲಿ ಈ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿದೆ.

ಹಿಂದಿನ ಅಧ್ಯಯನಗಳು ಮದುವೆಯಾಗಿರುವುದು ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆ, ವಿಶೇಷವಾಗಿ ಪುರುಷರಿಗೆ ಎಂದು ಹೇಳಿದೆ. ಜೀವನ ಸಂಗಾತಿಯನ್ನು ಹೊಂದಿರುವುದು ಒಂಟಿತನವನ್ನು ಹೋಗಲಾಡಿಸುತ್ತದೆ, ಆದರೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಮದುವೆಯಾದ ಬಳಿಕ ಎಂಥದ್ದೇ ಕಷ್ಟ ಬಂದರೂ ಸಂಗಾತಿ ಜತೆಗೆ ಸೇರಿ ಎದುರಿಸುತ್ತೇನೆ, ತಾನು ಒಬ್ಬಂಟಿ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಹಾಗಾಗಿ ಹಲವು ಚಿಂತೆಗಳನ್ನು ಬಿಟ್ಟುಬಿಡುತ್ತಾರೆ.

ಮತ್ತಷ್ಟು ಓದಿ:Mental Health: ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಉತ್ತಮ ಸಲಹೆ

ದಿ ಸನ್ ವರದಿಯ ಪ್ರಕಾರ, ಬ್ರಿಟನ್‌ನಲ್ಲಿ ಮದುವೆ ದರ ಕುಸಿಯುತ್ತಿದೆ. 1893 ರ ನಂತರ, 2019 ರಲ್ಲಿ ಕಡಿಮೆ ಮದುವೆಗಳು ನಡೆದಿವೆ. ಡಾ. ಲೇಬಾ ಅವರ ಅಧ್ಯಯನದಲ್ಲಿ 6800 ಜನರ ಡೇಟಾವನ್ನು ಬಳಸಲಾಗಿದೆ. ನಂತರ ಅವರು ಮತ್ತು ಅವರ ವೈವಾಹಿಕ ಸ್ಥಿತಿಯನ್ನು ಹೋಲಿಸಲಾಯಿತು. ಒಬ್ಬ ಪುರುಷನು ವಿವಾಹಿತನಿಗಿಂತ ಬ್ರಹ್ಮಚಾರಿಯಾಗಿ ಉಳಿದರೆ ಐದು ವರ್ಷಗಳಲ್ಲಿ ಹೃದಯ ವೈಫಲ್ಯದಿಂದ ಸಾಯುವ ಸಾಧ್ಯತೆ 2.2 ಪಟ್ಟು ಹೆಚ್ಚು ಎಂದು ಹೇಳಲಾಗಿದೆ.

ಆದಾಗ್ಯೂ, ಮದುವೆಯ ಸ್ಥಿತಿಯು ಹೃದಯಾಘಾತದಿಂದ ಸಾಯುವ ಮಹಿಳೆಯರ ಅಪಾಯದ ಮೇಲೆ ಪರಿಣಾಮ ಬೀರಲಿಲ್ಲ. ಸುಮಾರು 900,000 ಬ್ರಿಟನ್ನರು ಹೃದಯದ ಸಮಸ್ಯೆಗಳನ್ನು ಹೊಂದಿದ್ದಾರೆ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ