ಗುಡ್ ಫ್ರೈಡೇ ಕ್ರಿಶ್ಚಿಯನ್ ಸಮುದಾಯದವರಿಗೆ ಮಹತ್ವದ ದಿನಗಳಲ್ಲಿ ಒಂದು. ಆದರೆ ಈ ದಿನವು ಸಂತೋಷ ದಿನವಲ್ಲ, ಬದಲಾಗಿ ದುಃಖದಾಯಕ ದಿನವಾಗಿದೆ. ಯೇಸುವನ್ನು ಶಿಲುಬೆಗೇರಿಸಿದ ದಿನವಾಗಿರುವುದರಿಂದ ಕಪ್ಪು ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಈ ಗುಡ್ ಫ್ರೈಡೆಯನ್ನು ಪವಿತ್ರ ಶುಕ್ರವಾರ, ಕಪ್ಪು ಶುಕ್ರವಾರ ಅಥವಾ ಗ್ರೇಟ್ ಫ್ರೈಡೆ ಎನ್ನಲಾಗುತ್ತದೆ. ಈ ಬಾರಿ ಮಾರ್ಚ್ 31 ರಂದು ಈಸ್ಟರ್ ಇದ್ದು, ಅದಕ್ಕೂ ಮುನ್ನ ಮಾರ್ಚ್ 29ರ ಶುಕ್ರವಾರದಂದು ʼಗುಡ್‌ಫ್ರೈಡೇʼ ಎಂದು ಆಚರಿಸಲಾಗುತ್ತದೆ.
ಗುಡ್ ಫ್ರೈಡೆ ಇತಿಹಾಸ
ಹೊಸ ಒಡಂಬಡಿಕೆಯ ಪ್ರಕಾರ, ರೋಮನ್ನರು ಯೇಸುವನ್ನು ಶಿಲುಬೆಗೇರಿಸಿದ ದಿನವನ್ನು ಗುಡ್ ಫ್ರೈಡೇ ಎಂದು ಕರೆಯಲಾಗುತ್ತದೆ . ಯಹೂದಿ ಧಾರ್ಮಿಕ ಮುಖಂಡರು ದೇವರ ಮಗನೆಂದು ಹೇಳಿಕೊಳ್ಳುವುದಕ್ಕಾಗಿ ಯೇಸುವಿಗೆ ದೇವದೂಷಣೆಯನ್ನು ಮಾಡಿ, ರೋಮನ್ನರ ಬಳಿಗೆ ಕರೆತಂದರು. ರೋಮನ್ ನಾಯಕನಾದ ಪೊಂಟಿಯಸ್ ಪಿಲಾತನು ಯೇಸುವನ್ನು ಶಿಲುಬೆಗೇರಿಸಲಾಯಿತು.
ಗುಡ್ ಫ್ರೈಡೇ ದಿನದ ಮಹತ್ವ
ಕ್ರಿಶ್ಚಿಯನ್ ಜನರಲ್ಲಿ ಗುಡ್ ಫ್ರೈಡೇಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ದಿನದಂದು ಯೇಸು ಕ್ರಿಸ್ತನು ಪಾಪಿಗಳ ಉಪಶಮನಕ್ಕಾಗಿ ಶಿಲುಬೆಯ ಮೇಲೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾನೆ ಎನ್ನುವ ನಂಬಿಕೆಯಿದೆ. ಹೀಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಯೇಸುವನ್ನು ಸ್ಮರಿಸಲಾಗುತ್ತದೆ.
ಇದನ್ನೂ ಓದಿ: ಬೇಸಿಗೆಗೆ ನಿಮ್ಮ ಚರ್ಮವನ್ನು ಸಿದ್ಧಪಡಿಸುವ 8 ಸುಲಭ ಮಾರ್ಗಗಳಿವು
ಕ್ರೈಸ್ತರ ಶುಭ ಶುಕ್ರವಾರದ ಆಚರಣೆ ಹೇಗೆ?
ಶುಭ ಶುಕ್ರವಾರವು ಶುಭವನ್ನು ಸೂಚಿಸಿದರೂ ಕೂಡ ಕ್ರಿಶ್ಚಿಯನ್ ಸಮುದಾಯಕ್ಕೆ ಇದು ದುಃಖದ ದಿನವಾಗಿದೆ. ಈ ದಿನದಂದು ಕೆಲವರು ಉಪವಾಸ ಮಾಡುತ್ತಾರೆ. ಕ್ರೈಸ್ತರು ಶುಭ ಶುಕ್ರವಾರದಂದು ಚರ್ಚ್ಗೆ ತೆರಳಿ ಯೇಸುವಿನ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ. ಅದಲ್ಲದೇ, ಕ್ರಿಶ್ಚಿಯನ್ ಸಮುದಾಯದ ಜನರು ಮೆರವಣಿಗೆಗಳಲ್ಲಿ ಭಾಗವಹಿಸುವ ಮೂಲಕ ಈ ದಿನವನ್ನು ಆಚರಿಸುತ್ತಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ