
ನಿದ್ರೆ ಎಂಬುದು (sleep deprivation,) ಒಬ್ಬ ಮನುಷ್ಯನಿಗೆ ಬಹಳ ಮುಖ್ಯ, ಯಾವ ಪ್ರಮಾಣದಲ್ಲಿ ನಿದ್ದೆ ಮಾಡಬೇಕು ಎನ್ನುವುದು ಕೂಡ ಮುಖ್ಯವಾಗಿರುತ್ತದೆ. ರಾತ್ರಿ ಹಾಗೂ ಹಗಲು ಯಾವ ಸಮಯದಲ್ಲಿ ಹೆಚ್ಚು ನಿದ್ದೆ ಮಾಡಬೇಕು ಎಂಬ ಬಗ್ಗೆಯೂ ಗಮನ ಇರಬೇಕು. ಅದಕ್ಕಾಗಿ ಕೆಲವೊಂದು ಸೂತ್ರಗಳನ್ನು ಅಳವಡಿಸಿಕೊಳ್ಳುವುದು ಅತೀಮುಖ್ಯವಾಗಿದೆ. ನಿದ್ರೆಗೂ ಸೂತ್ರ ಇದ್ದೀಯಾ ಎಂಬ ಪ್ರಶ್ನೆಗಳು ಇರಬಹುದು. ಹೌದು ಇದೆ, ಈ ಸೂತ್ರವನ್ನು ಪಾಲಿಸಿದ್ರೆ ರಾತ್ರಿ ಬೇಗ ಮಲಗುವಂತೆ ಹಾಗೂ ಬೆಳಿಗ್ಗೆ ಆನಂದಾಯವಾಗಿ ಎಚ್ಚರಗೊಳ್ಳಬಹುದು. ಇದು ನಿದ್ರೆಯ ನೈರ್ಮಲ್ಯ ತಂತ್ರವಾಗಿದೆ. ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯ ಸ್ಪಾರ್ಷ್ ಆಸ್ಪತ್ರೆಯ ಸಲಹೆಗಾರ ನರವಿಜ್ಞಾನಿ ಡಾ. ನಿಖಿಲ್ ಬಿ ( Dr. Nikhil B) ಈ ಬಗ್ಗೆ ವಿವರಿಸಿದ್ದಾರೆ. ಮಲಗುವ 10 ಗಂಟೆಗಳ ಮೊದಲು ಕೆಫೀನ್ (ಕಾಫಿ, ಟೀ) ಕುಡಿಯಬೇಡಿ. ಊಟ, ಏನಾದರೂ ತಿನ್ನುವುದಿದ್ದರೆ ಮಲಗುವ 3 ಗಂಟೆಗಳ ಮೊದಲು ಮುಗಿಸಿಕೊಳ್ಳಬೇಕು ಎಂದು ಡಾ. ನಿಖಿಲ್ ಬಿ ಹೇಳುತ್ತಾರೆ. ಈ ಬಗ್ಗೆ indianexpress ವರದಿ ಮಾಡಿದೆ.
ಇನ್ನು ಒತ್ತಡವನ್ನು ಕಡಿಮೆ ಮಾಡಲು ಮಲಗುವ 2 ಗಂಟೆಗಳ ಮೊದಲು ಯಾವುದೇ ಕೆಲಸಗಳನ್ನು ಮಾಡಬಾರದು, ಅಂದತೆ ಆಫೀಸ್ ಕೆಲಸ ಅಥವಾ ಮನೆಯ ಕೆಲಸಗಳನ್ನ. ಕಣ್ಣುಗಳ ಊರಿ ಅಥವಾ ಕಣ್ಣಿನ ಆರೋಗ್ಯವಾಗಿರಬೇಕಾದರೆ ಮಲಗುವ 1 ಗಂಟೆ ಮೊದಲು ಮೊಬೈಲ್ ನೋಡುವುದನ್ನು ಬಿಡಿ. ಈ ವಿಧಾನವು ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ಪಡೆಯಲು ಸಮಯವನ್ನು ನೀಡುತ್ತದೆ. ಹಾಗೂ ಇದು ಸುಲಭವಾಗಿ ನಿದ್ರೆ ಆರಂಭವಾಗಲು ಹಾಗೂ ಬೆಳಿಗ್ಗೆ ಸಂತೃಪ್ತಿ ಮನಸ್ಸಿನಿಂದ ಹೇಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮೇಕೆ ಮಾಂಸಕ್ಕಿಂತ ರಕ್ತ ತಿನ್ನುವುದು ಉತ್ತಮ, ಯಾಕೆ? ಅತಿಯಾದರೆ ಸಮಸ್ಯೆ ಖಂಡಿತ
ನಿದ್ರೆಯ ಬಗ್ಗೆ ಹಾಗೂ ಎಷ್ಟು ಹೊತ್ತು ನಿದ್ದೆ ಮಾಡಬೇಕು ಎನ್ನುವ ಬಗ್ಗೆ ಡಾ. ಮಂಜುಷಾ ಅಗರ್ವಾಲ್ ಹೀಗೆ ಹೇಳುತ್ತಾರೆ. 7-9 ಗಂಟೆಗಳ ನಿದ್ರೆಗೆ ಆದ್ಯತೆ ನೀಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ. ಒಂದು ವೇಳೆ ನಿದ್ರೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಚಿಕಿತ್ಸೆಗಾಗಿ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು. ಆದರೆ ನಿದ್ರೆಯ ಸಮಸ್ಯೆ ನಿವಾರಣೆ ಮಾಡಲು ಈ 10-3-2-1 ವಿಧಾನವನ್ನು ಪ್ರಯತ್ನಿಸಿ. ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸಲು ಸೂಕ್ತವಾದ ನಿದ್ರೆಯ ಅವಧಿ ರಾತ್ರಿ 7-9 ಗಂಟೆಗಳು ಎಂದು ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯ ಸ್ಪಾರ್ಷ್ ಆಸ್ಪತ್ರೆಯ ಸಲಹೆಗಾರ ನರವಿಜ್ಞಾನಿ ಡಾ. ನಿಖಿಲ್ ಬಿ ಹೇಳುತ್ತಾರೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Tue, 29 April 25