Tomato For Skin: ತ್ವಚೆಯ ಆರೋಗ್ಯಕ್ಕೆ ಟೊಮೆಟೊ ಎಷ್ಟೆಲ್ಲಾ ಪ್ರಯೋಜನಕಾರಿ ಎಂಬುದನ್ನು ತಿಳಿಯರಿ
ಟೊಮೆಟೊ ತ್ವಚೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ. ವಿಟಮಿನ್ ಸಿ ಮತ್ತು ಅನೇಕ ಪೋಷಕಾಂಶಗಳು ಇದರಲ್ಲಿದ್ದು, ಇದು ತ್ವಚೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಿದ್ದರೆ ಟೊಮೆಟೊ ತ್ವಚೆಗೆ ಎಷ್ಟೆಲ್ಲಾ ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ.
ಸಾಮಾನ್ಯವಾಗಿ ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಲಭ್ಯವಿರುವ ಟೊಮೆಟೊ ಭಕ್ಷ್ಯಗಳ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ನಮ್ಮ ಆರೋಗ್ಯ ಹಾಗೂ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಇದು ಚರ್ಮಕ್ಕೆ ಅಗತ್ಯವಾದ ಅನೇಕ ಪೋಷಕಾಂಗಳನ್ನು ಒಳಗೊಂಡಿದೆ. ವಿಟಮಿನ್ ಎ, ವಿಟಮಿನ್ ಕೆ, ಕಬ್ಬಿಣ, ರಂಜಕ, ಲೈಕೋಪೀನ್ ಮತ್ತು ಇತರ ಜೀವಸತ್ವಗಳು ಇದರಲ್ಲಿ ಕಂಡುಬರುತ್ತದೆ. ಇದು ಕಲೆಗಳು, ಮೊಡವೆಗಳು ಮತ್ತು ಸುಕ್ಕುಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದನ್ನು ತ್ವಚೆಗೆ ಅನ್ವಯಿಸುವುದರಿಂದ ನೀವು ಹೊಳೆಯುವ ತ್ವಚೆಯನ್ನು ಪಡೆಯಬಹುದು. ಹಾಗೂ ಇದು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹಾಗಾದರೆ ಟೊಮೆಟೊದಿಂದ ತ್ವಚೆಗೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಹಾಗೂ ಅದನ್ನು ತ್ವಚೆಗೆ ಯಾವ ರೀತಿ ಅನ್ವಯಿಸಬಹುದು ಎಂಬುದನ್ನು ನೋಡೋಣ.
ಟೊಮೆಟೊ ತ್ವಚೆಯ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ?
ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತದೆ:
ಚರ್ಮವು ನಿರ್ಜಲೀಕರಣಗೊಂಡರೆ ಚರ್ಮದಲ್ಲಿ ಶುಷ್ಕತೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಟೊಮೆಟೊವನ್ನು ಹಚ್ಚುವ ಮೂಲಕ ಚರ್ಮವನ್ನು ತೇವಗೊಳಿಸಬಹುದು. ಟೊಮೆಟೊದಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ. ಇದು ಒಣ ಚರ್ಮದ ಸಮಸ್ಯೆಗೆ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ಮುಖವನ್ನು ತೇವಗೊಳಿಸುತ್ತದೆ. ಅಲ್ಲದೆ ಟೊಮೆಟೊಗಳಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ಇದು ಚರ್ಮವನ್ನು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.
ಸತ್ತ ಜೀವಕೋಶಗಳನ್ನು ತೆಗೆದುಹಾಕುವಲ್ಲಿ ಸಹಕಾರಿ:
ಟೊಮೆಟೊದಿಂದ ಮುಖಕ್ಕೆ ಸ್ಕ್ರಬ್ ಮಾಡುವ ಮೂಲಕ ನೀವು ಡೆಡ್ ಸ್ಕಿನ್ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದು. ಟೊಮೆಟೊ ನೈಸರ್ಗಿಕ ಎಕ್ಸ್ಫೋಲೀಯೇಟರ್ಗಳಾಗಿ ಕಾರ್ಯರ್ವಹಿಸುವ ಅನೇಕ ಕಿಣ್ವಗಳನ್ನು ಹೊಂದಿರುತ್ತದೆ. ಇವುಗಳು ಸತ್ತ ಜೀವಕೋಶಗಳನ್ನು ತೆಗೆದುಹಾಕುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಇದು ತ್ವಚೆಯಲ್ಲಿ ಕಾಣಿಸಿಕೊಳ್ಳುವ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ಗಳನ್ನು ತೆಗೆದುಹಾಕುತ್ತದೆ.
ಮೊಡವೆಗಳ ಸಮಸ್ಯೆಯನ್ನು ಹೋಗಲಾಡಿಸುತ್ತದೆ:
ಧೂಳು ಮತ್ತು ಮಾಲಿನ್ಯದಿಂದ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ನಿಮ್ಮ ಮುಖದಲ್ಲಿ ಮೊಡವೆಗಳಿದ್ದರೆ ನೀವು ಟೊಮೆಟೊವನ್ನು ಅನ್ವಯಿಸಬಹುದು. ಟೊಮೆಟೊದಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶಗಳಿದ್ದು, ಇದು ಚರ್ಮವನ್ನು ಆಳವಾಗಿ ಶುದ್ಧಗೊಳಿಸುತ್ತದೆ. ಇದಲ್ಲದೆ ಇದು ಚರ್ಮದ ಪಿ.ಹೆಚ್ ಮಟ್ಟವನ್ನು ಸಹ ಸಮತೋಲನದಲ್ಲಿಡುತ್ತದೆ.
ಸುಕ್ಕುಗಳನ್ನು ತೆಗೆದುಹಾಕುವಲ್ಲಿ ಸಹಕಾರಿ:
ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿಯ ಕಾರಣದಿಂದ ಹೆಚ್ಚಿನವರ ಮುಖದಲ್ಲಿ ಸುಕ್ಕುಗಳು ಹಾಗೂ ವಯಸ್ಸಾಗುವಿಕೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಮುಖಕ್ಕೆ ಟೊಮೆಟೊ ಮಾಸ್ಕ್ ಅಥವಾ ಟೊಮೆಟೊ ಸ್ಕ್ರಬ್ ಅನ್ವಯಿಸುವ ಮೂಲಕ ವಯಸ್ಸಾಗುವಿಕೆಯ ಲಕ್ಷಣವನ್ನು ಕಡಿಮೆ ಮಾಡಬಹುದು. ಇದು ಒಳಗಿನಿಂದ ಚರ್ಮದ ರಚನೆಯನ್ನು ಸುಧಾರಿಸುತ್ತದೆ ಮತ್ತು ಮುಖದ ಸುಕ್ಕುಗಳು ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಬೆಳಗ್ಗೆ ಹಲ್ಲುಜ್ಜದೆ ಆಹಾರ ತಿನ್ನುವ ಅಭ್ಯಾಸವಿದೆಯೇ? ಇದರಿಂದ ನಿಮ್ಮ ವಸಡಿಗೆ ಮಾತ್ರವಲ್ಲ ಹೃದಯಕ್ಕೂ ಅಪಾಯ
ಉರಿಯೂತವನ್ನು ಕಡಿಮೆ ಮಾಡುತ್ತದೆ:
ಕೆಲವು ರಾಸಾಯನಿಕ ಉತ್ಪನ್ನಗಳ ಅತಿಯಾದ ಬಳಕೆಯು ತ್ವಚೆಯಲ್ಲಿ ಸುಟ್ಟ ಗಾಯಗಳು ಹಾಗೂ ಊತ ಉಂಟಾಗಲು ಕಾರಣವಾಗಬಹುದು. ಈ ಸಮಸ್ಯೆಯನ್ನು ಹೋಗಲಾಡಿಸಲು ಟೊಮೆಟೊ ತುಂಬಾ ಪ್ರಯೋಜನಕಾರಿಯಾಗಿದೆ. ಹೌದು ಟೊಮೆಟೊ ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಅದು ಕಲೆಗಳು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.
ಮೈಬಣ್ಣವನ್ನು ಸುಧಾರಿಸುತ್ತದೆ:
ಟೊಮಟೊದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಚರ್ಮವನ್ನು ಹೊಳಪುಗೊಳಿಸುವ ಗುಣವನ್ನು ಹೊಂದಿದೆ. ಟೊಮೆಟೊ ರಸವನ್ನು ನಿಯಮಿತವಾಗಿ ಮುಖಕ್ಕೆ ಅನ್ವಯಿಸುವುದರಿಂದ ಕಪ್ಪು ಕಲೆಗಳು, ಪಿಗ್ಮಂಟೇಶನ್ ಮತ್ತು ಇತರೆ ಕಲೆಗಳನ್ನು ಕಡಿಮೆ ಮಾಡಬಹುದು. ಅಲ್ಲದೆ ಇದರಲ್ಲಿರುವ ವಿಟಮಿನ್ ಸಿ, ವಿಟಮಿನ್ ಇ ಮತ್ತು ಬೀಟಾ-ಕ್ಯಾರೋಟಿನ್ ಅಂಶವು ಚರ್ಮಕ್ಕೆ ನೈಸರ್ಗಿಕ ಬಣ್ಣವನ್ನು ಒದಗಿಸುತ್ತದೆ. ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.
ಈ ರೀತಿ ಟೊಮೆಟೊವನ್ನು ಮುಖಕ್ಕೆ ಹಚ್ಚಿಕೊಳ್ಳಿ:
- ಹತ್ತಿಯ ಸಹಾಯದಿಂದ ಟೊಮೆಟೊ ರಸವನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ಮುಖವನ್ನು ನೀರಿನಿಂದ ತೊಳೆಯಿರಿ.
- ಒಂದು ಮಾಗಿದ ಟೊಮೆಟೊದಿಂದ ದಪ್ಪಗಿನ ಪೇಸ್ಟ್ ತಯಾರಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ, ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಬಹುದು.
- ಟೊಮೆಟೊ ಪೇಸ್ಟ್ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿ, 15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ ಅಥವಾ ಟೊಮೆಟೊವನ್ನು ತುಂಡರಿಸಿ ಅದರ ಮೇಲೆ ಸಕ್ಕರೆ ಹಾಕಿ ಅದರಿಂದ ಮುಖಕ್ಕೆ ಸ್ವಲ್ಪ ಹೊತ್ತು ಸ್ಕ್ರಬ್ ಮಾಡಬಹುದು.
- ಟೊಮೆಟೊ ರಸಕ್ಕೆ ಸ್ವಲ್ಪ ಜೀನುತುಪ್ಪವನ್ನು ಮಿಶ್ರಣ ಮಾಡಿ ಇದನ್ನು ಕ್ಲೆನ್ಸರ್ ರೀತಿಯಲ್ಲಿ ಮುಖಕ್ಕೆ ಹಚ್ಚಿ ನಂತರ ಅದು ಒಣಗಿದ ಬಳಿಕ ಮುಖವನ್ನು ತೊಳೆಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: