ಹವಾಮಾನ ಬದಲಾವಣೆಯೊಂದಿಗೆ ವಿಶೇಷವಾಗಿ ಚಳಿಗಾಲದಲ್ಲಿ ಕೂದಲು ಮತ್ತು ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಂತ ಅಗತ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕೂದಲಿನ ಕಾಳಜಿಯ ಕೊರತೆ, ಮಾಲಿನ್ಯ ಹಾಗೂ ನಿಮ್ಮ ಆಹಾರಕ್ರಮ. ಆದ್ದರಿಂದ ಕೂದಲಿನ ಆರೈಕೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ವಿಶೇಷವಾಗಿ ನೀವು ಕೂದಲು ತೊಳೆಯುವಾಗ ಮಾಡುವ ಕೆಲವು ತಪ್ಪುಗಳು ಕೂದಲು ಉದುರುವಿಕೆಗೆ ಕಾರಣವಾಗಬಹುದು.
ಎಣ್ಣೆ ಹಚ್ಚುವ ವಿಧಾನ:
ಕೆಲವರು ಎಣ್ಣೆ ಹಚ್ಚಿದ 5 ನಿಮಿಷದಲ್ಲೇ ಕೂದಲಿಗೆ ಸ್ನಾನ ಮಾಡುತ್ತಾರೆ. ಆದರೆ ಈ ತಪ್ಪು ಮಾಡದಿರಿ. ಕೂದಲಿಗೆ ಹಚ್ಚಿದ ಎಣ್ಣೆಯನ್ನು ಗರಿಷ್ಠ ಅರ್ಧ ಘಂಟೆಯವರೆಗೆ ಇರಿಸಿ. ಇದಲ್ಲದೇ ನೆತ್ತಿಗೆ ಎಣ್ಣೆ ಹಚ್ಚಿ ಕೆಲಹೊತ್ತಿನ ವರೆಗೆ ಮಸಾಜ್ ಮಾಡಿ.
ಕೂದಲು ಉತ್ಪನ್ನಗಳ ಬಳಕೆ:
ಕೂದಲಿನ ಮೇಲೆ ಯಾವುದೇ ಉತ್ಪನ್ನವನ್ನು ಬಳಸುವುದರಿಂದ ಪ್ರಯೋಜನಕ್ಕೆ ಬದಲಾಗಿ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಯಾವುದೇ ಉತ್ಪನ್ನದ ಅರಿವಿಲ್ಲದೇ ಕೂದಲಿಗೆ ಬಳಸುವುದು ಕೂದಲು ಉದುರುವಿಕೆಗೆ ಕಾರಣವಾಗಬಹುದು.
ತುಂಬಾ ಬಿಸಿ ನೀರಿನ ಸ್ನಾನ:
ತುಂಬಾ ಬಿಸಿ ನೀರನ್ನು ಕೂದಲು ತೊಳೆಯಲು ಬಳಸುವುದರಿಂದ ಕೂದಲು ದುರ್ಬಲ ಮತ್ತು ನಿರ್ಜೀವವಾಗುತ್ತದೆ. ಅಷ್ಟೇ ಅಲ್ಲ, ಕೂದಲು ಒಣಗಿ ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತದೆ ಮತ್ತು ಕೆಲವು ಹಂತದಲ್ಲಿ ಕೂದಲು ಉದುರಲು ಪ್ರಾರಂಭವಾಗುತ್ತದೆ. ಆದ್ದರಿಂದ ಕೂದಲು ತೊಳೆಯಲು ಉಗುರು ಬೆಚ್ಚಗಿನ ನೀರು ಬಳಸಿ ಎಂದು ತಜ್ಞರು ಎಚ್ಚರಿಸುತ್ತಾರೆ.
ಟವೆಲ್ನಿಂದ ಕೂದಲನ್ನು ಉಜ್ಜುವುದು:
ಒದ್ದೆಯಾದ ಕೂದಲನ್ನು ಟವೆಲ್ ನಿಂದ ಒಣಗಿಸುವುದು ಸಾಮಾನ್ಯ, ಆದರೆ ನಿಮ್ಮ ಈ ಅಭ್ಯಾಸವು ಕೂದಲಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಕೂದಲನ್ನು ಟವೆಲ್‌ನಿಂದ ಉಜ್ಜಿದಾಗ ಅದು ಒಣಗುತ್ತದೆ ಮತ್ತು ಕೂದಲಿನ ತುದಿ ಬಿರುಕು ಬಿಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಸಕ್ಕರೆ ಮಾತ್ರವಲ್ಲ ಉಪ್ಪು ಕೂಡಾ ಮಧುಮೇಹ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ: ಅಧ್ಯಯನ
ಹೇರ್ ಡ್ರೈಯರ್ ಬಳಕೆ:
ಕೂದಲನ್ನು ತೊಳೆದ ನಂತರ, ಹೇರ್ ಡ್ರೈಯರ್ ಬಳಸಿ ಕೂದಲು ಒಣಗಿಸುವುದು ಈಗ ಸಾಮಾನ್ಯವಾಗಿದೆ. ಆದರೆ ಹೇರ್ ಡ್ರೈಯರ್ ಕೂದಲಿಗೆ ಅಪಾಯಕಾರಿಯಾಗಿದೆ.
ಕೂದಲಿಗೆ ಬಟ್ಟೆ ಸುತ್ತಿಕೊಳ್ಳುವುದು:
ನಿಮ್ಮ ಕೂದಲನ್ನು ತೊಳೆದ ನಂತರ, ಅದರ ಮೇಲೆ ಟವೆಲ್ ಅಥವಾ ಬಟ್ಟೆಯನ್ನು ಕಟ್ಟುವ ತಪ್ಪನ್ನು ಮಾಡಬೇಡಿ. ಬಟ್ಟೆಯೊಳಗೆ ಒದ್ದೆಯಾದ ಕೂದಲು ತಲೆಹೊಟ್ಟು ಅಪಾಯವನ್ನು ಹೆಚ್ಚಿಸುತ್ತದೆ.
ಒದ್ದೆಯಾದ ಕೂದಲನ್ನು ಬಾಚಿಕೊಳ್ಳುವುದು:
ಕೂದಲು ಒದ್ದೆ ಇರುವಾಗಲೇ ಬಾಚಬೇಡಿ. ಇದು ನಿಮ್ಮ ಕೂದಲು ತುಂಡಾಗಲು ಅಥವಾ ದುರ್ಬಲಗೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ಕೂದಲು ಒಣಗಿದ ನಂತರ ಬಾಚಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:31 pm, Sat, 4 November 23